ತ್ರಿಶೂರು(ಜ.16): ಕೇರಳದ ತ್ರಿಸ್ಸೂರಿನಲ್ಲಿ ನೂರಾರು ಬಾಣಸಿಗರು ಹಾಗೂ ಕೇಕ್ ಪರಿಣಿತರು ಸೇರಿ ಬರೋಬ್ಬರಿ 6.5 ಕಿ.ಮೀ ಉದ್ದದ ಕೇಕ್ ನಿರ್ಮಾಣ ಮಾಡಿದ್ದಾರೆ.

ಒಟ್ಟು 10 ಸೆ.ಮೀ ಅಗಲ ಹಾಗೂ ದಪ್ಪ ಇರುವ ಕೇಕ್ ಬರೋಬ್ಬರಿ 27 ಸಾವಿರ ಕಿಲೋ ತೂಕವಿದ್ದು, 6.5 ಕಿ.ಮೀ ಉದ್ದವಿದೆ ಎನ್ನಲಾಗಿದೆ.

ಒಟ್ಟು 1,500 ಬಾಣಸಿಗರು ಸೇರಿ 12 ಸಾವಿರ ಕಿಲೋ ಸಕ್ಕರೆ ಹಾಗೂ ಹಿಟ್ಟನ್ನು ಬಳಿಸಿ ಕೇವಲ ನಾಲ್ಕು ತಾಸಿನಲ್ಲಿ ಈ ಕೇಕ್’ನ್ನು ತಯಾರಿಸಿದ್ದಾರೆ.

ಕೇರಳದ ಬೇಕರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಈ ಬೃಹತ್ ಕೇಕ್’ನ್ನು ತಯಾರಿಸಲಾಗಿದ್ದು, ಗಿನ್ನೀಸ್ ದಾಖಲೆ ಸೇರುವ ವಿಶ್ವಾಸವಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನೌಶಾದ್ ಭರವಸೆ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ ಬರ್ತಡೇ ಕೇಕ್ ಬೆಲೆ ಏನ್ ದುಬಾರಿ ರೀ!

ಈ ಹಿಂದೆ 2018ರಲ್ಲಿ ಚೀನಾದ ಜಿಕ್ಸಿ ಕೌಂಟಿಯಲ್ಲಿ 3.2 ಕಿ.ಮೀ ಉದ್ದದ ಕೇಕ್’ನ್ನು ತಯಾರಿಸಲಾಗಿತ್ತು. ಇದು ಗಿನ್ನೀಸ್ ದಾಖಲೆ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.