Mangalore Recipe: ಪೇಪರ್‌ನಷ್ಟು ತೆಳ್ಳಗಿರೋ ನೀರ್‌ದೋಸೆ ಮಾಡೋದು ಹೀಗೆ ನೋಡಿ
ನೋಡೋಕೆ ಪೇಪರ್‌ನಷ್ಟು ತೆಳ್ಳಗಾಗಿರೋ ದೋಸೆ. ಆದ್ರೆ ತಿಂದು ನೋಡಿದ್ರೆ ಅದ್ಭುತ ರುಚಿ (Taste) ಮಂಗಳೂರು ಸ್ಪೆಷಲ್ ನೀರ್ ದೋಸೆ (Neer Dosa) ಒಂದ್ಸಾರಿ ಟೇಸ್ಟ್ ಮಾಡಿದ್ರೆ ಯಾರಾದ್ರೂ ವಾರೆವ್ಹಾ ಅನ್ನೋದು ಖಂಡಿತ. ಹಾಗಿದ್ರೆ ಅದನ್ನು ಪ್ರಿಪೇರ್ ಮಾಡೋದು ಹೇಗೆ ತಿಳ್ಳೋಳ್ಳೋಣ.
ಭಾರತ ಅಂದ್ರೆ ವಿವಿಧತೆಯ ದೇಶ. ಇಲ್ಲಿ ಆಯಾ ರಾಜ್ಯದಲ್ಲಿ ಎಲ್ಲವೂ ವಿಭಿನ್ನವಾಗಿರುತ್ತದೆ. ಸಂಸ್ಕೃತಿ, ಆಚಾರ-ವಿಚಾರ, ಆಹಾರ ಎಲ್ಲವೂ ವಿಶಿಷ್ಟವಾಗಿರುತ್ತದೆ. ನಾರ್ತ್ ಇಂಡಿಯನ್ ಫುಡ್, ಸೌತ್ ಇಂಡಿಯನ್ ಫುಡ್ (South Indian Food) ಎಂದೇ ಇವುಗಳನ್ನು ಗುರುತಿಸಲಾಗುತ್ತದೆ. ನಾರ್ತ್ ಇಂಡಿಯನ್ ಫುಡ್ ಹೆಚ್ಚಾಗಿ ಚಪಾತಿ, ಪರೋಟಾವನ್ನು ಒಳಗೊಂಡರೆ ದಕ್ಷಿಣಭಾರತದ ಆಹಾರದಲ್ಲಿ ದೋಸೆ, ರೈಸ್‌ಬಾತ್‌ಗಳು ಹೆಚ್ಚಾಗಿರುತ್ತವೆ. ದಕ್ಷಿಣ ಭಾರತದ ಪಾಕಪದ್ಧತಿ ಎಂದ ತಕ್ಷಣ ಎಲ್ಲರಿಗೂ ಗರಿಗರಿಯಾದ ದೋಸೆಗಳು, ಮೃದುವಾದ ಮತ್ತು ನಯವಾದ ಇಡ್ಲಿಗಳು, ಕುರುಕುಲು ವಡಾಗಳು ನೆನಪಾಗುತ್ತವೆ. ದಕ್ಷಿಣ ಭಾರತದ ಹೆಚ್ಚಿನ ಅಡುಗೆಗಳು ಸಿಂಪಲ್ ಮತ್ತು ಟೇಸ್ಟಿಯಾಗಿರುತ್ತವೆ. ಅದರಲ್ಲೊಂದು ಮಂಗಳೂರು ಸ್ಪೆಷಲ್ ನೀರು ದೋಸೆ (Neer Dosa) ಮತ್ತು ತೆಂಗಿನಕಾಯಿ ಚಟ್ನಿ (Coconut Chutney).
ನೀರು ದೋಸೆ ತೆಳ್ಳಗೆ ಹಗುರವಾಗಿರುವ ಒಂದು ವಿಧವಾದ ದೋಸೆಯಾಗಿದೆ. ಆಹಾರ ತಜ್ಞ ಅಶ್ವಿನ್ ರಾಜಗೋಪಾಲನ್ ಅವರ ಪ್ರಕಾರ, 'ನೀರ್ ದೋಸೆ ಹಗುರವಾಗಿದೆ ಮತ್ತು ಮಾಡಲು ಸುಲಭವಾಗಿದೆ. ದಿನದ ಯಾವುದೇ ಸಮಯದಲ್ಲಿ ಇದನ್ನು ಸವಿಯಬಹುದು. ಹಗುರವಾದ ಈ ಗಾಳಿಯ ದೋಸೆಯನ್ನು ಅಕ್ಕಿ ಹಿಟ್ಟು (Rice Flour) ಮತ್ತು ನೀರಿನಿಂದ ತಯಾರಿಸಲಾಗುತ್ತದೆ. ತವಾದ ಮೇಲೆ ಹಿಟ್ಟನ್ನು ನಿಧಾನವಾಗಿ ಎರಚಿದಾಗ ನೀರು ದೋಸೆ ರೆಡಿಯಾಗುತ್ತದೆ. ಇದು ಎಷ್ಟು ತೆಳುವಾಗಿ ಇರುತ್ತದೆಯೆಂದರೆ ಬಹುತೇಕ ಇದನ್ನು ಕರವಸ್ತ್ರದ ಗಾತ್ರಕ್ಕೆ ಮಡಚಬಹುದು' ಎಂದು ಹೇಳುತ್ತಾರೆ.
