ರಕ್ಷಾಬಂಧನ ಸ್ಪೆಷಲ್, 24 ಕ್ಯಾರೆಟ್ ಚಿನ್ನಲೇಪಿತ ಸ್ವೀಟ್‌ಗೆ ಭರ್ತಿ 25,000 ರೂ.

ರಕ್ಷಾಬಂಧನ ಸಹೋದರತ್ವದ ಬಾಂಧವ್ಯವನ್ನು ವ್ಯಕ್ತಪಡಿಸುವ ಹಬ್ಬವಾಗಿದೆ. ಈ ದಿನದಂದು, ಸಹೋದರಿಯರು ಸಹೋದರನಿಗೆ ತಿಲಕವನ್ನು ಇಟ್ಟು, ರಾಖಿ ಕಟ್ಟಿ, ಸಹೋದರನ ಬಾಯಿಯನ್ನು ಸಿಹಿಗೊಳಿಸುತ್ತಾರೆ. ಆಗ್ರಾದಲ್ಲಿ ಹಬ್ಬಕ್ಕೆಂದೇ ಸ್ಪೆಷಲ್‌ ಸ್ವೀಟ್ ರೆಡಿಯಾಗಿದೆ. ಆದ್ರೆ ಇದರ ಬೆಲೆ ಎಷ್ಟು ಗೊತ್ತಾ ? ಬರೋಬ್ಬರಿ 25,000 ರೂ. 

Raksha Bandhan Special Sweet, 24 Carat Gold Ghevar At Rs 25,000 Vin

ರಾಖಿ ಹಬ್ಬ ಹತ್ತಿರ ಬರುತ್ತಿದೆ. ಎಲ್ಲ ಅಂಗಡಿಗಳಲ್ಲಿ ಬಣ್ಣಬಣ್ಣದ ಝಗಮಗಿಸುವ ರಾಖಿಗಳು ನೇತಾಡುತ್ತಿವೆ. ಹೆಣ್ಣುಮಕ್ಕಳು ಈ ಬಾರಿಯ ರಾಖಿಗೆ ಸಹೋದರನಿಗೆ ಕಸ್ಟಮೈಸ್ಡ್ ರಾಖಿ ಮಾಡಿಸುವುದಾ, ಬೇರೆ ರೀತಿಯ ರಾಖಿ ತೆಗೆದುಕೊಳ್ಳುವುದಾ ಎಂದು ಹುಡುಕಲಾರಂಭಿಸಿದ್ದಾರೆ. ಜೊತೆಗೆ, ಸೋದರನಿಂದ ಏನು ಉಡುಗೊರೆ ಇಸ್ಕೊಳ್ಬೇಕೆಂದೂ ಸ್ಕೆಚ್ ಹಾಕುತ್ತಿದ್ದಾರೆ. ರಾಖಿ ಹಬ್ಬವನ್ನು ಸಹೋದರ ಮತ್ತು ಸಹೋದರಿಯರ ಪವಿತ್ರ ಬಂಧ ಮತ್ತು ಮುರಿಯಲಾಗದ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಅನೇಕ ಕಥೆಗಳು ಮತ್ತು ನಂಬಿಕೆಗಳು ಈ ಮಂಗಳಕರ ದಿನದೊಂದಿಗೆ ಸಂಬಂಧ ಹೊಂದಿವೆ. ಈ ವರ್ಷ ರಾಖಿ ಹಬ್ಬವು ಗುರುವಾರ, ಆಗಸ್ಟ್ 11, 2022ರಂದು ಬರುತ್ತಿದೆ. 

ರಕ್ಷಾಬಂಧನವು ಒಂದು ಹಬ್ಬ ಮಾತ್ರವಲ್ಲ, ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ರಕ್ಷಣೆಯ ದಾರವನ್ನು ಕಟ್ಟಿದಾಗ ಅವರ ಭಾವನಾತ್ಮಕ ಬಂಧವನ್ನು ಗಾಢವಾಗಿಸುವ ಸಂದರ್ಭ (Relationship)ವೂ ಆಗಿದೆ. ರಾಖಿ ಕೇವಲ ದಾರವಲ್ಲ, ಸಹೋದರ ಸಹೋದರಿಯರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ದಾರವೂ ಹೌದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು, ಸಹೋದರಿಯರು ಸಹೋದರನಿಗೆ ತಿಲಕವನ್ನು ಇಟ್ಟು, ರಾಖಿ ಕಟ್ಟಿ, ಸಹೋದರನ ಬಾಯಿಯನ್ನು ಸಿಹಿಗೊಳಿಸಬೇಕು. ಹೀಗಾಗಿಯೇ ರಕ್ಷಾಬಂಧನದಂದು ಸ್ವೀಟ್ಸ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುತ್ತದೆ.

