Asianet Suvarna News Asianet Suvarna News

Kitchen Hacks: ಕರಿದ ಎಣ್ಣೆಯನ್ನು ಈ ರೀತಿ ಕ್ಲೀನ್ ಮಾಡಿದ್ರೆ ಮತ್ತೆ ಬಳಸ್ಬೋದು

ಚಳಿಗಾಲ (Winter)ದಲ್ಲಿ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನೋದಂದ್ರೆ ಎಲ್ರಿಗೂ ಇಷ್ಟ. ಹೀಗಾಗಿ ಬಜ್ಜಿ, ಬೋಂಡಾ ಅಂತ ಏನಾದ್ರೊಂದು ಮಾಡ್ತಾನೆ ಇರ್ತಾರೆ. ಆದ್ರೆ ಬಳಸಿದ ಎಣ್ಣೆ (Oil)ಯನ್ನೇ ಕರಿಯಲು ಮತ್ತೆ ಮತ್ತೆ ಬಳಸೋದು ಹಾನಿಕಾರಕ. ಹಾಗಿದ್ರೆ ಎಣ್ಣೆಯನ್ನು ಸ್ವಚ್ಛಗೊಳಿಸಿ ಹೇಗೆ ಬಳಸಬಹುದು. ಇಲ್ಲಿದೆ ಕೆಲವೊಂದು ಟಿಪ್ಸ್.

How To Clean Cooking Oil After Frying
Author
Bengaluru, First Published Jan 25, 2022, 4:18 PM IST

ಚಳಿಗಾಲ (Winter) ಶುರುವಾಗುವುದರ ಜತೆಗೇ ಕರಿದ ಆಹಾರ (Food)ವನ್ನು ತಿನ್ನುವ ಹಠಾತ್ ಬಯಕೆ ಹೆಚ್ಚಾಗುತ್ತದೆ. ಮೈ ನಡುಗಿಸುವ ಚಳಿಯಲ್ಲಿ ಬಿಸಿ ಬಿಸಿ ಬಜ್ಜಿ, ಬೋಂಡಾ, ಪಕೋಡಾವನ್ನು ತಿನ್ನುವ ಮಜಾನೇ ಬೇರೆ. ಈ ರೀತಿಯ ತಿಂಡಿ ಮಾಡಲು ಒಂದಷ್ಟು ಸಾಮಗ್ರಿಗಳು ಬೇಕು, ಸಮಯವೂ ಬೇಕು. ಎಲ್ಲರೂ ಸೇರ್ಕೊಂಡು ತಿಂಡಿಯೇನೋ ಮಾಡ್ಬೋದು. ಆದ್ರೆ ಪ್ರತಿ ದಿನ ಈ ರೀತಿಯ ಸ್ನ್ಯಾಕ್ಸ್‌ (Snacks) ತಯಾರಿಸಲು ಏನಿಲ್ಲದಿದ್ದರೂ ಎಣ್ಣೆಯಂತೂ ಇರಲೇಬೇಕು. ಅದೇ ಕಷ್ಟ. ಒಂದು ಸಾರಿ ಕರಿಯಲು ಬಳಸಿದ ಎಣ್ಣೆಯನ್ನು ಮತ್ತೆ ಹಲವು ಬಾರಿ ಬಳಸಬಾರದು ಅನ್ನೋ ಕಾರಣಕ್ಕೆ ಹಲವರು ಮನೆಯಲ್ಲಿ ಸ್ನ್ಯಾಕ್ಸ್ ಮಾಡೋ ಗೊಡವೇನೆ ಬೇಡ ಅಂತ ಹೊಟೇಲ್‌ನಿಂದ ಪಾರ್ಸೆಲ್ ತಂಡು ಬಿಡುತ್ತಾರೆ. ಆದರೆ, ತಿಂಡಿಯನ್ನು ಕರಿದ ಬಳಿಕವೂ ಎಣ್ಣೆಯನ್ನು ಸ್ವಚ್ಛಗೊಳಿಸಿ ಬಳಸಬಹುದಾಗಿದೆ. ಅದು ಹೇಗೆ ?

