Asianet Suvarna News Asianet Suvarna News

ಶಾಲೆಯ ಬಿಸಿಯೂಟದಲ್ಲಿ ಅನ್ನದ ಬದಲು ಮಂಡಕ್ಕಿ, ಹಸಿವಿನಿಂದ ಮಕ್ಕಳು ಒದ್ದಾಡಿದ್ರೂ ಕೇಳೋರೆ ಇಲ್ಲ!

ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಕಲಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಮಧ್ಯಾಹ್ನದ ಬಿಸಿಯೂಟವನ್ನು ನೀಡುತ್ತಿದೆ. ಆದರೆ ಈ ಯೋಜನೆಯಲ್ಲೂ ಹಲವಾರು ಬಾರಿ ಅನ್ಯಾಯವಾಗಿದೆ. ಒಡಿಶಾದ ಶಾಲೆಯೊಂದರಲ್ಲಿ ಮಕ್ಕಳಿಗೆ ಅನ್ನದ ಬದಲಿಗೆ, ಮಂಡಕ್ಕಿಯನ್ನು ಬಡಿಸಲಾಗಿದೆ.

Instead of cooked rice, Students served Puffed rice in Odisha school Vin
Author
First Published Jun 27, 2023, 1:10 PM IST

ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಕಲಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೊಳಿಸಿದೆ. ಸಾಕ್ಷರತೆ ಪ್ರಮಾಣ ಹೆಚ್ಚಿಸುವ ಹಾಗೂ ಬಡ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಜಾರಿಗೆ ತಂದಿರುವ ಮಧ್ಯಾಹ್ನ ಬಿಸಿಯೂಟಕ್ಕೆ ಹಲವಾರು ಬಾರಿ ಅಡ್ಡಿ ಎದುರಾಗಿದೆ. ಅಕ್ಕಿಯಲ್ಲಿ ಕಲಬೆರಕೆ, ಕಳಪೆ ಗುಣಮಟ್ಟದ ಅಕ್ಕಿ ವಿತರಿಸಿರುವ ಬಗ್ಗೆ ಹಲವು ರಾಜ್ಯಗಳು ದೂರು ನೀಡಿವೆ. ಹೀಗಿರುವಾಗ ಒಡಿಶಾದ  ಶಾಲೆಯೊಂದರಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟಕ್ಕೆ ಅನ್ನ ನೀಡುವ ಬದಲು ಮಂಡಕ್ಕಿ ನೀಡಿದ ಆರೋಪ ಎದುರಾಗಿದೆ. ಬೇಯಿಸಿದ ಅನ್ನದ ಬದಲಿಗೆ, ವಿದ್ಯಾರ್ಥಿಗಳು ಪಫ್ಡ್ ರೈಸ್ ಅನ್ನು ಬಡಿಸಲಾಗಿದೆ.

ಮಕ್ಕಳು (Children) ಶಾಲೆಗೆ ಬರಬೇಕಾದರೆ ಬೆಳಗ್ಗೆ ಸರಿಯಾಗಿ ತಿನ್ನಲು ಸಮಯವಿರುವುದಿಲ್ಲ. ಹೀಗಾಗಿ ಮಧ್ಯಾಹ್ನ ಶಾಲೆಯಲ್ಲಿ ಹೊಟ್ಟೆ ತುಂಬಾ ಊಟ ಮಾಡಬಹುದು ಎಂದೇ ಎಲ್ಲಾ ಮಕ್ಕಳು ಅಂದುಕೊಳ್ಳುತ್ತಾರೆ. ಮನೆಯಲ್ಲಿ ಬಡತನವಿರುವ ಅದೆಷ್ಟೋ ಮಕ್ಕಳಿಗೆ ಶಾಲೆಯ ಮಧ್ಯಾಹ್ನದ ಬಿಸಿಯೂಟವೇ (Midday meal)ಆಸರೆ. ಹೀಗಿರುವಾಗ ಒಡಿಶಾದ ಶಾಲೆಯಲ್ಲಿ ಮಕ್ಕಳಿಗೆ ಅನ್ನದ ಬದಲು ಮಂಡಕ್ಕಿಯನ್ನು (Puffed rice) ನೀಡಿದ್ದಾರೆ.

