Asianet Suvarna News Asianet Suvarna News

Masala Chai: ಭಾರತೀಯರ ಮಸಾಲಾ ಚಾಯ್ ಗೆ ಜಾಗತಿಕ ಮನ್ನಣೆ!

ಆಯುರ್ವೇದದಲ್ಲಿ ಮಾನ್ಯತೆ ಪಡೆದಿರುವ, ಆರೋಗ್ಯ ಸುಧಾರಣೆಯಲ್ಲಿ ಮೊದಲ ಸ್ಥಾನದಲ್ಲಿರುವ ಮಸಾಲೆ ಟೀಯನ್ನು ಈಗ ವಿದೇಶಿಗರೂ ಮೆಚ್ಚಿದ್ದಾರೆ. ಭಾರತೀಯ ಮಸಾಲೆ ಚಾಯ್ ಗೆ ಈಗ ಮನ್ನಣೆ ಸಿಕ್ಕಿದೆ. ಟೇಸ್ಟ್ ಅಟ್ಲಾಸ್ ಪಟ್ಟಿಯಲ್ಲಿ ಇದು ಸ್ಥಾನ ಪಡೆದಿದೆ.

Masala Tea Is The Second Best Non Alcoholic Beverage In The World roo
Author
First Published Jan 18, 2024, 3:50 PM IST

ಒತ್ತಡ, ಗಡಿಬಿಡಿ ಕೆಲಸದಲ್ಲಿ ಒಂದೆರಡು ಗುಟುಕು ಚಹಾ ಸಿಕ್ಕರೆ ಹಿತವೆನ್ನಿಸುತ್ತೆ. ಆಯಾಸವೆಲ್ಲ ದೂರವಾಗುತ್ತೆ. ಚಹಾವು ವಿಶೇಷವಾಗಿ ನಮ್ಮ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿದೆ. ಒಂದು ದಿನ ಬೆಳಿಗ್ಗೆ ಟೀ ಕುಡಿದೆ ಹೋದ್ರೂ ಇಡೀ ದಿನ ಸೋಮಾರಿತನ ಕಾಡುತ್ತದೆ. ಮನೆ ಇರಲಿ, ಕಚೇರಿ ಇರಲಿ ಜನರಿಗೆ ಒಂದು ಕಪ್ ಟೀ ಬೇಕೇಬೇಕು. ಜನರು ಆರೋಗ್ಯ ಪ್ರಯೋಜನಗಳಿಗಾಗಿ ಸಾಮಾನ್ಯ ಚಹಾದ ಬದಲಿಗೆ ಗ್ರೀನ್ ಟೀ ಮತ್ತು ಬ್ಲಾಕ್ ಟೀ ಸೇವಿಸಲು ಪ್ರಾರಂಭಿಸಿದ್ದಾರೆ. ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸ್ತೀರಿ ಎಂದಾದ್ರೆ ಮಸಾಲೆ ಟೀ ಟ್ರೈ ಮಾಡಿ. ಈ ಮಸಾಲೆ ಟೀ ಕಿರೀಟಕ್ಕೆ ಈಗ ಒಂದು ಗರಿ ಸೇರಿದೆ.

ಪ್ರಸಿದ್ಧ ಆಹಾರ (Food) ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್, ಮಸಾಲಾ ಚಾಯ್ (Masala Chai) ಅನ್ನು 2023-24 ರ ವಿಶ್ವದ ಎರಡನೇ ಅತ್ಯುತ್ತಮ ಆಲ್ಕೊಹಾಲ್ಯುಕ್ತವಲ್ಲದ ಪಾನೀಯವೆಂದು ಘೋಷಿಸಿದೆ. ಟೇಸ್ಟ್‌ಅಟ್ಲಾಸ್ (TasteAtlas) ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಪಟ್ಟಿಯನ್ನು ಹಂಚಿಕೊಂಡಿದೆ. ಚಾಯ್ ಮಸಾಲಾ ಭಾರತದಿಂದ ಹುಟ್ಟಿದ ಆರೊಮ್ಯಾಟಿಕ್ ಪಾನೀಯವಾಗಿದೆ. ಇದರರ್ಥ ಈಗ ಮಸಾಲೆಯುಕ್ತ ಚಹಾ ಜಾಗತಿಕವಾಗಿ ಜನರಲ್ಲಿ ತನ್ನದೇ ಆದ ಗುರುತನ್ನು ಸೃಷ್ಟಿಸಿದೆ.  

ಸಖತ್ ಟೇಸ್ಟಿಯಾಗಿರುತ್ತಂತೆ ಎಗ್, ಚಿಕನ್ ಕುಲ್ಫಿ; ಏನಿದು ನಾನ್ ವೆಜ್ ಕುಲ್ಫಿ?

ಮಸಾಲೆ ಚಹಾ ಇತಿಹಾಸ ಈಗಿನದ್ದಲ್ಲ. ಹಿಂದೆ ಬ್ರಿಟಿಷರು ಭಾರತಕ್ಕೆ ಬರುವ ಮೊದಲು ಜನರು ಮಸಾಲೆ ಟೀ ಸೇವನೆ ಮಾಡ್ತಿದ್ದರು. ಆಯುರ್ವೇದದಲ್ಲಿ ಈ ಟೀಗೆ ಮನ್ನಣೆ ಇತ್ತು. ಯಾವುದೇ ಟೀ ಎಲೆ ಬೆರೆಸದೆ, ಮಸಾಲೆ ಪದಾರ್ಥಗಳನ್ನು ಬೆರೆಸಿ ಕುಡಿಯುತ್ತಿದ್ದರು. ಬ್ರಿಟಿಷ್ ಆಡಳಿತ ಶುರು ಆದ್ಮೇಲೆ ಟೀನಲ್ಲಿ ಬದಲಾವಣೆ ಆಯ್ತು. ಟೀ ರುಚಿ ಹೆಚ್ಚಿಸಲು ಹಾಲು ಮತ್ತು ಸಕ್ಕರೆ ಬೆರೆಸಿ ಕುಡಿಯುವ ಅಭ್ಯಾಸ ಶುರುವಾಯ್ತು. ಹಾಲು ಹಾಗೂ ಸಕ್ಕರೆ ಬೆರೆಸಿದ ಟೀಗಿಂದ ಮಸಾಲೆ ಟೀ ನಾಲ್ಕು ಪಟ್ಟು ಆರೋಗ್ಯಕರ ಎಂಬುದು ಸಾಭೀತಾಗಿದೆ.

