Asianet Suvarna News Asianet Suvarna News

ಪುರುಷರು ಕೂಲ್‌ಡ್ರಿಂಕ್ಸ್‌ ಕುಡಿದರೆ ಕೂದಲು ಉದುರುತ್ತದೆ ಅನ್ನೋದು ನಿಜಾನ?

ಕೂದಲು ಸೊಂಪಾಗಿ, ದಟ್ಟವಾಗಿರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅದರಲ್ಲೂ ಪುರುಷರು ಕೂದಲು ಉದುರುವ ಸಮಸ್ಯೆ ಬರದಿದ್ರೆ ಸಾಕಪ್ಪಾ ಅಂತ ಅಂದುಕೊಳ್ತಾನೆ ಇರ್ತಾರೆ. ಆದ್ರೆ ಡೈಲಿ ನಾವು ಕುಡಿಯೋ ಈ ಒಂದ್‌ ಡ್ರಿಂಕ್‌ನಿಂದ ಹೇರ್ ಲಾಸ್ ಸಮಸ್ಯೆ ಕಾಣಿಸ್ಕೊಳ್ಬೋದು ಅನ್ನೋದು ನಿಮ್ಗೊತ್ತಾ?

Male pattern baldness that wont go away, Blame your soda, sugar intake Vin
Author
First Published Dec 24, 2023, 2:38 PM IST

ಕೂದಲು ಸೊಂಪಾಗಿ, ದಟ್ಟವಾಗಿರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಕೂದಲು ಚೆನ್ನಾಗಿ ಬೆಳೆಯಲು ವಿವಿಧ ಶ್ಯಾಂಪೂಗಳು ಮತ್ತು ಎಣ್ಣೆಗಳನ್ನು ಪ್ರಯತ್ನಿಸುತ್ತಾರೆ. ಕೂದಲು ಉದುರುವುದನ್ನು ತಡೆಯಲು ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಪ್ರಯತ್ನಿಸುತ್ತಾರೆ. ಪುರುಷರು ವಿಶೇಷವಾಗಿ ಯಾವುದೇ ಸಂದರ್ಭದಲ್ಲಿ ತಲೆ ಬೋಳಾಗುವುದನ್ನು ತಪ್ಪಿಸಲು ಬಯಸುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನವರೂ ಬೋಳು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ. ಒತ್ತಡ, ಅನುವಂಶಿಕ ಸಮಸ್ಯೆಗಳು, ಹಾರ್ಮೋನುಗಳ ಅಸಮತೋಲನ ಅಥವಾ ಮಾದಕ ದ್ರವ್ಯ ಸೇವನೆಯಿಂದ ತಲೆ ಬೋಳು ಉಂಟಾಗುತ್ತದೆ. ಆದರೆ, ಪ್ರತಿದಿನ ಒಂದು ಡ್ರಿಂಕ್ ಕುಡಿದರೂ ಬೋಳು ತಲೆಯೆ ಸಮಸ್ಯೆ ಎದುರಾಗಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ?

ಬೀಜಿಂಗ್‌ನ ಸಿಂಘುವಾ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದ (Study) ಪ್ರಕಾರ, ಕೆಲವು ರೀತಿಯ ಪಾನೀಯಗಳನ್ನು ಕುಡಿಯುವ ಪುರುಷರು ಕೂದಲು ಉದುರುವಿಕೆಗೆ ಹೆಚ್ಚು ಒಳಗಾಗುತ್ತಾರೆ. ಇದಲ್ಲದೆ, ಅವರ ಬಹುಬೇಗನೇ ಬಾಲ್ಡಿಯಾಗುತ್ತಾರೆ. ಅಂಥಾ ಪಾನೀಯಗಳು (Drinks) ಯಾವುವು ತಿಳಿಯೋಣ.

Soda Health Facts: ಕೂಲ್ ಡ್ರಿಂಕ್ಸ್ ಕುಡಿದ್ರೆ ಕೂಲ್ ಆಗೋ ಬದಲು ಆರೋಗ್ಯಕ್ಕೆ ಪ್ರಾಬ್ಲಂ ಆಗುತ್ತೆ

ಎನರ್ಜಿ ಡ್ರಿಂಕ್ಸ್‌
ಚೈನೀಸ್ ಸಂಶೋಧಕರು, ಎನರ್ಜಿ ಡ್ರಿಂಕ್ಸ್ ಅಥವಾ ಸಕ್ಕರೆ ಪಾನೀಯಗಳು  ಮತ್ತು ಸೋಡಾವನ್ನು ಸೇವಿಸುವ ಜನರು ಕೂದಲು ಉದುರುವಿಕೆ ಹೆಚ್ಚು ಒಳಗಾಗುತ್ತಾರೆ ಎಂದು ಅಧ್ಯಯನದಲ್ಲಿ ಕಂಡುಹಿಡಿದಿದ್ದಾರೆ. ಶಕ್ತಿ ಪಾನೀಯಗಳ (Energy drinks) ಪರಿಣಾಮ ಪುರುಷರಲ್ಲಿ ಹೆಚ್ಚು ಗೋಚರಿಸುತ್ತದೆ. ವಿಶೇಷವಾಗಿ 13ರಿಂದ 29 ವರ್ಷ ವಯಸ್ಸಿನ ಮಧ್ಯಮ ವಯಸ್ಸಿನವರು ಈ ಕಾಯಿಲೆ (Disease)ಯಿಂದ ಪ್ರಭಾವಿತರಾಗುತ್ತಾರೆ ಎಂದು ಅಧ್ಯಯನವು ತೋರಿಸಿದೆ.
 
