ಮಂಡಕ್ಕಿ ಸ್ಪೆಷಲ್; ಕಲರ್‌ಫುಲ್ ಉಪ್ಮಾ, ಕಟ್ಲೆಟ್, ಲಡ್ಡು ರೆಸಿಪಿ
ಮಂಡಕ್ಕಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಯಾವ ಕಾಲದಲ್ಲಿಯಾದರೂ ಕುರುಂ ಕುರುಂ ಎಂದು ಬಾಯಾಡಿಸುವ ‘ಮಂಡಕ್ಕಿ’ಗೆ ಸದಾ ಡಿಮ್ಯಾಂಡ್. ಸಂಜೆಯ ಸ್ನಾಕ್ಸ್, ಬೆಳಗಿನ ಉಪಹಾರ ಎಲ್ಲಕ್ಕೂ ಉಪಯುಕ್ತವಾದ ‘ಮಂಡಕ್ಕಿ’ಯನ್ನು ಬಳಸಿಕೊಂಡು ವೈವಿಧ್ಯಮಯ ತಿನಿಸುಗಳನ್ನು ತಯಾರಿಸುವ ವಿಧಾನ ಇಲ್ಲಿದೆ. ನೀವೂ ಟ್ರೈ ಮಾಡಿ ನೋಡಿ.
-ಭಾಗ್ಯ ನಂಜುಂಡಸ್ವಾಮಿ
1) ಮಂಡಕ್ಕಿ ಬರ್ಫಿ:
ಬೇಕಾಗುವ ಪದಾರ್ಥಗಳು: ಮಂಡಕ್ಕಿ-4 ಕಪ್, ಸಕ್ಕರೆ-4 ಕಪ್, ಏಲಕ್ಕಿ ಪುಡಿ-ಸ್ವಲ್ಪ, ತುಪ್ಪ-2 ಚಮಚ.
ತಯಾರಿಸುವ ವಿಧಾನ: ಮೊದಲು ಸಕ್ಕರೆ ಪಾಕವನ್ನು ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ ಪಾಕ ಗಟ್ಟಿಯಾಗುವ ಮೊದಲು ಗರಿಗರಿಯಾದ ಮಂಡಕ್ಕಿಯನ್ನು ಹಾಕಿ ಕೈಯಾಡಿಸಿ, ತಕ್ಷಣ ತುಪ್ಪ ಸವರಿದ ತಟ್ಟೆಗೆ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ. ಬಿಸಿಬಿಸಿಯಾದ ಮಂಡಕ್ಕಿ ಬರ್ಫಿ ಸವಿಯಲು ಸಿದ್ದ.
ಹೀಗೆ ಮಾಡಿ ನೋಡಿ ಹಾಗಲಕಾಯಿ ಮಸಾಲಾ.. ಒಂಚೂರು ಕಹಿ ಇರೋಲ್ಲ!
2) ಕಲರ್‌ಫುಲ್ ಉಪ್ಮಾ
ಬೇಕಾಗುವ ಸಾಮಗ್ರಿಗಳು: ಮಂಡಕ್ಕಿ-2 ಬಟ್ಟಲು, ಕ್ಯಾರೆಟ್ ತುರಿ-1/4 ಕಪ್, ಈರುಳ್ಳಿ-1 ರಿಂದ 2, ಹಸಿಮೆಣಸು-5 ರಿಂದ 6, ಕರಿಬೇವು-ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ, ತೆಂಗಿನ ತುರಿ-1/4 ಕಪ್, ಉಪ್ಪು-ರುಚಿಗೆ ತಕ್ಕಷ್ಟು. ಒಗ್ಗರಣೆಗೆ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಅರಿಶಿನ.
ಮಾಡುವ ವಿಧಾನ: ಮೊದಲು ಬಾಣಲೆಯಲ್ಲಿ ಒಗ್ಗರಣೆ ಹಾಕಿಕೊಂಡು, ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು ಹಾಕಿ ಬಾಡಿಸಿಕೊಳ್ಳಿ. ಕರಿಬೇವು ಬೆರೆಸಿ ನಂತರ ಕ್ಯಾರೆಟ್ ತುರಿ ಹಾಕಿ ಫ್ರೈ ಮಾಡಿ. ಆನಂತರ ಮಂಡಕ್ಕಿಯನ್ನು ನೀರಿನಲ್ಲಿ ತೊಳೆದು ಚೆನ್ನಾಗಿ ಹಿಂಡಿ, ತಯಾರಿಸಿದ ಮಿಶ್ರಣಕ್ಕೆ ಹಾಕಿ. ಉಪ್ಪು ಬೆರೆಸಿ, ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ತೆಂಗಿನ ತುರಿ ಸೇರಿಸಿ ಕಲರ್‌ಫುಲ್ ಉಪ್ಮಾವನ್ನು ಸವ್‌ರ್ ಮಾಡಿ.
