ಮಗನ ಕಿತಾಪತಿಗೆ ಅಪ್ಪನ ಭಯಾನಕ ರಿಫ್ಲೈ... ಫೋಸ್ಟ್ ವೈರಲ್
ಆನ್‌ಲೈನ್‌ನಲ್ಲಿ ಫುಡ್ ಡೆಲಿವರಿ ಮಾಡಿದ ಮಗನೋರ್ವ ತಪ್ಪು ವಿಳಾಸ ನೀಡಿದ್ದಾನೆ. ಆದರೆ ಆಹಾರ ಡೆಲಿವರಿಗಾಗಿ ಅಪ್ಪನ ಖಾತೆಯಿಂದ ಹಣ ಕಡಿತವಾಗಿದೆ. ಈ ಸಂಬಂಧವಾಗಿ ಅಪ್ಪ ಮಗನ ನಡುವೆ ನಡೆದ ಸಂವಹನದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆನ್‌ಲೈನ್ ಫುಡ್ ಡೆಲಿವರಿ ವೇಳೆ ಸ್ವಲ್ಪ ವಿಳಾಸ ತಪ್ಪಾದರೂ ನಿಮ್ಮ ಕೈ ಸೇರಬೇಕಾದ ಆಹಾರ ಇನ್ನೆಲ್ಲೋ ಹೋಗುತ್ತದೆ. ಜೊತೆಗೆ ಕೆಲವೊಮ್ಮೆ ಹಣ ರೀಫಂಡ್ ಆದರೆ ಮತ್ತೆ ಕೆಲವೊಮ್ಮೆ ಹಣವೂ ಸಿಗುವುದಿಲ್ಲ. ಆನ್‌ಲೈನ್‌ನಲ್ಲಿ ಫುಡ್ ಡೆಲಿವರಿ ಮಾಡಿದ ಮಗನೋರ್ವ ತಪ್ಪು ವಿಳಾಸ ನೀಡಿದ್ದಾನೆ. ಆದರೆ ಆಹಾರ ಡೆಲಿವರಿಗಾಗಿ ಅಪ್ಪನ ಖಾತೆಯಿಂದ ಹಣ ಕಡಿತವಾಗಿದೆ. ಈ ಸಂಬಂಧವಾಗಿ ಅಪ್ಪ ಮಗನ ನಡುವೆ ನಡೆದ ಸಂವಹನದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ವಿಟ್ಟರ್ ಬಳಕೆದಾರ ಜೀತು ಎಂಬುವವರು ತಮ್ಮ ಹಾಗೂ ತಂದೆಯ ನಡುವಿನ ಸಂಭಾಷಣೆಯ ಸ್ಕ್ರೀನ್ ಶಾಟೊಂದನ್ನು (Screenshot) ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಹಾಸ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಮಗ ಆನ್‌ಲೈನ್ ಆಹಾರ ಬುಕ್ ಮಾಡುವಾಗ ತಪ್ಪು ವಿಳಾಸವನ್ನು ನೀಡಿದ್ದಾನೆ. ಇದರಿಂದ ಈತ ಬುಕ್ ಮಾಡಿದ ಆಹಾರ ಬೇರೆ ಯಾವುದೋ ವಿಳಾಸಕ್ಕೆ ಹೋಗಿದೆ. ಜೊತೆಗೆ ಇದಕ್ಕೆ ಅಪ್ಪನ ಖಾತೆಯಿಂದ ಹಣವೂ ಕಡಿತವಾಗಿದೆ. ರೋಸ್ಟೆಡ್ ಚಿಕನ್ ತಿನ್ನಲು ಬಯಸಿದ್ದೆ ಆದರೆ ಅದರ ಬದಲಾಗಿ ನಾನೇ ರೋಸ್ಟ್ ಆದೆ ಎಂದು ಆತ ಈ ಸಂವಹನವನ್ನು ಪೋಸ್ಟ್ ಮಾಡುವಾಗ ಬರೆದುಕೊಂಡಿದ್ದಾರೆ.
