Mobile Addiction: ಮಕ್ಕಳನ್ನು ಥ್ರಿಲ್ ವ್ಯಸನಕ್ಕೆ ಬೀಳಿಸುವ ಮೊಬೈಲ್ ಗೇಮ್ಸ್

ಮಕ್ಕಳು ಮೊಬೈಲ್ ಗೇಮ್ಸ್‌ಗೆ ಅಡಿಕ್ಟ್ ಆದರೆ, ಥ್ರಿಲ್ ವ್ಯಸನ ಅವರಿಗಂಟಬಹುದು. ಇದರಿಂದ ಬಹಳಷ್ಟು ಸಮಸ್ಯೆಗಳಾಗುತ್ತವೆ. 

Impact of mobile games on childs health

ಮೊಬೈಲ್ (Mobile) ನಮಗೆಷ್ಟು ಅಗತ್ಯವಾಗಿದೆ ಎನ್ನುವುದು ನಮಗೆ ತಿಳಿದೇ ಇದೆ. ಖಾಸಗಿ ಹಾಗೂ ಕಚೇರಿಗೆ ಸಂಬಂಧಿಸಿದ ಬಹಳಷ್ಟು ಕೆಲಸಗಳನ್ನು  ಮೊಬೈಲ್ ನಲ್ಲೇ ಮಾಡಿ ಮುಗಿಸುವ ಲಕ್ಷಾಂತರ ಜನರಿದ್ದಾರೆ. ಅಷ್ಟೇ ಏಕೆ? ಕಳೆದೆರಡು ವರ್ಷಗಳಿಂದ ಮೊಬೈಲೇ ಶಿಕ್ಷಣಕ್ಕೂ ಬೇಕಾಗಿದೆ. ಬೇರೆ ಯಾವುದೇ ವಸ್ತುವಿಲ್ಲದಿದ್ದರೂ ಪರವಾಗಿಲ್ಲ, ಮೊಬೈಲ್ ಇಲ್ಲವಾದರೆ ಒಂದು ದಿನವೂ ಬದುಕಲಾರದ ಸ್ಥಿತಿ ತಲುಪಿದ್ದೇವೆ. 
ಆದರೆ, ಕೆಲವು ಜನ ಕೆಲಸಕಾರ್ಯಗಳಿಗಷ್ಟೇ ಅಲ್ಲ. ಮನರಂಜನೆಗೂ ಮೊಬೈಲ್ ಅನ್ನೇ ಬಳಕೆ ಮಾಡುತ್ತಾರೆ. ಸ್ನೇಹಿತರೊಂದಿಗೆ, ಗುರುತು-ಪರಿಚಯ ಇಲ್ಲದವರೊಂದಿಗೂ ಗಂಟೆಗಟ್ಟಲೆ ಚಾಟಿಂಗ್ (Chat) ಮಾಡುತ್ತಾರೆ. ಮೊಬೈಲ್ ಗೇಮ್ (Mobile Game), ಸಿನಿಮಾಗಳಲ್ಲಿ ಕಾಲ ಕಳೆಯುತ್ತಾರೆ. ಆದರೆ, ಮೊಬೈಲ್ ಮೇಲಿನ ಅತಿಯಾದ ಅವಲಂಬನೆ(Dependency)ಯ ಪರಿಣಾಮಗಳು ಈಗ ಗೋಚರಿಸಲು ಆರಂಭವಾಗಿವೆ. 

