Food
ಮಸಾಲೆ ದೋಸೆ ಯಾರಿಗೆ ಇಷ್ಟ ಇಲ್ಲ ಹೇಳಿ. ಉದ್ದು, ಅಕ್ಕಿಯಿಂದ ಮಾಡಿದಂತಹ ದೋಸೆಯನ್ನು ಆಲೂಗಡ್ಡೆ ಬಾಜಿ, ತೆಂಗಿನಕಾಯಿ ಚಟ್ನಿ, ಸಾಂಬಾರ್ ಜೊತೆ ತಿನ್ನೋದೆ ಅದ್ಭುತ.
ಮೈದಾದಿಂದ ಮಾಡುವಂತಹ ಮೈಸೂರು ಬೋಂಡ, ತಿನ್ನಲು ಸಖತ್ತಾಗಿರುತ್ತೆ. ಅದರಲ್ಲಿ ನಡು ನಡುವೆ ಸಿಗುವ ಮೆಣಸಿನಕಾಯಿ, ಶುಂಠಿ, ಬೋಂಡ ರುಚಿಯನ್ನು ಹೆಚ್ಚಿಸುತ್ತೆ.
ಇನ್ನು ನಮ್ಮ ಕರ್ನಾಟಕದಲ್ಲಂತೂ ಬೀದಿ ಬೀದಿಯಲ್ಲಿ ವೆರೈಟಿ ವೆರೈಟಿಯಾಗಿರೋ ಇಡ್ಲಿ ಸಿಗುತ್ತೆ. ಇವುಗಳಲ್ಲಿ ರವಾ ಇಡ್ಲಿ ಹೆಚ್ಚಿನ ಜನರ ಅಚ್ಚುಮೆಚ್ಚು. ಇದನ್ನು ಸಂಬಾರ್, ಚಟ್ನಿ ಜೊತೆ ಸೇವಿಸಿದ್ರೆ ಇನ್ನೂ ಚೆನ್ನ.
ಇದನ್ನ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಕರೆಯುತ್ತಾರೆ. ಉದ್ದಿನಿಂದ ಹಿಟ್ಟು ತಯಾರಿಸಿ, ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದ ಅಂಬಡೆಯನ್ನು ಚಟ್ನಿಯಲ್ಲಿ ಡಿಪ್ ಮಾಡಿ ತಿಂದ್ರೆ ಎಲ್ಲೋ ಕಳೆದು ಹೋಗಿಬಿಡ್ತೀವಿ.
ಮಳೆಗಾಲದಲ್ಲಿ ಮಿರ್ಚಿ ಬಜ್ಜಿ ಅಂದ ಕೂಡ್ಲೆ ಬಾಯಲ್ಲಿ ನೀರೂರುತ್ತೆ ಅಲ್ವಾ? ದೊಡ್ಡಗಾತ್ರದ ಮೆಣಸನ್ನು ಅರ್ಧಭಾಗಮಾಡಿ, ಮಸಾಲೆಯಲ್ಲಿ ಡಿಪ್ ಮಾಡಿ ಡೀಪ್ ಫ್ರೈ ಮಾಡಿ ತಿನ್ನಲಾಗುತ್ತೆ.
ಅನ್ನ, ಬೇಳೆ, ವಿವಿಧ ತರಕಾರಿಗಳು, ಮಸಾಲೆ ಮಿಶ್ರಿತವಾದ ಬಿಸಿ ಬೇಳೆ ಬಾತ್ ಗೆ ಬಿಸಿ ಬಿಸಿ ತುಪ್ಪ, ಜೊತೆಗೆ ಒಂದಷ್ಟು ಬೂಂದಿ ಸೇರಿ ನೀಡಲಾಗುತ್ತೆ. ಇದು ಕೂಡ ತಿನ್ನಲು ಆರೋಗ್ಯಯುತವೂ, ಟೇಸ್ಟೀಯೂ ಆಗಿರುತ್ತೆ.
ಇದು ದಕ್ಷಿಣ ಭಾರತದಲ್ಲೂ ಜನಪ್ರಿಯತೆಪಡೆದಿರುವ ಸ್ಟ್ರೀಟ್ ಫುಡ್. ಕ್ರಿಸ್ಪಿ ವಡಾ, ಆಲೂಗಡ್ಡೆ ಮಿಶ್ರಣ, ಜೊತೆಗೆ ಖಾರ ಪಾನಿ ಸೇರಿಸಿ, ಬಾಯಿಗೆ ಹಾಕಿದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ?