ರೆಸಿಪಿ- ರೆಸ್ಟೋರೆಂಟ್ ಟೇಸ್ಟ್‌ನ ಕೊತ್ತಂಬರಿ ಸೊಪ್ಪಿನ ಚಟ್ನಿ ಮನೆಯಲ್ಲೇ ಮಾಡಿ ನೋಡಿ
ನಮ್ಮ ದೇಶದಲ್ಲಿ ಜನರು ಊಟ ತಿಂಡಿ ಜೊತೆ ಚಟ್ನಿಯನ್ನು ತುಂಬಾ ಇಷ್ಟಪಡುತ್ತಾರೆ. ವಿವಿಧ ರೀತಿಯ ಚಟ್ನಿಯನ್ನು ಹಲವು ಬಗೆಯ ವಸ್ತುಗಳಿಂದ ತಯಾರಿಸಲಾಗುತ್ತದೆ. ಉದಾಹರಣೆಗೆ, ಹುಣಸೆ ಹಣ್ಣಿನ ಚಟ್ನಿಯಿಂದ ಹಿಡಿದು ಸಿಹಿ ಚಟ್ನಿಯವರೆಗೆ ತರಾವರಿ ರುಚಿಯ ಚಟ್ನಿಗಳನ್ನು ತಯಾರಿಸುತ್ತಾರೆ. ಮೆಣಸಿನಕಾಯಿ, ಪುದೀನಾ, ಮಾವಿನಕಾಯಿಯಿಂದ ಸಹ ಚಟ್ನಿ ಮಾಡಲಾಗುತ್ತದೆ. ಆದರೆ ಕೊತ್ತಂಬರಿ ಸೊಪ್ಪಿನ ಚಟ್ನಿ ಸಖತ್ ಫೇಮಸ್. ರೆಸ್ಟೋರೆಂಟ್ ಟೇಸ್ಟ್‌ನ ಕೊತ್ತಂಬರಿ ಸೊಪ್ಪಿನ ಚಟ್ನಿಯನ್ನು ಮನೆಯಲ್ಲೇ ಮಾಡುವ ಈಸಿ ರೆಸಿಪಿ ಇಲ್ಲಿದೆ.
50 ಗ್ರಾಂ ಕೊತ್ತಂಬರಿ ಸೊಪ್ಪು, 4 ಹಸಿರು ಮೆಣಸಿನಕಾಯಿ, ಸಣ್ಣ ತುಂಡು ಶುಂಠಿ, ಈರುಳ್ಳಿ ಬೆಳ್ಳುಳ್ಳಿ, 1 ಟೊಮೆಟೊ, 1 ಟೀಸ್ಪೂನ್ ಉಪ್ಪು, 1/2 ಟೀಸ್ಪೂನ್ ಜೀರಿಗೆ, ಚಿಟಿಕೆ ಇಂಗು, 1 ಟೀಸ್ಪೂನ್ ಮೊಸರು ಮತ್ತು 1/2 ನಿಂಬೆಹಣ್ಣು.
ಮೊದಲು ಕೊತ್ತಂಬರಿಯನ್ನು ಚೆನ್ನಾಗಿ ತೊಳೆಯಿರಿ. ಸಣ್ಣದಾಗಿ ಈರುಳ್ಳಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿಯನ್ನು ಕತ್ತರಿಸಿ.
ಈಗ ಇವೆಲ್ಲವನ್ನೂ ಮಿಕ್ಸಿ ಜಾರ್‌ಗೆ ಹಾಕಿ.
ಜೊತೆಗೆ ಉಪ್ಪು, ಹಸಿ ಜೀರಿಗೆ ಮತ್ತು ಇಂಗು ಸೇರಿಸಿ.
ಎಲ್ಲಾವನ್ನು ರುಬ್ಬಿ ಪೇಸ್ಟ್ ತಯಾರಿಸಿ. ನೀವು ಬಯಸಿದರೆ, ಮಾತ್ರ ರುಬ್ಬುವ ಮೊದಲು ಅದಕ್ಕೆ ಸ್ವಲ್ಪ ನೀರು ಸೇರಿಸಬಹುದು.
ರುಬ್ಬಿದ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿ.
ಈಗ ತಯಾರಿಸಿದ ಚಟ್ನಿಗೆ ಮೊಸರು ಸೇರಿಸಬೇಕು. ಇದು ಚಟ್ಟಿಗೆ ರೆಸ್ಟೋರೆಂಟ್ ಚಟ್ನಿಯ ರುಚಿ ನೀಡುತ್ತದೆ.
ಈಗ ರೆಸ್ಟೋರೆಂಟ್ ಸ್ಟೈಲಿನ ಚಟ್ನಿ ರೆಡಿ. ಈ ರೀತಿ ಚಟ್ನಿ ತಯಾರಿಸಿದರೆ, ನಿಮ್ಮ ಮನೆಯವರು ಪಕೋಡಕ್ಕಿಂತ ಹೆಚ್ಚು ಚಟ್ನಿ ತಿನ್ನುವುದು ಗ್ಯಾರಂಟಿ.