Asianet Suvarna News Asianet Suvarna News

ಹಲಸು ತಿನ್ನುವಾಗ ಬೀಜವನ್ನು ಕಸವೆಂದು ಎಸೆಯಬೇಡಿ, Jackfruit Seeds ಬಾದಾಮಿಗೆ ಸಮವಂತೆ !

ಸಿಹಿಸಿಹಿಯಾದ ರುಚಿಕರವಾದ ಹಲಸಿನ ಹಣ್ಣು (Jackfruit) ಅಂದ್ರೆ ಯಾರಿಗೇ ತಾನೇ ಇಷ್ಟವಿಲ್ಲ ಹೇಳಿ. ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ರಸಭರಿತವಾಗರುವ  ಹಲಸು ಎಂಥವರಿಗೂ ಇಷ್ಟವಾಗುತ್ತದೆ. ಹಾಗೆಯೇ ಹಲಸಿನ ಹಣ್ಣು ಆರೋಗ್ಯಕ್ಕೆ ಉತ್ತಮ ಕೂಡಾ ಹೌದು. ಆದ್ರೆ ಹಲಸು ಓಕೆ, ಹಲಸಿನ ಬೀಜ (Jackfruit seeds)ದಲ್ಲಿರುವ ಆರೋಗ್ಯ ಪ್ರಯೋಜನಗಳ (Health Benefits) ಬಗ್ಗೆ ನಿಮ್ಗೊತ್ತಾ ?

Health Benefits Of Jackfruit Seeds, How To Include Them In Your Food Vin
Author
Bengaluru, First Published Jun 3, 2022, 1:06 PM IST

ಬೇಸಿಗೆ ಕಾಲದಲ್ಲಿ ಸಿಗುವ ಹಣ್ಣುಗಳಲ್ಲಿ ಹಲಸು ಕೂಡ ಒಂದು. ಹಸಿ ಹಲಸಿನ ಹಣ್ಣನ್ನು ತರಕಾರಿಯಂತೆ ಬಳಸಲಾಗುತ್ತದೆ. ಮತ್ತು ಹಣ್ಣಾದಾಗ ಸಿಹಿ, ರಸಭರಿತ ಮತ್ತು ಹಣ್ಣಾಗಿ ತಿನ್ನಲಾಗುತ್ತದೆ. ಆದರೆ ಹಲಸಿನಕಾಯಿ, ಹಲಸಿನ ಹಣ್ಣು ಮಾತ್ರವಲ್ಲ, ಹಲಸಿನ ಬೀಜದಲ್ಲಿ ಅದೆಷ್ಟೋ ಆರೋಗ್ಯ ಪ್ರಯೋಜನಗಳಿವೆ. ಹಲಸು ಬಿಡಿಸಿ ತಿನ್ನುವಾಗ, ನೀವು ಅದರ ಬೀಜಗಳನ್ನು ಕಸವಾಗಿ ಎಸೆಯುತ್ತಿದ್ದೀರಾ, ಇಂಥಾ ತಪ್ಪು ಮಾಡದಿರಿ. ಯಾಕೆಂದರೆ ಈ ಹಲಸಿನ ಬೀಜವು ಯಾವುದೇ ಬಾದಾಮಿ (Almond)ಗಿಂತ ಕಡಿಮೆಯಿಲ್ಲ. ಮೆತ್ತಗೆ ಮತ್ತು ರುಚಿಕರವಾಗಿರುವ ಹಲಸಿನ ಬೀನ ಹಲವು. ಆರೋಗ್ಯ ಪ್ರಯೋಜನಕಾರಿ ಗುಣಗಳಿಂದ ಕೂಡಿದೆ. ಅದೇನೆಂದು ತಿಳಿಯೋಣ. 

ಹಲಸಿನ ಬೀಜಗಳ ಪ್ರಯೋಜನಕಾರಿ ಗುಣಗಳನ್ನು ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಹಲಸಿನ ಬೀಜಗಳ ಪ್ರಯೋಜನಗಳು ಮತ್ತು ಅವುಗಳನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಇದನ್ನು ತಿಳ್ಕೊಂಡ ನಂತರ ನೀವು ಹಲಸಿನ ಬೀಜವನ್ನು ಎಸೆಯೋ ತಪ್ಪನ್ನು ಖಂಡಿತ ಮಾಡಲ್ಲ.

Season ಇದು, ಹಸಿದ ಹೊಟ್ಟೆಗೆ ಹಲಸು ತಿಂದು ಸೊಂಪಾಗಿ ನಿದ್ರಿಸಿದರೆ?

ಹಲಸಿನ ಬೀಜದ ಸೇವನೆಯಿಂದ ಸಿಗೋ ಆರೋಗ್ಯ ಪ್ರಯೋಜನಗಳು

ಜೀರ್ಣಕ್ರಿಯೆ, ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿ: ಹಲಸಿನ ಬೀಜಗಳು ಫೈಬರ್‌ (Fiber)ನಲ್ಲಿ ಸಮೃದ್ಧವಾಗಿವೆ. ಹೀಗಾಗಿ ಇದು ಜೀರ್ಣಕ್ರಿಯೆ, ಚಯಾಪಚಯ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ಇದು ಚರ್ಮ (Skin) ಮತ್ತು ಕೂದಲನ್ನು ಆರೋಗ್ಯಕರವಾಗಿಸುತ್ತದೆ.

