ಅಬ್ಬಬ್ಬಾ ಒಂದು ಪ್ಲೇಟ್ ಬೆಲೆ ಇಷ್ಟಾ? ಅನ್ನ ವೇಸ್ಟ್ ಮಾಡೋ ಮುನ್ನ ಯೋಚಿಸಿ

ಹೊಟೇಲ್ ಗೆ ಹೋಗಿ ಊಟ ಮಾಡ್ದಾಗ ನಾವು ಥಾಲಿ ಬೆಲೆ ಲೆಕ್ಕ ಮಾಡ್ತೇವೆ. ಅದೇ ಮನೆಯಲ್ಲಿ ಸಿದ್ಧವಾಗುವ ಆಹಾರಕ್ಕೆ ತಟ್ಟೆ ತಟ್ಟೆ ಲೆಕ್ಕ ಇರೋದಿಲ್ಲ. ಕ್ರಿಸಿಲ್ ಇದ್ರ ಬಗ್ಗೆ ಮಾಹಿತಿ ನೀಡಿದೆ.  
 

Per Plate Food Cost In India Inched Up In Past Two Months Crisil Report roo

ದಿನದಲ್ಲಿ ಮೂರು ಹೊತ್ತು ಆಹಾರ ಸೇವನೆ ಮಾಡುವ ನಾವು, ಟೊಮೇಟೊ, ಬೇಳೆಕಾಳು, ಹಿಟ್ಟು, ಅಕ್ಕಿ ಬೆಲೆ ಏರಿಕೆಯಾಗಿದೆ ಅಂತಾ ಚಿಂತೆಯಲ್ಲಿದ್ದೇವೆ. ಆದ್ರೆ ಬರೀ ತರಕಾರಿ, ಬೇಳೆ ಕಾಳುಗಳು ಮಾತ್ರವಲ್ಲ ನಿಮ್ಮ ಒಂದು ಭೋಜನದ ಥಾಲಿಗೆ ತಗಲ್ತಿದ್ದ ವೆಚ್ಚವೂ ಹೆಚ್ಚಾಗಿದೆ. ಹಣದುಬ್ಬರದ ಪ್ರಭಾವದಿಂದ ಈಗ ಜನಸಾಮಾನ್ಯರ ಥಾಲಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. 

ತರಕಾರಿ (Vegetable), ಸಾಂಬಾರು ಪದಾರ್ಥ ಸೇರಿದಂತೆ ಆಹಾರ (Food) ಪದಾರ್ಥಗಳು ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರ ತಟ್ಟೆ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹಣಕಾಸು ರೇಟಿಂಗ್ ಏಜೆನ್ಸಿ ಕ್ರಿಸಿಲ್ (Crisil) ಸಾಮಾನ್ಯ ಜನರ ಪ್ಲೇಟ್ ಬೆಲೆಯ ವರದಿಯನ್ನು ಪ್ರಕಟಿಸಿದೆ. ವರದಿಗಳ ಪ್ರಕಾರ, ಕಳೆದ ಎರಡು ತಿಂಗಳಲ್ಲಿ ಒಂದು ಪ್ಲೇಟ್ ಆಹಾರ ಪದಾರ್ಥಗಳ ಬೆಲೆ ತೀವ್ರವಾಗಿ ಏರಿದೆ.  

