Asianet Suvarna News Asianet Suvarna News

ಆಹಾರ ಎದುರಿಗಿದ್ದರೂ ತಿನ್ನದೇ ಮೊಬೈಲ್ ಒತ್ತುವ ಗ್ರಾಹಕರು: ಸ್ಮಾರ್ಟ್‌ಫೋನ್ ನಿಷೇಧಿಸಿದ ಹೊಟೇಲ್‌

ಮೊಬೈಲ್ ಚಟವನ್ನು ಸ್ವಲ್ಪ ಮಟ್ಟಿಗಾದರೂ, ಕನಿಷ್ಟ ಪಕ್ಷ ಆಹಾರ ಸೇವಿಸುವ ಸಮಯದವರೆಗಾದರು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂಬ ಕಾರಣಕ್ಕೆ ಜಪಾನ್‌ನ ಹೊಟೇಲೊಂದು ತನ್ನ ಗ್ರಾಹಕರಿಗೆ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಿದೆ. 

japan hotel banned smart phones to their customer because people press mobile phones without eating food in front of them akb
Author
First Published Apr 11, 2023, 6:41 PM IST

ಟೋಕಿಯೋ: ಆಹಾರ ಸೇವಿಸುವ ವೇಳೆ ಎಲ್ಲರೂ ಜೊತೆಯಾಗಿ ಕುಳಿತು ಆಹಾರವನ್ನು ಸೇವಿಸಬೇಕು, ಆದರೆ ಇಂದು ಬಹುತೇಕರು ಊಟ ಮಾಡುವಾಗಲೂ ಮೊಬೈಲ್ ಫೋನ್‌ನಲ್ಲಿ ಮುಳುಗಿರುತ್ತಾರೆ. ಊಟದ ಜೊತೆ ವಿಷ ಕೊಟ್ಟರೂ ಕೆಲವರಿಗೆ ಗೊತ್ತಾಗದೇನೋ ಅಷ್ಟೊಂದು ಗಹನವಾಗಿ ಕೆಲವರು ಮೊಬೈಲ್ ಫೋನ್‌ನಲ್ಲಿ ಮುಳುಗಿ ಹೋಗುತ್ತಾರೆ. ಏನು ತಿಂದೆವೆಂದು ಮರೆತು ಹೋಗುವಷ್ಟರ ಮಟ್ಟಿಗೆ ಕೆಲವರಿಗೆ ಮೊಬೈಲ್ ಚಟವಿದೆ.  ಒಂದು ಕ್ಷಣ ಮೊಬೈಲ್ ಫೋನ್ ಇಲ್ಲದಿದ್ದರೂ ಕೈ ಕಾಲೇ ಕಳೆದು ಹೋದಂತೆ ದೊಡ್ಡವರಿಂದ ಮಕ್ಕಳವರೆಗೆ ಬಹುತೇಕರು ಚಡಪಡಿಸುತ್ತಾರೆ. ಈ ಮೊಬೈಲ್ ಚಟವನ್ನು ಸ್ವಲ್ಪ ಮಟ್ಟಿಗಾದರೂ ಕನಿಷ್ಟ ಪಕ್ಷ ಆಹಾರ ಸೇವಿಸುವ ಸಮಯದವರೆಗಾದರು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂಬ ಕಾರಣಕ್ಕೆ ಜಪಾನ್‌ನ ಹೊಟೇಲೊಂದು ತನ್ನ ಗ್ರಾಹಕರಿಗೆ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಿದೆ. 

ಸಿಎನ್‌ಎನ್ ವರದಿಯ ಪ್ರಕಾರ, ಟೋಕಿಯೋದ (Tokyo) ರೆಸ್ಟೋರೆಂಟ್ ದೆಬು ಚಾನ್( ಜಪಾನಿ ಭಾಷೆಯಲ್ಲಿ ಚಬ್ಬಿ ಎಂದರ್ಥ) ತನ್ನ ಗ್ರಾಹಕರು ಊಟದ ವೇಳೆ ಅಥವಾ ಆಹಾರ ತಿನ್ನುವ ವೇಳೆ ಮೊಬೈಲ್  ಬಳಕೆಯನ್ನು ನಿಷೇಧಿಸಿದೆ.  ಪೀಕ್ ಅವರ್‌ ಅಂದರೆ ಅತ್ಯಂತ ಜನದಟ್ಟಣೆಯ ಸಮಯದಲ್ಲಿ ರೆಸ್ಟೋರೆಂಟ್‌ನಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹೇರಲಾಗಿದೆ. ಇದು ಈಗ ಜಪಾನ್‌ನ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. 

