ಲಂಡನ್‌ನಲ್ಲಿ ಪ್ರಸಿದ್ಧವಾಗಿರುವ ಹಾಟೆಸ್ಟ್ ಕರಿ ಚಾಲೆಂಜ್‌ನಲ್ಲಿ ಭಾಗವಹಿಸಿದ ಯುವಕನೊಬ್ಬ ತೀವ್ರ ಖಾರದಿಂದಾಗಿ ಅಸ್ವಸ್ಥನಾದ ಘಟನೆ ವೈರಲ್ ಆಗಿದೆ.

ಜಗತ್ತಿನ ಒಂದೊಂದು ಕಡೆ ಒಂದೊಂದು ರೀತಿಯ ಆಹಾರ ಪ್ರಸಿದ್ಧಿ ಪಡೆದಿರುತ್ತದೆ. ಆಯಾ ಊರು ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಹಾರಗಳು ಪ್ರಸಿದ್ಧಿ ಪಡೆದಿರುತ್ತದೆ. ಪ್ರವಾಸಿಗರು, ಆ ಪ್ರದೇಶಕ್ಕೆ ಮೊದಲ ಬಾರಿ ಭೇಟಿ ನೀಡುವ ಜನರು ಒಂದು ಸ್ಥಳದಲ್ಲಿ ಪ್ರಸಿದ್ಧಿ ಪಡೆದ ಆಹಾರವನ್ನು ಸೇವಿಸಿ ಖುಷಿ ಪಡುತ್ತಾರೆ. ಹಲವು ಆಹಾರ ಬ್ಲಾಗರ್‌ಗಳು ದೇಶ ವಿದೇಶಗಲ್ಲಿ ಸಂಚರಿಸಿ ಆಯಾ ಪ್ರದೇಶದ ವಿಶೇಷ ತಿನಿಸುಗಳನ್ನು ಪರಿಚಯಿಸುತ್ತಿರುತ್ತಾರೆ.ಹಾಗೆಯೇ ಆಹಾರಕ್ಕೆ ಸಂಬಂಧಿಸಿದಂತೆ ಕೆಲವು ರೆಸ್ಟೋರೆಂಟ್‌ಗಳು ಫುಡ್ ಚಾಲೆಂಜ್‌(food challenge)ಗಳನ್ನು ಆಗಾಗ ಏರ್ಪಡಿಸುತ್ತಾರೆ. ಕೆಲವು ಹೊಟೇಲ್‌ಗಳಲ್ಲಿ ಕೆಲ ನಿಮಿಷಗಳಲ್ಲಿ ನೂರಾರು ವಿಧಗಳಿರುವ ಆಹಾರವನ್ನು ತಿಂದು ಮುಗಿಸಿದರೆ ಬಹುಮಾನ ನೀಡುವಂತಹ ಚಾಲೆಂಜ್‌ಗಳನ್ನು ಏರ್ಪಡಿಸುತ್ತಾರೆ. ತಿಂಡಿಪೋತರೂ ಆಗಿರುವ ಆಹಾರ ಬ್ಲಾಗರ್‌ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ವೀಡಿಯೋಗಳನ್ನು ತಮ್ಮ ಸೋಶೀಯಲ್ ಮೀಡಿಯಾಗಳಲ್ಲಿ ಹಾಕುತ್ತಾರೆ. ಈ ವೀಡಿಯೋಗಳನ್ನು ಸಾಕಷ್ಟು ಜನ ವೀಕ್ಷಿಸುತ್ತಾರೆ. ಕೇವಲ ಫುಡ್ ಬ್ಲಾಗರ್‌ಗಳು ಮಾತ್ರವಲ್ಲದೇ ಸಾಮಾನ್ಯ ಜನರು ಕೂಡ ಈ ಆಯಾ ಪ್ರದೇಶದ ವಿಶೇಷ ಆಹಾರಗಳನ್ನು ತಿಂದು ತಮ್ಮ ಅನುಭವವನ್ನು ಹೇಳುತ್ತಾರೆ.

