Asianet Suvarna News Asianet Suvarna News

Health Tips: ಬಾದಾಮಿ ಹಾಲಿನಲ್ಲಿ ಪ್ರೋಟೀನ್ ಹೆಚ್ಚಿದೆ ಅಂತಾರೆ ನಿಜಾನ?

ಬಾದಾಮಿ ಹಾಲು (Almond Milk) ಎಂದರೆ ಪ್ರೋಟೀನ್‌ (Protein)ನ ಉತ್ತಮ ಮೂಲವೆಂದು ಹೇಳಲಾಗುತ್ತದೆ. ನೈಸರ್ಗಿಕವಾಗಿ ಹಲವಾರು ಜೀವಸತ್ವಗಳು ಮತ್ತು ಖನಿಜಗಳಲ್ಲೂ ಬಾದಾಮಿ ಹಾಲು ಸಮೃದ್ಧವಾಗಿದೆ. ಬಾದಾಮಿ ಹಾಲಿನಲ್ಲಿ ನಿಜವಾಗಿಯೂ ಹೆಚ್ಚಿನ ಪ್ರೋಟೀನ್ ಇದೆಯೇ ? ಪೌಷ್ಟಿಕತಜ್ಞರು ಏನು ಹೇಳುತ್ತಾರೆ ನೋಡೋಣ.

Is Almond Milk Really High In Protein
Author
First Published Mar 8, 2022, 3:28 PM IST

ಬಾದಾಮಿ ಹಾಲು (Almond Milk) ಆಹಾರಕ್ರಮಕ್ಕೆ ಆರೋಗ್ಯ (Health)ಕರ ಸೇರ್ಪಡೆಯಾಗಿದೆ. ಯಾಕೆಂದರೆ ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಬಾದಾಮಿ ಹಾಲು ನೈಸರ್ಗಿಕವಾಗಿ ಹಲವಾರು ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ವಿಶೇಷವಾಗಿ ಬಾದಾಮಿ ಹಾಲು ಕುಡಿಯುವುದರಿಂದ ದೇಹಕ್ಕೆ ವಿಟಮಿನ್ ಇ ಲಭಿಸುತ್ತದೆ. ಬಾದಾಮಿ ಹಾಲನ್ನು ನೀರಿನೊಂದಿಗೆ ಬೆರೆಸಿ ನಂತರ ಮಿಶ್ರಣವನ್ನು ಸೋಸುವ ಮೂಲಕ ತಯಾರಿಸಲಾಗುತ್ತದೆ. ಬಾದಾಮಿ ಬೆಣ್ಣೆಗೆ ನೀರು ಸೇರಿಸಿ ಕೂಡ ತಯಾರಿಸಬಹುದು.

ಬಾದಾಮಿ ಹಾಲಿನಲ್ಲಿ ನಿಜವಾಗಿಯೂ ಹೆಚ್ಚಿನ ಪ್ರೋಟೀನ್ ಇದೆಯೇ ?
ಅಧ್ಯಯನದ ಪ್ರಕಾರ ಬಾದಾಮಿ ಹಾಲು ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಾಗೆಯೇ ಬಾದಾಮಿ ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಇದೆ ಎಂದು ಹೇಳಲಾಗುತ್ತದೆ. ಆದರೆ ಬಾದಾಮಿ ಹಾಲಿನಲ್ಲಿ ನಿಜವಾಗಿಯೂ ಪ್ರೋಟೀನ್‌ (Protein) ಹೆಚ್ಚಿದೆಯೇ ?. ಪೌಷ್ಟಿಕತಜ್ಞ ಭುವನ್ ರಸ್ತೋಗಿ ಅವರ ಪ್ರಕಾರ, 30 ಗ್ರಾಂ ಗೋಧಿ ರೊಟ್ಟಿಯು ವಾಣಿಜ್ಯಿಕವಾಗಿ ಮಾರಾಟವಾಗುವ 200 ಮಿಲಿ ಪ್ಯಾಕ್ಬಾ ದಾಮಿ ಹಾಲಿಗಿಂತ ಹೆಚ್ಚು ಪ್ರೋಟೀನ್ ಹೊಂದಿರುತ್ತದೆ.

