ಅದೃಷ್ಟವಂತನಿಗೆ GPayನಲ್ಲಿ ಸಿಕ್ತು ಇಷ್ಟೊಂದು ಕ್ಯಾಶ್ಬ್ಯಾಕ್! ನೋಡಿ ಹೊಟ್ಟೆ ಉರ್ಕೊಂಡ ಬಳಕೆದಾರರು
ಹಣ ವರ್ಗಾವಣೆಗೆ ಅತ್ಯಂತ ಸುರಕ್ಷಿತ ಹಾಗೂ ಆರಾಮದಾಯಕ ಅಪ್ಲಿಕೇಷನ್ ಗಳಲ್ಲಿ ಗೂಗಲ್ ಪೇ ಕೂಡ ಸೇರಿದೆ. ಅದು ಗ್ರಾಹಕರಿಗೆ ಕ್ಯಾಶ್ಬ್ಯಾಕ್ ಆಫರ್ ನೀಡುತ್ತದೆ. ಗೂಗಲ್ ಪೇನಲ್ಲಿ ಸಾವಿರ ರೂಪಾಯಿವರೆಗೆ ಕ್ಯಾಶ್ಬ್ಯಾಕ್ ಸಿಗ್ತಿದೆ ಎಂಬ ಸುದ್ದಿ ಈಗ ಟ್ವಿಟರ್ ನಲ್ಲಿ ಹರಿದಾಡ್ತಿದೆ.
ಡಿಜಿಟಲ್ ಜಮಾನಾದಲ್ಲಿ ಜನರು ಪೋನ್ ಪೇ, ಪೇಟಿಎಂ, ಗೂಗಲ್ ಪೇನಂತಹ ಅಪ್ಲಿಕೇಷನ್ ಬಳಸಿ ವಹಿವಾಟು ನಡೆಸೋದು ಹೆಚ್ಚು. ಗ್ರಾಹಕರನ್ನು ಸೆಳೆಯಲು ಈ ಅಪ್ಲಿಕೇಷನ್ ಗಳು ಕ್ಯಾಶ್ ಬ್ಯಾಕ್, ಕೆಲ ವೋಚರ್ ಆಫರ್ ಗಳನ್ನು ನೀಡುತ್ವೆ. ಜಾಹೀರಾತು, ಅಕ್ಕಪಕ್ಕದವರ ಮಾತು ಹೇಳಿ, ಕ್ಯಾಶ್ಬ್ಯಾಕ್ ಬರುತ್ತೆ ಅಂತ ನಾನೂ ಆಸೆಯಿಂದ್ಲೇ ಗೂಗಲ್ ಪೇ ಡೌನ್ಲೋಡ್ ಮಾಡಿದ್ದೆ. ಆರಂಭದಲ್ಲಿ ಹತ್ತೋ, ಇಪ್ಪತ್ತೋ ರೂಪಾಯಿ ಬಂತು. ಆದ್ರೆ ಈಗಿನ ದಿನಗಳಲ್ಲಿ ಬೇಡದ ವೋಚರ್ ಹಾವಳಿ ಹೆಚ್ಚಾಗಿದೆ. ಯಾರಿಗಾದ್ರೂ ಹಣ ವರ್ಗಾವಣೆ ಮಾಡಿ ಗಿಫ್ಟ್ ಕಾರ್ಡ್ ಸ್ಕ್ರ್ಯಾಚ್ ಮಾಡಿದ್ರೆ ಬೆಟರ್ ಲಕ್ ನೆಕ್ಸ್ಟ್ ಟೈಂ ಅನ್ನೋದೇ ಕಾಣ್ತಿದೆ. ಆದ್ರೆ ಈ ಗೂಗಲ್ ಪೇನಲ್ಲಿ ಹಣ ಮಾಡಿದವರ ಸಂಖ್ಯೆಯೂ ಇದೆ. ಕೆಲವರಿಗೆ ಭರ್ಜರಿ ಕ್ಯಾಶ್ ಬ್ಯಾಕ್ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರ ಕ್ಯಾಶ್ ಬ್ಯಾಕ್ ಫೋಟೋ ವೈರಲ್ ಆಗಿದೆ.
