ಪ್ರತಿಷ್ಠಿತ 'ಮಾಸ್ಟರ್ ಶೆಫ್ ಇಂಡಿಯಾ' ರಿಯಾಲಿಟಿ ಶೋ ಗೆದ್ದ ಮಂಗಳೂರಿನ ಯುವಕ
'ಮಾಸ್ಟರ್ ಶೆಫ್ ಇಂಡಿಯಾ-2023'ನಲ್ಲಿ ಮಂಗಳೂರಿನ ಯುವಕ ವಿಜೇತರಾಗಿದ್ದಾರೆ. ಸಣ್ಣ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುವ ಯುವಕ ಪ್ರತಿಷ್ಠಿತ ರಿಯಾಲಿಟಿ ಶೋವನ್ನು ಗೆದ್ದು ಬಂದಿದ್ದೇ ರೋಚಕ ಕಥೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಮಂಗಳೂರು: ಸೋನಿ ಲೈವ್ ಓಟಿಟಿ ಪ್ಲಾಟ್ ಫಾರ್ಮ್ ಮುಂಬೈಯಲ್ಲಿ ಆಯೋಜಿಸಿರುವ 'ಮಾಸ್ಟರ್ ಶೆಫ್ ಇಂಡಿಯಾ' ಸ್ಪರ್ಧೆಯಲ್ಲಿ ಮಂಗಳೂರಿನ ಯುವಕ ವಿಜೇತರಾಗಿದ್ದಾರೆ. 24ರ ಹರೆಯದ ಯುವಕ ಮುಹಮ್ಮದ್ ಆಶಿಕ್ ರಿಯಾಲಿಟಿ ಶೋ ವಿನ್ನರ್ ಎಂದು ಘೋಷಿಸಲಾಗಿದೆ. ನಂಬಿ ಜೆಸ್ಸಿಕಾ ಮರಕ್ ಮತ್ತು ರುಖ್ಸಾರ್ ಸಯೀದ್ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಫೈನಲ್ ತಲುಪಿದ ರುಖ್ಸಾರ್ ಸಯೀದ್, ಸೂರಜ್ ಥಾಪಾ, ನಂಬಿ ಜೆಸ್ಸಿಕಾ ಮರಕ್ ಸೇರಿದಂತೆ ನಾಲ್ವರಲ್ಲಿ ಒಬ್ಬರಾಗಿದ್ದ ಮುಹಮ್ಮದ್ ಆಶಿಕ್, 'ಮಾಸ್ಟರ್ ಶೆಫ್ ಇಂಡಿಯಾ' ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ಸ್ಪರ್ಧೆಯ ಫೈನಲ್ ಸಂಚಿಕೆ ಪ್ರಸಾರವಾಗಿದ್ದು ಅದರಲ್ಲಿ ಆಶಿಕ್ ವಿಜೇತರಾಗಿ ಹೊರ ಹೊಮ್ಮಿದ್ದಾರೆ.
ಅಸಾಧಾರಣ ಪಾಕಶಾಲೆಯ ಪ್ರತಿಭೆಗಳನ್ನು ಪ್ರದರ್ಶಿಸಲು ಹೆಸರುವಾಸಿಯಾದ ಜನಪ್ರಿಯ ರಿಯಾಲಿಟಿ ಶೋ, ಅಕ್ಟೋಬರ್ 16 ರಿಂದ ಸೋನಿ ಲಿವ್‌ನಲ್ಲಿ ಪ್ರಸಾರವಾಗುತ್ತಿದೆ. ಅಡುಗೆಯ (Cooking) ಬಗ್ಗೆ ಆಸಕ್ತಿಯಿರುವ, ನುರಿತರು ಇದರಲ್ಲಿ ಸ್ಪರ್ಧಿಗಳಾಗಿ (Contestants) ಆಯ್ಕೆಯಾಗುತ್ತಾರೆ. ಇದರಲ್ಲಿ ದೇಶದಾದ್ಯಂತದ ಎಕ್ಸ್‌ಪರ್ಟ್ ಶೆಫ್‌ಗಳನ್ನು ತೀರ್ಪುಗಾರ (Judges)ರಾಗಿದ್ದಾರೆ. ಆಶಿಕ್ ಅವರ ವಿಜಯವು ಅವರ ವೈಯಕ್ತಿಕ ಕನಸನ್ನು ಈಡೇರುವಂತೆ ಮಾಡಿದೆ. ಅಲ್ಲದೆ ದಕ್ಷಿಣ ಭಾರತದಿಂದ (South India) ಸ್ಪರ್ಧೆಯ ಮೊದಲ ವಿಜೇತರಾಗಿ ಆಶಿಕ್ ಗುರುತಿಸಿಕೊಂಡಿದ್ದಾರೆ.
