ಅಕ್ಕಿ, ಉದ್ದಿನ ಬೇಳೆ ಇಲ್ಲದೆ ಹತ್ತಿಯಂತಹ ಇಡ್ಲಿ! ಒಮ್ಮೆ ಟ್ರೈ ಮಾಡಿ
Kannada
ಬೇಕಾಗುವ ಪದಾರ್ಥಗಳು
ರವೆ – 1 ಕಪ್, ಮೊಸರು ಒಂದು ಕಪ್, ಇನೋ ಫ್ರೂಟ್ ಸಾಲ್ಟ್ ಸಣ್ಣ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ನೀರು, ತುಪ್ಪ ಅಥವಾ ಎಣ್ಣೆ, ಸಾಸಿವೆ, ಕರಿಬೇವು, ಹಸಿರು ಮೆಣಸಿನಕಾಯಿ.
Kannada
ತಯಾರು ಮಾಡುವುದು ಹೇಗೆ?
ಒಂದು ಬಟ್ಟಲಿನಲ್ಲಿ ರವೆ, ಮೊಸರು, ಸ್ವಲ್ಪ ಉಪ್ಪು, ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 10-15 ನಿಮಿಷಗಳ ಕಾಲ ಮುಚ್ಚಿಡಿ.
Kannada
ಒಗ್ಗರಣೆ ಹಾಕಿ
ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ ಸಾಸಿವೆ, ಕರಿಬೇವು, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ ಹಾಕಿ. ತುರಿದ ಕ್ಯಾರೆಟ್, ಬೀನ್ಸ್ ಕೂಡ ಹಾಕಬಹುದು. ಈ ಒಗ್ಗರಣೆಯನ್ನು ಹಿಟ್ಟಿನಲ್ಲಿ ಮಿಶ್ರಣ ಮಾಡಿ.
Kannada
ಹಿಟ್ಟಿನಲ್ಲಿ ಇವುಗಳನ್ನು ಸೇರಿಸಿ
ನಂತರ ಹಿಟ್ಟಿನಲ್ಲಿ ಇನೋ ಹಾಕಿ ತಕ್ಷಣ ಮಿಶ್ರಣ ಮಾಡಿ. ಹಿಟ್ಟು ಉಬ್ಬಲು ಪ್ರಾರಂಭವಾಗುತ್ತದೆ. ಇದರ ಬದಲು ಅಡುಗೆ ಸೋಡಾ, ನಿಂಬೆ ರಸ ಕೂಡ ಹಾಕಬಹುದು.
Kannada
ಇಡ್ಲಿ ಪಾತ್ರೆಯಲ್ಲಿ..
ಇಡ್ಲಿ ಪಾತ್ರೆಗಳಿಗೆ ಎಣ್ಣೆ ಹಚ್ಚಿ. ನಂತರ ಹಿಟ್ಟನ್ನು ತಕ್ಷಣ ಅದರಲ್ಲಿ ಹಾಕಿ.
Kannada
ಆವಿಯಲ್ಲಿ ಬೇಯಿಸಿ
ಇಡ್ಲಿಗಳನ್ನು 10-12 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ. ಮೃದುವಾದ ಹತ್ತಿಯಂತಹ ಇಡ್ಲಿಗಳನ್ನು ಪಾತ್ರೆಯಿಂದ ತೆಗೆದು ಬಿಸಿ ಬಿಸಿಯಾಗಿ ಚಟ್ನಿಯೊಂದಿಗೆ ಬಡಿಸಿ.