ಇವನದೇ ಅದೃಷ್ಟ (Luck) : ಕ್ಯಾಶ್ ಬ್ಯಾಕ್ (Cash Back) ಪಡೆಯೋಕೂ ಅದೃಷ್ಟ ಬೇಕು ಅಂತೇನೇ ನಾನು. ಯಾಕೆಂದ್ರೆ ಕೆಲವೇ ಕೆಲವು ಮಂದಿಗೆ 500, ಸಾವಿರ ರೂಪಾಯಿ ಕ್ಯಾಶ್ಬ್ಯಾಕ್ ಸಿಕ್ಕಿದೆ. ಆದಿತ್ಯ ಠಾಕೂರ್ (@aditya_thakurrr) ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ. ಗೂಗಲ್ (Google) ಪೇನಲ್ಲಿ ಎಷ್ಟು ಕ್ಯಾಶ್ಬ್ಯಾಕ್ ಬಂದಿದೆ ಎಂಬುದರ ಫೋಟೋ ಇದು. ಆದಿತ್ಯ ಠಾಕೂರ್ ಫೋಟೋ ಹಂಚಿಕೊಳ್ತಿದ್ದಂತೆ ಇನ್ನೂ ಅನೇಕರು ತಮಗೆ ಬಂದ ಕ್ಯಾಶ್ಬ್ಯಾಕ್ ಫೋಟೋವನ್ನು ಪೋಸ್ಟ್ ಮಾಡ್ತಿದ್ದಾರೆ.
ಪ್ರಭಾವಿಗಳ ಪ್ರಭಾವ ಕಡಿಮೆಯಾಗ್ತಿದೆ, ಸ್ನೇಹಿತರ ಮಾತು ಕೇಳ್ತಿದ್ದಾರೆ Gen Z ಗ್ರಾಹಕರು
ಆದಿತ್ಯ ಠಾಕೋರ್ ಗೆ ಗೂಗಲ್ ಪೇನಿಂದ 567 ರೂಪಾಯಿ ಕ್ಯಾಶ್ಬ್ಯಾಕ್ ಬಂದಿದೆ. ಅದ್ರ ಫೋಟೋ ಟ್ವೀಟ್ ಮಾಡಿದ ಆದಿತ್ಯ, ನಾನು ಇಲ್ಲಿ ನನ್ನ ಎಲ್ಲಾ ಅದೃಷ್ಟವನ್ನು ಬಳಸಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದು ಶೀರ್ಷಿಕೆ ಹಾಕಿದ್ದಾರೆ. ಈ ಟ್ವೀಟ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡು ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ನೂರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಕಮೆಂಟ್ ಮಾಡಿದ ವ್ಯಕ್ತಿಯೊಬ್ಬ ಆದಿತ್ಯ ಠಾಕೋರ್ ಗಿಂತ ಅದೃಷ್ಟಶಾಲಿ. ಯಾಕೆಂದ್ರೆ ಆತನಿಗೆ 951 ರೂಪಾಯಿ ಕ್ಯಾಶ್ಬ್ಯಾಕ್ ಸಿಕ್ಕಿದೆ. ನಾನು ತುಂಬಾ ಅದೃಷ್ಟ ಶಾಲಿ ಅಲ್ವಾ ಅಂತಾ, ಬಳಕೆದಾರ ತನ್ನ ಕ್ಯಾಶ್ಬ್ಯಾಕ್ ಫೋಟೋ ಹಾಕಿದ್ದಾನೆ. ಇನ್ನೊಬ್ಬರು, ಆದಿತ್ಯನಿಗೆ ನೀವು ದೇವರ ಫೆವರೆಟ್ ಮಗ ಎಂದು ಕಮೆಂಟ್ ಮಾಡಿದ್ದಾರೆ. ಹೀಗೂ ಆಗುತ್ತಾ, ನನಗೆ ಬರೀ 5 ರೂಪಾಯಿ ಕ್ಯಾಶ್ಬ್ಯಾಕ್ ಸಿಕ್ಕಿದೆ ಎಂದು ಇನ್ನೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ. ನನಗೆ ಮೂರು ರೂಪಾಯಿಗಿಂತ ಹೆಚ್ಚು ಸಿಕ್ಕಿಲ್ಲ, ನಿಮಗೆ ಹೇಗೆ ಸಿಕ್ತು ಅಂತಾ ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. ನನ್ನಂತೆ ಇನ್ನೂ ಅನೇಕರು, ನಮಗೆ ಕ್ಯಾಶ್ಬ್ಯಾಕ್ ಬದಲು ವೋಚರ್ ಸಿಕ್ಕಿದೆ ಅಂತಾ ಕಮೆಂಟ್ ಮಾಡಿದ್ದಾರೆ.
