ಚೀನಾ ಕೋವಿಡ್ ರಹಸ್ಯ ವರದಿ ಲೀಕ್, 20 ದಿನದಲ್ಲಿ 250 ಮಿಲಿಯನ್ ಮಂದಿಗೆ ಕೊರೋನಾ!

ಕೋವಿಡ್ ಕುರಿತು ಚೀನಾ ಸರಿಯಾದ ಮಾಹಿತಿಯನ್ನು ಇದುವರೆಗೆ ನೀಡಿಲ್ಲ. ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಲೇ ಬಂದಿದೆ. ಇದೀಗ ಚೀನಾದ ಕೋವಿಡ್ ರಹಸ್ಯ ವರದಿ ಬಹಿರಂಗವಾಗಿದೆ. 

China official covid reports leaks in social media 250 million infected in last 20 days says reports ckm

ಬೀಜಿಂಗ್(ಡಿ.24): ಚೀನಾದಲ್ಲಿ ಕೊರೋನಾ ಭಯಾಕತೆಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಪ್ರತಿ ದಿನ ಕೋವಿಡ್ ಪ್ರಕರಣ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಸಾವಿನ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ. ಅಂತ್ಯಸಂಸ್ಕಾರಕ್ಕೆ ಕನಿಷ್ಠ 3 ರಿಂದ 4 ದಿನ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಇತ್ತ ಆಸ್ಪತ್ರೆ, ಬೆಡ್ ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಆದರೂ ಚೀನಾ ಮಾತ್ರ ಕೋವಿಡ್ ಕುರಿತು ಯಾವುದೇ ಮಾಹಿತಿ ಬಿಟ್ಟುಕೊಡುತ್ತಿಲ್ಲ. ಚೀನಾದಲ್ಲಿ ಕೋವಿಡ್ ಸೋಂಕು ಹರಡುತ್ತಿರುವ ವೇಗದ ಕುರಿತು ಚೀನಾ ಮೌನ ವಹಿಸಿದೆ. ಇದರ ನಡುವೆ ಚೀನಾದ ರಹಸ್ಯ ವರದಿ ಬಿಡುಗಡೆಯಾಗಿದೆ.  ಕಳೆದ 20 ದಿನದಲ್ಲಿ 250 ಮಿಲಿಯನ್ ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಅನ್ನೋ ಭಯಾನಕ ವರದಿ ಇದೀಗ ಲೀಕ್ ಆಗಿದೆ.

ರೇಡಿಯಾ ಫ್ರಿ ಏಷ್ಯಾ ಈ ಮಾಹಿತಿ ಬಹಿರಂಗ ಪಡಿಸಿದೆ. ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ 20 ನಿಮಿಷ ನಡೆಸಿದ ರಹಸ್ಯ ಸಭೆಯ ಮಾಹಿತಿ ಬಹಿರಂಗವಾಗಿದೆ. ಈ ಸಭೆಯಲ್ಲಿ ಚೀನಾದ ಪರಿಸ್ತಿತಿ ಕುರಿತ ವರದಿಯನ್ನು ಈ ಸಭೆಯಲ್ಲಿ ಮಂಡಿಸಲಾಗಿದೆ. ಇದೇ ವರದಿ ಇದೀಗ ಸಾಮಾಜಿಕ ಜಾಲತಾದಲ್ಲಿ ಹರಿದಾಡುತ್ತಿದೆ. ಈ ವರದಿಯಲ್ಲಿ ಡಿಸೆಂಬರ್ 1 ರಿಂದ 20 ಅವದಿಯಲ್ಲಿ ಅಂದರೆ ಕಳೆದ 20 ದಿನದಲ್ಲಿ 248 ಮಿಲಿಯನ್ ಚೀನಾ ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಅಂದರೆ ಚೀನಾದ 17.65 ರಷ್ಟು ಮಂದಿಗೆ ಸೋಂಕು ತಗುಲಿದೆ.