ಸ್ಟಾಕ್ ತಂದಿಡೋ ಅಕ್ಕಿಯಲ್ಲಿ ಹುಳು ಆಗ್ಬಾರ್ದು ಅಂದ್ರೆ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ಮಸಾಲೆ ಟೀಯಲ್ಲಿ ಏನಿದೆ? : ಜಾಗತೀಕವಾಗಿ ಮನ್ನಣೆ ಪಡೆದಿರುವ ಮಸಾಲೆ ಟೀ ಹೇಗೆ ತಯಾರಿಸ್ತಾರೆ ಎನ್ನುವ ಪ್ರಶ್ನೆ ನಿಮಗಿದ್ದರೆ ಉತ್ತರ ಇಲ್ಲಿದೆ. ಮಸಾಲೆ ಟೀಗೆ ಏಲಕ್ಕಿ, ಶುಂಠಿ, ಲವಂಗ, ದಾಲ್ಚಿನ್ನಿ ಮತ್ತು ಕರಿಮೆಣಸನ್ನು ಬಳಸಲಾಗುತ್ತದೆ. 5-7 ರೀತಿಯ ಮಸಾಲೆಗಳು ಬೇಕಾಗುತ್ತವೆ. ಎಲ್ಲ ಮಸಾಲೆಗಳನ್ನು ನೀವು ಹಾಕಿದಾಗ ಈ ಟೀನಿಂದ ಸಿಗುವ ಪ್ರಯೋಜನ ಹೆಚ್ಚು. ನೀವು ಮಸಾಲೆ ಟೀ ಮಾಡಲು, 10 ಲವಂಗ, 12 ಏಲಕ್ಕಿ,3 ಜಾಯಿಕಾಯಿ, 5-8 ತುಳಸಿ ಎಲೆ, 6 ಕರಿಮೆಣಸು, 2 ಟೇಬಲ್ಸ್ಪೂನ್  ಸೋಂಪನ್ನು ತೆಗೆದುಕೊಳ್ಳಿ. ಚೂರು ಒಣಗಿದ ಶುಂಠಿ ಹಾಗೂ ದಾಲ್ಚಿನಿಯನ್ನು ಬಳಸಿ. ನೀವು ಎಲ್ಲ ಮಸಾಲೆ ಹುರಿದು, ತಣ್ಣಗಾದ್ಮೇಲೆ ಅದನ್ನು ಮಿಕ್ಸಿ ಮಾಡಿ ಒಂದು ಗ್ಲಾಸ್ ಪಾತ್ರೆಯಲ್ಲಿ ಮುಚ್ಚಿಡಿ. ಪ್ರತಿ ದಿನ ನೀರಿಗೆ ಮಸಾಲೆ ಹಾಕಿ, ಚೆನ್ನಾಗಿ ಕುದಿಸಿ ಕುಡಿಯುತ್ತ ಬನ್ನಿ.

ಮಸಾಲೆ ಚಹಾ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಶೀತ ಮತ್ತು ಕೆಮ್ಮಿಗೆ ಪರಿಹಾರ ನೀಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಜೀರ್ಣಕ್ರಿಯೆ ಮತ್ತು ಮೇದೋಜ್ಜೀರಕ ಗ್ರಂಥಿಯಲ್ಲಿನ ಕಿಣ್ವಗಳನ್ನು ಉತ್ತೇಜಿಸುತ್ತದೆ. ಉರಿಯೂತ ಮತ್ತು ನೋವಿನಿಂದ ಪರಿಹಾರವನ್ನು ನೀಡುತ್ತದೆ. ಕೆಲಸ ಮಾಡಿದ ಸುಸ್ತು, ಸೋಮಾರಿತನವನ್ನು ಇದು ಹೋಗಲಾಡಿಸುತ್ತದೆ. 

ಮೊದಲ ಸ್ಥಾನದಲ್ಲಿದೆ ಈ ಪಾನೀಯ :  ಟೇಸ್ಟ್ ಅಟ್ಲಾಸ್ ನೀಡಿದ ಪಟ್ಟಿಯಲ್ಲಿ ಮೆಕ್ಸಿಕೋದ ಅಗುವಾಸ್ ಫ್ರೆಸ್ಕಾಸ್ ಪಾನೀಯವು  ಮೊದಲ ಸ್ಥಾನದಲ್ಲಿದೆ. ಇದೊಂದು ರಿಫ್ರೆಶ್ ಪಾನೀಯ. ಇದನ್ನು ಹಣ್ಣುಗಳು, ಸೌತೆಕಾಯಿ, ಹೂವುಗಳು, ಬೀಜಗಳು, ಸಕ್ಕರೆ ಮತ್ತು ನೀರಿನೊಂದಿಗೆ ಧಾನ್ಯಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. 

Latest Videos
Follow Us:
Download App:
  • android
  • ios