ಅದೇ ರೀತಿ ಇಲ್ಲೊಂದು ಕಡೆ ವ್ಯಕ್ತಿಯೊಬ್ಬರು ಲಂಡನ್‌ನಲ್ಲಿ ಸಾಕಷ್ಟು ಫೇಮಸ್ ಆಗಿರುವ ಹಾಟೆಸ್ಟ್ ಕರಿ ಚಾಲೆಂಜ್‌ನಲ್ಲಿ ಭಾಗವಹಿಸಿದ್ದು, ಅತ್ಯಂತ ಖಾರ ಖಾರವಾಗಿರುವ ಈ ಹಾಟೆಸ್ಟ್ ಲಂಡನ್ ಕರಿ ಸೇವಿಸಿದ ನಂತರ ಯುವಕನ ಸ್ಥಿತಿ ಹೇಗಾಯ್ತು ಎಂಬುದು ವೀಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. @Bengal_Village ಎಂಬ ಎಕ್ಸ್ ಖಾತೆಯಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಲಂಡನ್ ಹಾಟೆಸ್ಟ್‌ ಕರಿ ಸೇವಿಸಿದ ನಂತರದ ಸ್ಥಿತಿ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ವೀಡಿಯೋದಲ್ಲಿ ಕಾಣುವಂತೆ ಯುವಕನೋರ್ವ ಈ ಚಾಲೆಂಜ್‌ನಲ್ಲಿ ಭಾಗಿಯಾದ ನಂತರ ತೀವ್ರ ಅಸ್ವಸ್ಥನಾಗಿದ್ದು, ಖಾರ ತಡೆದುಕೊಳ್ಳಲಾಗದೇ ರಸ್ತೆ ಬದಿ ಕುಳಿತೇ ಬಿಟ್ಟಿದ್ದಾನೆ. ಮತ್ತೊಬ್ಬ ವ್ಯಕ್ತಿ ಆತನಿಗೆ ನೀರು ನೀಡಿ ಆತನನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನ ಮಾಡಿದ್ದಾರೆ. ವೀಡಿಯೋದಲ್ಲಿ ರೆಸ್ಟೋರೆಂಟ್ ಮಾಲೀಕರು, ನನ್ನ ಸಹೋದರ, ಈ ಬಗ್ಗೆ ನೀವು ಏನು ಹೇಳುತ್ತೀರಿ? ಸ್ವಲ್ಪ ನೀರು ಕುಡಿಯಿರಿ, ಇಲ್ಲದಿದ್ದರೆ ನಿಮಗೆ ಇನ್ನೂ ಕಷ್ಟವಾಗಬಹುದು ಒಂದೇ ಒಂದು ಗುಟುಕು ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತಿದೆ. ಈ ವೇಳೆ ಗ್ರಾಹಕ ಒಂದು ಸಿಪ್ ನೀರು ಕುಡಿದಿದ್ದು, ಈ ವೇಳೆ ಹೊಟೇಲ್ ಮಾಲೀಕ ಈಗ ನೀವು ಸರಿ ಹೋಗುವಿರಿ ಎಂದು ಹೇಳುತ್ತಿರುವುದು ವೀಡಿಯೋದಲ್ಲಿದೆ.

