Weight Loss : ಪ್ರಸಿದ್ಧ ಹೊಸ ಡಯಟ್ ಪ್ಲಾನ್ ಗೆ ನೋ ಎಂದ ಜನ..!
ತೂಕ ಇಳಿಸಿಕೊಳ್ಳುವುದು ಒಂದು ಚಾಲೆಂಜ್. ರುಚಿ,ರುಚಿ ಆಹಾರ ಬಿಟ್ಟು,ಡಯಟ್ ಪಾಲನೆ ಮಾಡಬೇಕು. ಕೆಲವೊಮ್ಮೆ ನಾವು ಅನುಸರಿಸುವ ಆಹಾರ ಪದ್ಧತಿ ತೂಕ ಇಳಿಕೆ ಮಾಡಬಹುದು,ಆದ್ರೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈಗ ಜನರು ಆರೋಗ್ಯಕರ ಡಯಟ್ ಗೆ ಹೆಚ್ಚಿನ ಆದ್ಯತೆ ನೀಡ್ತಿದ್ದಾರೆ.
ವರ್ಷ (Year) ಬದಲಾಗಬಹುದು,ತೂಕ (Weight) ಇಳಿಸಿಕೊಳ್ಳುವ ಗುರಿ ಬದಲಾಗುವುದಿಲ್ಲ. ವರ್ಷಾರಂಭದಲ್ಲಿಯೇ ಕೊಬ್ಬು ಕರಗಿಸಿಕೊಳ್ಳಲು ಪಣತೊಡುವ ಜನರು ಅದನ್ನು ವರ್ಷಪೂರ್ತಿ ಪಾಲನೆ ಮಾಡ್ತಾರೆ. ಈ ಬಾರಿ ಜನರು ಫಿಟ್ನೆಸ್ ಗಾಗಿ ನಿಯಮಿತ ವ್ಯಾಯಾಮ ಮತ್ತು ಹೊಸ ಆಹಾರದೊಂದಿಗೆ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ. ಜನರು ತೂಕ ಇಳಿಸಿಕೊಳ್ಳಲು ಅನೇಕ ಆಹಾರಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂದ್ರೆ, ಈ ಹೊಸ ವರ್ಷದಲ್ಲಿ ಜನರು ಜನಪ್ರಿಯ ಡಯಟ್ ಅನುಸರಿಸುವುದನ್ನು ನಿಲ್ಲಿಸಿದ್ದಾರೆ. ಯಸ್, ಜನಪ್ರಿಯ ಡಯಟ್ ವಿಧಾನವಾದ ಕೀಟೋ ಡಯಟ್ ಗೆ ಗುಡ್ ಬೈ ಹೇಳಿದ್ದಾರೆ. ಈ ಆಹಾರಕ್ರಮವು ಅನೇಕ ವರ್ಷಗಳಿಂದ ತ್ವರಿತ ತೂಕ ಇಳಿಕೆಗೆ ಸಹಕಾರಿ ಎಂದು ನಂಬಲಾಗಿತ್ತು. ಆದರೆ ಇತ್ತೀಚೆಗೆ ಈ ಆಹಾರದ ಜನಪ್ರಿಯತೆಯು ಬಹಳಷ್ಟು ಕಡಿಮೆಯಾಗಿದೆ. ಹೊಸ ಡಯಟ್ ಟ್ರೆಂಡ್‌ಗಳಿಂದಾಗಿ ಜನರು ಕೀಟೋ ಡಯಟ್ ಅನ್ನು ದೂರವಿಡಲು ಪ್ರಾರಂಭಿಸಿದ್ದಾರೆ. ಈಗ ಜನರು ಈ ಆಹಾರದ ಬಗ್ಗೆ ಗೂಗಲ್‌ನಲ್ಲಿ ಹುಡುಕುವುದು ಕಡಿಮೆ ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಅದರಲ್ಲಿ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ನಿರ್ಬಂಧಿಸಿರುವುದು. ಅನೇಕರು ಕಾರ್ಬೋಹೈಡ್ರೇಟ್ ಸೇವನೆಯ ಜೊತೆಗೆ ತೂಕ ಇಳಿಸಿಕೊಳ್ಳಬಹುದು ಎಂದು ನಂಬುತ್ತಾರೆ. ಹಾಗಾಗಿಯೇ ಕೀಟೋ ಡಯಟ್ ಅನುಸರಿಸಲು ಆಸಕ್ತಿ ತೋರುತ್ತಿಲ್ಲ. ಆರೋಗ್ಯಕರ ತೂಕ ಇಳಿಕೆ ಹಾಗೂ ಫಿಟ್ನೆಸ್ ಗಾಗಿ ಜನರ ಮುಂದೆ ಅನೇಕ ಆಯ್ಕೆಗಳಿವೆ. ಇಂದು ಕೀಟೋ ಡಯಟ್ ಎಂದರೇನು ಮತ್ತು ಇದರ ಬದಲಿಗೆ ಫಿಟ್ ಆಗಿರಲು ಜನರು ಅಳವಡಿಸಿಕೊಳ್ಳುತ್ತಿರುವ ಆಯ್ಕೆಗಳು ಯಾವುವು ಎಂದು ತಿಳಿಯೋಣ.
