ಬಕ್ರೀದ್ ದಿನ ಸಸ್ಯಾಹಾರಿವೆಂದ ಬ್ಲಾಗರ್‌ಗೆ ಸ್ವರಾ ಭಾಸ್ಕರ್ ಆಕ್ಷೇಪ: ನಟಿಗೆ ಇನ್ನೂ ನಿಂತಿಲ್ಲ ನೆಟ್ಟಿಗರ ಕ್ಲಾಸ್!
ನಟಿ ಸ್ವರ ಭಾಸ್ಕರ್ ಸೋಮವಾರ ಸಸ್ಯಾಹಾರಿ ಎಂಬ ಹೆಮ್ಮೆ ವ್ಯಕ್ತಪಡಿಸಿದ ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡು ಸುದ್ದಿಯಾದರು. ಆದರೆ, ಇದು ಅವರಿಗೇ ಉಲ್ಟಾ ಹೊಡೆದಿದ್ದು, ನೆಟಿಜನ್ಸ್ ಸ್ವರ ಭಾಸ್ಕರ್‌ಗೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.
ತನ್ನ ರಾಜಕೀಯ ಮತ್ತು ಸಾಮಾಜಿಕ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿರುವ ಸ್ವರಾ ಭಾಸ್ಕರ್, ಸಸ್ಯಾಹಾರಿ ಎಂಬ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಕ್ಕಾಗಿ ಆಹಾರ ಬ್ಲಾಗರ್ ಒಬ್ಬರನ್ನು ಟೀಕಿಸಿದ್ದಾರೆ. ಆದರೆ, ಅವರನ್ನು ಟ್ರೋಲ್ ಮಾಡಲು ಹೋದ ನಟಿಗೆ ಅದೇ ಪೋಸ್ಟ್‌ನಲ್ಲಿ ನೆಟಿಜನ್ಸ್ ತಿರುಗೇಟು ನೀಡಿದ್ದಾರೆ.
ಭಾನುವಾರ, ಬಕ್ರೀದ್ ಹಬ್ಬದ ಒಂದು ದಿನ ಮುಂಚಿತವಾಗಿ, ನಳಿನಿ ಉನಗರ್ ಎಂಬ ಹೆಸರಿನ ಆಹಾರ ಬ್ಲಾಗರ್ Xನಲ್ಲಿ ಟೋಫು ಭಕ್ಷ್ಯದೊಂದಿಗೆ ತರಕಾರಿ ಫ್ರೈಡ್ ರೈಸ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ, 'ನಾನು ಸಸ್ಯಾಹಾರಿ ಎನ್ನಲು ಹೆಮ್ಮೆ ಪಡುತ್ತೇನೆ. ನನ್ನ ತಟ್ಟೆಯು ಕಣ್ಣೀರು, ಕ್ರೌರ್ಯ ಮತ್ತು ಅಪರಾಧದಿಂದ ಮುಕ್ತವಾಗಿದೆ' ಎಂದು ಶೀರ್ಷಿಕೆ ನೀಡಿದ್ದರು.
ಇದಕ್ಕೆ ಸ್ವರ ಫುಲ್ ಗರಂ ಆಗಿದ್ದು, 'ಈ ಸಸ್ಯಾಹಾರಿಗಳ ಸ್ವಯಂ-ಸದಾಚಾರ ನನಗೆ ಅರ್ಥವಾಗುವುದಿಲ್ಲ. ನಿಮ್ಮ ಸಂಪೂರ್ಣ ಆಹಾರಕ್ರಮವು ಕರುವಿಗೆ ಅದರ ತಾಯಿಯ ಹಾಲನ್ನು ನಿರಾಕರಿಸುತ್ತದೆ. ಬಲವಂತವಾಗಿ ಹಸುಗಳನ್ನು ಬಸಿರು ಮಾಡಿಸಿ, ಅವುಗಳನ್ನು ಅವುಗಳ ಮಕ್ಕಳಿಂದ ಬೇರ್ಪಡಿಸಿ ಹಾಲು ಕದಿಯಲಾಗುತ್ತದೆ. ನೀವು ಬೇರಿನ ಆಹಾರ ತಿನ್ನುತ್ತೀರ. ಇದರಿಂದ ಗಿಡಗಳ ಮೂಲವೇ ನಾಶವಾಗುತ್ತದೆ' ಎಂದಿದ್ದಾರೆ.
ತಂದೆ ಮಾಣಿ, ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ 3 ರೆಸ್ಟೋರೆಂಟ್‌ಗಳಿಗೂ ಈಗ ಸುನೀಲ್ ಶೆಟ್ಟಿ ಮಾಲೀಕ!
