ಆಲಿಯಾ ಹೆಸರಲ್ಲಿ ಪಿಜ್ಜಾ ಹೌಸ್‌ ಸಿಬ್ಬಂದಿಗೆ ಶಾಕ್‌ ಮಿಮಿಕ್ರಿ ಕಲಾವಿದೆ ಚಾಂದಿನಿಯ ತುಂಟಾಟಕ್ಕೆ ನೆಟ್ಟಿಗರು ಫಿದಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮಿಮಿಕ್ರಿ ಕಲಾವಿದೆಯೊಬ್ಬರು ಬಾಲಿವುಡ್ ನಟಿ ಆಲಿಯಾ ಭಟ್ ಅವರ ಧ್ವನಿಯನ್ನು ಮಿಮಿಕ್‌ ಮಾಡಿ ಪಿಜ್ಜಾ ಶಾಪ್‌ನವರಿಗೆ ಗೊಂದಲ ಮೂಡಿಸಿದ್ದಲ್ಲದೇ ತಮ್ಮ ಪ್ರತಿಭೆಗೆ ಶಹಭಾಷ್‌ಗಿರಿ ಗಿಟ್ಟಿಸಿಕೊಂಡಿದ್ದಾರೆ. ಹಲವು ನಟರ, ರಾಜಕಾರಣಿಗಳ ಸಮಾಜದ ಗಣ್ಯ ವ್ಯಕ್ತಿಗಳ ಧ್ವನಿಯನ್ನು ಅನುಕರಿಸುವ ಹಲವು ಮಿಮಿಕ್ರಿ ಕಲಾವಿದರನ್ನು ನೀವು ನೋಡಿರಬಹುದು. ಗಂಡಿನಂತೆ ಮಾತನಾಡುವ ಹೆಣ್ಣು ಅಥವಾ ಹೆಣ್ಣಿನಂತೆ ಮಾತನಾಡುವ ಗಂಡು ಹೀಗೆ ಮಿಮಿಕ್ರಿ ಕಲಾವಿದರ ಪ್ರತಿಭೆಗೆ ಬೆರಗಾದವರಿಲ್ಲ. ಹಾಗೆಯೇ ಮಿಮಿಕ್ರಿ ಕಲಾವಿದೆ ಚಾಂದಿನಿ ಅವರು ಬಾಲಿವುಡ್ ಸೆಲೆಬ್ರಿಟಿ ಆಲಿಯಾ ಭಟ್ ರೀತಿ ಮಾತನಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಈ ತಮಾಷೆಯ ವಿಡಿಯೋ ನೆಟ್ಟಿಗರಿಗೆ ಸಖತ್ ಕಿಕ್ ನೀಡ್ತಿದೆ. 

ಸಾಮಾನ್ಯವಾಗಿ ಸೆಲೆಬ್ರಿಟಿಯೊಬ್ಬರು ಅವರೇ ಸ್ವತಃ ನೇರವಾಗಿ ಪಿಜ್ಜಾ ಹೌಸ್‌ಗೆ ಕರೆ ಮಾಡಿ ಪಿಜ್ಜಾ ಬುಕ್ ಮಾಡಿದರೆ ಹೇಗಿರಬಹುದು ಆ ಕಡೆಯ ಸಿಬ್ಬಂದಿಯ ತಳಮಳ. ಆದೇ ರೀತಿ ಇಲ್ಲಿ ಕೂಡ ಅವರು ಫಿಜ್ಜಾ ಹೌಸ್‌ನ ಸಿಬ್ಬಂದಿ ಇವರ ಧ್ವನಿ ಕೇಳಿ ನಿಜವಾಗಿಯೂ ಆಲಿಯಾ ಭಟ್ ಇರಬಹುದಾ ಎಂದು ತಳಮಳಿಸುತ್ತಿರುವುದು ಆಡಿಯೋದಲ್ಲಿ ಕೇಳಿಸುತ್ತಿದೆ. ಅಲ್ಲದೇ ಒಂದು ಸಮಯ ಅವರು ಆಲಿಯಾ ಅಲ್ಲದೇ ಇದ್ದರೂ ಗ್ರಾಹಕರಿಗೆ ಅವರು ಬೈಯುವಂತಿಲ್ಲ. ಹೀಗಾಗಿ ಆತ ಚಾಂದಿನಿ ಅವರ ಈ ನಕಲಿ ಆಲಿಯಾ ಹೆಸರಿನಲ್ಲಿ ಮಾಡುತ್ತಿದ್ದ ಸಂಭಾಷಣೆಯುದ್ಧಕ್ಕೂ ಅವರು ಶಾಂತವಾಗಿಯೇ ಮಾತನಾಡಿದರು. ಆಲಿಯಾ ಅವರು ಸಸ್ಯಹಾರಿಯಾಗಿದ್ದು, ಸಸ್ಯಾಹಾರಿ ಪಿಜ್ಜಾವನ್ನು ಬುಕ್ ಮಾಡುತ್ತಾರೆ. ಅಲ್ಲದೇ ತಾನು ವಿವಾಹವಾಗುತ್ತಿರುವ ರಣಬೀರ್ ಕಪೂರ್‌ಗೆ ಯಾವ ರೀತಿಯ ಪಿಜ್ಜಾ ಬೇಕು ಎಂಬುದಾಗಿ ಸಂಭಾಷಣೆಯ ಮಧ್ಯೆ ಆಕೆ ಕೇಳುತ್ತಾಳೆ. ಇದು ಈ ಇವರ ಫ್ರಾಂಕ್‌ ಕಾಲ್‌ನ್ನು ಮತ್ತಷ್ಟು ನಂಬುವಂತೆ ನೈಜತೆ ಬರುವಂತೆ ಮಾಡಿದೆ. 