ಒಂದು 30 ಗ್ರಾಂ ಗೋಧಿ (Wheat) ರೊಟ್ಟಿಯಲ್ಲಿ 3-3.5 ಗ್ರಾಂ ಪ್ರೋಟೀನ್ ಇದೆ. ಬಾದಾಮಿಯು ಗೋಧಿಗಿಂತ ತೂಕದಲ್ಲಿ ಪ್ರೋಟೀನ್ ಸಾಂದ್ರತೆಯಲ್ಲಿ ಹೆಚ್ಚು, ಆದರೆ 3.5 ಗ್ರಾಂ ಪ್ರೋಟೀನ್ ಪಡೆಯಲು ನೀವು ಸುಮಾರು 13-16 ಬಾದಾಮಿಗಳನ್ನು ಸೇವಿಸಬೇಕಾಗುತ್ತದೆ. ಆದರೆ ಬಾದಾಮಿ ಹಾಲು ತಯಾರಿಸುವಾಗ ಕೇವಲ 4-5ರಷ್ಟು ಬಾದಾಮಿಯನ್ನು ಮಾತ್ರ ಬಳಸುತ್ತೇವೆ. ಬಾದಾಮಿ, ಹೆಚ್ಚಿನವುಗಳು 200 ಮಿಲಿಗೆ ಕೇವಲ 1ರಿಂದ 2 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತವೆ ಎಂದು ರಸ್ತೋಗಿ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ರಸ್ತೋಗಿ ಓಟ್ಸ್ ಅನ್ನು ಅದೇ ವರ್ಗಕ್ಕೆ ಸೇರಿಸುತ್ತಾರೆ ಮತ್ತು ಅವುಗಳಲ್ಲಿ ಪ್ರೋಟೀನ್ ಕಡಿಮೆ ಎಂದು ಹೇಳುತ್ತಾರೆ. ಅವರ ಪ್ರಕಾರ, ಓಟ್ಸ್‌ (Oats) ಹಾಲಿನಲ್ಲಿ 200 ಮಿಲಿಗೆ 1.4 ಗ್ರಾಂನಷ್ಟು ಮಾತ್ರ ಪ್ರೋಟೀನ್ ಇರುತ್ತದೆ.

Health Alert: ಈ ಸಮಸ್ಯೆ ಹೊಂದಿರುವ ಜನ ತಪ್ಪಿಯೂ ಬಾದಾಮಿ ಸೇವಿಸಬಾರದು

ಬಾದಾಮಿ ಹಾಲಿನ ಇತರ ಪ್ರಯೋಜನಗಳು
ಬಾದಾಮಿ ಹಾಲು ಮಧುಮೇಹ (Diabetes)ಕ್ಕೆ ಉತ್ತಮ ಪರ್ಯಾಯವಾಗಿದೆ ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವ ಜನರು ಸಹ ಇದನ್ನು ಸೇವಿಸಬಹುದು, ಏಕೆಂದರೆ ಇದರಲ್ಲಿ ಲ್ಯಾಕ್ಟೋಸ್ ಇಲ್ಲ. ಬಾದಾಮಿ ಹಾಲು ಹಸುವಿನ ಹಾಲು ಅಥವಾ ಇತರ ಪ್ರಾಣಿ ಉತ್ಪನ್ನಗಳನ್ನು ಹೊಂದಿರುವುದಿಲ್ಲ. ಇದು ಸಸ್ಯಾಹಾರಿ ಆಹಾರವನ್ನು ಅನುಸರಿಸುವ ಜನರಿಗೆ ಮತ್ತು ಲ್ಯಾಕ್ಟೋಸ್ ಅಸಹಿಷ್ಣುತೆ ಅಥವಾ ಹಾಲಿಗೆ ಅಲರ್ಜಿ ಇರುವವರಿಗೆ ಉತ್ತಮ ಆಯ್ಕೆಯಾಗಿದೆ.

