ಇಂದಿನ ದಿನಗಳಲ್ಲಿ ಮಧುಮೇಹ ಹೆಚ್ಚಾಗುತ್ತಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ನುಗ್ಗೆ ಸೊಪ್ಪಿನ ಚಟ್ನಿ ಸಹಕಾರಿ. ನುಗ್ಗೆ ಸೊಪ್ಪು ಪೋಷಕಾಂಶಗಳಿಂದ ಕೂಡಿದ್ದು, ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಚಟ್ನಿ ತಯಾರಿಸಲು ನುಗ್ಗೆ ಸೊಪ್ಪು, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಉಪ್ಪು, ಜೀರಿಗೆ, ಸಾಸಿವೆ, ಎಣ್ಣೆ ಮತ್ತು ನಿಂಬೆ ರಸ ಬೇಕಾಗುತ್ತದೆ. ಇದು ಜೀರ್ಣಕ್ರಿಯೆ ಸುಧಾರಿಸಿ, ದೇಹದ ವಿಷವನ್ನು ಹೊರಹಾಕುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಇಂದಿನ ದಿನಗಳಲ್ಲಿ ತಪ್ಪು ಆಹಾರ ಪದ್ಧತಿ ಹಾಗೂ ಕೆಟ್ಟ ಜೀವನ ಶೈಲಿಯಿಂದಾಗಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗ್ತಿದೆ. ರಕ್ತದಲ್ಲಿ ಸಕ್ಕರೆ ಮಟ್ಟ (Blood sugar level) ಹೆಚ್ಚಾಗ್ತಿದ್ದಂತೆ ಅನೇಕ ಗಂಭೀರ ರೋಗಗಳು (serious diseases) ಜನರನ್ನು ಕಾಡುತ್ತವೆ. ಕೆಲವು ಮನೆಮದ್ದುಗಳು ಮತ್ತು ನೈಸರ್ಗಿಕ ಆಹಾರ, ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ನಾವಿಂದು ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ನೆರವಾಗುವ, ನಮ್ಮ ದೇಹವನ್ನು ಸಂಪೂರ್ಣ ರಕ್ಷಿಸುವ, ರುಚಿಯಾದ ಹಾಗೂ ತಯಾರಿಸಲು ಸುಲಭವಾದ ನುಗ್ಗೆ ಸೊಪ್ಪಿನ ಚಟ್ನಿ ಬಗ್ಗೆ ನಿಮಗೆ ಹೇಳ್ತೇವೆ. ನುಗ್ಗೆ ಸೊಪ್ಪು ಸಾಕಷ್ಟು ಪೋಷಕಾಂಶವನ್ನು ಹೊಂದಿದೆ. ಇದು ಸಕ್ಕರೆ ಮಟ್ಟವನ್ನು ತ್ವರಿತವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
ನುಗ್ಗೆ ಸೊಪ್ಪಿನ ಚಟ್ನಿ (Moringa chutney) ಮಾಡುವ ವಿಧಾನ : ನುಗ್ಗೆ ಸೊಪ್ಪಿನ ಚಟ್ನಿ ತಯಾರಿಸಲು, ನುಗ್ಗೆ ಸೊಪ್ಪು, ಹಸಿಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಒಗ್ಗರಣೆಗೆ ಜಿರಿಗೆ, ಸಾಸಿವೆ, ಎಣ್ಣೆ , ನಿಂಬೆ ರಸ ಅಗತ್ಯವಿದೆ. ಮೊದಲು ನುಗ್ಗೆ ಸೊಪ್ಪಿನ ಎಲೆಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಜೀರಿಗೆ ಮತ್ತು ಸಾಸಿವೆ ಹಾಕಿ ಹುರಿಯಿರಿ. ಈಗ ಮಿಕ್ಸರ್ ಅಥವಾ ಬ್ಲೆಂಡರ್ ನಲ್ಲಿ, ತೊಳೆದ ನುಗ್ಗೆ ಸೊಪ್ಪು, ಕತ್ತರಿಸಿದ ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಮತ್ತು ಮಸಾಲೆ ಸೇರಿಸಿ. ನಂತ್ರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಸ್ವಲ್ಪ ನೀರು ಬೆರೆಸಿ ರುಬ್ಬಿಕೊಳ್ಳಿ. ತಯಾರಾದ ಚಟ್ನಿಗೆ ನಿಂಬೆ ರಸ ಸೇರಿಸಿ ಸರ್ವ್ ಮಾಡಿ. ಇದನ್ನು ರೋಟಿ, ಪರಾಠ, ಅನ್ನ , ದೋಸೆ ಜೊತೆ ಸೇವನೆ ಮಾಡಬಹುದು.
