ಇದು ತಿನ್ನುವಾಗಲೂ ಧರಿಸಬಹುದಾದ ಮಾಸ್ಕ್ ! ವಿಡಿಯೋ ವೈರಲ್
ಚೀನಾದಲ್ಲಿ ವ್ಯಕ್ತಿಯೊಬ್ಬ ಆಹಾರ ಸೇವಿಸುವಾಗ ಧರಿಸಿರುವ ಪಕ್ಷಿಗಳ ಬಾಯಿಯಂತಿರುವ ಹಾಗೂ ಕಾಗದದಿಂದ ತಯಾರಿಸಲ್ಪಟ್ಟವಿಶಿಷ್ಟಆಕಾರದ ಮಾಸ್ಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮಾಸ್ಕ್ ಕೊಕ್ಕಿನ ಆಕಾರದಲ್ಲಿದ್ದು ಆಹಾರ ಸೇವಿಸಲು ವ್ಯಕ್ತಿ ಬಾಯಿ ತೆರೆದಾಗೆಲ್ಲಾ ಬಾಯಿಮುಂದೆ ಕೊಕ್ಕೆ ತೆರೆದುಕೊಳ್ಳುತ್ತದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬೀಜಿಂಗ್: ಚೀನಾದಲ್ಲಿ ಕೋವಿಡ್ ತಾರಕಕ್ಕೇರಿದ್ದು ಈ ನಡುವೆ ಚೀನಾದಲ್ಲಿ ವ್ಯಕ್ತಿಯೊಬ್ಬ ಆಹಾರ (Food) ಸೇವಿಸುವಾಗ ಧರಿಸಿರುವ ಪಕ್ಷಿಗಳ ಬಾಯಿಯಂತಿರುವ ಹಾಗೂ ಕಾಗದದಿಂದ ತಯಾರಿಸಲ್ಪಟ್ಟವಿಶಿಷ್ಟಆಕಾರದ ಮಾಸ್ಕ್ ಸಾಮಾಜಿಕ ಜಾಲತಾಣ (Social media)ಗಳಲ್ಲಿ ವೈರಲ್ ಆಗಿದೆ. ಈ ಮಾಸ್ಕ್ ಕೊಕ್ಕಿನ ಆಕಾರದಲ್ಲಿದ್ದು ಆಹಾರ ಸೇವಿಸಲು ವ್ಯಕ್ತಿ ಬಾಯಿ ತೆರೆದಾಗೆಲ್ಲಾ ಬಾಯಿಮುಂದೆ ಕೊಕ್ಕೆ ತೆರೆದುಕೊಳ್ಳುತ್ತದೆ. ಇದರಿಂದ ಆಹಾರ ಸೇವಿಸುವಾಗ ಮಾಸ್ಕ್ ತೆಗೆಯುವ ಅವಶ್ಯಕತೆಯೇ ಇಲ್ಲವಾಗಿದ್ದು ನಮಗೂ ಇಂಥದ್ದೊಂದು ಮಾಸ್ಕ್ ಬೇಕು ಎಂದು ನೆಟ್ಟಿಗರು ಕಾಮೆಂಟ್ ಬರೆದಿದ್ದಾರೆ.
ಕೊಕ್ಕಿನ ಆಕಾರದ ಮಾಸ್ಕ್ ವೀಡಿಯೋ ವೈರಲ್
ಇತ್ತೀಚಿನವರೆಗೂ ಝೀರೋ ಕೋವಿಡ್ -19 ನೀತಿಯನ್ನು ಹೊಂದಿದ್ದ ಚೀನಾದಲ್ಲಿ ಓಮಿಕ್ರಾನ್ ವ್ಯಾಪಕವಾಗಿ ಹರಡುತ್ತಿದೆ. ಕ್ವಾರಂಟೈನ್‌ಗಳು, ತೀವ್ರವಾದ ಪರೀಕ್ಷೆಗಳು (Test) ಮತ್ತು ಕಠಿಣ ಪ್ರಯಾಣ ನಿರ್ಬಂಧಗಳನ್ನು ಮಾಡಲಾಗುತ್ತಿದೆ. ವೈರಸ್‌ನ ಅಲೆಯಿಂದಾಗಿ ದೇಶವು ಈಗ ಆಸ್ಪತ್ರೆಯ ಜನದಟ್ಟಣೆಯನ್ನು ಅನುಭವಿಸುತ್ತಿದೆ ಮತ್ತು ಸ್ಮಶಾನಗಳು ತುಂಬಿ ತುಳುಕುತ್ತಿವೆ. ಹೀಗಾಗಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ (Compulsory). ಮಾಸ್ಕ್ ಹಾಕುವುದರಿಂದ ತಿನ್ನುವುದು ಕಷ್ಟವಾಗುತ್ತದೆ. ಮಾಸ್ಕ್ ಸಂಪೂರ್ಣವಾಗಿ ತೆಗೆದ ಬಳಿಕವಷ್ಟೇ ತಿನ್ನಲು ಸಾಧ್ಯವಾಗುತ್ತದೆ. ಇಂಥಾ ಸಮಸ್ಯೆಗಳು ಬಂದಾಗ ಜನರು ಯಾವಾಗಲೂ ಸಮಸ್ಯೆಯನ್ನು ನಿಭಾಯಿಸಲು ಹೊಸ ಕಾರ್ಯವಿಧಾನಗಳನ್ನು ರೂಪಿಸುತ್ತಾರೆ.