ಸ್ವರಾ ಭಾಸ್ಕರ್ ಸಸ್ಯಾಹಾರದ ಬಗ್ಗೆ ಮಾತನಾಡಿದ್ದು ಸುದ್ದಿಯೇನೋ ಆಯ್ತು. ಆದರೆ, ಕೆಲವೇ ಗಂಟೆಗಳಲ್ಲಿ ಸ್ವರಾ ಪೋಸ್ಟಿಗೆ ನೆಟಿಜನ್ಸ್‌ಗಳು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳಕೆದಾರರೊಬ್ಬರು ಕಾಮೆಂಟ್ ಮಾಡಿ, 'ಅವರು ನಿಮ್ಮನ್ನು ಟ್ಯಾಗ್ ಮಾಡದಿದ್ದರೂ ಉರಿದು ಬೀಳ್ತಾ ಇದೀರಿ ಅಂದ್ರೆ ತಪ್ಪಿತಸ್ಥ ಭಾವನೆ ನಿಮ್ಮೊಳಗೆ ಇದೆ ಎಂದಾಯ್ತು' ಎಂದಿದ್ದಾರೆ.
ಮತ್ತೊಬ್ಬರು ಕಾಮೆಂಟ್ ಮಾಡಿ ನಿಮಗೆ 'ಹಾಲನ್ನು ಪಡೆಯಲು ಹಸುವನ್ನೋ, ಕರುವನ್ನೋ ಬಲಿ ಕೊಡಬೇಕಾಗಿಲ್ಲ. ಇದನ್ನು ಬುದ್ದಿಜೀವಿಗಳೆಂದು ತಮ್ಮನ್ನೇ ಕರೆದುಕೊಳ್ಳುವವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎನಿಸುತ್ತದೆ. ಇಂದು ಹಸುಗಳನ್ನು ಅತ್ಯಂತ ಪ್ರೀತಿಯಿಂದ ಮತ್ತು ತುಂಬಾ ಉತ್ತಮವಾಗಿ ನೋಡಿಕೊಳ್ಳಲಾಗ್ತಿದೆ' ಎಂದಿದ್ದಾರೆ. ಮೂರನೇ ಬಳಕೆದಾರರು, 'ಕೆಲವರು ತಮ್ಮ ನಂಬಿಕೆಯಿಂದ ಎಷ್ಟು ಕುರುಡಾಗಿರುತ್ತಾರೆಂದರೆ ಅವರು ಯಾವುದನ್ನು ಬೇಕಾದರೂ ಅದರ ವಿರುದ್ಧವಾಗಿ ಮಾತಾಡಬಲ್ಲೆವು ಎಂದುಕೊಂಡಿರುತ್ತಾರೆ.ಅಂಥವರಿಗೆ ಪ್ರತಿಕ್ರಿಯೆ ಕೊಡದೆ ಕಡೆಗಣಿಸುವುದೇ ಉತ್ತಮ' ಎಂದಿದ್ದಾರೆ.
ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಹಠಾತ್ ಕಿವುಡುತನ! ಜೋರಾಗಿ ಸಂಗೀತ ಕೇಳಬೇಡಿ ಎಂದು ವಿನಂತಿ
'ಮಾಂಸ ತಿನ್ನುವುದು ಸಸ್ಯಾಹಾರವೂ ಒಂದೇ ಎಂದು ವಾದಿಸುವವರು, ಮನುಷ್ಯರ ಮಾಂಸಕ್ಕೂ ಚಿಕನ್‌ಗೂ ವ್ಯತ್ಯಾಸವಿಲ್ಲ ಎನ್ನುತ್ತಾರೆಯೇ? ಕ್ರೌರ್ಯದ ದೃಷ್ಟಿಯಲ್ಲಿ ಅವೆರಡೂ ಹೇಗೆ ಬೇರೆಯೋ ಇದೂ ಹಾಗೆಯೇ' ಎಂದು ತಿರುಗೇಟು ನೀಡಿದ್ದಾರೆ.
2023ರ ಜನವರಿಯಲ್ಲಿ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ರಾಜಕಾರಣಿ ಮತ್ತು ಕಾರ್ಯಕರ್ತ ಫಹಾದ್ ಅಹ್ಮದ್ ಅವರೊಂದಿಗೆ ವಿವಾಹವಾಗಿದ್ದ ಸ್ವರಾ ಭಾಸ್ಕರ್ ಬಕ್ರೀದ್ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ಸೆಪ್ಟೆಂಬರ್ 2023 ರಲ್ಲಿ ದಂಪತಿಗಳು ರಾಬಿಯಾ ಎಂಬ ಹೆಣ್ಣು ಮಗುವನ್ನು ಪಡೆದಿದ್ದಾರೆ.