ಕೀಟೋ ಡಯಟ್ (Keto Diet )ಎಂದರೇನು ? :
ಕೀಟೋ ಆಹಾರವನ್ನು ಕೆಟೋಜೆನಿಕ್ ಆಹಾರ ಎಂದೂ ಕರೆಯುತ್ತಾರೆ. ಇದು ಅಧಿಕ ಕೊಬ್ಬಿನ ಆಹಾರವಾಗಿದೆ. ಈ ಆಹಾರದಲ್ಲಿ, ದೇಹವು ಶಕ್ತಿಗಾಗಿ ಕೊಬ್ಬಿನ ಮೇಲೆ ಅವಲಂಬಿತವಾಗಿರುತ್ತದೆ. ಈ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳು ತುಂಬಾ ಕಡಿಮೆ ಮತ್ತು ಪ್ರೋಟೀನನ್ನು ಮಧ್ಯಮ ಪ್ರಮಾಣದಲ್ಲಿ ನೀಡಲಾಗುತ್ತದೆ. ಒಟ್ಟಾರೆಯಾಗಿ, ಈ ಆಹಾರದಲ್ಲಿ ನೀವು ತುಂಬಾ ಕಡಿಮೆ ಕಾರ್ಬೋಹೈಡ್ರೇಟ್ ಸೇವನೆ ಮಾಡಬೇಕು.ತಜ್ಞರ ಪ್ರಕಾರ, ಈ ಡಯಟ್ ನಲ್ಲಿ ಕೆಲ ಆಯ್ದ ತರಕಾರಿಗಳನ್ನು ಮಾತ್ರ ಸೇವನೆ ಮಾಡಬೇಕು. ಹಣ್ಣುಗಳನ್ನು ತಿನ್ನುವಂತಿಲ್ಲ.
Kitchen Hacks: ಕರಿದ ಎಣ್ಣೆಯನ್ನು ಈ ರೀತಿ ಕ್ಲೀನ್ ಮಾಡಿದ್ರೆ ಮತ್ತೆ ಬಳಸ್ಬೋದು
ಕೀಟೋ ಡಯಟ್ ಅಡ್ಡ ಪರಿಣಾಮ : ನಮ್ಮ ದೇಹಕ್ಕೆ ನಾವು ಬರೀ ಕೊಬ್ಬನ್ನು ನೀಡುತ್ತೇವೆ. ಕಾರ್ಬೋಹೈಡ್ರೇಟ್ ಇಲ್ಲದೆ ಕೊಬ್ಬನ್ನು ಮಾತ್ರ ಜೀರ್ಣಿಸಿಕೊಳ್ಳುವುದು ಕಷ್ಟ. ನಮ್ಮ ದೇಹ ಪ್ರತಿದಿನ 20 ಗ್ರಾಂ ಕೊಬ್ಬನ್ನು ಜೀರ್ಣಿಸಿಕೊಳ್ಳುತ್ತಿದ್ದರೆ, ಕಾರ್ಬೋಹೈಡ್ರೇಟ್‌ಗಳಿಲ್ಲದೆ ಅದು ದಿನಕ್ಕೆ 100 ಗ್ರಾಂ ಕೊಬ್ಬನ್ನು ಜೀರ್ಣಿಸಿಕೊಳ್ಳಬೇಕಾಗುತ್ತದೆ. ಇದರಿಂದ ಯಕೃತ್ತು ದುರ್ಬಲಗೊಳ್ಳುತ್ತದೆ. ಹಾಗಾಗಿ ಕೀಟೋ ಡಯಟ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.
