ಹಸಿ ರಕ್ತದ ಪುಡ್ಡಿಂಗ್ ತಿಂದ ಮಹಿಳೆ, ಮೆದುಳು ಸೇರಿತ್ತು ಹುಳುಗಳ ರಾಶಿ!
ಇತ್ತೀಚಿಗೆ ಜನರು ಆಹಾರದಲ್ಲಿ ಹೊಸ ಹೊಸ ಎಕ್ಸಪರಿಮೆಂಟ್ ಮಾಡುವುದು ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಬ್ಬ ಮಹಿಳೆ ಹಸಿ ರಕ್ತ ಮತ್ತು ಬೇಯಿಸಿದ ಮಾಂಸವನ್ನು ಒಳಗೊಂಡಿರುವ ಪುಡ್ಡಿಂಗ್ ಸೇವಿಸಿದ್ದಾರೆ. ಆ ನಂತರ ಆಗಿದ್ದು ಮಾತ್ರ ಭಯಾನಕ.
ವಿಯೆಟ್ನಾಂನ 58 ವರ್ಷದ ಮಹಿಳೆ ಹಸಿ ರಕ್ತದ ಪುಡ್ಡಿಂಗ್ ಸೇವಿಸಿ ಅಸ್ವಸ್ಥತೆಯನ್ನು ಅನುಭವಿಸಿದರು. ದೇಹ ಅಸಮತೋಲಕ್ಕೊಳಗಾಯಿತು. ಸೇವಿಸಿದ ಆಹಾರದಿಂದ ಮೆದುಳಿಗೆ ಪ್ಯಾರಾಸೈಟ್ (Parasite) ಹೊಕ್ಕ ಭಯಾನಕ ಘಟನೆ ವಿಯೆಟ್ನಾಮ್ ನಲ್ಲಿ (Vietnam) ನಡೆದಿದೆ. 58 ವರ್ಷದ ವಿಯೆಟ್ನಾಂ ಮಹಿಳೆ ತಾನೇ ತಯಾರಿಸಿದ ಹಸಿ ರಕ್ತ ಮತ್ತು ಬೇಯಿಸಿದ ಮಾಂಸವನ್ನು ಒಳಗೊಂಡಿರುವ ಟೈಟ್ ಕ್ಯಾನ್ ಎಂಬ ಸ್ಥಳೀಯ ಖಾದ್ಯವನ್ನು ಸೇವಿಸಿದ ನಂತರ ತೀವ್ರ ಅಸ್ವಸ್ಥರಾಗಿದ್ದರು. ಡೆಡ್ಲಿ ಪ್ಯಾರಾಸೈಟ್ ಮೆದುಳಿಗೆ ಪ್ರವೇಶಿಸಿದ ನಂತರವೂ ಈ ಮಹಿಳೆ (Women) ಅದೃಷ್ಟವಶಾತ್ ಬದುಕುಳಿದಿದ್ದಾರೆ.
ಅನ್‌ಬಿನ್ಹ್ ಎಂಬ ಪ್ರದೇಶದಿಂದ ಬಂದಿರುವ 58 ವರ್ಷದ ಮಹಿಳೆ ಹನೋಯಿ ಎಂಬವರು ಈ ಸಮಸ್ಯೆಯನ್ನು ಅನುಭವಿಸಿದರು. ಮಹಿಳೆ ತಾವು ಸೇವಿಸಲು ಸ್ವತಃ ಊಟವನ್ನು ತಯಾರಿಸಿದರು. ಹಸಿ ರಕ್ತ ಹಾಗೂ ಮಾಂಸದಿಂದ ಪುಡ್ಡಿಂಗ್ ಮಾಡಿದರು. ನಂತರ ಅವರು ತೀವ್ರ ತಲೆನೋವು ಮತ್ತು ಸಮತೋಲನದ ನಷ್ಟದಿಂದ ಬಳಲಿದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಸಿಬ್ಬಂದಿ ಆರಂಭದಲ್ಲಿ ಆಕೆಗೆ ಪಾರ್ಶ್ವವಾಯು ಸಂಭವಿಸಿದೆ ಎಂದು ಭಾವಿಸಿದ್ದರು. ಆದರೆ, ಕೆಲವು ಪರೀಕ್ಷೆಗಳು ಹಾಗೂ ಸ್ಕ್ಯಾನ್‌ಗಳನ್ನು ನಡೆಸಿದ ನಂತರ ಪರಾವಲಂಬಿ ಹುಳುಗಳು ಅಕ್ಷರಶಃ ಅವಳ ಚರ್ಮದ ಅಡಿಯಲ್ಲಿ ತೆವಳುತ್ತಿರುವುದು ಕಂಡು ಬಂತು. ಮಾತ್ರವಲ್ಲ ಕೆಲವು ಹುಳುಗಳು ಮೆದುಳನ್ನು ಸಹ ಸೇರಿದ್ದವು.
