ನಳ ಮಹಾರಾಜ ನಟ ಅರವಿಂದ್‌ ಐಯ್ಯರ್ ಹೇಳಿ ಕೊಟ್ಟ 4 ರೆಸಿಪಿಗಳು!

‘ಭೀಮಸೇನ ನಳಮಹಾರಾಜ’ ಸಿನಿಮಾದ ಹೀರೋ ಅರವಿಂದ್‌ ಐಯ್ಯರ್‌. ಇಂಗ್ಲೆಂಡ್‌ನಲ್ಲಿ ಓದುವಾಗ ಒಂದಿಷ್ಟುಎಡವಟ್ಟು ಮಾಡ್ಕೊಂಡು ಕುಕ್ಕಿಂಗ್‌ ಕಲ್ತಿದ್ದು. ಈಗ ಅಡುಗೆ ವಿಚಾರಕ್ಕೆ ಬಂದರೆ ಅಕ್ಷರಶಃ ನಳಮಹರಾಜನೇ. ಅವರು ಹೇಳಿದ ಐದು ರೆಸಿಪಿಗಳು ಇಲ್ಲಿವೆ.

Bheemasena Nalamaharaja fame Aravind iyer 5 simple cooking recipe vcs

1. ತರಕಾರಿ ಕೂಟು

ಸೀಸನಲ್‌ ತರಕಾರಿ ಹಾಕಿ ಮಾಡೋ ರೆಸಿಪಿ ಇದು. ಅಮ್ಮ ಅದ್ಭುತವಾಗಿ ಮಾಡ್ತಾರೆ. ನಂಗೆ ಇದನ್ನು ತಿಂದು ಗೊತ್ತಿದೆಯಷ್ಟೇ, ಮಾಡೋ ವಿಧಾನ ಗೊತ್ತು. ಈ ಕೂಟು ಮಾಡಿದಾಗ ಇದರ ಜೊತೆಗೆ ತೇಲ್‌ಮಾ ಪಾಟಿ ಗೊಜ್ಜು ಮಾಡ್ತಾರೆ. ಒಬ್ರು ಅಜ್ಜಿ ಈ ಗೊಜ್ಜು ಮಾಡೋದ್ರಲ್ಲಿ ಪೇಮಸ್‌. ಹಾಗಾಗಿ ಇದಕ್ಕೆ ಅವರ ಹೆಸರು. ಈ ಗೊಜ್ಜನ್ನು ಮೊಸರು, ಕೊಬ್ಬರಿ, ಕೊತ್ತಂಬರಿ ಸೊಪ್ಪು, ಕರಿಬೇವು ಇತ್ಯಾದಿ ಹಾಕಿ ಮಾಡ್ತಾರೆ. ಹಾಗಂತ ಇದು ಸೌತೇಕಾಯಿ ಗೊಜ್ಜು ಥರ ಅಲ್ಲ. ಆದ್ರೆ ದುರಾದೃಷ್ಟವಶಾತ್‌ ಈ ರೆಸಿಪಿ ನಂಗೆ ಗೊತ್ತಿಲ್ಲ. ಸೋ, ಕೂಟು ಮಾತ್ರ ಮಾಡಾಣ.

ಬೇಕಾದ ಸಾಮಗ್ರಿ: ಎಲ್ಲ ಬಗೆಯ ಸೀಸನಲ್‌ ತರಕಾರಿಗಳು, ಚಕ್ಕೆ, ಲವಂಗ, ಒಣಮೆಣಸಿನ ಕಾಯಿ 7, ಕಡಲೇ ಬೇಳೆ ಸ್ವಲ್ಪ, ಉದ್ದಿನ ಬೇಳೆ 1 ಚಮಚ, ಮೆಣಸು 1/2 ಚಮಚ, ಜೀರಿಗೆ 1/2 ಚಮಚ, ಕೊತ್ತಂಬರಿ ಬೀಜ 1/2 ಚಮಚ, ಚಿಟುಕಿ ಅರಿಶಿಣಪುಡಿ, ಚಿಟುಕಿ ಇಂಗು, ಕಾಯಿ ತುರಿ 1 ಕಪ್‌, ಕರಿಬೇವು, ಕೊತ್ತಂಬರಿ ಸೊಪ್ಪು.

