Mutton: ಮೇಕೆಗೂ ಕುರಿಗೂ ಏನು ವ್ಯತ್ಯಾಸ? ಎರಡರಲ್ಲಿ ಯಾವುದು ತಿನ್ನೋಕೆ ಒಳ್ಳೆಯದು?
ಭಾನುವಾರ ಬಂತಂದ್ರೆ ಸಾಕು, ಬಹಳಷ್ಟು ಮನೆಗಳಲ್ಲಿ ಮಟನ್ ಮಾಡೋದು ಗ್ಯಾರಂಟಿ. ಈಗಂತೂ ಬರ್ಡ್ ಫ್ಲೂ ಸುದ್ದಿ ಹಬ್ಬಿರೋದ್ರಿಂದ ಚಿಕನ್ ಬದಲು ಮಟನ್ ಮಾರಾಟ ಜೋರಾಗಿದೆ. ಆದ್ರೆ ಮಟನ್ ಅಂದ್ರೆ ಮೇಕೆ ಮಾಂಸ ಮತ್ತೆ ಕುರಿ ಮಾಂಸ ಎರಡೂ ಇರುತ್ತೆ. ನೋಡೋಕೆ ಒಂದೇ ತರ ಇದ್ರೂ, ಈ ಎರಡರಲ್ಲೂ ಒಂದಷ್ಟು ವ್ಯತ್ಯಾಸಗಳಿವೆ. ಅಷ್ಟಕ್ಕೂ ಮೇಕೆ ಮತ್ತೆ ಕುರಿ ಮಾಂಸದ ಮಧ್ಯೆ ಇರೋ ವ್ಯತ್ಯಾಸಗಳೇನು? ಆರೋಗ್ಯಕ್ಕೆ ಯಾವುದು ಒಳ್ಳೇದು ಅಂತ ಈಗ ತಿಳ್ಕೊಳ್ಳೋಣ..

ಮೇಕೆ, ಕುರಿ ಎರಡರ ಮಾಂಸನೂ ನೋಡೋಕೆ ಒಂದೇ ತರ ಕಾಣ್ಸುತ್ತೆ. ಆದ್ರೆ ಈ ಎರಡರ ಮಧ್ಯೆ ವ್ಯತ್ಯಾಸ ಇರುತ್ತೆ. ಸಾಮಾನ್ಯವಾಗಿ ಜಾಸ್ತಿ ಜನ ಮೇಕೆ ಮಾಂಸಕ್ಕೆ ಇಷ್ಟಪಡ್ತಾರೆ. ಅಷ್ಟಕ್ಕೂ ಮೇಕೆ, ಕುರಿ ಮಾಂಸಗಳ ಮಧ್ಯೆ ಇರೋ ವ್ಯತ್ಯಾಸ ಏನು? ಇದ್ರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೇದು? ಕುರಿ, ಮೇಕೆ ಮಾಂಸಕ್ಕೆ ಮಧ್ಯೆ ಇರೋ ಮುಖ್ಯವಾದ ವ್ಯತ್ಯಾಸಗಳೇನು ಅಂತ ನೋಡೋಣ.
ಮೇಕೆ ಮಾಂಸ:
ಮೇಕೆ ಮಾಂಸನ ಲೀನ್ ಮೀಟ್ ಅಂತ ಹೇಳ್ತಾರೆ. ಇದ್ರಲ್ಲಿ ಕೊಬ್ಬಿನ ಅಂಶ ಕಮ್ಮಿ ಇರುತ್ತೆ. ಮೇಕೆ ಮಾಂಸದಲ್ಲಿ ಪ್ರೋಟೀನ್ ಜಾಸ್ತಿ ಇರುತ್ತೆ. ಇದ್ರಲ್ಲಿ ಕೊಬ್ಬಿನ ಅಂಶ ಕಮ್ಮಿ ಇರೋದ್ರಿಂದ ಹೃದಯ ಸಂಬಂಧಿತ ಸಮಸ್ಯೆಗಳು ಬರೋ ಚಾನ್ಸ್ ಕಮ್ಮಿ ಇರುತ್ತೆ. ಇನ್ನು ಮೇಕೆ ಮಾಂಸದಲ್ಲಿ ಐರನ್ ಅಂಶ ಜಾಸ್ತಿ ಇರುತ್ತೆ. ಇದು ರಕ್ತಹೀನತೆಯಿಂದ ಬಳಲುವವರಿಗೆ ತುಂಬಾನೇ ಉಪಯೋಗ ಆಗುತ್ತೆ. ಆದ್ರೆ ಮೇಕೆ ಮಾಂಸ ಸ್ವಲ್ಪ ಗಟ್ಟಿಯಾಗಿರುತ್ತೆ. ಬೇಯೋಕೆ ಜಾಸ್ತಿ ಟೈಮ್ ತಗೊಳ್ಳುತ್ತೆ.
