Food
ರುಚಿಕರವಾದ ಬಾಳೆಹಣ್ಣು, ಖರ್ಜೂರ ಮತ್ತು ಡ್ರೈ ಪ್ರ್ಯೂಟ್ಸ್ ಸ್ಮೂಥಿಗಳು ಉತ್ತಮ ಪೌಷ್ಟಿಕಾಂಶದಿಂದ ತುಂಬಿರುತ್ತದೆ.
ಈ ಗಟ್ಟಿಯಾದ ಜ್ಯೂಸ್‌ಗೆ ಯಾವುದೇ ರೀತಿ ಸಕ್ಕರೆಯನ್ನು ಬೆರೆಸುವ ಅಗತ್ಯವಿಲ್ಲ. ಕರ್ಜೂರ ಮತ್ತು ಬಾಳೆಹಣ್ಣಿನ ಸಿಹಿಯು ನ್ಯಾಚುರಲ್ ಟೇಸ್ಟ್ ಒದಗಿಸುತ್ತದೆ.
ಅಷ್ಟೇ ಅಲ್ಲ ಸಂಪೂರ್ಣ ತಯಾರಾದ ಮೇಲೆ ಇದರಿಂದ ಹೊರಡುವ ಪರಿಮಳದಿಂದಲೇ ತಕ್ಷಣ ಕುಡಿದು ಖಾಲಿ ಮಾಡುವಿರಿ.
ರಂಜಾನ್ ತಿಂಗಳಲ್ಲಿ ಈ ಜ್ಯೂಸ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಉಪವಾಸ ಮುರಿದ ಬಳಿಕ ತಕ್ಷಣಕ್ಕೆ ಇದನ್ನು ಸೇವಿಸುತ್ತಾರೆ.
ಮಿಲ್ಕ್ ಮೇಡ್-1ಕಪ್
ಗಟ್ಟಿ ಹಾಲು/ಟೋನ್‌ಡ್ ಮಿಲ್ಕ್-4 ಕಪ್
ಕರ್ಜೂರ -60 ಗ್ರಾಂ
ಬಾದಾಮಿ -40 ಗ್ರಾಂ
ಬಾಳೆ ಹಣ್ಣು-2
1.ಮೊದಲು ಖರ್ಜೂರ ಮತ್ತು ಬಾದಾಮಿಯನ್ನು 1 ಕಪ್ ಹಾಲಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ. ಬಳಿಕ ಬಾಳೆಹಣ್ಣಿನೊಂದಿಗೆ ಮಿಕ್ಸರ್‌ನಲ್ಲಿ ಚೆನ್ನಾಗಿ ಗ್ರೈಂಡ್ ಮಾಡಿ
ಖರ್ಜೂರದ ಬದಲು ಒಣ ಅಂಜೂರ, ಒಣದ್ರಾಕ್ಷಿ ಅಥವಾ ಏಪ್ರಿಕಾಟ್ ಕೂಡ ಬಳಸಬಹುದು.
ಪ್ರತ್ಯೇಕ ಗ್ಲಾಸ್‌ಗಳಿಗೆ ಸುರಿಯಿರಿ, ಅಗತ್ಯವಿರುವಂತೆ ಹೆಚ್ಚಿನ ಐಸ್ ಕ್ಯೂಬ್‌ಗಳನ್ನು ಸೇರಿಸಿ ಮತ್ತು ಕೆಲವು ಕತ್ತರಿಸಿದ ಬಾದಾಮಿಗಳಿಂದ ಅಲಂಕರಿಸಿ.