ಬಾಳೆಕಾಯಿ ಸಿಪ್ಪೆಯ ಈ ಚಟ್ನಿ ಸವಿದ್ರೆ ಮತ್ಯಾವತ್ತೂ ನೀವು ಸಿಪ್ಪೆನಾ ಎಸೆಯೋಲ್ಲ 

ಮಾಡುವ ವಿಧಾನ: ಮೊದಲು ಕಾಯಿಯನ್ನು ರುಬ್ಬಿ, ಕಾಯಿ ಹಾಲು ತೆಗೆಯಬೇಕು. ಬಳಿಕ ಈ ಕಾಯಿಹಾಲಿನಲ್ಲಿ ಕಟ್‌ ಮಾಡಿರೋ ತರಕಾರಿಗಳನ್ನು ಉಪ್ಪು, ಸ್ವಲ್ಪ ಖಾರದ ಪುಡಿ ಅಥವಾ ಹಸಿ ಮೆಣಸಿನ ಕಾಯಿ, ಉಪ್ಪು ಹಾಕಿ ಬೇಯಿಸಿ. ಈಗ ಮಸಾಲೆ ರುಬ್ಬಿಕೊಳ್ಳಿ. ಚಕ್ಕೆ, ಲವಂಗ, ಸ್ವಲ್ಪ ದಾಲ್ಚೀನಿ, ಕಡಲೆ ಬೇಳೆ, ಉದ್ದಿನ ಬೇಳೆ, ಕಾಯಿ ತುರಿ, ಕೊತ್ತಂಬರಿ ಬೀಜ, ಒಣ ಮೆಣಸನ್ನು ಎಣ್ಣೆ ಹಾಕದೇ ಡ್ರೈ ರೋಸ್ಟ್‌ ಮಾಡಬೇಕು. ನಂತರ ಸ್ವಲ್ಪ ಕಾಯಿ ಜೊತೆಗೆ ಇದನ್ನು ರುಬ್ಬಿ ತರಕಾರಿಗಳ ಜೊತೆಗೆ ಮಿಕ್ಸ್‌ ಮಾಡೋದು. ಒಮ್ಮೆ ರುಚಿ ನೋಡ್ಕೊಳ್ಳಿ. ನಿಮ್ಮ ಟೇಸ್ಟಿಗೆ ತಕ್ಕ ಹಾಗೆ ಉಪ್ಪು, ಖಾರ ಸರಿ ಮಾಡ್ಕೊಳ್ಳಿ. ಆಮೇಲೆ ಇದಕ್ಕೆ ಕೊತ್ತಂಬರಿ ಸೊಪ್ಪು ಹೆಚ್ಚಿ ಹಾಕಿ. ಸಾಸಿವೆ, ಕರಿಬೇವು ಒಗ್ಗರಣೆ ಕೊಡಿ. ಬೇಕಿದ್ರೆ ಸ್ವಲ್ಪ ನಿಂಬೆ ರಸ ಆ್ಯಡ್‌ ಮಾಡಬಹುದು.

ಇದನ್ನು ಅನ್ನದ ಜೊತೆಗೆ ಕಲಸಿಕೊಂಡು ತಿನ್ನೋದು ಚೆನ್ನಾಗಿರುತ್ತೆ. ಚಪಾತಿ, ದೋಸೆ, ಪೂರಿ ಜೊತೆಗೂ ತಿನ್ನಬಹುದು.

2. ಅಮೃತ್‌ಸರಿ ಪಿಂಡಿ ಚನ್ನಾ

ಮನೆಯಲ್ಲಿ ಅಮ್ಮ ಸಖತ್ತಾದ ಸೌತ್‌ ಇಂಡಿಯನ್‌ ಅಡುಗೆ ಮಾಡುತ್ತಾರೆ. ವೆರೈಟಿ ಇರಲಿ ಅಂತ ನಾನು ನಾತ್‌ರ್‍ ಇಂಡಿಯನ್‌ ಡಿಶಸ್‌ ಟ್ರೈ ಮಾಡ್ತೀನಿ. ಯೂ ಟ್ಯೂಬ್‌ ನೋಡ್ಕೊಂಡು ಟ್ರೈ ಮಾಡೋದು. ಅದ್ರಲ್ಲಿ ಒಂಚೂರು ಚೇಂಜಸ್‌ ಮಾಡ್ಕೊಳ್ಳೋದೂ ಮಜಾ ಕೊಡುತ್ತೆ.

ಬೇಕಾದ ಸಾಮಗ್ರಿ: ಕಪ್ಪು ಚನ್ನ ದಾಲ್‌ 1 ಕಪ್‌, ಈರುಳ್ಳಿ, ಹಸಿಮೆಣಸು, ಜಿಂಜರ್‌ ಗಾರ್ಲಿಕ್‌ ಪೇಸ್ಟ್‌, ಟೊಮ್ಯಾಟೋ, ಗರಂ ಮಸಾಲೆ ಅಥವಾ ಸ್ಪೈಸ್‌ ಪೌಡರ್‌, ಉಪ್ಪು.