ಲಂಡನ್‌ನಲ್ಲಿರುವ ಈ ರೆಸ್ಟೋರೆಂಟ್ ತನ್ನ ಅತ್ಯಂತ ಹಾಟೆಸ್ಟ್ ಕರಿ ಸವಾಲಿನಿಂದಾಗಿ ವೈರಲ್ ಆಗುತ್ತಿದ್ದು, ಈ ಚಾಲೆಂಜ್ ಸ್ವೀಕರಿಸಿದ ವ್ಯಕ್ತಿಗಳು ಸಂಕಟ ಪಡುವಂತೆ ಮಾಡಿದೆ. ಯುಕೆಯ ಲಂಡನ್‌ನ ಬ್ರೀಕ್‌ ಲೇನ್‌ನಲ್ಲಿರುವ ಬೆಂಗಾಲ್ ವಿಲೇಜ್ ಹೆಸರಿನ ರೆಸ್ಟೋರೆಂಟ್ ಇದಾಗಿದ್ದು, ಭಾರತೀಯ ಪಾಕಪದ್ಧತಿಯ ಹೊಟೇಲ್ ಇದಾಗಿದೆ. ಈ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಹಲವು ವಿಭಿನ್ನ ಆಹಾರಗಳ ಸೇವಿಸುವ ಸವಾಲನ್ನು ತನ್ನ ಗ್ರಾಹಕರಿಗೆ ನೀಡುತ್ತದೆ.

ದಿ ಸ್ಟ್ಯಾಂಡರ್ಡ್ ಯುಕೆ ಪ್ರಕಾರ, ಈ ಹಾಟೆಸ್ಟ್ ಕರಿಯೂ ಪ್ರಪಂಚದೆಲ್ಲೆಡೆಯ 72 ಮಸಾಲೆಗಳ ಪದಾರ್ಥಗಳನ್ನು ಒಳಗೊಂಡಿದೆ, ಅವುಗಳಲ್ಲಿ ಕೆರೊಲಿನಾ ರೀಪರ್, ಸ್ಕಾಚ್ ಬಾನೆಟ್, ವಿವಿಧ ರೀತಿಯ ನಾಗ ಮತ್ತು ಬರ್ಡ್ಸ್ ಐ ಚಿಲ್ಲಿ, ಬಾಂಗ್ಲಾದೇಶದ ಸ್ನೇಕ್ ಚಿಲ್ಲಿ ಮತ್ತು ಪೂಕ್ ಮೊರಿಚ್ ಅಥವಾ ಫ್ಲೈ ಚಿಲ್ಲಿ ಎಂದು ಕರೆಯಲ್ಪಡುವ ಮಸಾಲೆಯೂ ಸೇರಿದೆ.

ಬೆಂಗಾಲ್ ವಿಲೇಜ್‌ ರೆಸ್ಟೋರೆಂಟ್‌ನ ಪಾಕತಜ್ಞರು ಈ ಅತ್ಯಂತ ಮಸಾಲೆಯುಕ್ತ ಖಾರವಾದ ಪದಾರ್ಥವನ್ನು ತಯಾರಿಸುವಾಗ ನೀಲಿ ಕೈಗವಸುಗಳನ್ನು ಧರಿಸುತ್ತಾರೆ. 72 ಬಗೆಯ ಮೆಣಸಿನಕಾಯಿಗಳನ್ನು ಪುಡಿಯಾಗಿ ಪುಡಿಮಾಡಿ ಸಾಸಿವೆ, ಮೆಂತ್ಯ, ಜೀರಿಗೆ ಮತ್ತು ಇತರ ಪದಾರ್ಥಗಳ ಜೊತೆ ಬೇಯಿಸಲಾಗುತ್ತದೆ. ಇದಾರ ಗ್ರೇವಿಯನ್ನು ತುಪ್ಪ, ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನಕಾಯಿ ಮಸಾಲೆಗಳು ಮತ್ತು ಕೆಲವು ಟೊಮೆಟೊಗಳೊಂದಿಗೆ ತಯಾರಿಸಲಾಗುತ್ತದೆ.

ಇದಕ್ಕೆ ಬಳಸುವ ಸಾಸ್ ದಪ್ಪ ಮತ್ತು ಗಾಢ ಕೆಂಪು ಕಂದು ಬಣ್ಣದಲ್ಲಿರುತ್ತದೆ. ಇದರ ಮಧ್ಯದಲ್ಲಿ ಅಲಂಕಾರಿಕ ಹಳದಿ ಮೆಣಸಿನಕಾಯಿ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಲಾಗುತ್ತದೆ.

Scroll to load tweet…