ರಕ್ಷಾಬಂಧನ ಹತ್ರ ಬಂತು.. ರಾಖಿ ಕಟ್ಟೋ ವಿಧಾನ ತಿಳ್ದಿದಿರಾ?

'ಗೋಲ್ಡ್ ಘೇವರ್' ಸ್ವೀಟ್‌, ಕಿಲೋಗೆ ಬರೋಬ್ಬರಿ 25,000 ರೂ.
ವ್ಯಾಪಾರಿಗಳು ಸ್ಪೆಷಲ್ ಸಿಹಿತಿಂಡಿಗಳನ್ನು (Sweets) ತಯಾರಿಸುತ್ತಾರೆ. ಹಾಗೆಯೇ ರಕ್ಷಾಬಂದನಕ್ಕೆಂದೇ ಉತ್ತರಪ್ರದೇಶದ ಆಗ್ರಾದಲ್ಲಿ ಸ್ಪೆಷಲ್‌ ಸ್ವೀಟ್ ರೆಡಿಯಾಗಿದೆ. ಆದ್ರೆ ಇದರ ಬೆಲೆ ಕೇಳಿ ಎಲ್ಲರೂ ಹೌಹಾರಿ ಹೋಗಿದ್ದಾರೆ.  'ಗೋಲ್ಡ್ ಘೇವರ್' ಎಂದು ಕರೆಸಿಕೊಳ್ಳೋ ಈ ಸ್ವೀಟ್‌ಗೆ ಕಿಲೋಗೆ 25,000 ರೂ. ನಿಗದಿಪಡಿಸಲಾಗಿದೆ. 

ಘೇವರ್ ತುಪ್ಪ, ಹಿಟ್ಟು ಮತ್ತು ಸಕ್ಕರೆ ಪಾಕದಿಂದ ಮಾಡಿದ ರಾಜಸ್ಥಾನಿ ಪಾಕಪದ್ಧತಿಯ ಸಿಹಿಯಾಗಿದೆ. ಇದು ಸಾಂಪ್ರದಾಯಿಕವಾಗಿ ಶ್ರಾವಣ ಮಾಸ ಮತ್ತು ತೀಜ್ ಮತ್ತು ರಕ್ಷಾ ಬಂಧನ ಹಬ್ಬಗಳೊಂದಿಗೆ ಸಂಬಂಧಿಸಿದೆ. ಹರಿಯಾಣ, ದೆಹಲಿ, ಗುಜರಾತ್, ಪಶ್ಚಿಮ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿಯೂ ಈ ಸಿಹಿತಿಂಡಿ ಸಹ ಪ್ರಸಿದ್ಧವಾಗಿದೆ. ಸದ್ಯ ರಕ್ಷಾಬಂಧನ ಶುಭದಿನದ ವಿಶೇಷವಾಗಿ ಸಿಹಿ ಅಂಗಡಿಯು 24-ಕ್ಯಾರೆಟ್ 'ಗೋಲ್ಡ್ ಘೇವರ್' ಅನ್ನು ಕಿಲೋಗೆ ರೂ 25,000 ಕ್ಕೆ ಮಾರಾಟಕ್ಕೆ ಮಾಡುತ್ತಿದೆ.

ಸಹೋದರಿಯರು ರಾಶಿ ಪ್ರಕಾರ ರಕ್ಷಾಬಂಧನ ಕಟ್ಟಿದರೆ ಸಹೋದರನಿಗೆ ಲಕ್!