ರೆಸಿಪಿ- ರೆಸ್ಟೋರೆಂಟ್ ಟೇಸ್ಟ್‌ನ ಕೊತ್ತಂಬರಿ ಸೊಪ್ಪಿನ ಚಟ್ನಿ ಮನೆಯಲ್ಲೇ ಮಾಡಿ ನೋಡಿ
3) ಮಂಡಕ್ಕಿ ಕಟ್ಲೆಟ್
ಬೇಕಾಗುವ ಸಾಮಗ್ರಿಗಳು: ಮಂಡಕ್ಕಿ-6 ರಿಂದ 7 ಕಪ್, ತೆಂಗಿನ ತುರಿ-1/4 ಕಪ್, ಹಸಿಮೆಣಸು-2 ರಿಂದ 3, ಆಲೂಗೆಡ್ಡೆ-1, ಕ್ಯಾರೆಟ್ ತುರಿ-ಸ್ವಲ್ಪ, ಹಸಿಶುಂಠಿ-1 ಪೀಸ್, ಕೊತ್ತಂಬರಿ ಸೊಪ್ಪು-ಸ್ವಲ್ಪ, ಕರಿಬೇವು-ಸ್ವಲ್ಪ, ಇಂಗು-ಚಿಟಿಕೆ, ಎಣ್ಣೆ-2 ಚಮಚ, ತುಪ್ಪ-4 ಚಮಚ, ಉಪ್ಪು-ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಮೊದಲು ಮಂಡಕ್ಕಿಯನ್ನು ನೀರಿನಿಂದ ತೊಳೆದು, ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ನಂತರ ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿ ಪುಡಿ ಮಾಡಿಕೊಳ್ಳಿ. ನಂತರ ರುಬ್ಬಿದಂತಹ ಮಂಡಕ್ಕಿ ಮಿಶ್ರಣಕ್ಕೆ ತುರಿದ ಕ್ಯಾರೆಟ್, ಆಲೂಗೆಡ್ಡೆ, ತೆಂಗಿನ ತುರಿ, ಸಣ್ಣಗೆ ಹೆಚ್ಚಿದ ಹಸಿಮೆಣಸು, ಹಸಿಶುಂಠಿ, ಕರಿಬೇವಿನ ಸೊಪ್ಪು, ಇಂಗು ಎಲ್ಲವನ್ನೂ ಸೇರಿಸಿ ಬಿಸಿಯಾದ ಎಣ್ಣೆಯನ್ನು ಎರಡು ಚಮಚ ಹಾಕಿ ಗಟ್ಟಿಯಾಗಿ ಕಲೆಸಿಕೊಳ್ಳಿ. ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ಚಪ್ಪಟೆಯಾಗಿ ತಟ್ಟಿಕಾದ ತವಾದ ಮೇಲೆ ಸ್ವಲ್ಪ ತುಪ್ಪ ಹಾಕಿ ಶಾಲೋ ಫ್ರೈ ಮಾಡಿ. ನಂತರ ಇದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕ್ಯಾರೆಟ್ ತುರಿ ಹಾಕಿ ಸವ್‌ರ್ ಮಾಡಿ.
ಚುಮುಚುಮು ಚಳಿಗಾಲಕ್ಕೆ 5 ಬಿಸಿಬಿಸಿ, ಖಾರಖಾರ ರಸಂ ಹಾಗೂ ತಿಳಿಸಾರು ರೆಸಿಪಿಗಳು!
