ಬಾಲ್ಯದಿಂದಲೂ ಕಲೆ, ನಾಟಕ, ಮಿಮಿಕ್ರಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಕಲಾವಿದ ಮಿಮಿಕ್ರಿ ದಯಾನಂದ್ ಜೀವನದಲ್ಲಿ ಎಂದೂ ಮರೆಯಲಾಗದ ಘಟನೆ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಅವರಲ್ಲಿ ಎಷ್ಟೇ ನೋವಿದ್ದರೂ ಅದನ್ನು ಬಚ್ಚಿಟ್ಟು ಮತ್ತೊಬ್ಬರನ್ನು ನಗಿಸುವುದೇ ನಿಜವಾದ ಕಲಾವಿದನಿಗಿರುವ ಸಾಮರ್ಥ್ಯ, ಎಂದು ಹೇಳಿದ್ದಾರೆ.

ಹೌದು! ಸುಖ ಸಂತೋಷದಿಂದ ಕೂಡಿದ ದಯಾನಂದ್ ಜೀವನದಲ್ಲಿ ಒಂದು ದಿನ ಎಂದೂ ಮರೆಯಲಾಗದ ಘಟನೆ ನಡೆದಿದೆ. ಅದುವೇ ತಾವು ಶ್ರಮಪಟ್ಟು ಕಟ್ಟಿದ ಮನೆಯನ್ನು ಸರ್ಕಾರದ ಅದೇಶದ ಮೇರೆಗೆ ಒಡೆದು ಹಾಕಲಾಗಿತ್ತು. ಅದೇ ದಿನ ದಯಾನಂದ್ ಅವರಿಗೆ ಸಂಜೆ ಹಾಸ್ಯ ಕಾರ್ಯಕ್ರಮವೂ ಇರುತ್ತದೆ. ಸಂಜೆ ಎಲ್ಲರನ್ನೂ ನಗಿಸಬೇಕು. ಆದರೆ ತನ್ನ ಜೀವನದಲ್ಲಿ ಊಹಿಸಿಕೊಳ್ಳಲೂ ಆಗದಂಥ ಘಟನೆ ನಡೆದಿತ್ತು. ಹೃದಯ ಭಾರವಾಗಿತ್ತು. 'ನನ್ನ ಜೀವನದಲ್ಲಿ ನಾನು ಸಂಪಾದಿಸಿದ್ದೆಲ್ಲ, ಒಂದೇ ದಿನ ಹೊರಟು ಹೋಯಿತು,' ಎಂದು ದುಃಖ ಹಂಚಿ ಕೊಂಡಿದ್ದಾರೆ. 

ಅದ್ಭುತ ಮಿಮಿಕ್ರಿ ಪಟು: ಹಾಡಿದ ಅಷ್ಟೂ ಹಾಡಿನ ಕ್ಯಾಸೆಟ್‌ ಇಡ್ಕೊಂಡಿದ್ರು SPB 

ಮೂಲತಃ ಮೈಸೂರಿನವರಾದ ದಯಾನಂದ್ ಪಿಯುಸಿ ಮುಗಿಸಿದ ನಂತರ ಕಾವೇರಿ ಎಂಪೋರಿಯಂನಲ್ಲಿ ಕೆಲಸ ಆರಂಭಿಸಿದ್ದರು. ಕೆಲಸ ಮಾಡುತ್ತಲೇ ಪದವಿ ಮುಗಿಸಿಕೊಂಡರು. ಕನ್ನಡದ ದಿಗ್ಗಜ ನಟರ ಜೊತೆ ಸೇರಿ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 12 ಸಾವಿರಕ್ಕೂ ಹೆಚ್ಚು ಅಧಿಕ ಮಿಮಿಕ್ರಿ ಶೋಗಳನ್ನು ಮಾಡಿರುವ ಕೀರ್ತಿ ಅವರದ್ದು.

ಜೂನಿಯರ್ ದರ್ಶನ್ ನೋಡಿ ಕಳೆದೇ ಹೋದ ಬುಲ್‌ಬುಲ್ ರಚಿತಾ ರಾಮ್! 

ಸಾಮಾನ್ಯವಾಗಿ ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಇಂಥ ಹಾಸ್ಯ ಕಲಾವಿದರ ಜೀವನದಲ್ಲಿ ನೋವಿನ ಘಟನೆಗಳು ನಡೆದಿರುತ್ತದೆ. ಅವರಲ್ಲಿಯೂ ದುಃಖ ಮನೆ ಮಾಡಿರುತ್ತದೆ. ಆದರೆ, ನಗಿಸುವುದೇ ತಮ್ಮ ಕಾಯಕವೆಂದು ನಂಬಿ, ಇನ್ನೊಬ್ಬರನ್ನು ನಗಿಸುತ್ತಲೇ ಜೀವನ ಸಾಗಿಸುತ್ತಾರೆ.