ಮತ್ತೆ ಮತ್ತೆ ತಿನ್ನುವಂತೆ ಮಾಡುವ ದಕ್ಷಿಣ ಭಾರತದ ಯಮ್ಮಿ ಸ್ಟ್ರೀಟ್ ಫುಡ್ಸ್

ಕ್ರಿಸಿಲ್ ವರದಿಯ ಪ್ರಕಾರ, ಪ್ಲೇಟ್‌ನಲ್ಲಿರುವ ಆಹಾರ ಪದಾರ್ಥಗಳ ಬೆಲೆಗಳು ಸ್ವಲ್ಪ ಸಮಯದಿಂದ ಕಡಿಮೆಯಾಗುತ್ತಿತ್ತು. ಆದರೆ  ಕಳೆದ ಎರಡು ತಿಂಗಳಿಂದ ಮತ್ತೆ ವೇಗವಾಗಿ ಹೆಚ್ಚಾಗಿದೆ. ವೆಜ್ ಮತ್ತು ನಾನ್ ವೆಜ್ ಎರಡೂ ಥಾಲಿಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. 
ಎಷ್ಟು ಬೆಲೆ ಏರಿಕೆಯಾಗಿದೆ : ವರದಿಯ ಪ್ರಕಾರ, 2023 ರ ಏಪ್ರಿಲ್‌ನಲ್ಲಿ ಸಸ್ಯಾಹಾರಿ ಥಾಲಿಯ ಸರಾಸರಿ ಬೆಲೆ ಪ್ರತಿ ಪ್ಲೇಟ್‌ಗೆ 25.1 ರೂಪಾಯಿ ಆಗಿತ್ತು. ಜೂನ್‌ನಲ್ಲಿ ಅದು 26.3 ರೂಪಾಯಿಗೆ ಏರಿದೆ. ಏಪ್ರಿಲ್‌ನಲ್ಲಿ ಮಾಂಸಾಹಾರಿ ಥಾಲಿಯ ಬೆಲೆ 58.3 ರೂಪಾಯಿಯಿತ್ತು. ಜೂನ್‌ನಲ್ಲಿ ಅದ್ರ ಬೆಲೆ 60 ರೂಪಾಯಿ ಏರಿದೆ. ಕ್ರಿಸಿಲ್ ಪ್ರಕಾರ, ಟೊಮೆಟೊ, ಬೇಳೆಕಾಳುಗಳು, ಮಸಾಲೆಗಳು ಮತ್ತು ಸಿರಿಧಾನ್ಯಗಳ ಬೆಲೆ ಏರಿಕೆಯಿಂದಾಗಿ, ಆಹಾರದ ಪ್ಲೇಟ್ ಕೂಡ ದುಬಾರಿಯಾಗುತ್ತಿದೆ.

150 ರೂಪಾಯಿ ದಾಟಿದೆ ಟೊಮೆಟೊ ಬೆಲೆ : ಟೊಮೆಟೊ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜೂನ್‌ನಿಂದ ಇಲ್ಲಿಯವರೆಗೆ ಟೊಮೆಟೊ ಬೆಲೆ ಕೆಜಿಗೆ 60 ರಿಂದ 100 ರೂಪಾಯಿಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಜೂನ್‌ನಲ್ಲಿ ಪ್ರತಿ ಕೆಜಿಗೆ 20 ರೂಪಾಯಿ ಇದ್ದ ಟೊಮೆಟೊ ಚಿಲ್ಲರೆ ದರ ಇದೀಗ ಕೆಜಿಗೆ 110 ರೂಪಾಯಿ ತಲುಪಿದೆ. ಮಳೆಯಿಂದಾಗಿ ಮಾರುಕಟ್ಟೆಗೆ ಬರ್ತಿರುವ ಟೊಮೆಟೊ ಕಡಿಮೆಯಾದ ಕಾರಣ ಕೆಲ ರಾಜ್ಯಗಳಲ್ಲಿ ಟೊಮೆಟೊ ದರ ಕೆಜಿಗೆ 250 ರೂಪಾಯಿಯಾಗಿದೆ.  