4) ಮಂಡಕ್ಕಿ ಲಡ್ಡು:
ಬೇಕಾಗುವ ಸಾಮಗ್ರಿಗಳು: ಗರಿಗರಿಯಾದ ಮಂಡಕ್ಕಿ-1/2 ಲೀ, ಬೆಲ್ಲ-5 ಕಪ್, ಏಲಕ್ಕಿಪುಡಿ-ಸ್ವಲ್ಪ, ಹುರಿಗಡಲೆ ಪುಡಿ-1/4 ಕಪ್, ಕೊಬ್ಬರಿ ಪೀಸ್-ಸ್ವಲ್ಪ, ಶೇಂಗಾಬೀಜ-1/4 ಕಪ್, ತುಪ್ಪ-4 ರಿಂದ 5 ಚಮಚ.
ತಯಾರಿಸುವ ವಿಧಾನ: ಮೊದಲು ಬೆಲ್ಲದ ಎಳೆಪಾಕವನ್ನು ಉಂಡೆ ಕಟ್ಟುವ ಹದಕ್ಕೆ ತಯಾರಿಸಿಕೊಳ್ಳಬೇಕು. ಆನಂತರ ಒಂದು ಬೌಲ್‌ನಲ್ಲಿ ಹುರಿಗಡಲೆ ಪುಡಿ, ಕೊಬ್ಬರಿ ಪೀಸ್, ಹುರಿದ ಶೇಂಗಾಬೀಜ ಎಲ್ಲವನ್ನೂ ಚೆನ್ನಾಗಿ ಬೆರೆಸಿ, ಮಂಡಕ್ಕಿಯನ್ನು ಸೇರಿಸಿ ಇದಕ್ಕೆ ಬೆಲ್ಲದ ಪಾಕ ಹಾಕಿ ಕೈಗೆ ತುಪ್ಪ ಸವರಿಕೊಂಡು ಬಿಸಿಯಾಗಿರುವಾಗಲೇ ಉಂಡೆ ಕಟ್ಟಿ. ಈಗ ರುಚಿರುಚಿಯಾದ ಲಡ್ಡು ರೆಡಿ.
ನಳ ಮಹಾರಾಜ ನಟ ಅರವಿಂದ್ ಐಯ್ಯರ್ ಹೇಳಿ ಕೊಟ್ಟ 4 ರೆಸಿಪಿಗಳು!
5) ಮಂಡಕ್ಕಿ ಚುರುಮುರಿ:
ಬೇಕಾಗುವ ಸಾಮಗ್ರಿಗಳು: ಮಂಡಕ್ಕಿ-1/2 ಲೀ. ಕ್ಯಾರೆಟ್ ತುರಿ-1/4 ಕಪ್, ಈರುಳ್ಳಿ-1/4 ಕಪ್, ಅಚ್ಚಖಾರದ ಪುಡಿ-3 ಚಮಚ, ಗರಂಮಸಾಲೆ ಪುಡಿ-3 ಚಮಚ, ಟೊಮ್ಯಾಟೋ-1/4 ಕಪ್, ಕೊಬ್ಬರಿ ಎಣ್ಣೆ-4 ರಿಂದ 5 ಚಮಚ, ಲಿಂಬೆರಸ-2 ಚಮಚ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಮೊದಲು ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮ್ಯಾಟೋವನ್ನು ಚೆನ್ನಾಗಿ ಬೆರೆಸಿ, ಇದಕ್ಕೆ ಅಚ್ಚಖಾರದ ಪುಡಿ, ಗರಂ ಮಸಾಲೆ ಪುಡಿ ಸೇರಿಸಿ, ಕೊಬ್ಬರಿ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಕಲಸಿ. ಇದಕ್ಕೆ ಲಿಂಬೆರಸ ಸೇರಿಸಿ, ನಂತರ ಸವ್‌ರ್ ಮಾಡುವಾಗ ಮಂಡಕ್ಕಿಯನ್ನು ಬೆರೆಸಿ ಮೇಲೆ ಕೊತ್ತಂಬರಿ ಸೊಪ್ಪು ಉದುÃಸಿದರೆ ರುಚಿರುಚಿಯಾದ ಮಂಡಕ್ಕಿ ಚುರುಮುರಿ ಸವಿಯಲು ಸಿದ್ದ.