ಭಾರತೀಯ ಎಲ್ಲಾ ಪಾಕವಿಧಾನಗಳಲ್ಲಿ ಮುಖ್ಯವಾಗಿ ಬಳಸುವ ಒಂದು ಪದಾರ್ಥವೆಂದರೆ ಎಣ್ಣೆ. ಸಾರು, ಸಾಂಬಾರು, ಪಲ್ಯ, ಗ್ರೇವಿಗಳಲ್ಲಿ ಹೆಚ್ಚಿನ ಪರಿಮಳವನ್ನು ಸೇರಿಸಲು, ಸ್ನ್ಯಾಕ್ಸ್ ಫ್ರೈ ಮಾಡಲು ಅಡುಗೆ ಎಣ್ಣೆಯು ಅಗತ್ಯವಾಗಿದೆ. ಆದರೆ ಪ್ರತಿ ಬಾರಿ ನಾವು ಈ ಪಾಕವಿಧಾನಗಳನ್ನು ಮಾಡುವಾಗ, ಫ್ರೈ ಮಾಡಿದ ಬಳಿಕ ಆ ಬಾಣಲೆಯಲ್ಲಿ ಎಣ್ಣೆಯ ಜತೆ ಉಳಿದಿರುವ ಸಣ್ಣ ಕಣಗಳನ್ನು ಗಮನಿಸಿದ್ದೀರಾ? ಈ ಕಣಗಳು ಸಾಮಾನ್ಯವಾಗಿ ಹಿಟ್ಟು ಅಥವಾ ನೀವು ಹುರಿದ ಪದಾರ್ಥದದಿಂದ ಕೂಡಿರಬಹುದು. ನಮ್ಮಲ್ಲಿ ಹೆಚ್ಚಿನವರು ಈ ಕಣಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಅದೇ ಎಣ್ಣೆಯನ್ನು ಮತ್ತೆ ತಿಂಡಿ ಕರಿಯಲು ಬಳಸಿಕೊಳ್ಳುತ್ತಾರೆ. ಆದರೆ ನೀವು ಒಂದೇ ಅಡುಗೆ ಎಣ್ಣೆಯನ್ನು ಅನೇಕ ಉದ್ದೇಶಗಳಿಗಾಗಿ ಬಳಸುವುದನ್ನು ಮುಂದುವರಿಸಿದರೆ ಅದು ನಿಮ್ಮ ಆರೋಗ್ಯ (Health)ಕ್ಕೆ ಎಷ್ಟು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? 

Cooking Oil : ಆರೋಗ್ಯ ಹಾಳು ಮಾಡುತ್ತೆ ಅಡುಗೆ ಎಣ್ಣೆ..! ಆಯಿಲ್ ಆಯ್ಕೆಗೆ ಮುನ್ನ ಇದನ್ನೋದಿ..

ಎಣ್ಣೆಯನ್ನು ನಿರಂತರವಾಗಿ ಬಳಸುವುದರಿಂದ ಅದು ಟ್ರಾನ್ಸ್-ಫ್ಯಾಟ್ ಎಂಬ ಅಂಶವನ್ನು ಹುಟ್ಟು ಹಾಕುತ್ತದೆ. ಇದು ಹೆಚ್ಚಿನ ಪ್ರಮಾಣದ ವಿಷವನ್ನು ಬಿಡುಗಡೆ ಮಾಡುತ್ತದೆ. ಇಂಥಹಾ ಎಣ್ಣೆಯಲ್ಲಿ ಕರಿದ ತಿಂಡಿಯನ್ನು ತಿನ್ನುವುದು ದೇಹದಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಪ್ರತಿದಿನ ಅಡುಗೆ ಎಣ್ಣೆಯನ್ನು ಬದಲಿಸಲು ಸಾಧ್ಯವಾಗದಿದ್ದರೂ, ಅದನ್ನು ಸ್ವಚ್ಛಗೊಳಿಸಿದ ಬಳಿಕ ಬಳಸಬಹುದಾಗಿದೆ. ಕ್ಲೀನ್ (Clean) ಮಾಡಿದ ಅಡುಗೆ ಎಣ್ಣೆ ಮರು ಬಳಕೆಗೆ ಯೋಗ್ಯವಾಗಿದೆ. ಆರೋಗ್ಯಕ್ಕೂ ಸುರಕ್ಷಿತವಾಗಿದೆ. ಅಡುಗೆ ಎಣ್ಣೆಯನ್ನು ಸ್ವಚ್ಛಗೊಳಿಸಲು ಕೆಲವು ಸುಲಭ ಸಲಹೆಗಳು ಇಲ್ಲಿವೆ.