ರೆಸಿಪಿ: ಪನ್ನೀರ್‌ ಇಲ್ಲದೆ ಪನ್ನೀರ್‌ ಭುರ್ಜಿ ಮಾಡುವ ವಿಧಾನ ಇಲ್ಲಿದೆ! 

ಮಾಡುವ ವಿಧಾನ: ಕಪ್ಪು ಚನ್ನ ದಾಲ್‌ ಅನ್ನು ರಾತ್ರಿ ಇಡೀ ನೆನೆಸಿ. 8 ರಿಂದ 9 ಗಂಟೆ ನೆನೆಯಬೇಕು. ನಂತರ ಕುಕ್ಕರ್‌ನಲ್ಲಿ ಬೇಯಿಸಿ. ಬಾಣಲೆಗೆ ಎಣ್ಣೆ ಹಾಕಿ ಕಾದ ಬಳಿಕ ಈರುಳ್ಳಿ ಹಾಕಿ. ಆಮೇಲೆ ಹಸಿಮೆಣಸು ಹಾಕಿ ಫ್ರೈ ಮಾಡಿ. ಇದಕ್ಕೆ ಟೊಮ್ಯಾಟೋ ಹಾಕಿ. ಚೆನ್ನಾಗಿ ಮಿಕ್ಸ್‌ ಮಾಡಿ. ಬೆಂದ ಬಳಿಕ ಜಿಂಜರ್‌ ಗಾರ್ಲಿಕ್‌ ಪೇಸ್ಟ್‌ ಹಾಕಿ. ಗರಂ ಮಸಾಲೆ 1 ಸ್ಪೂನ್‌ನಷ್ಟುಹಾಕಿ. ಉಪ್ಪು ಹಾಕಿ ಮಿಕ್ಸ್‌ ಮಾಡಿ. ಇದಕ್ಕೆ ಬೆಂದಿರುವ ಚನ್ನ ದಾಲ್‌ ಸೇರಿಸಿ. ಮೇಲಿಂದ ಮೊಸರು ಹಾಕಿದ್ರೂ ಚೆನ್ನಾಗಿರುತ್ತೆ. ನಿಂಬೆ ರಸ ಹಾಕಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ತಿಂದರೂ ಸಖತ್‌ ಟೇಸ್ಟ್‌.

3. ಕ್ಯಾಪ್ಸಿಕಂ ಬಟರ್‌ ಮಸಾಲಾ

ಇದು ಕೋವಿಡ್‌ ಟೈಮ್‌ನಲ್ಲಿ ಕಲಿತ ರೆಸಿಪಿ. ಪನೀರ್‌ ಬಟರ್‌ ಮಸಾಲಾವನ್ನು ಒಂಚೂರು ಚೇಂಜ್‌ ಮಾಡಿ ಮಾಡಿದ ರೆಸಿಪಿ.

ಬೇಕಾದ ಸಾಮಗ್ರಿ: ರೆಡ್‌ ಕ್ಯಾಪ್ಸಿಕಂ 1, ಈರುಳ್ಳಿ 1, ಕ್ರೀಮ್‌ ಸ್ವಲ್ಪ, ಕೇಸರಿ, ಉಪ್ಪು

ಮಾಡುವ ವಿಧಾನ: ಈರುಳ್ಳಿ, ಗೋಡಂಬಿ, ಕ್ಯಾಪ್ಸಿಕಂ ಅನ್ನು ಡ್ರೈ ರೋಸ್ಟ್‌ ಮಾಡೋದು. ಆಗ ಫ್ಲೇವರ್‌ ಬದಲಾಗುತ್ತೆ. ಅದನ್ನು ಕೂಲ್‌ ಆಗಲು ಬಿಡಿ. ಆಮೇಲೆ ಅದನ್ನು ಮಿಕ್ಸಿಗೆ ಹಾಕಿ. ಇದಕ್ಕೆ ಶುಂಠಿ, ಮೆಣಸಿನಕಾಯಿ ಹಾಕಿ ನೀರು ಹಾಕದೇ ರುಬ್ಬಿ ಪೇಸ್ಟ್‌ ಥರ ಮಾಡ್ಕೊಳ್ಳಿ. ಹಾಲಿಗೆ ಕ್ರೀಮ್‌, ಕೇಸರಿ ಹಾಕಿ ಮಿಕ್ಸ್‌ ಮಾಡ್ಕೊಳ್ಳಿ. ಇದಕ್ಕೆ ರುಬ್ಬಿದ ಪೇಸ್ಟ್‌ ಅಥವಾ ಮಸಾಲೆ ಸೇರಿಸಿ. ಆಮೇಲೆ ಕೊತ್ತಂಬರಿ ಸೊಪ್ಪು ಉದುರಿಸೋದು.