ಅತಿಯಾಗಿ ಸ್ಮಾರ್ಟ್‌ಫೋನ್ ಬಳಸಿದ್ರೆ ಅಪಾಯ ತಪ್ಪಿದ್ದಲ್ಲ, ಎಚ್ಚರವಿರಲಿ

ನಾವು ಅತ್ಯಂತ ಬ್ಯುಸಿಯಾಗಿದ್ದಾಗ ನಮ್ಮ ಗಮನಕ್ಕೆ ಬಂದಂತೆ ಆರ್ಡರ್‌ ಟೇಬಲ್ ತಲುಪಿದ ನಂತರವೂ  ಓರ್ವ ಗ್ರಾಹಕ (Customers) ನಾಲ್ಕು ನಿಮಿಷಗಳವರೆಗೆ ತಿನ್ನುವುದನ್ನೇ ಶುರು ಮಾಡಿರಲಿಲ್ಲ. ತಮ್ಮ  ಕಣ್ಣೆದುರೇ ಆಹಾರ ತಣ್ಣಗಾಗುವವರೆಗೂ  ಗ್ರಾಹಕರು  ಮೊಬೈಲ್‌ನಲ್ಲಿ ವಿಡಿಯೋವನ್ನೋ ಮತ್ತೆನನ್ನೋ ನೋಡಿಕೊಂಡು ಕುಳಿತಿರುತ್ತಾರೆ ಇದೇ ಕಾರಣಕ್ಕೆ ರೆಸ್ಟೋರೆಂಟ್‌ನಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹೇರಿರುವುದಾಗಿ ರೆಸ್ಟೋರೆಂಟ್ ಮಾಲೀಕ ಕೊಟಾ ಕೈ ಹೇಳಿದ್ದಾರೆ. 

ಮಾಲೀಕರ ಪ್ರಕಾರ, ಅವರು ಬಡಿಸುವ ತೆಳುವಾದ ನೂಡಲ್ಸ್ ಕೇವಲ ಒಂದು ಮಿಲಿಮೀಟರ್ ಅಗಲವಾಗಿರುತ್ತದೆ, ಆದ್ದರಿಂದ ಅವು ಬೇಗನೆ  ಹಾಳಾಗಲು ಪ್ರಾರಂಭಿಸುತ್ತವೆ. ಹೀಗಾಗಿ ತಯಾರಾದ ನಂತರವೂ ತಿನ್ನದೇ  ನಾಲ್ಕು ನಿಮಿಷ ಕಾಯುವುದು ಕೆಟ್ಟ ಊಟಕ್ಕೆ ಕಾರಣವಾಗಬಹುದು ಎಂದು ಕೊಟಾ ಕೈ ಹೇಳಿದ್ದಾರೆ. 

Mobile Addiction: ಮಕ್ಕಳನ್ನು ಥ್ರಿಲ್ ವ್ಯಸನಕ್ಕೆ ಬೀಳಿಸುವ ಮೊಬೈಲ್ ಗೇಮ್ಸ್

ಡೆಬು ಚಾನ್  33 ಆಸನಗಳೊಂದಿಗೆ ಟೋಕಿಯೋ ರಾಮೆನ್ ಅಂಗಡಿಯ ದೊಡ್ಡ ಭಾಗದಲ್ಲಿದ್ದು, ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಊಟದ ಸಮಯದಲ್ಲಿ ಅತ್ಯಂತ ಜನಸಂದಣಿಯಿಂದ ಕೂಡಿದ್ದು, ಜನರು ಸರದಿ ಸಾಲಿನಲ್ಲಿ ನಿಲ್ಲುವಂತಹ ಸ್ಥಿತಿ ಇರುತ್ತದೆ. ಇತ್ತ ಜನರು ಸೀಟ್‌ಗಾಗಿ ಕಾಯುತ್ತಿದ್ದರೆ ಮತ್ತೊಂದೆಡೆ ಸೀಟು ಸಿಕ್ಕಿ ಆಹಾರ ಟೇಬಲ್ ಮೇಲಿದ್ದರೂ ಕೆಲವು ಗ್ರಾಹಕರು ಮೊಬೈಲ್ ಫೋನ್ ನೋಡಿಕೊಂಡು  ತಿನ್ನದೇ ಸುಮ್ಮನೇ ಕುಳಿತಿರುತ್ತಾರೆ. ಈ ಕಾರಣಕ್ಕಾಗಿ ಹೊಟೇಲ್ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಸ್ಮಾರ್ಟ್‌ಫೋನ್ ಚಟವೂ ಮನುಷ್ಯರ ಮೆದುಳಿನ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತಿದ್ದು,  ಕೆಲವು ಮಾನಸಿಕ ರೋಗಗಳಿಗೆ ಕಾರಣವಾಗುತ್ತಿದೆ. 

Follow Us:
Download App:
  • android
  • ios