ಕುದುರೆ ಏರಿ ಬಂದ... ಸಿನಿಮಾ ಸ್ಟೈಲ್‌ಲ್ಲಿ ಫುಡ್ ಡೆಲಿವರಿ ಮಾಡಿದ ಸ್ವಿಗ್ಗಿ ಬಾಯ್: ವಿಡಿಯೋ ವೈರಲ್
ಈ ಪೋಸ್ಟ್‌ನ್ನು 4 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು, 443 ಬರಿ ರಿಟ್ವಿಟ್ ಮಾಡಿದ್ದಾರೆ. ಅಲ್ಲದೇ ಹಲವರು ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ. ಜಿತು ಅವರು ಸ್ವಿಗ್ಗಿಯಲ್ಲಿ ಆಹಾರವನ್ನು ಬುಕ್ ಮಾಡಿದ್ದರು. ಅದರೆ ವಿಳಾಸ ತಪ್ಪಾಗಿ ನೀಡಿದ್ದರು. ಈ ವಿಚಾರವನ್ನು ಅವರು ಆಹಾರ ಪೂರೈಕೆ ಮಾಡುವ ಸಂಸ್ಥೆಯ ಬಳಿ ಹೇಳಿಕೊಂಡಾಗ ಕೂಡಲೇ ಹಣ ರೀಫಂಡ್ ಆಗಲಿದೆ. ನಿಮಗೆ ಕೂಡಲೇ ಹಣ (Money) ಸಿಗಲಿದೆ ಎಂದು ಹೇಳಿದರು. ಆದರೆ ಈ ವಿಚಾರವನ್ನು ಅವರು ತಮ್ಮ ತಂದೆಗೆ ವಾಟ್ಸಾಪ್ ಮೂಲಕ ತಿಳಿಸಿದ್ದಾರೆ. ಆದರೆ ಅವರ ತಂದೆ (Father) ಮಾತ್ರ ಇದರಿಂದ ಖುಷಿಗೊಳ್ಳಲಿಲ್ಲ.
ಸ್ವಿಗ್ಗಿಯವರು ರೀಫಂಡ್ (Refund) ಮಾಡುವುದಾಗಿ ಹೇಳಿದ್ದಾರೆ. ಆರ್ಡರ್ ತಪ್ಪಾದ ಸ್ಥಳಕ್ಕೆ ಡೆಲಿವರಿ (Delivery)ಆಗಿತ್ತು ಎಂದು ತಂದೆಗೆ ಹೇಳಿದ್ದಾರೆ. ಅದಕ್ಕೆ ಅವರ ತಂದೆ ನೀನೇನೋ ತಪ್ಪಾದ ವಿಳಾಸಕ್ಕೆ ಆರ್ಡರ್ ಮಾಡಿದೆ. ಆದರೆ ನನಗೆ ಇದುವರೆಗೆ ರೀಫಂಡ್ ಆಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ತಂದೆಯ ಈ ಉತ್ತರಕ್ಕೆ ನೆಟ್ಟಿಗರು ಬೆರಗಾಗಿದ್ದು, ಫನಿ ಫನಿಯಾಗಿ ಕಾಮೆಂಟ್ ಮಾಡಿದ್ದಾರೆ.
ಯುವತಿಗೆ ಮಿಸ್ ಯೂ ಮೆಸೇಜ್ ಕಳುಹಿಸಿದ ಡೆಲಿವರಿ ಬಾಯ್: ರಿಪ್ಲೇ ಮಾಡಿದ ಸ್ವಿಗ್ಗಿ
ಇದು ಸಂಪೂರ್ಣ ಜನ ಜೀವನವೂ ಸೋಶಿಯಲ್ ಮೀಡಿಯಾದ ಸಂಪೂರ್ಣ ಪ್ರಭಾವಕ್ಕೆ ಒಳಗಾಗುತ್ತಿರುವ ಕಾಲಮಾನವಾಗಿದ್ದು, ಪ್ರತಿಯೊಂದು ಸಣ್ಣ ಪುಟ್ಟ ದೈನಂದಿನ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಇಡೀ ಜಗತ್ತನ್ನು ಮುಟ್ಟುತ್ತಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಮನೆ ಮುಂದೆ ಪಾರ್ಕಿಂಗ್ ಮಾಡದಂತೆ ಮನೆ ಮಾಲೀಕರು ಹಾಕಿರುವ ವಿಚಿತ್ರ ಬೋರ್ಡ್‌ಗಳು ವೈರಲ್ ಆಗಿದ್ದವು.