ಆರೋಗ್ಯಕ್ಕೆ ಒಳ್ಳೇದಂತ ಬೇಕಾಬಿಟ್ಟಿ ಬೇಡ.. ಡ್ರೈ ಫ್ರುಟ್ಸ್ ಸೇವನೆಗೂ ಇರಲಿ ಮಿತಿ 

4. ಧಂ ಬಿರಿಯಾನಿ ಸ್ಟೈಲ್‌ನಲ್ಲಿ ಪನೀರ್‌ ಬಿರಿಯಾನಿ

ಬೇಕಾದ ಸಾಮಗ್ರಿ: 2 ಸ್ಪೂನ್‌ ಎಣ್ಣೆ, 2 ಸ್ಪೂನ್‌ ತುಪ್ಪ, 1 ಕಪ್‌ ಮೊಸರು, ಕಾಲು ಕಪ್‌ ಪುದೀನ, ಅರ್ಧ ಕಪ್‌ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪು, 1 ಕಪ್‌ ಕಲಸಿಟ್ಟಗೋಧಿ ಹಿಟ್ಟು (ಚಪಾತಿ ಹಿಟ್ಟಿನ ಹದಕ್ಕೆ), ಲವಂಗ, ಏಲಕ್ಕಿ, ಪಲಾವ್‌ ಎಲೆ, ಚಕ್ಕೆ, ಕಾಳು ಮೆಣಸು, ಬೇಯಿಸಿದ ಆಲೂಗಡ್ಡೆ, ಕಾಲು ಕಪ್‌ ಬಟಾಣಿ, 2 ಹಸಿ ಮೆಣಸಿನ ಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಅರಿಶಿನ, 1 ಕಪ್‌ ಬಾಸುಮತಿ ಅಕ್ಕಿ, 2 ಸ್ಪೂನ್‌ ಬಿರಿಯಾನಿ ಮಸಾಲಾ, 1 ಸ್ಪೂನ್‌ ಗರಂ ಮಸಾಲಾ, ಜೀರಿಗೆ, ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ, ಪನೀರ್‌, ಪ್ರೈಡ್‌ ಆನಿಯನ್‌, ಫುಡ್‌ ಕಲರ್‌, ಉಪ್ಪು.