ಮೋಹಕ ತಾರೆ ರಮ್ಯಾ ಮಿಮಿಕ್‌ ಮಾಡಿದ ಪವರ್ ಸ್ಟಾರ್‌; ವೈರಲ್ ವಿಡಿಯೋ

ಮಿಮಿಕ್ರಿ ಕಲಾವಿದೆ ಚಾಂದಿನಿ ಅವರು ಬಾಲಿವುಡ್ ಸೆಲೆಬ್ರಿಟಿಗಳಾದ ಆಲಿಯಾ ಭಟ್ ಮತ್ತು ಕಂಗನಾ ರನೌತ್ ಅವರ ಸ್ಪಾಟ್-ಆನ್ ಅಭಿವ್ಯಕ್ತಿಯನ್ನು ಅನುಕರಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ತನ್ನ ಸೂಪರ್ ಮೋಜಿನ ವೀಡಿಯೊಗಳು ಮತ್ತು ಆಲಿಯಾ ಭಟ್ ಅವರ ಅನುಕರಣೆಯಿಂದಾಗಿ ಚಾಂದಿನಿ ಇತ್ತೀಚೆಗೆ ತುಂಬಾ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗೆ ಮಾಡಿದ ಆಲಿಯಾ ಭಟ್‌ ಹೆಸರಿನಿಂದ ಪಿಜ್ಜಾ ಆರ್ಡರ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಖ್ಯಾತಿ ಗಳಿಸುವುದರೊಂದಿಗೆ ವೈರಲ್ ಆಗಿದೆ.

YouTube video player

ಚಾಂದಿನಿ ಅವರ ಅಭಿಮಾನಿಯೊಬ್ಬರು ಅವರಿಗೆ ಈ ಡೇರ್ ಗೇಮ್ ಸವಾಲು ನೀಡಿದ್ದರು. ಆದರೂ ಚಾಂದಿನಿ ತಮ್ಮ ಮೊದಲ ಪ್ರಯತ್ನದಲ್ಲಿ ಪಿಜ್ಜಾ ಹೌಸ್‌ ಸಿಬ್ಬಂದಿಯನ್ನು ನಂಬುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಲಿಯಾ ಸಸ್ಯಾಹಾರಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು, ಅವಳು ಎಚ್ಚರಿಕೆಯಿಂದ ಸಸ್ಯಾಹಾರಿ ಮತ್ತು ಗ್ಲುಟನ್-ಮುಕ್ತ ಪಿಜ್ಜಾವನ್ನು ಕೇಳುತ್ತಾಳೆ. ಫೋನ್‌ನ ಇನ್ನೊಂದು ತುದಿಯಲ್ಲಿರುವ ವ್ಯಕ್ತಿ ತನ್ನ ಹೆಸರು ಆಲಿಯಾ ಭಟ್ ಎಂದು ಹೇಳಿದಾಗ ಗಾಬರಿಯಾಗುತ್ತಾರೆ. ಆಲಿಯಾ ಎಂದು ನಂಬಿದ ಆತ ಸ್ವಲ್ಪ ತಡವರಿಸುವುದರ ಜೊತೆ ಶಾಂತವಾಗಿ ಸಂಭಾಷಣೆಯನ್ನು ಪೂರ್ಣಗೊಳಿಸುತ್ತಾನೆ. 

ಹೊಸ ಮನೆ ಒಡೆದ ಆ ದಿನ ಸಂಜೆ ಎಲ್ಲರನ್ನು ನಗೀಸಬೇಕಿತ್ತು: ಮಿಮಿಕ್ರಿ ದಯಾನಂದ್

ಇವರ ಈ ಪ್ರತಿಭೆಯನ್ನು ನೆಟ್ಟಿಗರು ಗಾಢವಾಗಿ ಮೆಚ್ಚಿಕೊಂಡಿದ್ದಾರೆ. ಇದನ್ನು ಸಂಪೂರ್ಣವಾಗಿ ಇಷ್ಟಪಡುತ್ತೇನೆ. ಇದು ಆಲಿಯಾಗೆ ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ. ಆಲಿಯಾ ಹೆಸರಿನಿಂದ ಆರ್ಡರ್‌ ಪಡೆದ ಆ ವ್ಯಕ್ತಿ ತನ್ನ ಜೀವನಪೂರ್ತಿ ಈ ದಿನವನ್ನು ನೆನಪಿಸಿಕೊಳ್ಳಲಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ಆಲಿಯಾಗೆ ಟ್ಯಾಗ್ ಮಾಡಿದ್ದಾರೆ.