ಇದನ್ನೂ ಓದಿ: ಚಿಕನ್ ಲಿವರ್ Vs ಮಟನ್ ಲಿವರ್: ಇವೆರೆಡರಲ್ಲಿ ಯಾವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು?
ಮಟನ್
ಕುರಿ ಮಾಂಸ:
ಮೇಕೆ ಮಾಂಸಕ್ಕೆ ಹೋಲಿಸಿದ್ರೆ ಕುರಿ ಮಾಂಸದಲ್ಲಿ ಕೊಬ್ಬು ಜಾಸ್ತಿ ಇರುತ್ತೆ. ಅದಕ್ಕೆ ಹೃದಯ ಸಂಬಂಧಿತ ಸಮಸ್ಯೆ ಇರೋರು, ಹಾರ್ಟ್ ಸ್ಟ್ರೋಕ್ ಬಂದಿರೋರು, ಸ್ಟಂಟ್ ಹಾಕಿಸಿಕೊಂಡಿರೋರು ಕುರಿ ಮಾಂಸಕ್ಕೆ ದೂರ ಇರೋದು ಒಳ್ಳೇದು. ಪ್ರೋಟೀನ್ ವಿಚಾರಕ್ಕೆ ಬಂದ್ರೆ ಈ ಎರಡರಲ್ಲೂ ಸಮಾನವಾದ ಪ್ರೋಟೀನ್ ಇರುತ್ತೆ. ಮೇಕೆ ಮಾಂಸಕ್ಕೆ ಹೋಲಿಸಿದ್ರೆ ಕುರಿ ಮಾಂಸದಲ್ಲಿ ಐರನ್ ಅಂಶ ಕಮ್ಮಿ ಇರುತ್ತೆ. ಕುರಿ ಮಾಂಸ ತುಂಬಾ ಸ್ಮೂತ್ ಆಗಿರುತ್ತೆ. ಬೇಗ ಬೇಯುತ್ತೆ. ಜೀರ್ಣ ಸಮಸ್ಯೆ ಇರೋರಿಗೆ ಕುರಿ ಮಾಂಸ ಬೆಸ್ಟ್ ಆಪ್ಷನ್ ಅಂತ ಹೇಳಬಹುದು.
ಇದನ್ನೂ ಓದಿ: ವಾರಕ್ಕೊಮ್ಮೆ ಮಟನ್ ಲಿವರ್ ತಿಂದ್ರೆ ಏನಾಗುತ್ತೆ? ಒಮ್ಮೆ ಟ್ರೈ ಮಾಡಿ, ರೆಸಿಪಿ ಇಲ್ಲಿದೆ
ಮಟನ್
ಎರಡರಲ್ಲಿ ಯಾವುದು ಉತ್ತಮ.?
ಆರೋಗ್ಯದ ಪ್ರಕಾರ ನೋಡಿದ್ರೆ ಕುರಿ ಮಾಂಸಕ್ಕಿಂತ ಮೇಕೆ ಮಾಂಸ ಬೆಸ್ಟ್ ಆಪ್ಷನ್ ಅಂತ ಹೇಳಬಹುದು. ಮೇಕೆ ಮಾಂಸದಲ್ಲಿ ಕೊಬ್ಬು ಕಮ್ಮಿ ಇರುತ್ತೆ, ಐರನ್ ಅಂಶ ಜಾಸ್ತಿ ಇರುತ್ತೆ. ಆದ್ರೆ ರುಚಿ ಪ್ರಕಾರ ಕುರಿ ಮಾಂಸ ಬೆಸ್ಟ್ ಆಪ್ಷನ್ ಅಂತ ಕೆಲವರು ಅನ್ಕೋತಾರೆ. ಬೇಗ ಬೇಯುತ್ತೆ ಕೂಡ. ಹೃದಯ ಸಂಬಂಧಿತ ಸಮಸ್ಯೆ ಇರೋರು, ಕೊಲೆಸ್ಟ್ರಾಲ್ ಕಂಟ್ರೋಲ್ ಅಲ್ಲಿ ಇಟ್ಕೋಬೇಕು ಅನ್ಕೊಂಡಿರೋರು ಮೇಕೆ ಮಾಂಸ ತಿನ್ನೋದು ಒಳ್ಳೇದು.
ಸೂಚನೆ: ಮೇಲೆ ತಿಳಿಸಿದ ವಿಷಯಗಳು ಕೇವಲ ಪ್ರಾಥಮಿಕ ಮಾಹಿತಿಗಾಗಿ ಮಾತ್ರ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆ ಪಡೆಯುವುದು ಉತ್ತಮ.