ಅಡುಗೆ ಶೋನಲ್ಲಿ ಭಾಗವಹಿಸೋಕೆ ಬಂದೋಳು ರೆಸ್ಟೋರೆಂಟ್‌ನಿಂದ ಬಿರಿಯಾನಿ ತಂದ್ಲು!
ಮಂಗಳೂರಿನಲ್ಲಿ ಸಣ್ಣ ಜ್ಯೂಸ್ ಅಂಗಡಿ ಇಟ್ಟುಕೊಂಡಿರುವ ಆಶಿಕ್
ದ.ಕ.ಜಿಲ್ಲೆಯ ಯುವಕನೊಬ್ಬ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜಯಿಯಾದ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಗೆದ್ದ ಪ್ರಥಮ ದಕ್ಷಿಣ ಭಾರತೀಯ ಎಂಬ ಹೆಗ್ಗಳಿಕೆಯೂ ಆಶಿಕ್ ಅವರದ್ದು. ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ವೃತ್ತಿಜೀವನವನ್ನು (Carrer) ಆರಂಭಿಸುವುದು ಮೊಹಮ್ಮದ್ ಆಶಿಕ್ ಕನಸಾಗಿತ್ತು. ಆದರೆ ಮನೆಯ ಆರ್ಥಿಕ ಸಮಸ್ಯೆಗಳಿಂದಾಗಿ ಇದು ಸಾಧ್ಯವಾಗಲ್ಲಿಲ್ಲ. ಹೀಗಾಗಿ ಆಶಿಕ್ ಮಂಗಳೂರಿನಲ್ಲಿ 'ಕುಲ್ಕಿ ಹಬ್' ಹೆಸರಿನ ಜ್ಯೂಸ್ ಅಂಗಡಿಯನ್ನು ಆರಂಭಿಸಿದರು. ವಿಶಿಷ್ಟವಾದ ಪಾಕವಿಧಾನಗಳನ್ನು ರಚಿಸುವಲ್ಲಿ ಸೃಜನಶೀಲತೆಯನ್ನು ಪ್ರದರ್ಶಿಸಿದರು.
ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಮೊಹಮ್ಮದ್ ಆಶಿಕ್, 'ಎಲಿಮಿನೇಷನ್ ಎದುರಿಸುವುದರಿಂದ ಹಿಡಿದು ಟ್ರೋಫಿ ಹಿಡಿಯುವವರೆಗೆ ಪ್ರತಿ ಕ್ಷಣವೂ ಹಲವು ಪಾಠಗಳನ್ನು ಕಲಿಸಿದೆ. ಈ ಅನುಭವವು ನನ್ನ ಜೀವನವನ್ನು ಸಂಪೂರ್ಣವಾಗಿ ಮರು ರೂಪಿಸಿದೆ. ನಾನು ಮಾಸ್ಟರ್‌ಚೆಫ್ ಇಂಡಿಯಾದಲ್ಲಿ ಗೆಲುವಿಗೆ ಕೃತಜ್ಞನಾಗಿದ್ದೇನೆ. ತೀರ್ಪುಗಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ತೀರ್ಪುಗಾರರಾದ ವಿಕಾಸ್, ರಣವೀರ್ ಮತ್ತು ಪೂಜಾ, ಸಹ ಸ್ಪರ್ಧಿಗಳು, ಪ್ರೇಕ್ಷಕರು ಮತ್ತು ಅಡುಗೆಮನೆಯಲ್ಲಿ ಪ್ರತಿ ದಿನವೂ ಉತ್ತಮವಾಗಿ ಕಾರ್ಯನಿರ್ವಹಿಸಲು ನನ್ನನ್ನು ಪ್ರೇರೇಪಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
ಲಾಕ್‌ಡೌನ್ ಟೈಮ್ ಕುಕಿಂಗ್ ಟೈಮ್ ಆಗಿ ಬದಲಾಯಿಸಿಕೊಂಡ ನಟಿ ಶಾನ್ವಿ!
