ಛೀ..ಛೀ..ಕೇರಳಿಗರು ಬೆಕ್ಕನ್ನೂ ತಿನ್ತಾರಾ? ಟ್ವಿಟರ್‌ನಲ್ಲಿ ಏನಿದು ಬಿಸಿಬಿಸಿ ಚರ್ಚೆ!
ಬೆಕ್ಕು ಹಲವರ ಫೇವರಿಟ್ ಪೆಟ್. ಹೀಗಾಗಿಯೇ ಇದನ್ನು ಇಷ್ಟಪಟ್ಟು ಸಾಕುತ್ತಾರೆ. ಆದ್ರೆ ಮಲಯಾಳಿಗಳು ಬೆಕ್ಕನ್ನು ತಿನ್ತಾರೆ ಅನ್ನೋ ಟ್ವೀಟ್ ಸದ್ಯ ವೈರಲ್ ಆಗ್ತಿದೆ. ಅದು ಎಷ್ಟರಮಟ್ಟಿಗೆ ನಿಜ.
ಕೇರಳ ರಾಜ್ಯ, ಪ್ರಾಕೃತಿಕ ಸೌಂದರ್ಯದ ಸ್ವರ್ಗ..ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿ ಸಾಂಸ್ಕೃತಿಕ ವೈಭವವೂ ದೇಶದಲ್ಲೇ ಹೆಸರುವಾಸಿಯಾಗಿದೆ. ಹಾಗೆಯೇ ಇಲ್ಲಿನ ಆಹಾರಪದ್ಧತಿಯೂ ವಿಭಿನ್ನವಾಗಿದೆ. ಇಲ್ಲಿನ ಕೇರಳ ಸದ್ಯ, ಬಿರಿಯಾನಿ, ಬೀಫ್ ಕರಿ, ಕಪ್ಪಂ ಮೊದಲಾದವು ವಿಶಿಷ್ಟವಾಗಿದೆ. ಮಲಯಾಳಿಗಳು ಹೆಚ್ಚು ನಾನ್‌ವೆಜ್ ಪ್ರಿಯರು. ಹೀಗಾಗಿಯೇ ಇಲ್ಲಿ ವಿಭಿನ್ನ ರೀತಿಯ ನಾನ್‌ವೆಜ್ ಆಹಾರಗಳು ಹೆಚ್ಚು ಹೆಸರುವಾಸಿಯಾಗಿವೆ. ಹೀಗಿರುವಾಗ ಇಲ್ಲೊಂದೆಡೆ ಮಲಯಾಳಿಗಳು ಬೆಕ್ಕನ್ನೂ ತಿನ್ತಾರೆ ಅನ್ನೋ ಟ್ವೀಟ್ ವೈರಲ್ ಆಗಿದೆ. ಇದನ್ನು ಕೇಳಿ ಹಲವರು ದಂಗಾಗಿದ್ದಾರೆ. ಬೆಕ್ಕನ್ನೂ ಬಿಡೋದಿಲ್ವಾ ಅಂತ ಕಿಡಿಕಾರಿದ್ದಾರೆ. ಆದರೆ ಮಲ್ಲೂಸ್ ಬೆಕ್ಕನ್ನೂ ತಿನ್ತಾರೆ ಅನ್ನೋದು ಎಷ್ಟರಮಟ್ಟಿಗೆ ನಿಜ. ಟ್ವಿಟರ್‌ನಲ್ಲಿ ವೈರಲ್ ಆಗಿದ್ದೇನು?
ಸಾಮಾಜಿಕ ಮಾಧ್ಯಮದಲ್ಲಿ (Social media) ಚಿತ್ರ-ವಿಚಿತ್ರ ಸುದ್ದಿಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಜನರು ಕೆಲವೊಂದು ವಿಷಯಗಳ ಬಗ್ಗೆ ವ್ಯಾಪಕವಾದ ಚರ್ಚೆಯನ್ನೂ ನಡೆಸುತ್ತಾರೆ. ಸದ್ಯ ಮಲಯಾಳೀಸ್ ಬೆಕ್ಕನ್ನೂ (Cat) ಅಡುಗೆ ಮಾಡ್ತಾರೆ ಅನ್ನೋ ವಿಚಾರ ಎಲ್ಲೆಡೆ ವೈರಲ್ ಆಗ್ತಿದೆ.