24 ಕ್ಯಾರೆಟ್ ಗೋಲ್ಡ್ ಟಾಪಿಂಗ್‌ ಇರೋ ಸ್ಪೆಷಲ್‌ ಸ್ವೀಟ್‌
ಸಾಧಾರಣವಾಗಿ, ಒಂದು ಕಿಲೋ ಸಾದಾ ಘೇವರ ಮಾರುಕಟ್ಟೆಯಲ್ಲಿ ಗುಣಮಟ್ಟವನ್ನು (Quality) ಅವಲಂಬಿಸಿ ಸುಮಾರು 600-800 ರೂ.ಗೆ ಮಾರಾಟವಾಗುತ್ತದೆ. ಡ್ರೈ ಫ್ರೂಟ್ಸ್, ಮಾವಾ, ಕೇಸರ್‌ಗಳೊಂದಿಗೆ ಇತರ ರೂಪಾಂತರಗಳಿಗೆ ವೆಚ್ಚವು ಹೆಚ್ಚಾಗಬಹುದು. ಆದರೆ ಆಗ್ರಾದ ಸಿಹಿತಿಂಡಿ ಅಂಗಡಿಯೊಂದರಲ್ಲಿ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ತಯಾರಾದ ವಿಶೇಷ ರೀತಿಯ ಘೇವರ, ಅದರ ವೈಶಿಷ್ಟ್ಯತೆ ಮತ್ತು ಬೆಲೆಯಿಂದಾಗಿ ಎಲ್ಲರ ಮನಗೆದ್ದಿದೆ. 'ಗೋಲ್ಡ್ ಘೇವರ್' ಎಂದು ಕರೆಯಲ್ಪಡುವ ಈ ಸ್ವೀಟ್ ಅನ್ನು 24-ಕ್ಯಾರೆಟ್ ಗೋಲ್ಡ್ ಟಾಪಿಂಗ್‌ನಿಂದ ಮುಚ್ಚಲಾಗುತ್ತದೆ. ಆಗ್ರಾದ ಶಾ ಮಾರ್ಕೆಟ್ ಬಳಿ ಬ್ರಜ್ ರಸಾಯನ ಮಿತ್ತನ್ ಭಂಡಾರ್ ಎಂಬುವವರು ವಿಶೇಷ ಸಿಹಿ ತಯಾರಿಸಿದ್ದಾರೆ. ಅವರು ಮಾರಾಟ ಮಾಡಲು ಪ್ರಾರಂಭಿಸಿದ ಸಮಯದಿಂದಲೂ ಆಗ್ರಾದಾದ್ಯಂತ ಜನರು ಅಂಗಡಿಗೆ ಭೇಟಿ ನೀಡುತ್ತಿದ್ದಾರೆ.

ಬ್ರಜ್ ರಸಾಯನ ಸ್ವೀಟ್ಸ್ ಭಂಡಾರ್ ಮಾಲೀಕ ತುಷಾರ್ ಗುಪ್ತಾ ಮಾತನಾಡಿ, ಸಿಹಿಯಲ್ಲಿ ಪಿಸ್ತಾ, ಬಾದಾಮಿ, ಕಡಲೆಕಾಯಿ ಮತ್ತು ವಾಲ್‌ನಟ್‌ಗಳ ಜೊತೆಗೆ ಒಣ ಹಣ್ಣುಗಳ ಮಿಶ್ರಣವಿದೆ. ಖಾದ್ಯ ಚಿನ್ನದ ಅಗ್ರಸ್ಥಾನದ ಜೊತೆಗೆ, ಇದು ಐಸ್ ಕ್ರೀಮ್-ಸುವಾಸನೆಯ ಮಲೈ ಪದರವನ್ನು ಸಹ ಹೊಂದಿದೆ ಎಂದು ಹೇಳಿಕೊಂಡಿದ್ದಾರೆ. ಘೇವರ್ ಸರಳ, ಮಾವಾ ಮತ್ತು ಮಲೈ ಘೇವರ್ ಸೇರಿದಂತೆ ಅನೇಕ ವಿಧಗಳಲ್ಲಿ ಬರುತ್ತದೆ. ಇದನ್ನು ಸಕ್ಕರೆ ಪಾಕದಲ್ಲಿ ನೆನೆಸಿ ಸವಿಯಬಹುದು.

Latest Videos
Follow Us:
Download App:
  • android
  • ios