ಹಬ್ಬಗಳ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸದೆ ರುಚಿಕರವಾದ ಅಡುಗೆ ಮಾಡುವುದು ಒಂದು ಸವಾಲು. ಪೌಷ್ಟಿಕತಜ್ಞೆ ವಂಶಿಕಾ ಖುರಾನಾ ಅವರು ಹಂಚಿಕೊಂಡಿರುವ ಬಂಗಾಳಿ ಶೈಲಿಯ 'ಪನೀರ್ ಭಾಪಾ' ಈ ಸಮಸ್ಯೆಗೆ ಅತ್ಯುತ್ತಮ ಪರಿಹಾರವಾಗಿದೆ. ಪ್ರೋಟೀನ್‌ಯುಕ್ತ ಈ ತಿನಿಸನ್ನು ಬಾಳೆ ಎಲೆಯಲ್ಲಿ ಆವಿಯಲ್ಲಿ ಬೇಯಿಸಿ ಸುಲಭವಾಗಿ ತಯಾರಿಸಬಹುದು.

ಹಿಂದೂಗಳ ಹಬ್ಬಗಳಲ್ಲಿ ಬಹುತೇಕ ಮನೆಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ವ್ಯರ್ಜ್ಯ. ಇವುಗಳು ಇಲ್ಲದೇ ಅಡುಗೆ ಮಾಡುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡೇ ಬಂದಿದೆ. ಆದರೆ ಹಬ್ಬ ಎಂದರೆ, ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು, ನಗು ಮತ್ತು ರುಚಿಕರವಾದ ಆಹಾರದ ಮೂಲಕ ಬೆಸೆಯುವುದು ಅಗತ್ಯ. ಹಬ್ಬಗಳಲ್ಲಿ ಸಿಹಿ ತಿನಿಸುಗಳು ಇದ್ದೇ ಇರುತ್ತವೆ. ಅದರ ಹೊರತಾಗಿಯೂ ಮಾಸಪೂರ್ತಿ ಹಬ್ಬ ಇದ್ದಾಗ, ಇಲ್ಲವೇ ವಾರಗಟ್ಟಲೆ ಈರುಳ್ಳಿ-ಬೆಳ್ಳುಳ್ಳಿ ತಿನ್ನಬಾರದು ಎಂದಾದಾಗ ಇದರ ಹೊರತಾಗಿ ಇರುವ ಟೇಸ್ಟಿ ಟೇಸ್ಟಿ ಅಡುಗೆ ತಲೆಗೆ ಹೊಳೆಯುವುದೇ ಇಲ್ಲ. ಇವೆರಡು ಇಲ್ಲದೇ ಏನು ಮಾಡುವುದು ಎನ್ನುವ ಚಿಂತೆ. ಅದರಲ್ಲಿಯೂ ಮಕ್ಕಳಿರುವ ಮನೆಗಳಲ್ಲಿ ಬಾಯಿ ಚಪ್ಪರಿಸುವ ಅಡುಗೆ ಬೇಕು ಎನ್ನುತ್ತಾರೆ.

ಹಾಗಿದ್ದರೆ ಈರುಳ್ಳಿ-ಬೆಳ್ಳುಳ್ಳಿ ಇಲ್ಲದೆಯೇ ಅದೇ ಅದೇ ತಿಂಡಿ-ತಿನಿಸು ಮಾಡಿ ಬೋರ್​ಆಗಿದ್ಯಾ? ಹಾಗಿದ್ರೆ ಈ ಬಾರಿ ಬಾಯಿ ಚಪ್ಪರಿಸುವ ಬಂಗಾಳಿ ಶೈಲಿಯ ಪನೀರ್ ಭಾಪಾ ಮಾಡಿ ನೋಡಿ. ಒಮ್ಮೆ ಮಾಡಿದ್ರೆ ಮತ್ತೆ ಮತ್ತೆ ತಿನ್ನಬೇಕು ಎನ್ನುವ ಹಂಬಲ ಉಂಟಾಗುವ ಟೇಸ್ಟಿ ಟೇಸ್ಟಿ ತಿನಿಸು ಇದಾಗಿದೆ. ಮುಂಬೈ ಪೌಷ್ಟಿಕತಜ್ಞೆ ವಂಶಿಕಾ ಖುರಾನಾ ನಿಮಗಾಗಿ ಅದ್ಭುತ ರೆಸಿಪಿ ರೆಡಿಮಾಡಿ ಕೊಟ್ಟಿದ್ದಾರೆ. ವಂಶಿಕಾ ಅವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬಂಗಾಳಿ ಶೈಲಿಯ ಪನೀರ್ ಭಾಪಾ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ, ಇದನ್ನು ತಯಾರಿಸುವುದು ತುಂಬಾ ಸುಲಭ. ಪ್ರೋಟೀನ್‌ಯುಕ್ತ ಈ ತಿನಿಸಿಗೆ ಈರುಳ್ಳಿ, ಬೆಳ್ಳುಳ್ಳಿ ಮತ್ತು ಗರಂ ಮಸಾಲಾ ಬೇಡವೇ ಬೇಡ. ಇದೇ ಬಂಗಾಳಿ ಶೈಲಿಯ ಪನೀರ್​ ಭಾಪಾ

