ಮುಂಬೈಯ ವ್ಯಕ್ತಿಯೊಬ್ಬರು ಆನ್‌ಲೈನ್‌ ಖರೀದಿಸಿದ ಬಿಲ್‌ ಹಾಗೂ ಆಫ್‌ಲೈನ್‌ ಬಿಲ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ನೋಡಿ ಜನ ಗಾಬರಿಯಾಗಿದ್ದಾರೆ. ಅಲ್ಲದೇ ಇಷ್ಟೊಂದು ವ್ಯತ್ಯಾಸವಿರುತ್ತದೆಯೇ ಎಂದು ಜನ ಹೌಹಾರಿದ್ದು, ಆನ್‌ಲೈನ್‌ನಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ

ಈಗೇನಿದ್ದರೂ ಆನ್‌ಲೈನ್ ಯುಗ ಸೂಜಿಯಿಂದ ಹಿಡಿದು ಟಿವಿ ಪ್ರಿಜ್‌ ತಿನ್ನುವ ಆಹಾರ ಪ್ರತಿಯೊಂದು ಆನ್‌ಲೈನ್‌ನಲ್ಲಿಯೇ ಸಿಗುತ್ತಿರುತ್ತದೆ. 
ಬಹುತೇಕ ಯುವ ಸಮೂಹ ಈಗ ಆನ್‌ಲೈನ್‌ನಲ್ಲಿ ಫುಡ್ ಡೆಲಿವರಿ ಮಾಡಿ ರುಚಿ ರುಚಿಯಾದ ಆಹಾರದ ಸವಿಯುತ್ತಿರುತ್ತಾರೆ. ಆದರೆ ಮುಂಬೈಯ ವ್ಯಕ್ತಿಯೊಬ್ಬರು ಆನ್‌ಲೈನ್‌ ಖರೀದಿಸಿದ ಬಿಲ್‌ ಹಾಗೂ ಆಫ್‌ಲೈನ್‌ ಬಿಲ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ನೋಡಿ ಜನ ಗಾಬರಿಯಾಗಿದ್ದಾರೆ. ಅಲ್ಲದೇ ಇಷ್ಟೊಂದು ವ್ಯತ್ಯಾಸವಿರುತ್ತದೆಯೇ ಎಂದು ಜನ ಹೌಹಾರಿದ್ದು, ಆನ್‌ಲೈನ್‌ನಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. 

ರಾಹುಲ್ ಕಾಬ್ರಾ ಎಂಬ ವ್ಯಕ್ತಿ Zomato ಮತ್ತು ಆಫ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಒಂದೇ ಆಹಾರದ ಬಿಲ್‌ಗಳ ಚಿತ್ರಗಳನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಒಂದೇ ವಸ್ತುವಿಗೆ ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಇರುವ ದರದ ವ್ಯತ್ಯಾಸ ನೋಡಿ ಜನ ಬೆಚ್ಚಿ ಬಿದ್ದಿದಾರೆ. ರಾಹುಲ್ ಕಾಬ್ರಾ ಅವರು ಮುಂಬೈನ (Mumbai) ಪೂರ್ವ ಕಂಡಿವಲಿಯಲ್ಲಿರುವ (East Kandivali) ದಿ ಮೊಮೊ ಫ್ಯಾಕ್ಟರಿಯಿಂದ (The Momo Factory) ಝೊಮಾಟೊ ಮೂಲಕ ವೆಜ್ ಬ್ಲ್ಯಾಕ್ ಪೆಪ್ಪರ್ ಸಾಸ್ (veg black pepper sauce), ವೆಜ್ ಫ್ರೈಡ್ ರೈಸ್ ಮತ್ತು ಮಶ್ರೂಮ್ ಮೊಮೊಗೆ ಆರ್ಡರ್ ಮಾಡಿದ್ದರು. ಈ ಆಫ್‌ಲೈನ್ ಆರ್ಡರ್‌ನ ಒಟ್ಟು ವೆಚ್ಚ 512 ರೂಪಾಯಿಗಳು, ಆದರೆ Zomatoದಲ್ಲಿ ಈ ಆರ್ಡರ್‌ನ ವೆಚ್ಚ 690 ರೂಪಾಯಿ 75 ರೂಪಾಯಿ ರಿಯಾಯಿತಿ ದರ ಸೇರಿಸಿದ ನಂತರವೂ 690 ರೂಪಾಯಿ ಬಿಲ್ ಬಂದಿದೆ. ಅಂದರೆ 178 (690-512) ಹೆಚ್ಚಳವಾಗಿದ್ದು ಎಂದು ಅವರು ಹೇಳಿದ್ದಾರೆ. 