ಈ ರಾಶಿಯವರು ಬ್ಯುಸಿನೆಸ್‌ಗೆ ಕೈ ಹಾಕಿದ್ರೆ ಯಶಸ್ಸು ಖಚಿತ
ಗೂಗಲ್ ಪೇನಲ್ಲಿ ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ? :
• ಗೂಗಲ್ ಪೇ ಅಪ್ಲಿಕೇಷನ್ ನೀವು ಮೊದಲು ಡೌನ್ಲೋಡ್ ಮಾಡ್ಬೇಕು. ನಂತ್ರ ನಿಮ್ಮ ಬ್ಯಾಂಕ್ ಖಾತೆಯನ್ನು ಅದಕ್ಕೆ ಲಿಂಕ್ ಮಾಡ್ಬೇಕು.
• ಗೂಗಲ್ ಖಾತೆಯ ಮೂಲಕ ನೀವು ಹಣ ವರ್ಗಾವಣೆ ಮಾಡಿದ್ರೆ ಆಗ ನಿಮಗೆ ಒಂದು ಸ್ಕ್ರ್ಯಾಚ್ ಕಾರ್ಡ್ ಕಾಣುತ್ತದೆ. ಅದನ್ನು ಉಜ್ಜಿದಾಗ ನಿಮಗೆ ಎಷ್ಟು ಹಣ ಬಂದಿದೆ ಎಂಬುದು ತಿಳಿಯುತ್ತದೆ. ಅದು ನಿಮ್ಮ ಖಾತೆಗೆ ನೇರವಾಗಿ ಹೋಗುತ್ತದೆ.
• ವೋಚರ್ ಮೂಲಕವೂ ನೀವು ಕ್ಯಾಶ್ಬ್ಯಾಕ್ ಪಡೆಯಬಹುದು. ಅನೇಕ ವೋಚರ್ ಗಳನ್ನು ಗೂಗಲ್ ಪೇ ನಿಮಗೆ ಕ್ಯಾಶ್ಬ್ಯಾಕ್ ರೂಪದಲ್ಲಿ ನೀಡುತ್ತದೆ. ವಸ್ತುಗಳನ್ನು ಖರೀದಿಸುವ ಸಮಯದಲ್ಲಿ ನೀವು ಈ ವೋಚರ್ ಬಳಸಬೇಕಾಗುತ್ತದೆ.
• ಮೊದಲ ಬಾರಿ ಗೂಗಲ್ ಪ್ಲೇ ಬಳಕೆ ಮಾಡ್ತಿರುವವರಿಗೆ ಗೂಗಲ್ ಪೇ ವಿಶೇಷ ಆಫರ್ ಗಳನ್ನು ನೀಡುತ್ತ ಬಂದಿದೆ.