ಮೊಸರು ಗುಲಾಬ್ ಜಾಮೂನ್, ಫಾಂಟಾ ಮ್ಯಾಗಿ… ಏನೀ ವಿಚಿತ್ರ ಕಾಂಬಿನೇಷನ್ ಸ್ನ್ಯಾಕ್ಸ್?
ಮಲಯಾಳಿಗಳು ಬೆಕ್ಕನ್ನೂ ಅಡುಗೆ ಮಾಡಿ ತಿನ್ತಾರಾ?
ವ್ಯಕ್ತಿಯೊಬ್ಬ ಮಲ್ಲುಗಳು ಅಥವಾ ಮಲಯಾಳಿಗಳು ಬೆಕ್ಕುಗಳನ್ನು ಅಡುಗೆ (Cooking) ಮಾಡುತ್ತಾರೆ ಎಂದು ಹೇಳುವ ಟ್ವೀಟ್‌ನೊಂದಿಗೆ ಚರ್ಚೆ ಪ್ರಾರಂಭವಾಯಿತು. ಟ್ವೀಟ್‌ನಲ್ಲಿ ವ್ಯಕ್ತಿ, 'ಕೇರಳದಲ್ಲಿ ಜನರು ಬೆಕ್ಕುಗಳನ್ನು ಸಹ ತಿನ್ನುತ್ತಾರೆ ಎಂದು ಮಲ್ಲು ಸ್ನೇಹಿತ (Friend)ರೊಬ್ಬರು ನನಗೆ ಹೇಳಿದನು. ನಾನು ಆಘಾತಕ್ಕೊಳಗಾದೆ' ಎಂದು ಪೋಸ್ಟ್ ಮಾಡಿದ್ದಾನೆ. ಹಲವರು ಇದು ನಿಜವಲ್ಲ ಎಂದು ತಿಳಿದಿದ್ದರು.
ಒಬ್ಬ ವ್ಯಕ್ತಿ 'ನೀವು ತಪ್ಪಾಗಿ ಅರ್ಥಮಾಡಿಕೊಂಡಿದ್ದೀರಿ, ಬ್ರೋ' ಎಂದು ಟ್ವೀಟ್ ಮಾಡಿದನು. ಒಬ್ಬ ಬಳಕೆದಾರನು (User), 'ಕೇರಳದ ಕೆಲವು ಭಾಗಗಳಲ್ಲಿ (ಕೊಟ್ಟಾಯಂ, ಇಡುಕ್ಕಿ) ಪೂಚ ಅಪ್ಪಂ ಅಥವಾ ಪೂಚ ಪುಝುಂಗಿಯಾತು ಎಂಬ ತಿನಿಸು ಮಾಡಲಾಗುತ್ತದೆ. ಪೂಚ ಎಂದರೆ ಬೆಕ್ಕು. ಇದನ್ನು 'ಬೇಯಿಸಿದ ಬೆಕ್ಕು' ಎಂದು ಅನುವಾದಿಸಬಹುದು. ಆದರೆ ಈ ಆಹಾರಕ್ಕೂ ಬೆಕ್ಕಿಗೂ ಯಾವುದೇ ಸಂಬಂಧವಿಲ್ಲ' ಎಂದು ವ್ಯಕ್ತಿ ವಿವರಿಸಿದ್ದಾರೆ. ಆದರೆ ಉಳಿದವರೆಲ್ಲರೂ ಈ ಬಗ್ಗೆ ಆತನಿಗೆ ಸ್ಪಷ್ಟನೆ ನೀಡುವ ಬದಲು ಈ ಕುರಿತು ಹಾಸ್ಯಮಯವಾಗಿ ಟ್ವೀಟ್ ಮಾಡಲು ಆರಂಭಿಸಿದರು.