ಬಾದಾಮಿಯು 50% ಕೊಬ್ಬು ಮತ್ತು ಹೆಚ್ಚಿನ ಕ್ಯಾಲೋರಿ (Calorie)ಗಳನ್ನು ಹೊಂದಿದ್ದರೂ, ವಾಣಿಜ್ಯ ಬಾದಾಮಿ ಹಾಲು ಕಡಿಮೆ ಕ್ಯಾಲೋರಿ ಪಾನೀಯವಾಗಿದೆ . ಹೀಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಬಾದಾಮಿ ಹಾಲನ್ನು ಕುಡಿಯಬಹುದು. ಒಂದು ಕಪ್ ಬಾದಾಮಿ ಹಾಲು ಕೇವಲ 39 ಕ್ಯಾಲೊರಿಗಳನ್ನು ಹೊಂದಿರುತ್ತದೆ, ಇದು ಒಂದು ಕಪ್ ಕೆನೆ ತೆಗೆದ ಹಾಲಿನಲ್ಲಿರುವ ಅರ್ಧದಷ್ಟು ಕ್ಯಾಲೊರಿಗಳನ್ನು ಹೊಂದಿರುತ್ತದೆ.

Weight Loss Tips: ಸಣ್ಣಗಾಗ್ಬೇಕಾ ? ಗೋಧಿ ಹಿಟ್ಟಿನ ಚಪಾತಿ ಬಿಟ್ಬಿಡಿ, ಇದನ್ನು ಟ್ರೈ ಮಾಡಿ

ಆದರೆ, ಬಾದಾಮಿ ಹಾಲು ಒಂದೇ ಆಗಿರುವುದಿಲ್ಲ. ಮನೆಯಲ್ಲಿ ತಯಾರಿಸಿದ ಬಾದಾಮಿ ಹಾಲು ಮತ್ತು ಕೆಲವು ಬ್ರಾಂಡ್‌ಗಳು ಪ್ರತಿ ಕಪ್‌ಗೆ ಎಷ್ಟು ಬಾದಾಮಿಗಳನ್ನು ಒಳಗೊಂಡಿರುತ್ತವೆ ಎಂಬುದರ ಆಧಾರದ ಮೇಲೆ ಹೆಚ್ಚಿನ ಸಂಖ್ಯೆಯ ಕ್ಯಾಲೊರಿಗಳನ್ನು ಹೊಂದಿರಬಹುದು. ಬಾದಾಮಿ ಹಾಲು ಅದರ ಕಾರ್ಬೋಹೈಡ್ರೇಟ್ ಅಂಶಕ್ಕೆ ಹೋಲಿಸಿದರೆ ಕೊಬ್ಬು ಮತ್ತು ಪ್ರೋಟೀನ್‌ನಲ್ಲಿಯೂ ಸಹ ಅಧಿಕವಾಗಿದೆ. ಈ ಕಾರಣಕ್ಕಾಗಿ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹೆಚ್ಚಳವನ್ನು ಉಂಟುಮಾಡುವುದಿಲ್ಲ, ಇದು ಮಧುಮೇಹ ಇರುವವರಿಗೆ ಮತ್ತು ಕಡಿಮೆ ಕಾರ್ಬ್ ಆಹಾರವನ್ನು ಅನುಸರಿಸುವವರಿಗೆ ಸೂಕ್ತವಾಗಿದೆ.

ಬಾದಾಮಿ ಹಾಲು ಅತ್ಯುತ್ತಮ ಕ್ಯಾಲ್ಸಿಯಂ ಮೂಲವಾಗಿದೆ. ಮೂಳೆಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಕ್ಯಾಲ್ಸಿಯಂ ಅತ್ಯಗತ್ಯ. ಈ ಕಾರಣಕ್ಕಾಗಿ, ಸಾಕಷ್ಟು ಕ್ಯಾಲ್ಸಿಯಂ ಸೇವನೆಯು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ, ಇದು ದುರ್ಬಲ ಮೂಳೆಗಳು ಮತ್ತು ಮುರಿತಗಳಿಗೆ ಸಂಬಂಧಿಸಿದ ಸ್ಥಿತಿಯಾಗಿದೆ. ಬಾದಾಮಿ ಬೀಜಗಳ ನಿಯಮಿತ ಸೇವನೆಯು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. 

Follow Us:
Download App:
  • android
  • ios