ಮೈಸೂರು ಶೈಲಿಯ ಟೊಮೆಟೊ ರಸಂ: ನಾಲಿಗೆಗೂ ಟೇಸ್ಟ್, ಆರೋಗ್ಯಕ್ಕೂ ಬೆಸ್ಟ್
ನುಗ್ಗೆ ಸೊಪ್ಪಿನ ಚಟ್ನಿಯ ಪ್ರಯೋಜನ : ನುಗ್ಗೆ ಸೊಪ್ಪು, ಹೂ, ಕಾಯಿ ಎಲ್ಲವೂ ಔಷಧಿ ಗುಣವನ್ನು ಹೊಂದಿದೆ. ಅದ್ರಲ್ಲೂ ನುಗ್ಗೆ ಸೊಪ್ಪಿನ ಚಟ್ನಿ ಸೇವನೆ ಮಾಡೋದ್ರಿಂದ ಸಾಕಷ್ಟು ಪ್ರಯೋಜನವಿದೆ.
ಸಕ್ಕರೆ ಮಟ್ಟ ನಿಯಂತ್ರಣ : ಮೊದಲೇ ಹೇಳಿದಂತೆ ನುಗ್ಗೆ ಸೊಪ್ಪಿನ ಚಟ್ನಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತವೆ. ಇದು ದೇಹವು ಗ್ಲೂಕೋಸ್ ಉತ್ತಮವಾಗಿ ಬಳಸಲು ಅನುವು ಮಾಡಿಕೊಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡಲು ಮತ್ತು ಅವುಗಳನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ.
ಪೋಷಕಾಂಶಗಳ ನಿಧಿ : ನುಗ್ಗೆಕಾಯಿ ಎಲೆಗಳು ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಈ ಚಟ್ನಿ ಸೇವನೆಯಿಂದ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶ ಲಭ್ಯವಾಗುತ್ತದೆ.
ಜೀರ್ಣಕ್ರಿಯೆ ಸುಧಾರಣೆ : ನುಗ್ಗೆ ಸೊಪ್ಪು ಉತ್ತಮ ಪ್ರಮಾಣದ ಫೈಬರ್ ಹೊಂದಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಕ್ಕಿ, ಉದ್ದಿನ ಬೇಳೆ ಇಲ್ಲದೆ ತಯಾರಿಸಿ ಹತ್ತಿಯಂತಹ ಇಡ್ಲಿ! ಒಮ್ಮೆ ಟ್ರೈ ಮಾಡಿ
ದೇಹದ ವಿಷ ಹೊರಕ್ಕೆ : ನುಗ್ಗೆ ಸೊಪ್ಪಿನ ಚಟ್ನಿ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಯಕೃತ್ತಿನ ಆರೋಗ್ಯಕ್ಕೂ ಪ್ರಯೋಜನಕಾರಿ. ದೇಹವನ್ನು ಒಳಗಿನಿಂದ ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ
ನುಗ್ಗೆ ಸೊಪ್ಪು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೀರ್ಘಕಾಲದ ಉರಿಯೂತವು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಮೊರಿಂಗಾ ಚಟ್ನಿಯನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