ವೀರ್ಯಾಣು(Sperm)ಗಳ ಸಂಖ್ಯೆ ಕುಸಿತ
ಅಧಿಕ ಮೊಬೈಲ್ ಬಳಕೆಯಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ (Count) ಹಾಗೂ ಅವುಗಳ ಗುಣಮಟ್ಟ (Quality) ಕುಸಿತವಾಗುತ್ತಿದೆ. ಈ ಕುರಿತು ಹಲವಾರು ಅಧ್ಯಯನಗಳು ನಡೆದಿವೆ. ಇತ್ತೀಚೆಗೆ ದಕ್ಷಿಣ ಕೊರಿಯಾದ (South Korea) ಅಧ್ಯಯನವೊಂದು 4280 ವೀರ್ಯಾಣು ಮಾದರಿಗಳ ಪರಿಶೀಲಿಸಿ ನಡೆಸಲಾದ 18 ಸಂಶೋಧನೆಗಳನ್ನು ಆಧಾರಿಸಿ ವಿಶ್ಲೇಷಣೆ ಮಾಡಿದೆ. ಅದರ ಪ್ರಕಾರ, ಮೊಬೈಲ್ ನಿಂದ ಹೊಮ್ಮುವ ವಿದ್ಯುತ್ಕಾಂತೀಯ ಅಲೆಗಳು (Electromagnetic waves) ವೀರ್ಯಾಣುವಿಗೆ ಹಾನಿ ಮಾಡುತ್ತವೆ. ಅವುಗಳ ಸಂಖ್ಯೆ ಹಾಗೂ ಗುಣಮಟ್ಟವನ್ನು ಕುಗ್ಗಿಸುತ್ತವೆ. ಹೀಗಾಗಿ, ಈ ಅಧ್ಯಯನವು, ಪುರುಷರು ಹೆಚ್ಚು ಕಾಲ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದೆ. 
ಮೊಬೈಲ್ ಫೋನ್ ಬಳಕೆಯಿಂದಾಗುವ ದುಷ್ಪಪರಿಣಾಮಗಳ ಮೇಲೆ ಕಳೆದ ಹತ್ತು ವರ್ಷಗಳಿಂದಲೂ ಸಂಶೋಧನೆ ನಡೆಯುತ್ತಿದೆ. ಆದರೂ ಕೊರಿಯಾದ ಈ ಅಧ್ಯಯನದ ಕುರಿತು ಕೆಲವು ತಜ್ಞರು ಅಪಸ್ವರ ಎತ್ತಿದ್ದಾರೆ. ಮೊಬೈಲ್ ಬಳಕೆಯಿಂದಾಗುವ ಹಾನಿಯ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ವೀರ್ಯಾಣು ತಜ್ಞ ಅಲೆನ್ ಪೇಸಿ (Allen Pacey) ಅಭಿಪ್ರಾಯಪಟ್ಟಿದ್ದಾರೆ. 

ಮಕ್ಕಳಿಗೆ ಡೇಂಜರ್ (Danger) ಮೊಬೈಲ್ ಗೇಮ್ 
ಮೊಬೈಲ್ ಗೇಮ್ ಮಕ್ಕಳ ಮಾನಸಿಕ ಸ್ಥಿತಿಗತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಅದು ಹೇಗೆ ಎನ್ನುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಮೊಬೈಲ್ ಗೇಮ್ ಆಡುವಾಗ ಮಕ್ಕಳ ದೇಹದಲ್ಲಿ ಡೊಪಮೈನ್ (Dopamine) ಎನ್ನುವ ಹಾರ್ಮೋನ್ (Harmone) ಬಿಡುಗಡೆಯಾಗುತ್ತದೆ. ಇದು ಖುಷಿಗೆ ಕಾರಣವಾಗುವ ಹಾರ್ಮೋನ್. ಮನುಷ್ಯ ಖುಷಿಯಾಗಿರುವುದು ಮುಖ್ಯ. ಆದರೆ, ಅತ್ಯಧಿಕ ಪ್ರಮಾಣದಲ್ಲಿ ಡೊಪಮೈನ್ ಬಿಡುಗಡೆಯಾದರೂ ಸಮಸ್ಯೆ ತಪ್ಪಿದ್ದಲ್ಲ. ಕೇವಲ 3-4 ನಿಮಿಷಗಳ ಕಾಲ ಮೊಬೈಲ್ ಗೇಮ್ ಆಡಿದರೆ 5 ನಿಮಿಷದಲ್ಲಿ ಸುಮಾರು 10 ಸಿಗರೇಟು ಸೇದಿದಾಗ ಬಿಡುಗಡೆಯಾಗುವಷ್ಟು ಡೊಪಮೈನ್ ಬಿಡುಗಡೆಯಾಗುತ್ತದೆ. ಅಂದರೆ, ಇಷ್ಟೆಲ್ಲ ಹಾರ್ಮೋನ್ ಖಂಡಿತವಾಗಿ ದೇಹಕ್ಕೆ ಬೇಕಾಗುವುದಿಲ್ಲ. ಇದರಿಂದಾಗಿ ಒಂದು ರೀತಿಯ ಥ್ರಿಲ್ (Thrill) ಆಗುತ್ತಿರುತ್ತದೆ. ಮಕ್ಕಳ ಸಾಮಾನ್ಯ ಚಟುವಟಿಕೆಗಳಾದ ಆಟ, ಬೇರೆ ಬೇರೆ ಕೆಲಸ ಮಾಡುವುದರಲ್ಲಿ ಅವರಿಗೆ ಆಸಕ್ತಿ ಇರುವುದಿಲ್ಲ. ಬೋರೆನಿಸಲು ಶುರುವಾಗುತ್ತದೆ. ಮಕ್ಕಳಿಗೆ ಬೋರಾಗುತ್ತದೆ ಎಂದರೆ ಅದು ಎಚ್ಚರಿಕೆ ವಹಿಸಬೇಕಾದ ಸಂಗತಿ.

