Health Tips : ಬೇಸಿಗೆಯಲ್ಲಿ ಬಿಸಿ ಬಿಸಿ ತಿನ್ನೋದು ಸ್ವಲ್ಪ ಕಡಿಮೆ ಮಾಡಿ

ಬೇಸಿಗೆ ಸೆಕೆ ಹೆಚ್ಚಾಗ್ತಿದೆ. ಈ ಹಾಟ್ ಋತುವಿನಲ್ಲಿ ತಣ್ಣನೆ ಆಹಾರ ಸೇವನೆ ಮಾಡ್ಬೇಕು ಅನ್ನಿಸುತ್ತದೆ. ಕೆಲವರು ಈ ಸಮಯದಲ್ಲೂ ಬಿಸಿ ಆಹಾರ ತಿನ್ನುತ್ತಾರೆ. ಆದ್ರೆ ಇದು ರುಚಿ ಹೆಚ್ಚಿಸಬಹುದೇ ವಿನಃ ಆರೋಗ್ಯಕ್ಕೆ ಒಳ್ಳೆಯದಲ್ಲ.
 

Why You Should Avoid Hot Meal In Summer Season

ಕೆಲವರಿಗೆ ಆಹಾರ ಯಾವುದೇ ಇರಲಿ, ಬಿಸಿಬಿಸಿಯಾಗಿರಬೇಕು. ಚಳಿಗಾಲವಿರಲಿ, ಬೇಸಿಗೆಯಿರಲಿ ಇಲ್ಲ ಮಳೆಗಾಲವಿರಲಿ ಬಿಸಿ ಬಿಸಿ ಆಹಾರ, ಟೀ ಸೇವನೆ ಮಾಡ್ತಾರೆ. ಚಳಿಗಾಲದಲ್ಲಿ ಬಿಸಿ ಆಹಾರ ಸೇವನೆ ಮಾಡೋದು ಮಾಮೂಲಿ. ಆದ್ರೆ ಬೇಸಿಗೆಯಲ್ಲೂ ನೀವೂ ಬಿಸಿ ಆಹಾರ ಸೇವನೆ ಮಾಡ್ತೀರಿ ಅಂದ್ರೆ ಎಚ್ಚೆತ್ತುಕ್ಕೊಳ್ಳಿ. ಇದು ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ. ನಾವಿಂದು ಬೇಸಿಗೆಯಲ್ಲಿ ಬಿಸಿ ಆಹಾರ ಸೇವನೆ ಮಾಡಿದ್ರೆ ಏನೆಲ್ಲ ಸಮಸ್ಯೆಯಾಗುತ್ತೆ ಎಂಬುದನ್ನು ನಿಮಗೆ ಹೇಳ್ತೇವೆ.

ಬೇಸಿಗೆ (Summer) ಯಲ್ಲಿ ಬಿಸಿ ಆಹಾರ (food) ತಿಂದ್ರೆ ಏನಾಗುತ್ತೆ ಗೊತ್ತಾ? :

ಸುಡುತ್ತೆ ನಾಲಿಗೆ : ಬೇಸಿಗೆಯಲ್ಲೂ ಬಿಸಿ ಆಹಾರ ಸೇವಿಸಿದರೆ ನಾಲಿಗೆ ಉರಿಯುವ ಅಪಾಯವಿರುತ್ತದೆ. ತುಂಬಾ ಬಿಸಿ (Hot) ಯಾದ ಆಹಾರವನ್ನು  ತಿನ್ನೋದ್ರಿಂದ ಹಲ್ಲು ಹಾಳಾಗುತ್ತದೆ. ತುಂಬಾ ಬಿಸಿಯಾದ ಆಹಾರವನ್ನು ಸೇವಿಸುವುದರಿಂದ ನಾಲಿಗೆಯ ಮೇಲೆ ಗುಳ್ಳೆ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಗಂಟಲಿನಲ್ಲಿ ಊತ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಅನ್ನನಾಳದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಅಪಾಯವಿರುತ್ತದೆ ಎನ್ನುತ್ತಾರೆ ತಜ್ಞರು.

Health Tips: ಮಕ್ಕಳ ಶಕ್ತಿ ಹೆಚ್ಚಿಸಲು ಅಪ್ಪಿತಪ್ಪಿಯೂ ಇದನ್ನು ನೀಡ್ಬೇಡಿ

ಹಲ್ಲು (Tooth) ಗಳಿಗೆ ಹಾನಿ : ತುಂಬಾ ಬಿಸಿಯಾದ ಅಥವಾ ತಣ್ಣನೆಯ ಆಹಾರವನ್ನು ತಿನ್ನುವುದು ಹಲ್ಲುಗಳಿಗೆ ಹಾನಿಯುಂಟು ಮಾಡುತ್ತದೆ.  ದಂತಕವಚ ಹಾಳಾಗುವ ಸಾಧ್ಯತೆ ಇರುತ್ತದೆ. ಹಲ್ಲಿನ ಆರೋಗ್ಯ ಕೆಡುವುದರ ಜೊತೆಗೆ ಹಲ್ಲಿನ ಸೌಂದರ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಕರುಳಿಗೆ ಅಪಾಯಕಾರಿ : ಬೇಸಿಗೆಯಲ್ಲಿ ಬಿಸಿಯಾದ ಆಹಾರ ಸೇವಿಸುವುದರಿಂದ ಕರುಳಿಗೆ ಹಾನಿಯಾಗುವ ಸಂಭವ ಇರುತ್ತದೆ. ತುಂಬಾ ಬಿಸಿಯಾದ ಆಹಾರ ಹೊಟ್ಟೆ ಸೇರಿದಾಗ ಕರುಳು ಬೇಗ  ತಣ್ಣಗಾಗುವುದಿಲ್ಲ. ಇದ್ರಿಂದ ಕರುಳಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. 

