Asianet Suvarna News Asianet Suvarna News

Healthy Food: ಬೇಸಿಗೆಯಲ್ಲಿ ಹಲಸಿನ ಹಣ್ಣು ತಿನ್ಬಹುದಾ?

ತನ್ನ ಸುವಾಸನೆ ಮೂಲಕವೇ ಜನರನ್ನು ಆಕರ್ಷಿಸುವ ಶಕ್ತಿ ಹಲಸಿನ ಹಣ್ಣಿಗಿದೆ. ಜನರು ಇಷ್ಟಪಟ್ಟು ತಿನ್ನುವ ಹಣ್ಣುಗಳಲ್ಲಿ ಇದೂ ಒಂದು. ಆದ್ರೆ ಬೇಸಿಗೆ ಮುಗಿದು ಮಳೆಗಾಲ ಶುರುವಾಗ್ತಿದ್ದಂತೆ ಅದ್ರ ಸೇವನೆ ಬೆಸ್ಟ್, ಬೇಸಿಗೆಯಲ್ಲಿ ಹಲಸಿನ ಹಣ್ಣು ತಿನ್ನಲೇಬೇಡಿ ಎನ್ನುವವರಿಗೆ ಇಲ್ಲೊಂದು ಕಿವಿಮಾತಿದೆ. 
 

Know Is It Safe To Eat Jackfruit In Summer
Author
First Published Apr 18, 2023, 7:00 AM IST

ಮಾರುಕಟ್ಟೆಯಲ್ಲಿ ಹಲಸಿನ ಘಮ ಶುರುವಾಗ್ತಿದೆ. ಹಲಸಿನ ಕಾಯಿ ಹಾಗೂ ಹಣ್ಣುಗಳು ನಿಧಾನವಾಗಿ ಮಾರುಕಟ್ಟೆಗೆ ಬರ್ತಿವೆ. ಹಳ್ಳಿಗಳಲ್ಲಿ ಹಲಸಿನ ಹಣ್ಣಿಗೆ ಬರವಿಲ್ಲ. ಹಿಂದಿನ ಕಾಲದಲ್ಲಿ ಮನೆಗಳಲ್ಲಿ 10- 15 ಜನರಿರ್ತಿದ್ದರು. ಎಲ್ಲರಿಗೂ ಸರಿಯಾಗಿ ಊಟಕ್ಕೆ ಸಿಗ್ತಿರಲಿಲ್ಲ. ಪ್ರತಿ ದಿನ ಪಟ್ಟಣಕ್ಕೆ ಹೋಗಿ ತರಕಾರಿ, ಬೇಳೆ ತರೋದು ಸಾಧ್ಯವಿರಲಿಲ್ಲ. ಅಂಥ ಸಂದರ್ಭದಲ್ಲಿ, ಹಲಸಿನ ಋತು ಬಂದ್ರೆ ಅದೇ ಮೂರು ಹೊತ್ತಿನ ಆಹಾರವಾಗಿತ್ತು. ನಮ್ಮಜ್ಜನ ಕಾಲದಲ್ಲಿ ಹಲಸಿನ ಋತು ಶುರುವಾಗ್ತಿದ್ದಂತೆ ಹಲಸಿನ ಕಾಯಿ ಹಪ್ಪಳ, ಹಲಸಿನ ಕಾಯಿ ಸಾಂಬಾರ್, ಚಟ್ನಿ, ಪಲ್ಯ, ಹಲಸಿನ ಹಣ್ಣು, ಹಣ್ಣಿನ ದೋಸೆ, ಹಣ್ಣಿನ ಕಡುಬು, ಹಲಸಿನ ಹಣ್ಣಿನಲ್ಲಿರುವ ಬೇಳೆಯನ್ನು ತೆಗೆದು ಅದನ್ನು ಸುಟ್ಟು ಅಥವಾ ಬೇಯಿಸಿ ತಿನ್ನುತ್ತಿದ್ದರಂತೆ. ಈಗಿನ ಕಾಲದಲ್ಲಿ ಸಾಕಷ್ಟು ತರಕಾರಿ ಸಿಗೋದ್ರಿಂದ ಅನೇಕರ ಮನೆಯ ತೋಟದಲ್ಲಿ ಹಲಸಿನ ಹಣ್ಣು ಕೊಳೆಯುತ್ತಿರುತ್ತದೆ. ಇನ್ನು ಪಟ್ಟಣದ ಜನರು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ದುಬಾರಿ ಬೆಲೆ ನೀಡಿ ಹಲಸಿನ ತೊಳೆ ಖರೀದಿ ಮಾಡ್ತಾರೆ.

ಬೇಸಿಗೆ (Summer) ಯಲ್ಲಿಯೇ ಹಲಸಿನ ಬೆಳೆ ಬರಲು ಶುರುವಾಗುತ್ತದೆ. ಮೇ ಅಂತ್ಯ ಹಾಗೂ ಜೂನ್ ಆರಂಭದಲ್ಲಿ ಹೆಚ್ಚು ಫಲವನ್ನು ನಾವು ಕಾಣ್ಬಹುದು. ಅನೇಕರಿಗೆ ಹಲಸಿನ ಹಣ್ಣು ಬೇಸಿಗೆಯಲ್ಲಿ ಸೇವನೆ ಮಾಡುವ ಹಣ್ಣಲ್ಲ ಎಂಬ ಭಾವನೆಯಿದೆ. ಹಲಸಿನ ಹಣ್ಣು ಸೇವನೆ ಮಾಡೋದ್ರಿಂದ ದೇಹ ಬಿಸಿಯಾಗುತ್ತದೆ. ಇದ್ರಿಂದ ಪಿಂಪಲ್ ಸಮಸ್ಯೆ ನಮ್ಮನ್ನು ಕಾಡುತ್ತದೆ ಎಂದು ಕೆಲ ಮಹಿಳೆಯರು ಭಾವಿಸ್ತಾರೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಹಲಸು ದೇಹದಲ್ಲಿ ಶಾಖವನ್ನು ಉಂಟುಮಾಡುವುದಿಲ್ಲ. ಇದರಲ್ಲಿರುವ ಪೋಷಕಾಂಶಗಳು ಚರ್ಮ ಮತ್ತು ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದಿದೆ. 