ದೇಹವನ್ನು ಶಕ್ತಿಯುತವಾಗಿರಿಸುತ್ತದೆ: ಹಲಸಿನ ಬೀಜಗಳಲ್ಲಿ ವಿಟಮಿನ್ (Vitamin) ಬಿ ಕಂಡುಬರುತ್ತದೆ. ಇದು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಮೆದುಳಿನ (Brain) ಕಾರ್ಯ ಮತ್ತು ಆರೋಗ್ಯಕರ ಜೀವಕೋಶಗಳನ್ನು ಸುಧಾರಿಸುತ್ತದೆ.

ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುತ್ತದೆ: ಹಲಸಿನ ಬೀಜಗಳು ಕಬ್ಬಿಣದಲ್ಲಿ ಸಮೃದ್ಧವಾಗಿವೆ, ಇದು ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದು ಹೆಚ್ಚಿನ ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ. ದೇಹದಲ್ಲಿ ಹೆಚ್ಚಿನ ಕೆಂಪು ರಕ್ತಕಣಗಳಿರುವುದು ವ್ತಕ್ತಿಯ ಯಾವಾಗಲೂ ಆರೋಗ್ಯವಾಗಿರಲು ನೆರವಾಗುತ್ತದೆ. 

ಪ್ರೋಟೀನ್ ಸಮೃದ್ಧವಾಗಿದೆ: ನೀವು ಆಗಾಗ ಹಸಿವಿನಿಂದ ಬಳಲುತ್ತಿದ್ದರೆ ಮತ್ತು ನೀವು ಕೆಲವು ಆರೋಗ್ಯಕರ ಆಯ್ಕೆಗಳನ್ನು ಹುಡುಕುತ್ತಿದ್ದರೆ, ನೀವು ಹಲಸಿನ ಬೀಜಗಳನ್ನು ತಿನ್ನಬಹುದು. ಇದರಲ್ಲಿ ಸಾಕಷ್ಟು ಪ್ರೊಟೀನ್ (Protein) ಇದ್ದು ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ. ಇದರಿಂದ ಹಸಿವಿನಿಂದ ಆಗಾಗ ಜಂಕ್‌ಫುಡ್ ತಿನ್ನುವ ಅಭ್ಯಾಸವೂ ತಪ್ಪುತ್ತದೆ. 

ಮಾಗಿದ ಹಲಸಿನ ಹಣ್ಣಿನ ಆರೋಗ್ಯ ಲಾಭಗಳು ಹಲವು, ಸಿಕ್ಕಿದ್ರೆ ಬಿಡ್ಬೇಡಿ!

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಪ್ರತಿದಿನ ಹರಡುವ ಹೊಸ ವೈರಸ್ ವಿರುದ್ಧ ಹೋರಾಡಲು ದೇಹದ ರೋಗನಿರೋಧಕ ಶಕ್ತಿ (Immunity power)ಯನ್ನು ಹೆಚ್ಚಿಸುವುದು ಬಹಳ ಮುಖ್ಯ. ಈ ಅಗತ್ಯವನ್ನು ಪೂರೈಸುವಲ್ಲಿ, ಹಲಸಿನ ಬೀಜಗಳು ನಿಮಗೆ ಪ್ರಯೋಜನಕಾರಿಯಾಗಿದೆ. ಕೊರೋನಾ, ಮಂಕಿಪಾಕ್ಸ್ ಮೊದಲಾದ ವೈರಸ್‌ಗಳ ಕಾಟ ಹೆಚ್ಚಾಗಿರುವ ಸಂದರ್ಭದಲ್ಲಿ ನೀವು ಸುಲಭವಾಗಿ ಸಿಗುವ ಹಲಸಿನ ಬೀಜಗಳನ್ನು ತಿಂದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. 

ಹಲಸಿನ ಬೀಜವನ್ನು ತಿನ್ನುವುದು ಹೇಗೆ ?
ಹಲಸಿನ ಬೀಜ ಆರೋಗ್ಯಕ್ಕೆ ಉತ್ತಮ ಅನ್ನೋದೇನೋ ನಿಜ. ಆದ್ರೆ ಇದನ್ನು ತಿನ್ನೋದು ಹೇಗೆ ಎಂಬ ಬಗ್ಗೆ ಹಲವರಲ್ಲಿ ಸಂದೇಹವಿರಬಹುದು. ಆ ಬಗ್ಗೆ ತಿಳಿಸಿ ಕೊಡ್ತೀವಿ. ಹಲಸಿನ ಬೀಜವನ್ನು ಹಲವು ರೀತಿಯಲ್ಲಿ ತಿನ್ನಬಹುದು. ಹಲಸಿನ ಬೀಜಗಳನ್ನು 10-15 ನಿಮಿಷಗಳ ಕಾಲ ಕುದಿಸಿದ ನಂತರ, ಸಿಪ್ಪೆ ತೆಗೆದು ತಿನ್ನಲು ಚೆನ್ನಾಗಿರುತ್ತದೆ. ಹೀಗೆ ಮಾತ್ರವಲ್ಲದೆ ಹಲಸಿನ ಕಾಳುಗಳನ್ನು ಉಪ್ಪಿನೊಂದಿಗೆ ತುಪ್ಪದಲ್ಲಿ ಹುರಿದು ಸಹ ತಿನ್ನಬಹುದು. ಇವಿಷ್ಟೇ ಅಲ್ಲದೆ, ಹಲಸಿನ ಬೀಜದ ಪಲ್ಯ, ಹಲಸಿನ ಬೀಜದ ಹೋಳಿಗೆಯನ್ನೂ ಮಾಡಿ ಸವಿಯಬಹುದು.

Follow Us:
Download App:
  • android
  • ios