ಅಧ್ಯಯನವನ್ನು ಹೇಗೆ ನಡೆಸಲಾಯಿತು?
1000 ಪುರುಷರ ಮೇಲೆ ಅಧ್ಯಯನ ನಡೆಸಲಾಯಿತು. ಮೊದಲು ವಾರಕ್ಕೆ 3 ಲೀಟರ್ ಶಕ್ತಿ ಪಾನೀಯಗಳನ್ನು ಕುಡಿಯಲು ಸೂಚಿಸಲಾಗುತ್ತದೆ. ದಿನಕ್ಕೆ ಒಂದಕ್ಕಿಂತ ಹೆಚ್ಚು ಎನರ್ಜಿ ಡ್ರಿಂಕ್ ಕುಡಿಯುವವರಲ್ಲಿ ಕೂದಲು ಉದುರುವ ಅಪಾಯ ಶೇಕಡಾ 42 ರಷ್ಟು ಹೆಚ್ಚು ಎಂದು ಸಂಶೋಧಕರು ಹೇಳುತ್ತಾರೆ.

ಬೋಳು ತಲೆಯಿದ್ದವರಿಗೆ ಲೈಂಗಿಕ ಶಕ್ತಿ ಹೆಚ್ಚಿರುತ್ತೆ ಅನ್ನೋದು ನಿಜಾನ?

ಫಾಸ್ಟ್‌ಫುಡ್‌
ಫಾಸ್ಟ್ ಫುಡ್‌ಗಳನ್ನು ಸೇವಿಸುವ ಅಥವಾ ಕಡಿಮೆ ತರಕಾರಿಗಳನ್ನು ಸೇವಿಸುವವರಲ್ಲಿ ಕೂದಲು ಉದುರುವುದು (Hair loss) ಮಾತ್ರವಲ್ಲ, ಆತಂಕಕ್ಕೂ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ತಿಳಿಸಿದೆ. ಫಾಸ್ಟ್ ಫುಡ್ ಅಥವಾ ಜಂಕ್ ಫುಡ್ ಗಳು ಬೊಜ್ಜಿಗೆ ಕಾರಣವಾಗುತ್ತವೆ. ಅವರು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಆದುದರಿಂದ ಇಂತಹ ಸಂಗತಿಗಳಿಂದ ದೂರವಿರಿ ಎನ್ನುತ್ತಾರೆ ತಜ್ಞರು. 

ಕೂದಲು ಸ್ಟ್ರಾಂಗ್ ಆಗಬೇಕಾ? 
ಕೂದಲು ದುರ್ಬಲವಾಗಿದ್ದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅಂಥವರು ವಾರಕ್ಕೆ ಎರಡು ಬಾರಿ ಮಾತ್ರ ಸ್ನಾನ ಮಾಡಬೇಕು. ತಜ್ಞರ ಸಲಹೆಯೊಂದಿಗೆ ಆರ್ಯುವೇದ ಸಲಹೆಗಳನ್ನು ಪಾಲಿಸಬೇಕು. ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಲು ಅಥವಾ ದುರ್ಬಲ ಕೂದಲನ್ನು ಬಲಪಡಿಸಲು ಅಲೋವೆರಾ ಜೆಲ್‌ನ್ನು ಬಳಸಬಹುದು. ತಲೆಹೊಟ್ಟು ಕೂದಲು ಉದುರುವಿಕೆಗೆ ಮುಖ್ಯ ಕಾರಣವಾಗಿದೆ. 

ಅದಕ್ಕಾಗಿಯೇ ನಿಂಬೆ ರಸ ಮತ್ತು ಮೊಸರು ಬಳಸುವುದರಿಂದ ಪರಿಹಾರ ಸಿಗುತ್ತದೆ. ಕಾಲಮಾನವನ್ನು ಲೆಕ್ಕಿಸದೆ, ಸ್ನಾನ ಮಾಡುವ ಮೊದಲು ನೆತ್ತಿಗೆ ನಿಂಬೆ-ಮೊಸರು ಪೇಸ್ಟ್ ಅನ್ನು ಹಚ್ಚಿ. ಕೂದಲು ದಪ್ಪವಾಗಿದ್ದರೆ.. ಹೊಳೆಯುವ, ಕೂದಲಿನ ಬೆಳವಣಿಗೆಗೆ ಮೊಟ್ಟೆಯ ಹೇರ್ ಮಾಸ್ಕ್ ಹಚ್ಚಿ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ. 

Follow Us:
Download App:
  • android
  • ios