Health Tips : ನಾಲ್ಕರಲ್ಲಿ ಒಬ್ಬರಿಗೆ ಮುನ್ಸೂಚನೆಯೇ ಇಲ್ಲದೆ ಬರುತ್ತೆ ಹೃದಯಾಘಾತ

ಹೊಟ್ಟೆಗೆ ಕಾಡುತ್ತೆ ಸಮಸ್ಯೆ : ಬೇಸಿಗೆ ಸಮಯದಲ್ಲಿ ಹೊಟ್ಟೆಯ ಬಿಸಿ ಹೆಚ್ಚಿರುತ್ತದೆ. ಬಿಸಿಯಾದ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬಿದ ಅನುಭವವಾಗುತ್ತದೆ. ಬಿಸಿ ಆಹಾರ ಸೇವನೆ ಮಾಡೋದ್ರಿಂದ ಹೊಟ್ಟೆಯ ಚರ್ಮ ಸುಡುವ ಸಾಧ್ಯತೆಯಿರುತ್ತದೆ. ಹೊಟ್ಟೆಯಲ್ಲಿ ಗುಳ್ಳೆಗಳಾಗುವ ಸಾಧ್ಯತೆಯಿದೆ. ಬಿಸಿ ಆಹಾರವನ್ನು ಸೇವಿಸಿದ ನಂತರ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಹೆಚ್ಚು ಶ್ರಮ ಮತ್ತು ಸಮಯ ತೆಗೆದುಕೊಳ್ಳುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ತೊಂದರೆಯಾಗುತ್ತದೆ. ಹೊಟ್ಟೆಯಲ್ಲಿ ಆಮ್ಲೀಯತೆ, ವಾಕರಿಕೆ ಮತ್ತು ವಾಂತಿಯಂತ ಸಮಸ್ಯೆ ಕಾಡುತ್ತದೆ. 

ವಿಟಮಿನ್ ಬಿ ಮತ್ತು ಸಿ ನಾಶವಾಗುತ್ತದೆ : ಬಿಸಿ ಆಹಾರವನ್ನು ಸೇವಿಸುತ್ತಿದ್ದರೆ ವಿಟಮಿನ್ ಸಿ ನಷ್ಟವಾಗುತ್ತದೆ. ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ. ವಿಟಮಿನ್ ಬಿ ಹಾಗೂ ಸಿ ಅಂಶವಿರುವ ಆಹಾರವನ್ನು ಹೆಚ್ಚು ಬಿಸಿ ಮಾಡಬಾರದು. ನಿಂಬೆ ಹಣ್ಣಿನ ರಸವನ್ನು ಕೂಡ ನೀವು ಬೇಯಿಸಬಾರದು. ಆಹಾರದ ಕೊನೆಯಲ್ಲಿ ನಿಂಬೆ ರಸವನ್ನು ಬೆರೆಸಿ ಸೇವನೆ ಮಾಡ್ಬೇಕು.

ಜೀರ್ಣಕ್ರಿಯೆ ಸಮಸ್ಯೆ : ಬೇಸಿಗೆಯಲ್ಲೂ ಅನೇಕರು ಮೈಕ್ರೊವೇವ್‌ನಲ್ಲಿ ಆಹಾರವನ್ನು ಬಿಸಿ ಮಾಡಿ ಸೇವನೆ ಮಾಡ್ತಾರೆ. ಆದ್ರೆ ಬೇಸಿಗೆ ಕಾಲದಲ್ಲಿ ನೀವು ಮೈಕ್ರೊವೇವ್ ನಲ್ಲಿ ಆಹಾರವನ್ನು ಬಿಸಿ ಮಾಡಿ ಸೇವನೆ ಮಾಡಿದ್ರೆ ಅದು ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೈಕ್ರೋವೇವ್‌ನಲ್ಲಿ ಆಹಾರವನ್ನು ಬಿಸಿ ಮಾಡುವುದರಿಂದ ಅದರ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ. ಇದರ ಹಾನಿಕಾರಕ ಕಿರಣಗಳು ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಇದರ ದೀರ್ಘಕಾಲೀನ ಬಳಕೆಯಿಂದ ಮೆಮೊರಿ ನಷ್ಟವಾಗುವ ಸಾಧ್ಯತೆಯಿರುತ್ತದೆ. ಇದು ಹಾರ್ಮೋನುಗಳ ಮೇಲೂ ಪರಿಣಾಮ ಬೀರುತ್ತದೆ.

ಈ ರೀತಿ ಆಹಾರ ತಿನ್ನುವುದು ಒಳ್ಳೆಯದು : ಆರೋಗ್ಯಕರ ಮತ್ತು ಸಮೃದ್ಧ ಜೀವನವನ್ನು ನಡೆಸಲು, ಮನುಷ್ಯನು ತನ್ನ ದೇಹದ ಉಷ್ಣತೆಗೆ ಅನುಗುಣವಾಗಿ ತಿನ್ನಬೇಕು. ಅತಿ ತಣ್ಣಗಾದ ಅಥವಾ ಹೆಚ್ಚು ಕುದಿಯುವ ಆಹಾರವನ್ನು ಸೇವಿಸಬಾರದು.
 

Latest Videos
Follow Us:
Download App:
  • android
  • ios