ಹೀಗೆ ಮಾಡಿ ನೋಡಿ ಹಾಗಲಕಾಯಿ ಮಸಾಲಾ.. ಒಂಚೂರು ಕಹಿ ಇರೋಲ್ಲ!
ಹಾಗಲಕಾಯಿ ಕಹಿ ತರಕಾರಿಯಾದರೂ ಅದು ಹೆಚ್ಚು ಪೌಷ್ಟಿಕಂಶಗಳನ್ನು ಹೊಂದಿದೆ.ಸಾಮಾನ್ಯವಾಗಿ ಹೆಚ್ಚಿನವರು ಕಹಿಯೆಂದು ಈ ತರಕಾರಿ ತಿನ್ನುವುದರಿಂದ ದೂರ ಓಡುತ್ತಾರೆ. ಈ ಸಮಸ್ಯೆಗೆ ಪರಿಹಾರ ಇಲ್ಲಿದೆ. ಈ ರೀತಿ ಹಾಗಲಕಾಯಿಯ ಮಸಾಲಾ ಮಾಡಿ ನೋಡಿ. ಒಂದು ಚೂರು ಸಹ ಕಹಿ ಅಂಶ ಇರುವುದಿಲ್ಲ.
1/2 ಕೆಜಿ ಹಾಗಲಕಾಯಿ, 1 ಈರುಳ್ಳಿ, 1/2 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಸೋಂಪು, 1/2 ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 1/2 ಟೀಸ್ಪೂನ್ ಕೊತ್ತಂಬರಿ ಪುಡಿ, 2 ಟೀಸ್ಪೂನ್ ಅಮ್‌ಚೂರ್ ಪುಡಿ, ಅಗತ್ಯವಿದಷ್ಟು ಉಪ್ಪು ಮತ್ತು ನೀರು.
ಮೊದಲಿಗೆ ಹಾಗಲಕಾಯಿಯನ್ನು ಈ ರೀತಿ ಸಣ್ಣ ತುಂಡುಗಳಾಗಿ ಕತ್ತರಿಸಿ.
ಒಂದು ಪಾತ್ರೆಯಲ್ಲಿ ಒಂದು ಚಮಚ ಉಪ್ಪು ಮತ್ತು ನೀರಿನ ಜೊತೆ ಕತ್ತರಿಸಿದ ಹಾಗಲಕಾಯಿಯನ್ನು ಹಾಕಿ. ಹಾಗಲಕಾಯಿಯ ಕಹಿ ಕಡಿಮೆ ಮಾಡಲು ಅರ್ಧ ಘಂಟೆಯವರೆಗೆ ನೆನೆಯಲು ಬಿಡಿ.
ನಂತರ ನೀರು ಬಸಿದು ಇಡಿ.
ಗ್ಯಾಸ್ ಮೇಲೆ ಪ್ಯಾನ್ ಇಟ್ಟು, ಇದಕ್ಕೆ ಎಣ್ಣೆ ಹಾಕಿ. ಕಾದ ನಂತರ ಸಾಸಿವೆ ಮತ್ತು ಸೋಂಪಿನ ಕಾಳಗಳನ್ನು ಸೇರಿಸಿ.
ಎಣ್ಣೆಗೆ ಈರುಳ್ಳಿ ಸೇರಿಸಿ ಮತ್ತು ಅದನ್ನು ಚೆನ್ನಾಗಿ ಫ್ರೈ ಮಾಡಿ. ಸ್ವಲ್ಪ ಸಮಯದ ನಂತರ ಹಾಗಲಕಾಯಿಯ ಹೋಳಗಳನ್ನು ಸೇರಿಸಿ.
ಈಗ ಅರಿಶಿನ, ಕೆಂಪು ಮೆಣಸಿನಕಾಯಿ ಮತ್ತು ಕೊತ್ತಂಬರಿ ಪುಡಿಯನ್ನು ಪೇಸ್ಟ್ ಮಾಡಿ ಹೋಳುಗಳಿಗೆ ಬೆರೆಸಿ. ಇದರ ನಂತರ ಉಪ್ಪು ಸೇರಿಸಿ ಮತ್ತು 10 ರಿಂದ 15 ನಿಮಿಷಗಳ ಕಾಲ ಮುಚ್ಚಿಡಿ.
ಕೊನೆಯದಾಗಿ ಅಮ್‌ಚೂರ್ ಪುಡಿಯನ್ನು ಬೆರೆಸಬೇಕು. ಇದನ್ನು ಸೇರಿಸಿದ ನಂತರ, ಇನ್ನೂ 4 ನಿಮಿಷ ಬೇಯಿಸಿ. ಗ್ಯಾಸ್ ಆಫ್ ಮಾಡಿ.
ಟೆಸ್ಟಿ ಹಾಗಲಕಾಯಿ ಮಸಾಲಾ ರೆಡಿ. ಅನ್ನ ಅಥವಾ ಚಪಾತಿಯೊಂದಿಗೆ ಸವಿಯಿರಿ.