Mutton: ಸಾಫ್ಟ್ ಆಗೋಕೆ ಟಿಪ್ಸ್: ನಿಮ್ಮ ಮಟನ್ ಗಟ್ಟಿಯಾಗಿದೆಯಾ? ಮಟನ್ ಬೆಣ್ಣೆಯಂತೆ ಮೃದುವಾಗಲು ಕೆಲವು ಟಿಪ್ಸ್ ಮತ್ತು ಟ್ರಿಕ್ಸ್ ಇಲ್ಲಿವೆ. ಸರಿಯಾದ ಮ್ಯಾರಿನೇಷನ್‌ನಿಂದ ಹಿಡಿದು ಅಡುಗೆ ಮಾಡುವ ವಿಧಾನದವರೆಗೆ, ಈ ಟಿಪ್ಸ್ ನಿಮ್ಮ ಮಟನ್ ಅನ್ನು ಅದ್ಭುತವಾಗಿಸುತ್ತದೆ.

ಅಡುಗೆ ಮಾಡೋದು ಒಂದು ಕಲೆ ಅಂತಾರೆ ಅದು ನಿಜ. ರುಚಿಯನ್ನು ಸರಿಪಡಿಸಲು ಸರಿಯಾದ ಟೆಕ್ನಿಕ್ ಬೇಕು. ಒಂದು ಟೆಕ್ನಿಕ್ ಆಹಾರವನ್ನು ರುಚಿಯಾಗಿಸಬಹುದುದ ಅಥವಾ ಹಾಳು ಮಾಡಬಹುದು. ಎಷ್ಟೋ ಸಲ ಮಟನ್ ಬೇಯಿಸುವಾಗ ಇಂತಹದ್ದೇ ದೊಡ್ಡ ತಪ್ಪುಗಳಾಗಿ ಇಡೀ ಮಟನ್ ಕೆಟ್ಟು ಹೋಗುತ್ತದೆ. ನೀವು ಮಟನ್ ಅನ್ನು ಮೃದುವಾಗಿ ಮಾಡಲು ಸಾಧ್ಯವಾಗದಿದ್ದರೆ, ನಿಮಗೆ ಆ ಟೆಕ್ನಿಕ್ ಗೊತ್ತಿಲ್ಲವೆಂದೇ ಅರ್ಥ. ಅಂಥ ಟೆಕ್ನಿಕ್ ಮಿಸ್ ಮಾಡಿಕೊಂಡಿದ್ದೀರಿ ಎಂದೇ ಹೇಳಬಹುದು. ಯಾರೂ ಕೂಡ ಗಟ್ಟಿಯಾದ ಮಟನ್ ಅನ್ನು ತಮ್ಮ ಅತಿಥಿಗಳಿಗೆ ಬಡಿಸಲು ಇಷ್ಟಪಡುವುದಿಲ್ಲ. ಅದಕ್ಕೆ ನಾವು ನಿಮಗಾಗಿ ಕೆಲವು ಟಿಪ್ಸ್ ಮತ್ತು ಟ್ರಿಕ್ಸ್ ಇಲ್ಲಿ ಹೇಳುತ್ತೇವೆ. ಇದರಿಂದ ನಿಮ್ಮ ಮಟನ್ ಬಾಯಲ್ಲಿಟ್ಟರೆ ಕರಗುವಷ್ಟು ಮೃದುವಾಗುತ್ತದೆ.

ಮಟನ್ ಅನ್ನು ಮೃದುವಾಗಿಸಲು ಟಿಪ್ಸ್:

1. ಮಾಂಸವನ್ನು ಸರಿಯಾಗಿ ಕತ್ತರಿಸಿ 

ಇದು ನಿಮಗೆ ಮೊದಲೇ ಗೊತ್ತಿಲ್ಲದಿದ್ದರೆ, ನೀವು ಮಾಂಸವನ್ನು ಹೇಗೆ ಕತ್ತರಿಸುತ್ತೀರಿ ಎಂಬುದರ ಮೇಲೆ ಟೆಕ್ನಿಕ್ ಡಿಪೆಂಡ್ ಆಗಿರುತ್ತದೆ. ಮೃದುವಾದ ಸ್ಲೈಸ್‌ಗಾಗಿ ಮಾಂಸವನ್ನು ಸರಿಯಾಗಿ ಕತ್ತರಿಸಿ, ಇಲ್ಲದಿದ್ದರೆ ಅದು ಜಗಿಯಲು ಸಾಧ್ಯವಾಗುವುದಿಲ್ಲ. ಇದು ಮಾಂಸವನ್ನು ಮೃದುಗೊಳಿಸಲು ಮತ್ತು ಮ್ಯಾರಿನೇಡ್ ಮಾಡಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ: Mutton: ಮೇಕೆಗೂ ಕುರಿಗೂ ಏನು ವ್ಯತ್ಯಾಸ? ಎರಡರಲ್ಲಿ ಯಾವುದು ತಿನ್ನೋಕೆ ಒಳ್ಳೆಯದು?