ಮತ್ತೆ ಕೋವಿಡ್? ಈ ಭಾರತೀಯ ಸಂಪ್ರದಾಯಗಳನ್ನು ರೂಢಿಸಿಕೊಳ್ಳಿ

ರಹಸ್ಯ ವರದಿ ಬಹಿರಂಗಗೊಂಡ ಬೆನ್ನಲ್ಲೇ ಭಾರಿ ಚರ್ಚೆಯಾಗುತ್ತಿದೆ. ಚೀನಾ ಅಧಿಕಾರಿಗಳು ಡಿಸೆಂಬರ್ 1 ರಿಂದ 20 ರ ಅವಧಿಯಲ್ಲಿ 37 ಮಿಲಿಯನ್ ಮಂದಿಗೆ ಕೋವಿಡ್ ಸೋಂಕು ಆವರಿಸಿಕೊಂಡಿದೆ ಎಂದು ವರದಿ ನೀಡಿದ್ದಾರೆ. ಇದು ಜಗತ್ತಿಗೆ ಚೀನಾ ತೋರಿಸಿದ ವರದಿಯಾಗಿದೆ. ಆದರೆ ಸರ್ಕಾರ ಸಲ್ಲಿಸಿರುವ ಅಸಲಿ ವರದಿಯಲ್ಲಿ 248 ಮಂದಿ ಕೋವಿಡ್ ತುತ್ತಾಗಿರುವುದಾಗಿ ದಾಖಲಾಗಿದೆ.

ಒಮಿಕ್ರೋನ್‌ ಉಪತಳಿ ಬಿಎಫ್‌.7ನಿಂದಾಗಿ ಅನಾಹುತಕಾರಿ ಪ್ರಮಾಣದಲ್ಲಿ ಕೋವಿಡ್‌ ಸ್ಫೋಟಗೊಂಡಿರುವ ಚೀನಾದಲ್ಲಿ ಈ ವಾರ ಒಂದೇ ದಿನದಲ್ಲಿ ದಾಖಲೆಯ 3.7 ಕೋಟಿ ಜನರಿಗೆ ಸೋಂಕು ದೃಢಪಟ್ಟಿದೆ. ಜೊತೆಗೆ ಡಿಸೆಂಬರ್‌ ತಿಂಗಳ ಮೊದಲ 20 ದಿನದಲ್ಲಿ ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇ.18ರಷ್ಟುಜನರಿಗೆ ಅಂದರೆ 24.8 ಕೋಟಿ ಜನರಿಗೆ ಕೋವಿಡ್‌ ಸೋಂಕು ತಗುಲಿದೆ ಎಂದು ಸ್ವತಃ ಚೀನಾ ಸರ್ಕಾರವೇ ಅಂದಾಜಿಸಿದೆ ಎಂದು ಮಾಧ್ಯಮ ವರದಿಯೊಂದು ಆಘಾತಕಾರಿ ಅಂಶಗಳನ್ನು ಪ್ರಕಟಿಸಿದೆ. ಕಳೆದ ಬುಧವಾರ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಆಂತರಿಕ ಸಭೆಯೊಂದನ್ನು ನಡೆಸಿದ್ದು, ಅಲ್ಲಿ ಈ ಅಂಕಿ ಅಂಶಗಳನ್ನು ಅಧಿಕಾರಿಗಳು ಪ್ರಕಟಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಬ್ಲೂಂಬಗ್‌ರ್‍ ನ್ಯೂಸ್‌’ ವರದಿ ಮಾಡಿದೆ.

ರಾಹುಲ್ ಗಾಂಧಿ ಯಾತ್ರೆ ನಿಲ್ಲಿಸಲು ಕೇಂದ್ರ ಸರ್ಕಾರ ಕೋವಿಡ್ ವೈರಸ್ ಬಿಟ್ಟಿದೆ: ಉದ್ಧವ್‌ ಠಾಕ್ರೆ ಬಣ

ವರದಿ ಅನ್ವಯ ಡಿ.20ರಂದು ಒಂದೇ ದಿನ ದೇಶದಲ್ಲಿ 3.7 ಕೋಟಿ ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಇದು ವಿಶ್ವದಲ್ಲಿ ಕಳೆದ 3 ವರ್ಷಗಳಲ್ಲಿ ಎಲ್ಲಾ ದೇಶಗಳನ್ನೂ ಸೇರಿಸಿದರೂ ದಾಖಲಾದ ಒಂದು ದಿನದ ಗರಿಷ್ಠಕ್ಕಿಂತ 10 ಪಟ್ಟು ಹೆಚ್ಚು ಎಂಬುದು ಆತಂಕಕಾರಿ ವಿಷಯ. 2022ರ ಜನವರಿಯಲ್ಲಿ ವಿಶ್ವದಾದ್ಯಂತ ಒಂದೇ ದಿನ 40 ಲಕ್ಷ ಕೇಸು ದಾಖಲಾಗಿದ್ದೇ ಇದುವರೆಗಿನ ಗರಿಷ್ಠ ಪ್ರಮಾಣವಾಗಿತ್ತು.

Latest Videos
Follow Us:
Download App:
  • android
  • ios