ಜುಲೈ.4 ಹಲಸು ದಿನ: ಹಲಸೆಂಬ ಹಣ್ಣಿನ ಲೋಕದ ಸಾಮ್ರಾಟ

ಇಂದು (ಜುಲೈ 4) ಹಲಸಿನ ಹಣ್ಣಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದ ವಿಶೇಷವಾಗಿ ಈ ಹಣ್ಣನಿಂದ ಯಾವೆಲ್ಲಾ ಖಾದ್ಯಗಳನ್ನ ಮಾಡಬಹುದು ಎನ್ನುವ ವಿಶೇಷ ಲೇಖನ ಈ ಕೆಳಗಿನಂತಿದೆ ನೋಡಿ,

special of jack fruit day On July 4th

- ರಾಘವೇಂದ್ರ ಅಗ್ನಿಹೋತ್ರಿ

ಅನೂಹ್ಯ ಸ್ವಾದ, ಆಕರ್ಷಕ ಬಣ್ಣ, ಅಪ್ರತಿಮ ಸುವಾಸನೆಯಿಂದ ಅಬಾಲವೃದ್ಧರನ್ನೂ ಹಲಸು ತನ್ನೆಡೆಗೆ ಸೆಳೆಯುತ್ತದೆ. ಅನಾದಿಕಾಲದಿಂದಲೂ ಹಲಸು ಬಳಕೆಯಲ್ಲಿದೆ. ಆದರೆ ಹಣ್ಣುಗಳ ಸಾಮ್ರಾಟನಾಗಿಯೂ ವಿದೇಶಿ ಹಣ್ಣುಗಳ ನಡುವೆ ನಮ್ಮ ಹಳ್ಳಿ ಹಲಸು ನಮ್ಮ ಊರಲ್ಲಿ, ದೇಶದಲ್ಲಿ  ಅವಜ್ಞೆಗೊಳಗಾಗಿದೆ. ಅದರ  ಬೃಹದಾಕಾರವೇ ಅದಕ್ಕೆ ಮುಳುವಾಗಿದೆ ಎಂದರೆ ತಪ್ಪಲ್ಲ.  ವಿಪರ್ಯಾಸವೆಂದರೆ ಭಾರತದ ಮೂಲದ ಈ ಹಣ್ಣು ಈಗ ವಿದೇಶಗಳಲ್ಲಿ ಜನಪ್ರಿಯತೆ ಗಳಿಸುತ್ತಿದೆ.

#JackFruitDay ತ್ವಚೆಗೂ ಮದ್ದು, ಲೈಂಗಿಕ ಸಮಸ್ಯೆಗೂ ರಾಮಬಾಣ!

ಹಸಿವು ನೀಗಿಸಲು, ಜೇಬು ತುಂಬಿಸಲು ಹಲಸು ಇಂದು  ಸಹಕಾರಿಯಾಗಿದೆ. ಎಷ್ಟೋ ಜನರು ಮರೆತಿದ್ದ ಬಹುಪಯೋಗಿ ಹಲಸನ್ನು ಮತ್ತೆ ಬೆಳೆಯಲು ಆರಂಭಿಸಿದ್ದಾರೆ. ವಾಣಿಜ್ಯಿಕವಾಗಿ ಬೆಳೆದು ಕೈತುಂಬಾ ಗಳಿಸುತ್ತಿದ್ದಾರೆ. ಹಳ್ಳಿ ಹಲಸು ದೇಶ, ವಿದೇಶಗಳಲ್ಲಿ ತನ್ನ ಪರಿಮಳ ಬೀರುತ್ತಿದೆ. ಮಲೇಷ್ಯಾದಲ್ಲಿ ಬೆಳೆದ ಹಲಸಿಗೆ ಅಮೆರಿಕಾ, ಬ್ರಿಟನ್ ಗಳಲ್ಲಿ ಮಾರುಕಟ್ಟೆ ಸಿಗುತ್ತಿದೆ.

ಹಿತ್ತಲ ಹಲಸೇ ಮದ್ದು
special of jack fruit day On July 4th

ಒಂದು ಹಲಸು ಅದರ ಪ್ರಯೋಜನ ಮಾತ್ರ ನೂರಾರು. ಹಲಸಿನ ಎಲೆ, ಎಳೆಹಲಸಿನ ಕಾಯಿ (ಗುಜ್ಜೆ), ಹಣ್ಣು, ಬೀಜ ಹೀಗೆ ಪ್ರತಿಯೊಂದರಲ್ಲೂ ಒಂದಲ್ಲ ಒಂದು ಔಷಧೀಯ ಗುಣವಿದೆ. ಇತ್ತೀಚಿನ ಸಂಶೋಧನೆ ಪ್ರಕಾರ ಹಲಸಿನಲ್ಲಿ ಹಲವು ಔಷಧೀಯ ಗುಣಗಳಿವೆ ಎಂಬುದು ಸಾಬೀತಾಗಿದೆ. ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಮೊದಲಾದ ರೋಗಗಳನ್ನೂ ತಡೆಗಟ್ಟುವ ಔಷಧೀಯ ಗುಣ ಹಲಸಲ್ಲಿದೆ ಎಂದು ತಿಳಿದು ಬಂದಿದ್ದು, ಇನ್ನಷ್ಟು ಸಂಶೋಧನೆಗಳು ನಡೆಯುತ್ತಿದೆ.