ತಿಂಡಿಯ ಕಣಗಳನ್ನು ಬಿಟ್ಟು ಎಣ್ಣೆಯನ್ನು ಸೋಸಿಕೊಳ್ಳಿ
ಅಡುಗೆಮನೆಯಲ್ಲಿ ಎಲ್ಲರೂ ಆಗಾಗ ವಿವಿಧ ಪಾಕವಿಧಾನಗಳನ್ನು ತಯಾರಿಸುವಾಗ ಬಳಸಿದ ಎಣ್ಣೆಯನ್ನೇ ಮರುಬಳಕೆ (Re use) ಮಾಡುತ್ತಾರೆ. ಹೀಗಿದ್ದಾಗ ಬಳಸಿದ ಎಣ್ಣೆಯನ್ನು ಸ್ವಚ್ಛಗೊಳಿಸಿ ಮರುಬಳಕೆ ಮಾಡಬೇಕು. ಕರಿದ ಬಳಿಕ ಎಣ್ಣೆ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಂತರ ಬಾಣಲೆಯಲ್ಲಿ ತಿಂಡಿಯ ಸಣ್ಣ ಪುಟ್ಟ ಕಣಗಳು ಉಳಿದಿದ್ದರೆ, ಪೇಪರ್ ಕಾಫಿ ಫಿಲ್ಟರ್ ಅಥವಾ ಪೇಪರ್ ಟವೆಲ್ ಮೂಲಕ ಸೋಸಿಕೊಳ್ಳಿ. ಎಣ್ಣೆಯಲ್ಲಿ ಉಳಿದಿರುವ ಹುರಿದ ಕಣಗಳನ್ನು ಎಸೆದು, ಎಣ್ಣೆಯನ್ನು ಡಬ್ಬಿಯಲ್ಲಿ ತುಂಬಿಟ್ಟುಕೊಳ್ಳಿ. ಈ ಎಣ್ಣೆಯನ್ನು ಮತ್ತೆ ಬಳಸಬಹುದಾಗಿದೆ. ಹುರಿದ ತಿಂಡಿಯ ಕಣಗಳು ಹಾಗೆಯೇ ಇದ್ದಲ್ಲಿ ಆ ಎಣ್ಣೆ ಮರುಬಳಕೆ ಮಾಡಲು ಸೂಕ್ತವಲ್ಲ. ಈ ಆಹಾರ ಕಣಗಳು ತಿಂಡಿ ಸೀದು ಹೋಗಲು ಕಾರಣವಾಗಬಹುದು.

Oil And Luck: ರಾಶಿಯ ಅನುಸಾರ ಯಾರು ಯಾವ ತೈಲವನ್ನು ಬಳಸಿದ್ರೆ ಅದೃಷ್ಟ ಬದಲಾಗುತ್ತೆ?

ನಿಂಬೆಹಣ್ಣು ಸೇರಿಸಿ ಎಣ್ಣೆಯನ್ನು ಬಿಸಿ ಮಾಡಿ
ನಿಂಬೆಹಣ್ಣು (Lemon) ಸೇರಿಸಿ ಸನ ಎಣ್ಣೆಯನ್ನು ಕ್ಲೀನ್ ಮಾಡಿಕೊಳ್ಳಬಹುದಾಗಿದೆ. ಮೊದಲಿಗೆ ನಿಂಬೆಹಣ್ಣುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಎಣ್ಣೆಯಲ್ಲಿ ಹಾಕಿ. ಇದರಿಂದ ಎಣ್ಣೆಯಲ್ಲಿ ಉಳಿದ ಕಣಗಳು ನಿಂಬೆಯ ಮೇಲೆ ಅಂಟಿಕೊಳ್ಳುತ್ತವೆ. ಈಗ ಅವುಗಳನ್ನು ತೆಗೆದುಕೊಂಡು ತಿಂಡಿಯ ಕಣಗಳನ್ನು ಮತ್ತು ಎಣ್ಣೆಯನ್ನು ಪ್ರತ್ಯೇಕಿಸಿ ತೆಗೆಯಬಹುದು.

ಶಾಖದ ಸಮೀಪ ಎಣ್ಣೆಯನ್ನು ತೆಗೆದಿಡಬೇಡಿ
ಎಣ್ಣೆಯನ್ನು ಶೇಖರಿಸಿಡುವ ರೀತಿಯೂ ಮುಖ್ಯವಾಗುತ್ತದೆ. ಹೀಗಾಗಿ ಒಂದು ಸಾರಿ ಬಳಸಿದ ಎಣ್ಣೆಯನ್ನು ತೇವಾಂಶ, ಬೆಳಕು ಮತ್ತು ಶಾಖದಿಂದ ದೂರವಿಡಿ. ಒಂದು ಸಾರಿ ಬಳಸಿದ ಎಣ್ಣೆಯನ್ನು ಬೆಳಕು (Light) ಮತ್ತು ಶಾಖದ ಸಮೀಪ ಇಟ್ಟರೆ ಅದು ಬೇಗನೇ ಹಾಳಾಗುತ್ತದೆ. ನೀವು ಅದನ್ನು ಮರುಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಣ್ಣೆಯನ್ನು ಒಲೆಯಿಂದ ದೂರವಿಡಿ. ಬದಲಿಗೆ, ನೀವು ಅದನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಬಹುದು ಮತ್ತು ಅದು ಗಟ್ಟಿಯಾದ ನಂತರ ಅದನ್ನು ಮರು ಬಳಕೆ ಮಾಡಬಹುದು

Follow Us:
Download App:
  • android
  • ios