ಪನೀರ್ ಭಾಪಾ: ಬೇಕಾಗುವ ಪದಾರ್ಥಗಳು

  • 200 ಗ್ರಾಂ ಕಡಿಮೆ ಕೊಬ್ಬಿನ ಪನೀರ್ (ಟೋನ್ಡ್ ಹಾಲಿನೊಂದಿಗೆ ತಯಾರಿಸಬಹುದು)
  • 250 ಗ್ರಾಂ ಮೊಸರು
  • 2 ಚಮಚ ಗಸಗಸೆ
  • ಚಮಚ ಕಪ್ಪು ಸಾಸಿವೆ
  • 1 ಚಮಚ ಹಳದಿ ಸಾಸಿವೆ
  • 7–8 ಗೋಡಂಬಿ
  • ¼ ಕಪ್ ತುರಿದ ತೆಂಗಿನಕಾಯಿ
  • 2 ಹಸಿರು ಮೆಣಸಿನಕಾಯಿ
  • 1/2 ಚಮಚ ಅರಿಶಿನ ಪುಡಿ
  • 1/2 ಚಮಚ ಸಾಸಿವೆ ಎಣ್ಣೆ
  • ರುಚಿಗೆ ತಕ್ಕಷ್ಟು ಉಪ್ಪು
  • ಆವಿಯಲ್ಲಿ ಬೇಯಿಸಲು ಬಾಳೆ ಎಲೆ

ಪನೀರ್ ಭಾಪಾ: ಹೇಗೆ ಮಾಡುವುದು

-ಬಂಗಾಳಿ ಶೈಲಿಯ ಪನೀರ್ ಭಾಪಾವನ್ನು ತಯಾರಿಸಲು, ಮೊದಲು ನೀವು ಗಸಗಸೆ, ಕಪ್ಪು ಸಾಸಿವೆ ಮತ್ತು ಹಳದಿ ಸಾಸಿವೆ ಬೀಜಗಳನ್ನು ಗೋಡಂಬಿಯೊಂದಿಗೆ ಸುಮಾರು 15 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿಡಬೇಕು. ಅವು ಮೃದುವಾದ ನಂತರ, ಅವುಗಳನ್ನು ಬ್ಲೆಂಡರ್‌ಗೆ ವರ್ಗಾಯಿಸಿ. ನಂತರ, ಸ್ವಲ್ಪ ನೀರಿನೊಂದಿಗೆ ಫ್ರೆಷ್​ ತುರಿದ ತೆಂಗಿನಕಾಯಿಯನ್ನು ಸೇರಿಸಿ ಎಲ್ಲವನ್ನೂ ನಯವಾದ ಮತ್ತು ದಪ್ಪ ಪೇಸ್ಟ್ ಆಗಿ ಮಿಶ್ರಣ ಮಾಡಿ.

-ಮುಂದಿನ ಹಂತದಲ್ಲಿ, ಪೇಸ್ಟ್ ಅನ್ನು ಬೇರೆ ಬಟ್ಟಲಿಗೆ ಸುರಿಯಿರಿ. ಇದಕ್ಕೆ ಮೊಸರು, ಅರಿಶಿನ ಪುಡಿ ಮತ್ತು ಉಪ್ಪನ್ನು ಸೇರಿಸಿ. ಏಕರೂಪವಾಗಿ ಮಿಶ್ರಣ ಮಾಡಿ. ಮುಂದೆ, ಪನೀರ್ ತುಂಡುಗಳು, ಹಸಿರು ಮೆಣಸಿನಕಾಯಿಗಳು ಮತ್ತು ಸಾಸಿವೆ ಎಣ್ಣೆಯನ್ನು ಸೇರಿಸಿ, ಮತ್ತು ಪನೀರ್ ಪೇಸ್ಟ್‌ನಿಂದ ಸಮವಾಗಿ ಲೇಪವಾಗುವವರೆಗೆ ಮಿಶ್ರಣವನ್ನು ನಿಧಾನವಾಗಿ ಬೆರೆಸಿ.

-ಅದರ ನಂತರ, ಒಂದು ಸ್ಟೀಲ್​ ಪಾತ್ರೆಯನ್ನು ತೆಗೆದುಕೊಂಡು ಬಾಳೆ ಎಲೆಯಿಂದ ಸಾಲಾಗಿ ಇರಿಸಿ, ನಂತರ ಪನೀರ್ ಮಿಶ್ರಣವನ್ನು ಅದಕ್ಕೆ ವರ್ಗಾಯಿಸಿ. ಪಾತ್ರೆಯನ್ನು ಮುಚ್ಚಳದಿಂದ ಮುಚ್ಚಿ ಮತ್ತು ಪನೀರ್ ಸರಿಯಾಗಿ ಬೇಯುವವರೆಗೆ ಮತ್ತು ಮೃದುವಾಗುವವರೆಗೆ 20 ನಿಮಿಷಗಳ ಕಾಲ ಉಗಿಯಲ್ಲಿ ಬೇಯಿಸಿ. ಮತ್ತು ಅಷ್ಟೆ. ನಿಮ್ಮ ಬಂಗಾಳಿ ಶೈಲಿಯ ಪನೀರ್ ಭಾಪಾ ಬಿಸಿಯಾಗಿ ಬಡಿಸಲು ಸಿದ್ಧವಾಗಿದೆ ಮತ್ತು ಹಬ್ಬದ ಊಟಕ್ಕೆ ಬಿಸಿ ಬೇಯಿಸಿದ ಅನ್ನದೊಂದಿಗೆ ಆನಂದಿಸಿ.