Asianet Suvarna News Asianet Suvarna News

ಹಲಸಿನ ಹಣ್ಣಿನ ಸ್ವರ್ಗ ಈ ಜಾಗ: ವರ್ಷವಿಡೀ ಹಲಸು ಬೆಳೆಯುವ ಏಕೈಕ ಸ್ಥಳ

ಹಲಸು ಯಾರಿಗೆ ಇಷ್ಟ ಇಲ್ಲ ಹೇಳಿ. ತನ್ನ ಪರಿಮಳದ ಮೂಲಕವೇ ಇಡೀ ಊರಿಗೆ ನಾನಿರುವ ಎಂದು ತಿಳಿಸುವ ಹಲಸಿನ ಉಪಯೋಗ ನೂರಾರು. ಆದರೆ ಈ ಹಲಸಿಗೂ ವರ್ಷದ ಒಂದು ಅವಧಿಯಲ್ಲಿ ಮಾತ್ರ ಲಭ್ಯವಿರುತ್ತದೆ. ಇತರ ಎಲ್ಲಾ ಹಣ್ಣುಗಳಿಗೆ ಹೇಗೆ ಅವಧಿ ಇರುತ್ತದೆಯೋ ಹಾಗೆಯೇ ಹಲಸಿಗೂ ಸಾಮಾನ್ಯವಾಗಿ ಫೆಬ್ರವರಿಯಿಂದ ಜೂನ್ ಅಂತ್ಯದವರೆಗೆ ಹಲಸಿನ ಅವಧಿಯಾಗಿರುತ್ತದೆ.

Panruti the only place in India where jackfruit is grown as a monocrop akb
Author
Bangalore, First Published Jun 23, 2022, 12:09 PM IST

ಹಲಸು ಯಾರಿಗೆ ಇಷ್ಟ ಇಲ್ಲ ಹೇಳಿ. ತನ್ನ ಪರಿಮಳದ ಮೂಲಕವೇ ಇಡೀ ಊರಿಗೆ ನಾನಿರುವ ಎಂದು ತಿಳಿಸುವ ಹಲಸಿನ ಉಪಯೋಗ ನೂರಾರು. ಆದರೆ ಈ ಹಲಸಿಗೂ ವರ್ಷದ ಒಂದು ಅವಧಿಯಲ್ಲಿ ಮಾತ್ರ ಲಭ್ಯವಿರುತ್ತದೆ. ಇತರ ಎಲ್ಲಾ ಹಣ್ಣುಗಳಿಗೆ ಹೇಗೆ ಅವಧಿ ಇರುತ್ತದೆಯೋ ಹಾಗೆಯೇ ಹಲಸಿಗೂ ಸಾಮಾನ್ಯವಾಗಿ ಫೆಬ್ರವರಿಯಿಂದ ಜೂನ್ ಅಂತ್ಯದವರೆಗೆ ಹಲಸಿನ ಅವಧಿಯಾಗಿರುತ್ತದೆ. 

ಆದರೆ ಈ ಹಲಸನ್ನು ಕೂಡ ಏಕ ಬೆಳೆಯಾಗಿ ವರ್ಷಪೂರ್ತಿ ಹಲಸನ್ನು ಮಾತ್ರ ಬೆಳೆಯುವ ಜಾಗವೊಂದಿದೆ. ಅದು ಹಲಸಿನ ಹಣ್ಣನ್ನು ವರ್ಷಪೂರ್ತಿ ನೀಡುವ ಭಾರತದ ಏಕೈಕ ಸ್ಥಳ. ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುಟಿ ಹಲಸಿ ಎಂಬ ಪ್ರದೇಶವೇ ಹಲಸಿಗೆ ಖ್ಯಾತಿ ಹೊಂದಿರುವ ಗ್ರಾಮ. 

ಪನ್ರುಟಿ ಮೂಲಕ ವಾಹನದಲ್ಲಿ ಪ್ರಯಾಣಿಸುವವರು ಹಲಸಿನ ಹಣ್ಣಿನ ಪರಿಮಳಕ್ಕೆ ಮೋಹಗೊಳ್ಳುತ್ತಾರೆ. ಗಾಳಿಯಲ್ಲಿ ಹಾರಿ ಬಂದು ಮೂಗಿಗೆ ಬಡಿಯುವ ಹಲಸಿನ ಪರಿಮಳ ನಾನಿಲ್ಲಿರುವೆ ಎಂದು ಕೂಗಿ ಕೂಗಿ ಹೇಳುತ್ತಿರುವಂತಿರುತ್ತದೆ. ಪನ್ರುತಿಯಲ್ಲಿನ ಪ್ರತಿಯೊಂದು ಮಾರುಕಟ್ಟೆ ಮತ್ತು ರಸ್ತೆ ಬದಿಯ ಅಂಗಡಿಗಳಲ್ಲಿ ಪ್ರತಿ ಮನೆಗಳಲ್ಲೂ ಈ ಹಣ್ಣು ಸಿಗುವುದು. 