ಚೀನಾ ಕೋವಿಡ್ ರಹಸ್ಯ ವರದಿ ಲೀಕ್, 20 ದಿನದಲ್ಲಿ 250 ಮಿಲಿಯನ್ ಮಂದಿಗೆ ಕೊರೋನಾ!
ಇದೆಲ್ಲದರ ನಡುವೆ, ಚೀನಾದಲ್ಲೊಬ್ಬ ವ್ಯಕ್ತಿಯೊಬ್ಬ ಕೊಕ್ಕಿನ ಆಕಾರದ ಮಾಸ್ಕ್ ಬಳಸಿ ತಿನ್ನುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಇದು ಅನೇಕ ಬಳಕೆದಾರರನ್ನು ಆಶ್ಚರ್ಯಗೊಳಿಸಿದೆ. ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ರೆಸ್ಟೋರೆಂಟ್‌ನಲ್ಲಿ ತಿನ್ನುವುದನ್ನು ಕಾಣಬಹುದು. ಫೇಸ್ ಮಾಸ್ಕ್ ಅನ್ನು ಕಾಗದದಿಂದ ದೊಡ್ಡ ಕೊಕ್ಕಿನ ರೂಪದಲ್ಲಿ ರಚಿಸಲಾಗಿದೆ ಮತ್ತು ಎಳೆಗಳಿಂದ ಬೆಂಬಲಿತವಾಗಿದೆ ಎಂದು ತೋರುತ್ತದೆ. ಅವನು ತಿನ್ನುವಾಗ, ಮುಖವಾಡವು ಕೊಕ್ಕಿನಂತೆ ತೆರೆದುಕೊಳ್ಳುತ್ತದೆ.
ಈ ವಿಡಿಯೋವನ್ನು ಸಫೀರ್ ಎಂಬವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾಸ್ಕ್ ಧರಿಸಿದ ನಂತರ ಕೋವಿಡ್ ಭಯದ ಹೊರತಾಗಿಯೂ ನನ್ನಂತಹವರು ಸುಲಭವಾಗಿ ಆಹಾರ ತಿನ್ನಬಹುದು' ಎಂದು ಶೀರ್ಷಿಕೆ ನೀಡಲಾಗಿದೆ. 17 ಸೆಕೆಂಡುಗಳ ವೀಡಿಯೊ 18,000 ವೀಕ್ಷಣೆಗಳನ್ನು ಸಂಗ್ರಹಿಸಿದೆ. ಅನೇಕ ಜನರು ನಗುವ ಎಮೋಜಿಗಳನ್ನು ಪೋಸ್ಟ್‌ನಲ್ಲಿ ಬಿಟ್ಟಿದ್ದಾರೆ. ಅದೇ ವೀಡಿಯೊವನ್ನು ಹಂಚಿಕೊಂಡ ಅನೇಕ ಬಳಕೆದಾರರು, ಈ ಮುಖವಾಡವನ್ನು ನಾನು ಎಲ್ಲಿ ಪಡೆಯಬಹುದು ಎಂದು ಪ್ರಶ್ನಿಸಿದ್ದಾರೆ.
ಚೀನಾ ಸೇರಿ ಈ 4 ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯ
ಒಮಿಕ್ರೋನ್ ಉಪತಳಿ ಬಿಎಫ್.7ನಿಂದಾಗಿ ಅನಾಹುತಕಾರಿ ಪ್ರಮಾಣದಲ್ಲಿ ಕೋವಿಡ್ ಸ್ಫೋಟಗೊಂಡಿರುವ ಚೀನಾದಲ್ಲಿ ಈ ವಾರ ಒಂದೇ ದಿನದಲ್ಲಿ ದಾಖಲೆಯ 3.7 ಕೋಟಿ ಜನರಿಗೆ ಸೋಂಕು ದೃಢಪಟ್ಟಿದೆ. ಜೊತೆಗೆ ಡಿಸೆಂಬರ್ ತಿಂಗಳ ಮೊದಲ 20 ದಿನದಲ್ಲಿ ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇ.18ರಷ್ಟುಜನರಿಗೆ ಅಂದರೆ 24.8 ಕೋಟಿ ಜನರಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಸ್ವತಃ ಚೀನಾ ಸರ್ಕಾರವೇ ಅಂದಾಜಿಸಿದೆ ಎಂದು ಮಾಧ್ಯಮ ವರದಿಯೊಂದು ಆಘಾತಕಾರಿ ಅಂಶಗಳನ್ನು ಪ್ರಕಟಿಸಿದೆ. ಕಳೆದ ಬುಧವಾರ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಆಂತರಿಕ ಸಭೆಯೊಂದನ್ನು ನಡೆಸಿದ್ದು, ಅಲ್ಲಿ ಈ ಅಂಕಿ ಅಂಶಗಳನ್ನು ಅಧಿಕಾರಿಗಳು ಪ್ರಕಟಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಬ್ಲೂಂಬಗ್‌ರ್ ನ್ಯೂಸ್’ ವರದಿ ಮಾಡಿದೆ.