ಮಾಡುವ ವಿಧಾನ : ಬಾಸುಮತಿ ಅಕ್ಕಿಯನ್ನು ತೊಳೆದು 20 ನಿಮಿಷ ನೀರಲ್ಲಿ ನೆನೆಸಿಡಿ. ಮೊದಲು ಒಂದು ಪ್ಯಾನ್‌ನಲ್ಲಿ 6 ಕಪ್‌ ನೀರು ಹಾಕಿ. ಚಕ್ಕೆ, ಲವಂಗ, ಪಲಾವ್‌ ಎಲೆ ಇತ್ಯಾದಿಯನ್ನು ಆ ನೀರಿಗೆ ಹಾಕಿ. ಸ್ವಲ್ಪ ಉಪ್ಪು, 1 ಸ್ಪೂನ್‌ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಮುಚ್ಚಳ ಮುಚ್ಚಿ ಕುದಿಯಲು ಬಿಡಿ. ಕುದಿಯುವಾಗ ನೆನೆಸಿರುವ ಅಕ್ಕಿ ಹಾಕಿ ಈಗ ಇನ್ನೊಮ್ಮೆ ಚೆನ್ನಾಗಿ ಮಿಕ್ಸ್‌ ಮಾಡಿ. ಮತ್ತೆ ಮುಚ್ಚಳ ಮುಚ್ಚಿ. ಫುಲ್‌ ಬೇಯೋದು ಬೇಡ. ಮುಕ್ಕಾಲು ಭಾಗ ಬೆಂದ ಮೇಲೆ ಸ್ಟೌಆಫ್‌ ಮಾಡಿ. ಈಗ ಅಕ್ಕಿಯಲ್ಲಿರುವ ನೀರನ್ನೆಲ್ಲ ತೆಗೆದು ಸೋಸಿ. ಬಳಿಕ ಅರೆಬೆಂದ ಅನ್ನಕ್ಕೆ 1 ಲೋಟ ತಣ್ಣೀರು ಹಾಕಿ ಪಕ್ಕಕ್ಕಿಡಿ. ಈಗ ಪಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ತುಪ್ಪ ಸೇರಿಸಿ. ಚೆನ್ನಾಗಿ ಕಾದ ಬಳಿಕ ಜೀರಿಗೆ, ಈರುಳ್ಳಿ ಹಾಕಿ 2 ನಿಮಿಷ ಬೇಯಲು ಬಿಡಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಈಗ ಆಲೂಗಡ್ಡೆ, ಬಟ್ಟಾಣಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ, 3 ನಿಮಿಷ ಬೇಯಿಸಿ. ಸ್ಟವ್‌ ಲೋ ಫ್ಲೇಮ್‌ನಲ್ಲಿಟ್ಟು ಮೊಸರನ್ನು ಹಾಕಿ. ನಂತರ ಗರಂ ಮಸಾಲೆ, ಅರಿಶಿನ, ಅಚ್ಚ ಖಾರದ ಪುಡಿ, ಬಿರಿಯಾನಿ ಮಸಾಲಾ, ರುಚಿಗೆ ತಕ್ಕಷ್ಟುಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಇದಕ್ಕೆ ಕೊತ್ತಂಬರಿ, ಪುದೀನಾ ಸೇರಿಸಿ ಇನ್ನೊಮ್ಮೆ ಮಿಕ್ಸ್‌ ಮಾಡಿ. ಇದಕ್ಕೆ 1 ಕಪ್‌ ನೀರು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಮುಚ್ಚಳ ಮುಚ್ಚಿ ಬೇಯಲು ಬಿಡಿ. 10 ನಿಮಿಷ ಮೀಡಿಯಂ ಫ್ಲೇಮ್‌ನಲ್ಲಿ ಬೇಯಲಿ. ನಂತರ ಹಸಿಮೆಣಸಿನ ಕಾಯಿ ಸೇರಿಸಿ. ಇನ್ನೊಂದು ನಿಮಿಷ ಬಿಟ್ಟು ಪನೀರ್‌ ಪೀಸ್‌ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಸ್ಟೌಆಫ್‌ ಮಾಡಿ. ನಂತರ ಈ ಗ್ರೇವಿಯನ್ನು ಇನ್ನೊಂದು ಕುಕ್ಕರ್‌ ಅಥವಾ ಪಾನ್‌ಗೆ ಹಾಕಿ. ಆಮೇಲೆ ಅರ್ಧ ಭಾಗದಷ್ಟುಅಕ್ಕಿಯನ್ನು ಹಾಕಿ. ಮತ್ತೆ ಗ್ರೇವಿಯನ್ನೆಲ್ಲ ಹಾಕಿ. ಸೆ್ೊ್ರಡ್‌ ಮಾಡಿ. ಅದರ ಮೇಲೆ ಉಳಿದಿರುವ ಅನ್ನ ಹಾಕಿ. ಬಳಿಕ ಪುದೀನಾ, ಫುಡ್‌ ಕಲರ್‌, ತುಪ್ಪ, ಬಿರಿಯಾನಿ ಪೌಡರ್‌, ಫ್ರೈ ಮಾಡಿದ ಈರುಳ್ಳಿ ಹಾಕಿ. ಈಗ ಚಪಾತಿ ಹಿಟ್ಟನ್ನು ಬಾಣಲೆಗೂ ಮುಚ್ಚಳಕ್ಕೂ ಸೇರಿಸಿ ಗಮ್‌ನಂತೆ ಅಂಟಿಸಿ. ಮುಚ್ಚಳದಲ್ಲಿ ರಂಧ್ರ ಇರುವ ಭಾಗವಿದ್ದರೆ ಅಲ್ಲೂ ಅಂಟಿಸಿ. ಹತ್ತು ನಿಮಿಷ ಹಬೆಯಲ್ಲಿ ಬೇಯಲು ಬಿಡಿ. ಬಳಿಕ ಸ್ಟೌಮೇಲೆ ತವಾ ಇಟ್ಟು ಅದರ ಮೇಲೆ ಈ ಮುಚ್ಚಿದ ಕುಕ್ಕರ್‌ಅನ್ನು ಹತ್ತು ನಿಮಿಷ ಇಟ್ಟು ಬೇಯಲು ಬಿಡಿ. ಈಗ ಹಚ್ಚಿರುವ ಗೋಧಿ ಹಿಟ್ಟನ್ನು ತೆಗೆದು ಮುಚ್ಚಳ ತೆರೆಯಿರಿ. ಬಿಸಿ ಬಿಸಿಯಾಗಿ ತಿನ್ನಿ.

Latest Videos
Follow Us:
Download App:
  • android
  • ios