ಮಧ್ಯಂತರ ಉಪವಾಸವು ಟ್ರೆಂಡಿಂಗ್ ಆಗಿದೆ : ಕೀಟೋ ಡಯಟ್ ಬದಲಾಯಿಸಿದ ಜನರು ಮಧ್ಯಂತರ ಉಪವಾಸವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಮಧ್ಯಂತರ ಉಪವಾಸ ಅಂದ್ರೆ ಕಡಿಮೆ ತಿನ್ನುವುದು ಮತ್ತು ನಿರ್ದಿಷ್ಟ ಸಮಯದಲ್ಲಿ ತಿನ್ನುವುದು. ಮಧ್ಯಂತರ ಉಪವಾಸವನ್ನು ಅನುಸರಿಸುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಈ ಆಹಾರವು ತೂಕ ಇಳಿಸಲು ಹೆಸರುವಾಸಿಯಾಗಿದ್ದರೂ ಇದ್ರಿಂದ ಇನ್ನೂ ಅನೇಕ ಪ್ರಯೋಜನಗಳಿವೆ.
ಕುಡಿತದ ವಿಧಾನದಲ್ಲಿ ಬದಲಾವಣೆ : ತೂಕ ಇಳಿಸಿಕೊಳ್ಳಲು ಜನರು ತಮ್ಮ ಕುಡಿತವ ವಿಧಾನವನ್ನು ಬದಲಿಸಿಕೊಂಡಿದ್ದಾರೆ. ಬಿಯರ್, ಕಾಕ್‌ಟೇಲ್ ಸೇರಿದಂತೆ ಅನೇಕ ಪಾನೀಯಗಳು ಒಳ್ಳೆಯದು ಎನ್ನಲಾಗ್ತಿದೆ. ಆಲ್ಕೊಹಾಲ್ ಇರದ ಅಥವಾ ಕಡಿಮೆ ಆಲ್ಕೋಹಾಲ್ ಇರುವ ಪಾನೀಯಗಳ ಸೇವನೆಗೆ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಕಳೆದ ಒಂದು ವರ್ಷದಲ್ಲಿ ಜನರು ಇದನ್ನು ಬಹಳಷ್ಟು ಇಷ್ಟಪಟ್ಟಿದ್ದಾರೆ. ಕುಡಿತದ ವಿಷ್ಯದಲ್ಲಿ ಜಾಗೃತರಾಗಿರುವ ಜನರು ಇದರಲ್ಲಿ ಸುಧಾರಣೆ ತಂದುಕೊಳ್ತಿದ್ದಾರೆ.
Super Food For Kids: ಮಕ್ಕಳು ಕುಳ್ಳಗಿದ್ದಾರೆ ಅನ್ನೋ ಬೇಜಾರಾ..ಮೊಟ್ಟೆ, ಸಿಹಿ ಗೆಣಸು ಕೊಟ್ಟು ನೋಡಿ
ಪರಿಸರ ಸ್ನೇಹಿ ಆಹಾರ : ಪರಿಸರ ಸ್ನೇಹಿ ಆಹಾರದ ಸೇವನೆ ಹೆಚ್ಚಾಗಿದೆ. ಮಾಂಸಾಹಾರ ಸೇವನೆ ಕಡಿಮೆ ಮಾಡಿ,ಸಸ್ಯಹಾರ ಸೇವನೆಯನ್ನು ಹೆಚ್ಚು ಮಾಡಿದ್ದಾರೆ.ಮಾಂಸಹಾರವನ್ನು ಸಂಪೂರ್ಣವಾಗಿ ತ್ಯಜಿಸುವ ಬದಲು,ಅದರ ಸೇವನೆ ಕಡಿಮೆ ಮಾಡಿದ್ದಾರೆ.
ಸಂಸ್ಕರಿಸಿದ ಆಹಾರ : ಸಂಸ್ಕರಿಸಿದ ಆಹಾರ ಸೇವನೆಯನ್ನು ಜನರು ಕಡಿಮೆ ಮಾಡಿದ್ದಾರೆ. ಹಣ್ಣುಗಳು ಮತ್ತು ತರಕಾರಿಗಳು, ಬೇಯಿಸಿದ ಸಲಾಡ್‌ಗಳು, ಸೊಪ್ಪಿನ ಸೇವನೆ ಹೆಚ್ಚಿಸಿದ್ದಾರೆ.