ಮಗನ ಕಿತಾಪತಿಗೆ ಅಪ್ಪನ ಭಯಾನಕ ರಿಫ್ಲೈ... ಫೋಸ್ಟ್‌ ವೈರಲ್‌

ಝೊಮಾಟೊ ಆಹಾರ ಸೇವಾ ಪೂರೈಕೆದಾರರಿಗೆ ಹೆಚ್ಚಿನ ಆರ್ಡರ್‌ಗಳನ್ನು ತರುತ್ತದೆ ಎಂದು ಭಾವಿಸಿದೆ. ಆದರೆ ಅದು ಅದು ಹೆಚ್ಚಿನ ಬೆಲೆಯನ್ನು ವಿಧಿಸಬೇಕೇ? ಸರ್ಕಾರ ಈ ವೆಚ್ಚದ ಹೆಚ್ಚಳವನ್ನು ಮಿತಿಗೊಳಿಸುವ ಅವಶ್ಯಕತೆಯಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ. ಆನ್‌ಲೈನ್ ಮತ್ತು ಆಫ್‌ಲೈನ್ ಆರ್ಡರ್‌ಗಳಲ್ಲಿನ ವ್ಯತ್ಯಾಸವು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ. ಒಬ್ಬ ಬಳಕೆದಾರ Zomato ಮೆನು ಮತ್ತು ಬೆಲೆಯನ್ನು ನಿರ್ಧರಿಸುವುದಿಲ್ಲ. ರೆಸ್ಟೋರೆಂಟ್ ಪಾಲುದಾರರು ಅದನ್ನು ಒದಗಿಸುತ್ತಾರೆ. ಈ ಪಾಲುದಾರರಲ್ಲಿ ಕೆಲವರು Zomato ಗೆ ತಮ್ಮ ಕಮಿಷನ್ ಅನ್ನು ಭಾಗಶಃ ಸರಿದೂಗಿಸಲು ಈ ಬೆಲೆಯನ್ನು ಹೆಚ್ಚಿಸುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಕುದುರೆ ಏರಿ ಬಂದ... ಸಿನಿಮಾ ಸ್ಟೈಲ್‌ಲ್ಲಿ ಫುಡ್ ಡೆಲಿವರಿ ಮಾಡಿದ ಸ್ವಿಗ್ಗಿ ಬಾಯ್: ವಿಡಿಯೋ ವೈರಲ್

ನಿಮ್ಮ ಸಮಯಕ್ಕೆ ನೀವು ಮೌಲ್ಯ ನೀಡುವುದಾದರೆ ಸಮಯದ ಬೆಲೆ, ಪಿಕ್ ಅಪ್ ಮಾಡಲು ರೆಸ್ಟೋರೆಂಟ್‌ಗೆ ಪ್ರಯಾಣಿಸುವ ವೆಚ್ಚ (ಗ್ಯಾಸ್ ಬೆಲೆಗಳು ಗಣನೀಯವಾಗಿ ಏರಿದೆ), ಇವೆಲ್ಲವನ್ನೂ ಗಮನಿಸಬೇಕಾಗುವುದು. ಇದ್ಯಾವುದೂ ಲೆಕ್ಕಕ್ಕೆ ಇಲ್ಲ ಎಂದಾದಲ್ಲಿ ನೀವು ಈ ಅಪ್ಲಿಕೇಶನ್‌ಗಳನ್ನು ಬಳಸದಿರುವುದು ಒಳಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಆಹಾರ ವಿತರಣಾ ಅಪ್ಲಿಕೇಶನ್‌ಗಳು ಅವರು ಏನು ಶುಲ್ಕ ವಿಧಿಸಿದರೂ, ನಮಗೆ ಸಮಯದ ಕೊರತೆ ಇರುವುದರಿಂದ ನಾವು ಪಾವತಿಸಲು ಸಿದ್ಧರಿದ್ದೇವೆ ಎಂಬ ತೀರ್ಮಾನಕ್ಕೆ ಬಂದಿವೆ. ಅವರು ನಮ್ಮ ಪರಿಸ್ಥಿತಿಯ ಅನಗತ್ಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ನೋಡಿದಂತೆ ಜೊಮೆಟೊ(Zomato) ಹಾಗೂ ಸ್ವಿಗ್ಗಿ(Swiggy) ವಿತರಿಸಿದ ಪ್ಯಾಕೇಜ್‌ಗಳು ಆಫ್‌ಲೈನ್ ಖರೀದಿ ವೇಳೆಯ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣವನ್ನು ಹೊಂದಿವೆ ಎಂದು ಮತ್ತೊಬ್ಬರು ಬರೆದಿದ್ದಾರೆ.