ಉದ್ಯಾನನಗರಿ, ಸಿಲಿಕಾನ್ ಸಿಟಿ ಎಂದೆಲ್ಲಾ ಹೆಸರು ಗಳಿಸಿರುವ ಬೆಂಗಳೂರಿನಲ್ಲಿ ಕೆಲಸ ಮಾಡುವ ಅನೇಕರಿಗೆ ಟ್ರಾಫಿಕ್ ಸಮಸ್ಯೆ ಹಾಗೂ ಪಾರ್ಕಿಂಗ್ ಸಮಸ್ಯೆ ನಿತ್ಯದ ಗೋಳು. ಮೆಟ್ರೋ ನಗರಿಯಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ವಾಹನಗಳ ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಬೆಳಗ್ಗೆ ಎಲ್ಲರೂ ಕೆಲಸಕ್ಕೆ ತೆರಳುವ ಹಾಗೂ ಮರಳುವಂತಹ ಪ್ರಮುಖ ಸಮಯಗಳಲಂತೂ ಟ್ರಾಫಿಕ್ ವಿಪರೀತವಾಗಿರುತ್ತದೆ. ರಸ್ತೆಯ ಪ್ರತಿ ಇಂಚಿನಲ್ಲೂ ಕಾರುಗಳ ಚಕ್ರಗಳು ಕಾಣಿಸುತ್ತಿರುತ್ತವೆ. ಹೀಗಾಗಿ ವಾಹನಗಳ ಸಂಖ್ಯೆ ಭಾರಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೆಲ ಸೆಕೆಂಡುಗಳ ಕಾಲವೂ ಕೆಲವೊಮ್ಮೆ ಪಾರ್ಕಿಂಗ್ ಮಾಡಲು ಮಹಾನಗರಿಯಲ್ಲಿ ಸ್ಥಳವಿಲ್ಲದಂತಾಗಿದೆ. ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗದಂತೆ ತಡೆಯಲು ಪ್ರಮುಖ ಸ್ಥಳಗಳಲ್ಲಿ ಪ್ರತ್ಯೇಕ ಪಾರ್ಕಿಂಗ್ ಜಾಗಗಳನ್ನು ನಿಗದಿಪಡಿಸಲಾಗಿದೆ.
ಈ ಕಾರಣಕ್ಕೆ ಬೆಂಗಳೂರಿನಲ್ಲಿ (Bengaluru) ಕೆಲವು ಮನೆಗಳ ಮಾಲೀಕರು ತಮ್ಮ ಮನೆ ಮುಂದೆ ವಾಹನ ನಿಲ್ಲಿಸದಿರುವಂತೆ ಮನೆ ಮುಂದೆಯೇ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿರುತ್ತಾರೆ. ಅಂತಹ ನೋ ಪಾರ್ಕಿಂಗ್ ಬೋರ್ಡ್ (No Parking Board) ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟ್ಟರ್ ಬಳಕೆದಾರ ಆದಿತ್ಯ ಮೊರಾರ್ಕ (Aditya Morark) ಅವರು ನೋ ಪಾರ್ಕಿಂಗ್‌ನ ವಿಭಿನ್ನ ಬೋರ್ಡ್‌ಗಳನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಬೆಂಗಳೂರಿನ ಕೋರಮಂಗಲದ ಮನೆ ಮುಂದೆ ಇದ್ದ ನೋ ಪಾರ್ಕಿಂಗ್ ಬೋರ್ಡ್ ಇದಾಗಿದೆ.
ಈ ಎರಡು ಬೋರ್ಡ್‌ಗಳಲ್ಲಿ ಒಂದು ಬೋರ್ಡ್‌ನಲ್ಲಿ, ಇಲ್ಲಿ ಪಾರ್ಕಿಂಗ್ ಮಾಡುವ ಬಗ್ಗೆ ಯೋಚನೆಯೂ ಮಾಡದಿರಿ' ಎಂದು ಬರೆದಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ನೋ ಪಾರ್ಕಿಂಗ್ ಕೇವಲ ಐದು ನಿಮಿಷಕ್ಕೂ ಇಲ್ಲ, 30 ಸೆಕೆಂಡ್‌ಗೂ ಇಲ್ಲ, ಎಂದೆಂದಿಗೂ ಇಲ್ಲ ಎಂದು ಅವರು ಬರೆದಿದ್ದಾರೆ (No parking, not 5 minutes, not 30 seconds, not at all!)