ಬಾಳೆಕಾಯಿ ಸಿಪ್ಪೆಯ ಈ ಚಟ್ನಿ ಸವಿದ್ರೆ ಮತ್ಯಾವತ್ತೂ ನೀವು ಸಿಪ್ಪೆನಾ ಎಸೆಯೋಲ್ಲ
6) ಖಾರ ಮಂಡಕ್ಕಿ:
ಬೇಕಾಗುವ ಸಾಮಗ್ರಿಗಳು: ಮಂಡಕ್ಕಿ-2 ಲೀ. ಶೇಂಗಾಬೀಜ-1/2 ಕಪ್, ಹುರಿಗಡಲೆ-1/2 ಕಪ್, ಒಣಮೆಣಸಿನ ಕಾಯಿ-3 ರಿಂದ 4, ಕೊಬ್ಬರಿ ಪೀಸ್-1/4 ಕಪ್, ಎಣ್ಣೆ-5 ರಿಂದ 6 ಚಮಚ, ಸಾಸಿವೆ-1 ಚಮಚ, ಅರಿಶಿನ-1/4 ಚಮಚ, ಕರಿಬೇವು-ಸ್ವಲ್ಪ.
ಮಾಡುವ ವಿಧಾನ: ಮೊದಲು ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ ಹಾಕಿ, ಅರಿಶಿನ ಕರಿಬೇವು ಸೇರಿಸಿ, ನಂತರ ಶೇಂಗಾಬೀಜ ಗರಿಗರಿಯಾಗುವವರೆಗೆ ಫ್ರೈ ಮಾಡಿಕೊಳ್ಳಬೇಕು. ಇದಕ್ಕೆ ಹುರಿಗಡಲೆ ಸೇರಿಸಿ, ಕೊಬ್ಬರಿ ಪೀಸ್ ಹಾಕಿ, ಫ್ರೈ ಮಾಡಿ ನಂತರ ಮಂಡಕ್ಕಿಯನ್ನು ಬೆರೆಸಿ, ಎಲ್ಲದರೊಂದಿಗೆ ಮಿಕ್ಸ್ ಮಾಡಿ ಬಿಸಿ ಮಾಡಬೇಕು. ಇದನ್ನು ಡಬ್ಬಿಯಲ್ಲಿ ಹಾಕಿ ಗಾಳಿಯಾಡದಂತೆ ಇಟ್ಟುಕೊಂಡರೆ ಬಹು ದಿವಸ ಉಳಿಯುತ್ತದೆ.
ರೆಸಿಪಿ: ಪನ್ನೀರ್ ಇಲ್ಲದೆ ಪನ್ನೀರ್ ಭುರ್ಜಿ ಮಾಡುವ ವಿಧಾನ ಇಲ್ಲಿದೆ!
7) ಮಂಡಕ್ಕಿ ಅಂಬೊಡೆ:
ಬೇಕಾಗುವ ಸಾಮಗ್ರಿಗಳು: ಮಂಡಕ್ಕಿ ನೆನೆಸಿದ್ದು-2 ಕಪ್, ಉದ್ದಿನಬೇಳೆ-4 ಚಮಚ, ಹೆಸರು ಬೇಳೆ-1/2 ಕಪ್, ಕಡ್ಲೆಬೇಳೆ-1 ಕಪ್, ಕರಿಬೇವು-ಸ್ವಲ್ಪ, ಎಣ್ಣೆ-ಕರಿಯಲು, ಹಸಿರು ಮೆಣಸಿನಕಾಯಿ-4 ರಿಂದ 5.
ತಯಾರಿಸುವ ವಿಧಾನ: ಮಿಕ್ಸಿ ಜಾರಿಗೆ ನೆನೆಸಿದ ಕಡ್ಲೆಬೇಳೆ, ಹೆಸರುಬೇಳೆ, ಉದ್ದಿನಬೇಳೆ ಹಾಕಿ ರುಬ್ಬಿಕೊಳ್ಳಬೇಕು. ಇದಕ್ಕೆ ನೆನೆಸಿದ ಮಂಡಕ್ಕಿ, ಸಣ್ಣಗೆ ಹೆಚ್ಚಿದ ಕರಿಬೇವು ಹಾಕಿ ಹಸಿಮೆಣಸು ಸೇರಿಸಿ ಉಪ್ಪು ಬೆರೆಸಿ ಬಾಳೆ ಎಲೆಯ ಮೇಲೆ ಚಪ್ಪಟೆಯಾಗಿ ತಟ್ಟಿಕಾದ ಎಣ್ಣೆಯಲ್ಲಿ ಕರಿದರೆ ಗರಿಗರಿಯಾದ ಅಂಬೊಡೆ ರೆಡಿ.