HEALTH TIPS : ಕ್ಯಾನ್ಸರ್ ಸೇರಿ ಅನೇಕ ರೋಗಕ್ಕೆ ಮದ್ದು ಮಾವಿನ ಕಾಯಿ

ಹಲಸಿನ ಹಣ್ಣಿನ (Jackfruit) ಮೇಲೆ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನ (Study) ದ ಪ್ರಕಾರ, ಇದು ಅನೇಕ ಪ್ರಮುಖ ಜೀವಸತ್ವಗಳು, ಖನಿಜಗಳು, ಪ್ರೋಟೀನ್ ಗಳು ಮತ್ತು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಇದು ರಿಬೋಫ್ಲಾವಿನ್, ಥಯಾಮಿನ್ ಮತ್ತು ಮೆಗ್ನೀಸಿಯಮ್, ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್ ಮತ್ತು ಫೈಬರನಂತಹ ಬಿ ಜೀವಸತ್ವಗಳನ್ನು ಹೊಂದಿದೆ.  

ಹಲಸಿನ ಹಣ್ಣು ಸೇವನೆಯಿಂದ ಆಗುವ ಪ್ರಯೋಜನಗಳು : 

ಜೀರ್ಣಕ್ರಿಯೆಗೆ (Digestive System) ಒಳ್ಳೆಯದು : ಹಲಸಿನ ಹಣ್ಣಿನಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದನ್ನು ಸೇವನೆ ಮಾಡುವುದ್ರಿಂದ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿ ಉತ್ಪಾದನೆಯಾಗುತ್ತದೆ.  ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಗೆ ಒಳ್ಳೆಯದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಕೂಡ ಹಲಸಿನ ಹಣ್ಣು ಮಾಡುತ್ತದೆ. 

Health Tips : ಬೇಸಿಗೆಯಲ್ಲಿ ಬಿಸಿ ಬಿಸಿ ತಿನ್ನೋದು ಸ್ವಲ್ಪ ಕಡಿಮೆ ಮಾಡಿ

ಸಕ್ಕರೆ ಮಟ್ಟ ನಿಯಂತ್ರಣಕ್ಕೆ (Sugar Level Control) ಉತ್ತಮ : ಜೀರ್ಣಕ್ರಿಯೆಯನ್ನು ಸರಿಯಾಗಿ ಮಾಡುವ ಜೊತೆಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಕೆಲಸವನ್ನು ಇದು ಮಾಡುತ್ತದೆ. ಮಧುಮೇಹ ರೋಗಿಗಳಿಗೂ ಇದು ಒಳ್ಳೆಯದು. ಪ್ರೋಟಿನ್ ಇರುವ ಹಲಸು, ಆಹಾರವನ್ನು ಸೇವನೆ ಮಾಡಿದಾಗ ಹೆಚ್ಚಾಗುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಕೆಲಸವನ್ನು ಮಾಡುತ್ತದೆ. 

ಚರ್ಮದ ಆರೋಗ್ಯ (Skin Health) ಹೆಚ್ಚಿಸುತ್ತೆ : ಹಲಸಿನ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಈ ಎರಡೂ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ಬೇಸಿಗೆಯಲ್ಲಿ ಹಲಸಿನ ಹಣ್ಣಿನ ಸೇವನೆ ಮಾಡೋದ್ರಿಂದ ಅದು ನಿಮ್ಮ ವಯಸ್ಸನ್ನು ಮುಚ್ಚಿಡುವ ಕೆಲಸ ಮಾಡುತ್ತದೆ. 

ಹಲಸಿನಲ್ಲಿದೆ ಕ್ಯಾನ್ಸರ್ ವಿರೋಧಿ (Anti Cancer) ಗುಣ : ಹಲಸಿನ ಹಣ್ಣಿನಲ್ಲಿ ಐಸೊಫ್ಲಾವೊನ್ಸ್, ಲಿಗ್ನಾನ್ಸ್ ಮತ್ತು ಸಪೋನಿನ್‌ಗಳಂತಹ ವಿವಿಧ ಫೈಟೊನ್ಯೂಟ್ರಿಯೆಂಟ್‌ ಇದೆ. ಇದು ಆಂಟಿಹೈಪರ್ಟೆನ್ಸಿವ್, ಆಂಟಿಕ್ಯಾನ್ಸರ್, ಆಂಟಿಲ್ಸರ್ ಮತ್ತು ಆಂಟಿಏಜಿಂಗ್ ಗುಣಲಕ್ಷಣಗಳನ್ನು  ಹೊಂದಿದೆ. ಹೊಟ್ಟೆ ಹುಣ್ಣು, ಕ್ಯಾನ್ಸರ್ ಆಗದಂತೆ ಇದು ತಡೆಯುತ್ತದೆ.
 

Follow Us:
Download App:
  • android
  • ios