ತಂದೆಯ ಈ ಪ್ರೀತಿಗೆ ಬೆಲೆ ಕಟ್ಟೋದು ಹ್ಯಾಗೆ...!

ಕೆಂದರೆ, ಅವರು ಒಂದಲ್ಲ ಒಂದು ರೀತಿ ಎಂಗೇಜ್ ಆಗಿರುವುದರಿಂದ ಅವರಿಗೆ ಬೋರಾಗಲು ಸಾಧ್ಯವೇ ಇಲ್ಲ. ಆದರೂ ಬೋರಾಗುತ್ತದೆ ಎಂದಾದರೆ, ಅವರಿಗೆ ಅಭ್ಯಾಸವಾದಷ್ಟು ಮಟ್ಟದಲ್ಲಿ ಡೊಪಮೈನ್ ಬಿಡುಗಡೆಯಾಗುತ್ತಿಲ್ಲ ಎಂದರ್ಥ. ಆಗ ಅವರಲ್ಲಿ ಒಂದು ಖಾಲಿತನ (Vaccume) ಸೃಷ್ಟಿಯಾಗುತ್ತದೆ. ಇದು ಅವರಲ್ಲಿ ಖಿನ್ನತೆ ಉಂಟುಮಾಡಬಹುದು. ಹೈಸ್ಕೂಲ್, ಕಾಲೇಜುಗಳಿಗೆ ಹೋಗುವ ಮಕ್ಕಳು ಈ ಖಾಲಿತನ ಭರ್ತಿ ಮಾಡಲು ಡ್ರಗ್ಸ್ (Drugs) ಸೇವನೆಗೆ ಮುಂದಾಗಬಹುದು. ಕಳ್ಳತನಕ್ಕೆ ಇಳಿಯಬಹುದು. ಏಕೆಂದರೆ, ಈ ಕೃತ್ಯಗಳಿಂದ ಥ್ರಿಲ್ ಸಿಗುತ್ತದೆ. 

Healthy Lifestyle: ಜಾಸ್ತಿ ವರ್ಷ ಬದುಕ್ಬೇಕಾ? ಇಲ್ಲಿವೆ ಆರೋಗ್ಯಯುತ ತುಂಬು ಜೀವನಕ್ಕೆ ಟಿಪ್ಸ್

ಬೇರೆ ಎಲ್ಲ ವ್ಯಸನ(Addiction)ಗಳನ್ನು ಬಿಡಲು ಮನುಷ್ಯರು ಎಷ್ಟು ಪ್ರಯತ್ನ ಪಡುತ್ತಾರೋ ಹಾಗೆಯೇ ಮೊಬೈಲ್ ವ್ಯಸನವನ್ನು ಬಿಡಲೂ ಮುಂದಾಗಬೇಕು. ಮುಖ್ಯವಾಗಿ, ಮಕ್ಕಳು ಈ ವ್ಯಸನಕ್ಕೆ ತುತ್ತಾಗದಂತೆ ನೋಡಿಕೊಳ್ಳಬೇಕು.

Latest Videos
Follow Us:
Download App:
  • android
  • ios