ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಜುಲೈ 18 ರಂದು ಮಿಯಾಮಿಯಲ್ಲಿ 37 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪಿಗ್ಗಿ ಬರ್ತಡೇ ಕೇಕ್ ಸಿಕ್ಕಾಪಟ್ಟೆ ಗಮನ ಸೆಳೆದಿದೆ.

ಅದರಲ್ಲೇನು ವಿಶೇಷ ಅಂತೀರಾ? ಖಂಡಿತಾ ಇದೆ. ಇದು ಅಂತಿಂಥಾ ಕೇಕ್ ಅಲ್ಲ. ಬಲು ದುಬಾರಿ ಕೇಕ್. ಕೇಕ್ ಬೆಲೆ ಕೇಳಿದ್ರೆ ಶಾಕ್ ಆಗುತ್ತೀರಿ. ಬರೋಬ್ಬರಿ 3.45 ಲಕ್ಷ ರೂ!

 

 
 
 
 
 
 
 
 
 
 
 
 
 

Happy BIRTHDAY to the stunning @priyankachopra @nickjonas #divinedelicaciescakes #priyankachopra #nickjonas

A post shared by divinedelicaciescakes (@divinedelicaciescakes) on Jul 19, 2019 at 8:28am PDT

" ಬರ್ತಡೇಗೆ ಪ್ರಿಯಾಂಕ ರೆಡ್ ಕಲರ್ ಡ್ರೆಸ್ ಧರಿಸಿದ್ದರು. ಹಾಗಾಗಿ ಅದೇ ಬಣ್ಣದ ಕೇಕ್ ಬೇಕೆಂದು ನಿಕ್ ಇಷ್ಟಪಟ್ಟಿದ್ದರು. ಮೊದಲು ಪ್ಲಾನ್ ಇರಲಿಲ್ಲ. ಡಿಢೀರನೇ ಕೇಕ್ ಗೆ ಆರ್ಡರ್ ಕೊಡಲಾಯಿತು. 24 ಗಂಟೆಯಲ್ಲಿ ಕೇಕ್ ತಯಾರು ಮಾಡಲಾಗಿದೆ. ಚಾಕಲೇಟ್ ಹಾಗೂ ವೆನಿಲ್ಲಾ ಕೇಕ್ ಬರೋಬ್ಬರಿ 3.45 ರೂ ಬೆಲೆಯದ್ದಾಗಿದೆ" ಎಂದು ಕೇಕ್ ತಯಾರಕರು ಹೇಳಿದ್ಧಾರೆ.