ಜುಲೈ.4 ಹಲಸು ದಿನ: ಹಲಸೆಂಬ ಹಣ್ಣಿನ ಲೋಕದ ಸಾಮ್ರಾಟ

ಪನ್ರುಟಿ ತಮಿಳುನಾಡು ರಾಜ್ಯದಲ್ಲಿಯೇ ಹಲಸು ಬೆಳೆಯುವ ಅತಿ ದೊಡ್ಡ ಪ್ರದೇಶ. ಜಿಲ್ಲೆಯಲ್ಲಿ ಸುಮಾರು 800 ಹೆಕ್ಟೇರ್‌ನಲ್ಲಿ ಹಣ್ಣನ್ನು ಬೆಳೆಯಲಾಗುತ್ತದೆ. ಹಲಸಿನ ಹಣ್ಣನ್ನು ಏಕಬೆಳೆಯಾಗಿ (ವರ್ಷವಿಡೀ ಒಂದೇ ಬೆಳೆ) ಬೆಳೆಯುವ ಭಾರತ ಏಕೈಕ ಸ್ಥಳವಾಗಿದೆ. ಪ್ರತಿ ಋತುವಿಗೆ ಪ್ರತಿ ಮರವು ಸುಮಾರು 150 ರಿಂದ 250 ಹಣ್ಣುಗಳನ್ನು ನೀಡುತ್ತದೆ. ಅಲ್ಲದೇ ವಾರ್ಷಿಕ 45,000 ಮೆಟ್ರಿಕ್ ಟನ್‌ಗಳಿಂದ 50,000 ಮೆಟ್ರಿಕ್ ಟನ್‌ಗಳಷ್ಟು ಹಲಸು ಉತ್ಪಾದನಾ ಸಾಮರ್ಥ್ಯವನ್ನು ಪನ್ರುಟಿ ಪಟ್ಟಣ ಹೊಂದಿದೆ.

ತಮಿಳುನಾಡಿನ ರಾಜ್ಯ ಹಣ್ಣು ಎಂಬ ಖ್ಯಾತಿ ಗಳಿಸಿರುವ ಹಲಸಿನ ಹಣ್ಣಿಗೂ ಪನ್ರುಟಿ ತಾಲೂಕಿಗೂ ಒಂದು ಪುರಾತನ ಸಂಬಂಧವಿದೆ. 1906ರಲ್ಲಿ ಪ್ರಕಟವಾದ ಸೌತ್ ಆರ್ಕಾಟ್‌ನ ಗೆಜೆಟಿಯರ್‌ನಲ್ಲಿಯೇ ಇಲ್ಲಿ ಹಲಸು ಬೆಳೆಯುವ ಬಗ್ಗೆ ವರದಿ ಇತ್ತು. ಈ ಗೆಜೆಟಿಯರ್‌ ವರದಿಯ ಪ್ರಕಾರ, ಪಂರುತಿ ತಾಲೂಕಿನ ಹೆಚ್ಚಿನ ಕೆಂಪು ಭೂಮಿಯು ಗೋಡಂಬಿ ಮತ್ತು ಹಲಸಿನ ಹಣ್ಣನ್ನು ಅಗಾಧವಾಗಿ ಬೆಳೆದು ವ್ಯಾಪಾರ ಮಾಡಿತು ಜೊತೆಗೆ ಈ ಪ್ರದೇಶದ ಆರ್ಥಿಕ ಮೌಲ್ಯವನ್ನು ಸುಧಾರಿಸಿತು ಎಂದು ಉಲ್ಲೇಖಿಸಲಾಗಿದೆ.

ಹಲಸು ತಿನ್ನುವಾಗ ಬೀಜವನ್ನು ಕಸವೆಂದು ಎಸೆಯಬೇಡಿ, Jackfruit Seeds ಬಾದಾಮಿಗೆ ಸಮವಂತೆ !

ಇದು ಏಕೆ ವಿಶೇಷವಾಗಿದೆ?
ಇಲ್ಲಿನ ಹಲಸಿನ ಹಣ್ಣಿನ ತೊಳೆಗಳು ಕಾರ್ಪಲ್ಸ್ ದಪ್ಪ, ಉದ್ದ ಮತ್ತು ಹೆಚ್ಚುವರಿ ಸಿಹಿಯಾಗಿರುತ್ತದೆ. ತೊಳೆಯು ತೆಳುವಾಗಿರುವ  ಇತರ ಪ್ರದೇಶಗಳ ಹಣ್ಣುಗಳಿಗೆ ಹೋಲಿಸಿದರೆ ಪನ್ರುಟಿ  ಹಲಸಿನ ಹಣ್ಣುಗಳು ಕೆನೆ ಬಣ್ಣದ ತೊಳೆಗಳನ್ನು ಹೊಂದಿದ್ದು, ದಪ್ಪ ಮಾಂಸ ಮತ್ತು ನಾರಿನ ಒಳಭಾಗವನ್ನು ಹೊಂದಿರುತ್ತವೆ. ತಿರುಳು ತಾಜಾವಾಗಿ ಉಳಿಯುತ್ತದೆ ಮತ್ತು ದೀರ್ಘಕಾಲದವರೆಗೆ ಅದರ ವಿನ್ಯಾಸದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ ಎಂದು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸರ್ಕಾರಿ ವಕೀಲ ಪಿ. ಸಂಜಯ್ ಗಾಂಧಿ (Sanjai Gandhi) ಹೇಳುತ್ತಾರೆ. ಅವರು ಮಾಳಿಗಂಪಟ್ಟು (Maligampattu) ರೈತ ಉತ್ಪಾದಕರ ಸಂಘದ ಪರವಾಗಿ ಪನ್ರುಟಿ ತಳಿಯ ಹಲಸಿನ ಹಣ್ಣಿಗೆ ಭೌಗೋಳಿಕ ಸೂಚಕ (ಜಿಐ) ಟ್ಯಾಗ್‌ಗಾಗಿ ಮದ್ರಾಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ಈ ವಿಚಾರ ಉಲ್ಲೇಖಿಸಿದ್ದರು.