ಛೀ..ಏನೆಲ್ಲಾ ಮಾಡ್ತಾರಪ್ಪಾ, ಪಾಸ್ತಾ ಬೇಯಿಸುವಾಗ ಮೊಣಕಾಲಿನ ಎಲುಬು ಸೇರಿಸಿದ ಮಹಿಳೆ!
ಇನ್ನೊಬ್ಬ ವ್ಯಕ್ತಿ 'ಮಲ್ಲು ಆಗಿ, ನಾನು ಇದನ್ನು ಖಚಿತಪಡಿಸಬಲ್ಲೆ. ನಾನು ಬೆಳಗಿನ ಉಪಾಹಾರಕ್ಕೆ ಕ್ಯಾಟ್ ರೋಸ್ಟ್, ಮಧ್ಯಾಹ್ನದ ಊಟಕ್ಕೆ ಬೆಕ್ಕಿನ ಕರಿ ಮತ್ತು ರಾತ್ರಿಯ ಊಟಕ್ಕೆ ಕ್ಯಾಟ್ ಮಂಚೂರಿಯನ್ ಸೇವಿಸಿದ್ದೆ' ಎಂದು ಹಾಸ್ಯಮಯವಾಗಿ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಗಿಡದ ಬಳಿ ಕುಳಿತಿರುವ ಬೆಕ್ಕಿನ ಚಿತ್ರವನ್ನು ಹಂಚಿಕೊಂಡಿದ್ದಾರೆ, 'ನಾನು ಮಲ್ಲು ಅಲ್ಲ. ಆದರೆ ನಾನು ಬೆಕ್ಕುಗಳನ್ನು ತಿನ್ನಲು ಬೆಳೆಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬ ವ್ಯಕ್ತಿ ದೊಡ್ಡ ಕುಕ್ಕರ್‌ನಲ್ಲಿ ಕುಳಿತಿರುವ ಬೆಕ್ಕಿನ ಚಿತ್ರವನ್ನು ಹಂಚಿಕೊಂಡು, ನಾವು ಯಾವಾಗಲೂ ಇದೇ ಅಡುಗೆಯನ್ನು ಮಾಡುತ್ತೇವೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು 'ನಾನು ಮಲ್ಲು ಅಲ್ಲ, ಆದರೆ ನಾವು ಬೆಕ್ಕಿನಿಂದ ಫಿರ್ನಿಯನ್ನು ಮಾಡುತ್ತೇವೆ' ಎಂದು ಹಾಸ್ಯಮಯವಾಗಿ ಹೇಳಿದ್ದಾರೆ.
ಇನ್ನೂ ಹಲವರು ಪೋಸ್ಟ್‌ಗೆ ಸಿಟ್ಟಿನಿಂದ ಸಹ ಕಾಮೆಂಟ್ ಮಾಡಿದ್ದಾರೆ. 'ಜನರು ಇಷ್ಟೂ ಮೂರ್ಖರಾಗಲು ಹೇಗೆ ಸಾಧ್ಯ' ಎಂದು ಒಬ್ಬ ವ್ಯಕ್ತಿ ಪ್ರಶ್ನಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ 'ಜನರು ಎಷ್ಟು ಪೆದ್ದರಾಗಿರಲು ಸಾಧ್ಯ ಎಂಬುದನ್ನು ನಾನು ಇವತ್ತು ನೋಡಿದೆ' ಎಂದದ್ದಾರೆ. ಮತ್ತೊಬ್ಬರು 'ಇದು ಹಾಸ್ಯ ಮಾಡುವ ವಿಷಯವಲ್ಲ. ಇಂಥಾ ತಪ್ಪು ವಿಷಯವನ್ನು ಹಬ್ಬಿಸುವುದು ತಪ್ಪು' ಎಂದಿದ್ದಾರೆ.