2. ಮ್ಯಾರಿನೇಷನ್ ಸರಿಯಾಗಿ ಮಾಡಿ 

ಮಾಂಸವನ್ನು ಕನಿಷ್ಠ 2-3 ಗಂಟೆಗಳ ಕಾಲ ಮೊಸರು ಅಥವಾ ಪಪ್ಪಾಯಿಯ ಪೇಸ್ಟ್‌ನಲ್ಲಿ ಬಿಡಿ, ನಿಮ್ಮ ಹತ್ತಿರ ಸಾಕಷ್ಟು ಸಮಯವಿದ್ದರೆ, ಸುಮಾರು 6-7 ಗಂಟೆಗಳ ಕಾಲ ಬಿಡಿ. ಬೆಸ್ಟ್ ಕಚ್ಚಾ ಗೋಶ್ತ್ ಬಿರಿಯಾನಿ ಅಥವಾ ಗಲೌಟಿ ಕಬಾಬ್ ಮಾಡಲು, ಮಾಂಸವನ್ನು ರಾತ್ರಿಯಿಡೀ ಮ್ಯಾರಿನೇಡ್‌ನಲ್ಲಿ ಬಿಡಲಾಗುತ್ತದೆ. ಇನ್ನೊಂದು ಟ್ರಿಕ್ ಎಂದರೆ ಮೊಸರು, ಪಪ್ಪಾಯಿ, ಮಜ್ಜಿಗೆ ಅಥವಾ ನಿಂಬೆ ಅಥವಾ ಕಿವಿ ಹಣ್ಣುಗಳಂತಹ ಸಿಟ್ರಿಕ್ ಹಣ್ಣುಗಳನ್ನು ಉಪ್ಪು ಮತ್ತು ಕರಿಮೆಣಸಿನೊಂದಿಗೆ ಬೆರೆಸಿ ಬಳಸುವುದು, ಇದು ಮಾಂಸದ ಗಟ್ಟಿಯಾದ ಫೈಬರ್‌ಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಒಂದು ಒಳ್ಳೆಯ ಮ್ಯಾರಿನೇಡ್‌ನಲ್ಲಿರುವ ಆಸಿಡ್, ಮಾಂಸವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಫೈಬರ್ ಸ್ನಾಯುಗಳ ನಡುವಿನ ಕೊಲಾಜನ್ ಅನ್ನು ಒಡೆಯಲು ಸಹಾಯ ಮಾಡುತ್ತದೆ. ಈ ಫೈಬರ್‌ಗಳು ಒಡೆದ ನಂತರ, ಮಾಂಸ ಮೃದುವಾಗುತ್ತದೆ ಮತ್ತು ತಿನ್ನಲು ಸಿದ್ಧವಾಗುತ್ತದೆ.

3. ಅಡುಗೆ ಮಾಡುವ ಸರಿಯಾದ ವಿಧಾನ

ಮಟನ್ ಅನ್ನು ಮೃದುಗೊಳಿಸಲು ಒಂದು ವಿಧಾನವೆಂದರೆ ನಿಧಾನವಾಗಿ ಬೇಯಿಸುವುದು. ಕಡಿಮೆ ತಾಪಮಾನದಲ್ಲಿ 3 ಗಂಟೆಗಳಿಗಿಂತ ಹೆಚ್ಚು ಕಾಲ ಮಟನ್ ಅನ್ನು ನಿಧಾನವಾಗಿ ಬೇಯಿಸುವುದರಿಂದ ಅದು ಮೃದುವಾಗುತ್ತದೆ. ಅಡುಗೆಯ ಯುರೋಪಿಯನ್ ಶೈಲಿಯಲ್ಲಿ ಇದನ್ನು ಅನುಸರಿಸಲಾಗುತ್ತದೆ. ಗಟ್ಟಿಯಾದ ಫೈಬರ್‌ಗಳು, ಕೊಲಾಜನ್ ಮತ್ತು ಟಿಶ್ಯೂ ಹೋಗುತ್ತವೆ, ಇದರಿಂದ ಅದು ಮೃದುವಾಗುತ್ತದೆ.

ಇದನ್ನೂ ಓದಿ: ಚಿಕನ್ ಲಿವರ್ Vs ಮಟನ್ ಲಿವರ್: ಇವೆರೆಡರಲ್ಲಿ ಯಾವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು?

4. ಮಾಂಸಕ್ಕೆ ಉಪ್ಪು ಹಾಕಿ 

ನೀವು ಮಟನ್ ಅನ್ನು ಮೃದುಗೊಳಿಸಲು ಬಯಸದಿದ್ದರೆ ಉಪ್ಪು ಹಾಕಿ ಮತ್ತು ಅಡುಗೆ ಮಾಡುವ ಮೊದಲು ಸುಮಾರು ಒಂದು ಅಥವಾ ಎರಡು ಗಂಟೆಗಳ ಕಾಲ ಬಿಡಿ. ನಂತರ ಉಪ್ಪು ಹಾಕಿ ತೊಳೆಯಿರಿ ಮತ್ತು ನಂತರ ಅಡುಗೆ ಮಾಡಲು ಪ್ರಾರಂಭಿಸಿ. ಇದರಿಂದ ನಿಮ್ಮ ಮಟನ್ ಡಿಶ್ ಸಾಫ್ಟ್ ಆಗಿರುತ್ತದೆ.