ಕಿಸ್ಸಿಂಗ್ ರೋಗ: ಸಮಸ್ಯೆ ಕಡೆಗಣಿಸಿದ್ರೆ ಗಂಭೀರವಾಗೋ ಸಾಧ್ಯತೆನೂ ಇದೆ
ಹಸಿ ರಕ್ತದ ಪುಡ್ಡಿಂಗ್ ತಿಂದ ಮಹಿಳೆಗೆ ಈ ರೀತಿಯ ತೊಂದರೆಯಾಗಿದೆ ಎಂದು ಆಸ್ಪತ್ರೆಯ ಉಪ ನಿರ್ದೇಶಕ ಡಾ.ಟ್ರಾನ್ ಹುಯ್ ಥೋ ಖಚಿತಪಡಿಸಿದ್ದಾರೆ. ತಕ್ಷಣ ಚಿಕಿತ್ಸೆ ನೀಡದಿದ್ದರೆ, ಆಕೆಯ ರೋಗಲಕ್ಷಣಗಳು ಉಲ್ಬಣಗೊಳ್ಳಬಹುದು. ಮಾತ್ರವಲ್ಲ ಆಕೆ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಯೂ ಇದೆ ಎಂದು ಅಥವಾ ತನ್ನ ಪ್ರಾಣವನ್ನು ಕಳೆದುಕೊಳ್ಳಬಹುದು ಎಂದು ಎಚ್ಚರಿಸಲಾಯಿತು. ಹೀಗಾಗಿ ತಕ್ಷಣ ಮಹಿಳೆಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಯಿತು.
ಇದಲ್ಲದೆ, ವಿಯೆಟ್ನಾಂನಲ್ಲಿ ಕಚ್ಚಾ ರಕ್ತದ ಪುಡಿಂಗ್ ಅನ್ನು ಸೇವಿಸುವುದು ತುಂಬಾ ಸಾಮಾನ್ಯವಾಗಿದೆ. ಆದರೆ ಭಕ್ಷ್ಯವನ್ನು ಸುರಕ್ಷಿತವಾಗಿ ತಯಾರಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಡಾಕ್ಟರ್ ಥೋ ಪ್ರಕಾರ ಇಂಥಾ ಆಹಾರ ತಯಾರಿಸುವಾಗ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸಾಕಷ್ಟು ಅವಶ್ಯಕವಾಗಿದೆ. ಇಲ್ಲದಿದ್ದರೆ ಈ ರೀತಿಯ ಆಹಾರ ಸೇವನೆಯಿಂದ ಇಂಥಾ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಎಚ್ಚರಿಸಿದರು. ಆದರೆ ಅನೇಕ ಜನರು ತಮ್ಮ ರೋಗಲಕ್ಷಣಗಳನ್ನು ಪಾರ್ಶ್ವವಾಯು ಅಥವಾ ಇತರ ಮಾನಸಿಕ ಆರೋಗ್ಯದ ಸ್ಥಿತಿಗಳಿಗೆ ತಪ್ಪಾಗಿ ಗ್ರಹಿಸುತ್ತಾರೆ. ಮತ್ತು ವರ್ಷಗಳಿಂದ ಮನೋವೈದ್ಯಕೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.
ಪಾರ್ಕಿನ್ಸನ್ ರೋಗದ ಬಗ್ಗೆ ನೀವು ತಿಳಿಯಲೇ ಬೇಕಾದ ಮಾಹಿತಿಗಳಿಷ್ಟು
ಚಿಕಿತ್ಸೆ ನೀಡದೆ ಬಿಟ್ಟರೆ, ಅವರ ಪರಿಸ್ಥಿತಿಗಳು ಹದಗೆಡಬಹುದು, ಮತ್ತು ಪ್ಯಾರಾಸೈಟ್ಗಳು ತಮ್ಮ ಮಿದುಳಿಗೆ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡಬಹುದು, ಇದು ದೃಷ್ಟಿ ಕಡಿಮೆಯಾಗುವಂತಹ ದೀರ್ಘಕಾಲದ ರೋಗಗಳಿಗೂ ಕಾರಣವಾಗುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.
ಮಹಿಳೆ, ತಾನು ಅನುಭವಿಸಿದ ಈ ವಿಚಿತ್ರ ಘಟನೆಯ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ತಾನು ತಿಂಗಳಿಗೊಮ್ಮೆ ರಕ್ತದ ಪುಡಿಂಗ್ ಸೇವಿಸುತ್ತೇನೆ ಎಂದು ಬಹಿರಂಗಪಡಿಸಿದರು. ಸ್ವತಃ ಈ ಪುಡ್ಡಿಂಗ್ ತಯಾರಿಸುವುದು ಆರೋಗ್ಯಕರ ಆಯ್ಕೆಯಾಗಿದೆ ಮತ್ತು ಈ ಮೂಲಕ ಯಾವುದೇ ಕಾಯಿಲೆಯಿಂದ ಮುಕ್ತರಾಗಬಹುದು ಎಂದು ಇವರು ನಂಬಿದ್ದರು. ಆದರೆ ಪುಡ್ಡಿಂಗ್ ಈ ಬಾರಿ ಜೀವಕ್ಕೇ ಮಾರಣಾಂತಿಕವಾಗಿ ಪರಿಣಮಿಸಿತ್ತು. ಇದೀಗ ಅದೃಷ್ಟವಶಾತ್, ಈ ಮಹಿಳೆಯನ್ನು ಚೇತರಿಸಿಕೊಂಡಿದ್ದಾರೆ.