South Indian Special Food: ಇಡ್ಲಿ ಅಲ್ಲ, ಕೊಟ್ಟೆ ಕಡುಬು ತಿಂದ್ರೆ ಆರೋಗ್ಯಕ್ಕೆ ಬೆಸ್ಟ್
ಸಾಮಾನ್ಯವಾಗಿ ನೀರ್ ದೋಸೆಯನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯುತ್ತಾರಾದರೂ ಅದಲ್ಲದೆಯೂ ಬೆಳ್ಳುಳ್ಳಿ ಚಟ್ನಿ, ಸಾಂಬಾರ್, ಚಿಕನ್ ಕರಿ ಇತ್ಯಾದಿಗಳೊಂದಿಗೆ ಇದನ್ನು ಸವಿಯಬಹುದು. ಹಾಗಾದ್ರೆ, ರುಚಿಕರವಾದ ನೀರ್ ದೋಸೆ ಮತ್ತು ತೆಂಗಿನಕಾಯಿ ಚಟ್ನಿ ಮಾಡೋದು ಹೇಗೆ ತಿಳಿಯೋಣ.
ನೀರ್ ದೋಸೆ ಮಾಡುವುದು ಹೇಗೆ ?
ನೀರ್ ದೋಸೆ ಮಾಡಲು ಮೊದಲಿಗೆ ಒಂದು ಪಾತ್ರೆಯಲ್ಲಿ ಅಕ್ಕಿಯನ್ನು ನೆನೆಸಿಡಿ. ಅರ್ಧಗಂಟೆಗಳ ಕಾಲ ಬಳಿಕ ನೆನೆಸಿದ ಅಕ್ಕಿಯನ್ನು ಮಿಕ್ಸಿಯಲ್ಲಿ ರುಬ್ಬಿ. ಇದಕ್ಕೆ ಸ್ಪಲ್ಪ ತೆಂಗಿನ ತುರಿ, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಅಕ್ಕಿ ಸಂಪೂರ್ಣ ಪುಡಿಯಾಗಿ ಹಿಟ್ಟು ನಯವಾಗಲಿ. ಈಗ ನೀರ್ ದೋಸೆ ಹಿಟ್ಟು ಸಿದ್ಧವಾಗಿದೆ ಎಂದರ್ಥ.
ಸ್ಪೆಷಲ್ ತಿಂಡಿ ಬೇಕೆಂಬ ಮಕ್ಕಳಿಗೆ ಮಾಡಿ ಕೊಡಿ ಮಂಗಳೂರು ಬನ್ಸ್
ನೀರು ದೋಸೆ ಹೊಯ್ಯುವುದು ಕೂಡಾ ಒಂದು ಕಲೆ. ಇದನ್ನು ಕಾವಲಿಯಿಟ್ಟು ಸೌಟಿನಿಂದ ಹಿಟ್ಟು ಸುರಿದು ರೌಂಡ್ ಶೇಪ್‌ಗೆ ತರಬೇಕಾಗಿಲ್ಲ. ಬದಲಿಗೆ ಅಲ್ಲಲ್ಲಿ ಹಿಟ್ಟನ್ನು ಚಿಮುಕಿಸಿದರೆ ಸಾಕು. ಆದರೆ ಕಡಿಮೆ ಪ್ರಮಾಣದಲ್ಲಿ ಹಿಟ್ಟನ್ನು ತೆಗೆದುಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ರೀತಿ ದೋಸೆ ಎರೆದು 2ರಿಂದ 3 ನಿಮಿಷ ಬೇಯಿಸಿದರೆ ತೆಳುವಾದ ನೀರು ದೋಸೆ ಸಿದ್ಧಗೊಳ್ಳುತ್ತದೆ.
ತೆಂಗಿನಕಾಯಿ ಚಟ್ನಿ ಮಾಡುವುದು ಹೇಗೆ ?
ತೆಂಗಿನಕಾಯಿ ಚಟ್ನಿ ಮಾಡಲು, ತೆಂಗಿನ ತುರಿ, ಹಸಿರು ಮೆಣಸಿನಕಾಯಿ, ಶುಂಠಿ, ಉಪ್ಪು (Salt), ಹುಣಸೆಹಣ್ಣು ಇಷ್ಟಿದ್ದರೆ ಸಾಕು. ಇವನ್ನೆಲ್ಲಾ ಒಂದು ಜಾರ್‌ಗೆ ಹಾಕಿಕೊಂಡು ಪೇಸ್ಟ್ ರೂಪದಲ್ಲಿ ರುಬ್ಬಿಕೊಳ್ಳಿ. ಪೇಸ್ಟ್ ಗೆ ತೆಂಗಿನೆಣ್ಣೆ ಸೇರಿಸಿ ಮಿಕ್ಸ್ ಮಾಡಿ. ಮತ್ತು ನಿಮ್ಮ ತೆಂಗಿನಕಾಯಿ ಚಟ್ನಿಯು ನೀರ್ ದೋಸೆಯೊಂದಿಗೆ ಬಡಿಸಲು ಸಿದ್ಧವಾಗಿದೆ.
ಹಾಗಿದ್ರೆ ಸಂಡೇ ಸ್ಪೆಷಲ್ ಬ್ರೇಕ್‌ಫಾಸ್ಟ್ (Breakfast) ನೀರ್ ದೋಸೆ, ತೆಂಗಿನಕಾಯಿ ಚಟ್ನಿ ಯಾಕೆ ಆಗ್ಬಾರ್ದು. ಟೇಸ್ಟೀ ದೋಸೆ, ಚಟ್ನಿ ತಯಾರಿಸಿ ಸವಿಯಿರಿ. ಕರಾವಳಿ ಸ್ಪೆಷಲ್ ತಿಂಡಿ ಹೇಗಿತ್ತು ಅನ್ನೋದನ್ನು ಹೇಳೋಕೆ ಮಾತ್ರ ಮರೀಬೇಡಿ.