ನಗರದ ಜೆಪ್ಪು ಮಹಾಕಾಳಿಪಡ್ಪುವಿನ ಅಬ್ದುಲ್ ಖಾದರ್-ಸಾರಮ್ಮ ದಂಪತಿಯ ಏಕೈಕ ಪುತ್ರನಾಗಿರುವ ಮುಹಮ್ಮದ್ ಆಶಿಕ್ ಗೆ ಅಡುಗೆಯ ಬಗ್ಗೆ ಸಣ್ಣ ವಯಸ್ಸಿನಲ್ಲೇ ಆಸಕ್ತಿಯಿತ್ತು. ಹೋಟೆಲ್ ಮ್ಯಾನೇಜ್ ಮೆಂಟ್ ಕಲಿಯಬೇಕೆಂಬ ಆಸೆಯಿದ್ದರೂ ಸಾಧ್ಯವಾಗದ ಕಾರಣ, ಪರಿಚಯಸ್ಥರು, ಸ್ನೇಹಿತರ ಮನೆಗಳಲ್ಲಿ ನಡೆಯುವ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ಮನೆಯಿಂದಲೇ ಹೊಸ ಶೈಲಿಯ, ವಿಶಿಷ್ಟ ಸ್ವಾದದ ಆಹಾರಗಳನ್ನು ತಯಾರಿಸಿ ಕೊಡುತ್ತಿದ್ದರು. ಜೊತೆಗೆ ನಗರದ ಬೇರೆ ಬೇರೆ ಕಾಲೇಜುಗಳಲ್ಲಿ ನಡೆಯುವ ನಾನಾ ಕಾರ್ಯಕ್ರಮಗಳ ಸಂದರ್ಭ ಸ್ಟಾಲ್ ಹಾಕಿ ವ್ಯಾಪಾರ ಮಾಡುತ್ತಿದ್ದರು. ಆಹಾರವಲ್ಲದೆ ಕುಲ್ಕಿ ಶರ್ಬತ್ ಸಹಿತ ನಾನಾ ಬಗೆಯ ಪಾನೀಯಗಳನ್ನು ಮಾರುತ್ತಿದ್ದರು.
20ರ ಹರೆಯದಲ್ಲೇ ನಗರದ ಬಲ್ಮಠದಲ್ಲಿ ಕುಲ್ಕಿ ಹಬ್ ತೆರೆದ ಮುಹಮ್ಮದ್ ಆಶಿಕ್ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಪೂರ್ಣಪ್ರಮಾಣದಲ್ಲಿ ಶೆಫ್ ಆಗಲು ನಿರ್ಧರಿಸಿ ರಾತ್ರಿ ಹಗಲೆನ್ನದೆ ರಾತ್ರಿ ಹಗಲೆನ್ನದೆ ಶ್ರಮಿಸಿದರು. ಹಾಗೇ ಶೆಫ್' ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಹೈದರಾಬಾದ್, ಬೆಂಗಳೂರಿನಲ್ಲಿ ನಡೆದ ಶೆಫ್ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದರು.ಇದೀಗ 'ಮಾಸ್ಟರ್ ಶೆಫ್ ಇಂಡಿಯಾ' ವಿಜೇತರಾಗಿದ್ದಾರೆ.