ಪನ್ರುಟಿ ಹಲಸುಗಳು ತಮ್ಮ ದೊಡ್ಡ ಗಾತ್ರಕ್ಕೆ ಹೆಸರು ವಾಸಿಯಾಗಿದ್ದು, ಪ್ರತಿ ಹಣ್ಣು 7 ಕೆಜಿಯಿಂದ 40 ಕೆಜಿ ವರೆಗೆ ತೂಗುತ್ತದೆ. 1992 ರಲ್ಲಿ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ತರಕಾರಿ ಸಂಶೋಧನಾ ಕೇಂದ್ರವು ಪನ್ರುತಿ ಬಳಿಯ ಪಣಿಕ್ಕಂಕುಪ್ಪಂನಲ್ಲಿ (Panikkankuppam) ಹೆಚ್ಚಿನ ಇಳುವರಿ ನೀಡುವ ತಳಿಯಾದ ಪಾಲೂರ್ ಜಾಕ್ (PLR-1) ಅನ್ನು ಅಭಿವೃದ್ಧಿಪಡಿಸಿತು.

ಪಾಲೂರ್ ಜಾಕ್ (Palur jack) ಸಸಿಯೂ ಮಧ್ಯಮ ಎತ್ತರ ಮತ್ತು ಹೆಚ್ಚಿನ ಸಾಂದ್ರತೆಯ ನೆಡುವಿಕೆಗೆ ಸೂಕ್ತವಾಗಿದೆ. ಇದರ ಪ್ರಯೋಜನವೆಂದರೆ ಇದು ಬೇರಿಂಗ್ ಋತು ಅಂದರೆ ಸಂಪ್ರದಾಯಿಕ ಹಲಸಿನ ಫಲದ ಅವಧಿ(ಮಾರ್ಚ್-ಜೂನ್) ಮಾತ್ರವಲ್ಲದೆ  ಬೇರೆ ಋತುವಿನಲ್ಲೂ (ಅಕ್ಟೋಬರ್-ಡಿಸೆಂಬರ್) ಹಣ್ಣುಗಳನ್ನು ಉತ್ಪಾದಿಸುತ್ತದೆ. ಅಲ್ಲದೇ  ಪ್ರತಿ ಮರವೂ 80 ಹಣ್ಣುಗಳನ್ನು ನೀಡುತ್ತದೆ, ಸರಾಸರಿ 12 ಕೆಜಿ ತೂಗುತ್ತದೆ ಎಂದು ವಕೀಲ ಸಂಜಯ್ ಗಾಂಧಿ ಹೇಳುತ್ತಾರೆ.

ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಪನ್ರುಟಿ ತಳಿಯು ಸಿಹಿ ಮತ್ತು ವಿಶಿಷ್ಟವಾದ ರುಚಿಯನ್ನು ಹೊಂದಿದೆ, ಇಲ್ಲಿಯ ಕೃಷಿ-ಹವಾಮಾನ ಪರಿಸ್ಥಿತಿಗಳಿಗೆ ಧನ್ಯವಾದಗಳು. ಬೆಳೆ ಮಳೆಯಾಶ್ರಿತವಾಗಿದೆ ಮತ್ತು ಪನ್ರುತಿ ಮತ್ತು ಸುತ್ತಮುತ್ತಲಿನ ಮಣ್ಣು ಹಲಸು ಕೃಷಿಗೆ ಸೂಕ್ತವಾಗಿದೆ. ಕೊಯ್ಲು ಮಾಡಿದ ಹಣ್ಣುಗಳಲ್ಲಿ 95% ಕ್ಕಿಂತ ಹೆಚ್ಚು ಬಳಕೆಯಾಗುತ್ತವೆ ಮತ್ತು ಯಾವುದೇ ವ್ಯರ್ಥವಾಗುವುದಿಲ್ಲ. ಇಲ್ಲಿಂದ ಕೊಯ್ಲು ಮಾಡಿದ ಹಣ್ಣುಗಳಿಗೆ ಚೆನ್ನೈ (Chennai) , ಮುಂಬೈ (Mumbai) , ಪುಣೆ (Pune) ಮತ್ತು ಬೆಂಗಳೂರು (Bengaluru) ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಭಾರಿ ಬೇಡಿಕೆಯಿದೆ.

Follow Us:
Download App:
  • android
  • ios