ಹೇಗೆ ಬಹುಪಯೋಗಿ?
special of jack fruit day On July 4th

ಹಲಸು ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಲ್ಲಿದೆ. ತರಕಾರಿಯೂ ಹೌದು, ಹಣ್ಣು ಹೌದು. ಮಾಂಸದ ರೂಪದಲ್ಲಿ ಅಂದರೆ ಪರ್ಯಾಯ ಮಾಂಸ ರೂಪದಲ್ಲಿ (substitute meet) ಉತ್ತರ ಭಾರತದ ಹೊಟೇಲ್ ಗಳಲ್ಲಿ ಬಳಕೆ ಯಲ್ಲಿದೆ.  ಎಳೆ ಹಲಸು ಉಪ್ಪಿನಕಾಯಿ, ಫ್ರೈ, ತರಕಾರಿಯಾಗಿ ಪದಾರ್ಥಕ್ಕೆ ಬಳಕೆಯಾಗುತ್ತೆ.  ಬಳಿಕ ಬೆಳೆದ ಹಲಸನ್ನು ಮತ್ತೆ  ಚಿಪ್ಸ್, ಹಪ್ಪಳ, ದೋಸೆ, ಪೋಡಿ ಮಾಡಿ ಚಪ್ಪರಿಸಬಹುದು. 

ಹಣ್ಣಾದ ಬಳಿಕವೂ ಬಹುರೂಪಿ. ಜ್ಯೂಸ್, ಪಾಯಸ, ಇಡ್ಲಿ, ದೋಸೆ, ಗಟ್ಟಿ, ಪತ್ತೋಳಿ, ಮಾಂಬಳ, ಮುಳಕ (ಸಟ್ಟೇವು), ಗೆಣಸಲೆ, ಬನ್ಸ್, ಶಿರಾ, ಹೋಳಿಗೆ ಹೀಗೆ ಹತ್ತು ಹಲವು  ಬಗೆಯ ಖಾದ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.  ಹಲಸಿನ ಬೀಜವನ್ನು ಬೀಸಾಡುವಂತಿಲ್ಲ. ಅದನ್ನೂ ವಿವಿಧ ಪದಾರ್ಥ ಹಾಗೂ ಖಾದ್ಯ ತಯಾರಿಸಲು ಸಾಧ್ಯ. ಬೀಜವನ್ನು ಬಳಸಿ ಚಾಕೊಲೇಟ್ ತಯಾರಿಸಬಹುದು ಎಂದು ಸಂಶೋಧಿಸಿದ್ದಾರೆ.
 
ಹೀಗೆ ಬಹುಪಯೋಗಿ ಹಲಸು ಕಲಿಯುಗದ ಕಲ್ಪವೃಕ್ಷವೇ ಹೌದು. ಬಳಕೆಯ ವಿಧಾನ ಅರಿಯಬೇಕಿದೆ. ಆಗ ಸದ್ಬಳಕೆ ಸಾಧ್ಯ. ಈಗಿನ ಸಮಸ್ಯೆ ಎಂದರೆ ಬೃಹದಾಕಾರದ ಹಣ್ಣು, ಅದನ್ನ ಹೇಗೆ ಸಂಸ್ಕರಿಸಿಸುವುದು ಎಂಬುದಾಗಿದೆ. ಎಳೆ ಹಲಸು ರೆಡಿ ಟು ಕುಕ್ ರೂಪದಲ್ಲಿ, ಹಣ್ಣು ರೆಡಿ ಟು ಈಟ್ ರೂಪದಲ್ಲಿ ದೊರೆತರೆ ಹಲಸಿಗೆ ಉತ್ತಮ ಬೇಡಿಕೆ ಇದೆ. ಬೇಡಿಕೆಗೆ ತಕ್ಕ ಪೂರೈಕೆಯಾದಲ್ಲಿ ನಿಸ್ಸಂದೇಹವಾಗಿ ಹಲಸು ತನ್ನ ರಾಜ ಮರ್ಯಾದೆಯನ್ನು ಮರಳಿ ಪಡೆಯುತ್ತದೆ.

Latest Videos
Follow Us:
Download App:
  • android
  • ios