ಅದೃಷ್ಟವಂತನಿಗೆ GPayನಲ್ಲಿ ಸಿಕ್ತು ಇಷ್ಟೊಂದು ಕ್ಯಾಶ್ಬ್ಯಾಕ್! ನೋಡಿ ಹೊಟ್ಟೆ ಉರ್ಕೊಂಡ ಬಳಕೆದಾರರು

ಧಾನ್ಯಗಳ ಬೆಲೆಯಲ್ಲಿ ಹೆಚ್ಚಳ : ಜೂನ್ ತಿಂಗಳಿನಲ್ಲಿ ಧಾನ್ಯಗಳ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ತೊಗರಿ ಬೇಳೆ ಹಾಗೂ ಕಡಲೆ ಬೆಳೆ ಬೆಳೆಯಲ್ಲೂ ಹೆಚ್ಚಳವಾಗಿದೆ. ಈ ಎರಡರ ಬೆಲೆಗಳು ಶೇಕಡಾ 3ರಷ್ಟು ಏರಿಕೆಯಾಗಿದೆ. ಇದ್ರಿಂದ ಥಾಲಿ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. 

ವಾರ್ಷಿಕ ಆಧಾರದ ಮೇಲೆ ಅಗ್ಗದ ಆಹಾರ :  ಕ್ರಿಸಿಲ್ ಪ್ರಕಾರ, ಆಹಾರದ ಪ್ಲೇಟ್ ತಿಂಗಳ ಆಧಾರದ ಮೇಲೆ ದುಬಾರಿಯಾಗಿದ್ದರೂ, ವಾರ್ಷಿಕ ಆಧಾರದ ಮೇಲೆ ಅದು ಕಡಿಮೆಯಾಗಿದೆ. ವಾರ್ಷಿಕ ಆಧಾರದ ಮೇಲೆ ತರಕಾರಿಗಳು ಮತ್ತು ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಈ ಕಾರಣದಿಂದಾಗಿ ಜೂನ್ 2022 ಕ್ಕೆ ಹೋಲಿಸಿದರೆ ಜೂನ್ 2023 ರಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿಗಳ ಬೆಲೆಯು ಶೇಕಡಾ 5 ರಷ್ಟು ಕಡಿಮೆಯಾಗಿದೆ. ಇದು ಸಸ್ಯಾಹಾರಿ ಥಾಲಿಯ ಒಟ್ಟು ವೆಚ್ಚದ ಶೇಕಡಾ 25ರಷ್ಟಾಗಿದೆ.  ಆದರೆ ಸಿರಿಧಾನ್ಯಗಳು, ಬೇಳೆಕಾಳುಗಳು ಮತ್ತು ಚಿಕನ್ ಬೆಲೆಗಳ ಏರಿಕೆಯು ಈ ಇಳಿಕೆಯನ್ನು ಸೀಮಿತಗೊಳಿಸಿತು.  ಜೂನ್ 2022 ರಲ್ಲಿ ಸಸ್ಯಾಹಾರಿ ಥಾಲಿಯ ಸರಾಸರಿ ಬೆಲೆ 27.8 ರೂಪಾಯಿ ಆಗಿದ್ದರೆ, ಅದು ಜೂನ್ 2023 ರಲ್ಲಿ 26.3 ರೂಪಾಯಿಗೆ ಇಳಿದಿದೆ. ಅದೇ ರೀತಿ, ಜೂನ್ 2022 ರಲ್ಲಿ ಸಸ್ಯಾಹಾರಿ ಥಾಲಿಯ ಸರಾಸರಿ ಬೆಲೆ 63.2 ರೂಪಾಯಿ ಆಗಿದ್ದು, ಜೂನ್ 2023 ರಲ್ಲಿ 60 ರೂಪಾಯಿಗೆ ಇಳಿದಿದೆ. ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಯಲ್ಲಿ ಶೇಕಡಾ 15 ರಷ್ಟು ಇಳಿಕೆ ಕಂಡು ಬಂದಿದ್ದು ಜೂನ್‌ನಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಶೇಕಡಾ 20 ರಷ್ಟು ಇಳಿಕೆಯಾಗಿದೆ.  
 

Latest Videos
Follow Us:
Download App:
  • android
  • ios