ಮಕ್ಕಳ ಬಿಸಿಯೂಟದಲ್ಲಿ ಚಿಕನ್ ಲೆಗ್ ಪೀಸೇ ಇಲ್ಲ, 4 ಗಂಟೆ ಶಿಕ್ಷಕರನ್ನು ಕೂಡಿಹಾಕಿದ ಪೋಷಕರು

ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಕಲಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಮಧ್ಯಾಹ್ನದ ಬಿಸಿಯೂಟವನ್ನು ನೀಡುತ್ತಿದೆ.
ಪೌಷ್ಟಿಕಾಂಶದ ಊಟವನ್ನು ಒದಗಿಸುವಂತೆ ಸೂಚನೆ ನೀಡಿದ್ದರೂ, ಒಡಿಶಾದ ಬ್ರಹ್ಮಪುರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ದಾಲ್‌ನೊಂದಿಗೆ ಮಂಡಕ್ಕಿ ನೀಡಲಾಗ್ತಿದೆ. ಕಳೆದ ಎರಡು ದಿನಗಳಿಂದ ವಿದ್ಯಾರ್ಥಿಗಳಿಗೆ (Students) ಮಧ್ಯಾಹ್ನದ ಊಟ ಯೋಜನೆಯಡಿ ಬೇಯಿಸಿದ ಅನ್ನದ ಬದಲು ಪಫ್ಡ್ ರೈಸ್ ಕೊಡಲಾಗುತ್ತಿದೆ. ಈ ಘಟನೆಯು ಪಾಲಕರು ಮತ್ತು ಪೋಷಕರಲ್ಲಿ ವ್ಯಾಪಕ ಅಸಮಾಧಾನವನ್ನು ಉಂಟುಮಾಡಿದೆ. ಶಾಲಾ ಆವರಣದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಪೋಷಕರು ಈ ವಿಷಯವನ್ನು ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ) ಗಮನಕ್ಕೂ ತಂದಿದ್ದಾರೆ.

ಮಧ್ಯಾಹ್ನದ ಊಟದಲ್ಲಿ ಅನ್ನ, ಕಾಳು, ಇತರೆ ಪೌಷ್ಠಿಕಾಂಶ ನೀಡಬೇಕೆಂಬ ನಿಯಮವಿದ್ದರೂ ಶಾಲೆಯ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಜ್ಜ ಧೋರಣೆಯಿಂದಾಗಿ ಮಕ್ಕಳಿಗೆ ದಿನಾ ಮಂಡಕ್ಕಿಯನ್ನೇ ನೀಡಲಾಗ್ತಿದೆ. ಬಟ್ಟಲಿನ ತುಂಬಾ ಮಂಡಕ್ಕಿ, ಸೈಡ್‌ನಲ್ಲಿ ದಾಲ್‌, ಪಲ್ಯವನ್ನು ಕೊಡಲಾಗ್ತಿದೆ. 

ಬಿಸಿಯೂಟದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಣಿಗಳ ಮಿಶ್ರಣ, ನೀರಿಗೆ ಹಾಕಿದರೆ ತೇಲುವ, ಬೆಂಕಿ ಹಚ್ಚಿದರೆ ಉರಿಯುವ ಮಣಿಗಳು!

'ಅಕ್ಕಿ ಖಾಲಿಯಾಗಿದ್ದರೆ ಮುಖ್ಯೋಪಾಧ್ಯಾಯರು ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು, ಅಕ್ಕಿ ದಾಸ್ತಾನು ಖಾಲಿಯಾಗಿದ್ದರೆ ಮುಖ್ಯ ಶಿಕ್ಷಕರು ವರದಿ ಮಾಡಬೇಕಿತ್ತು' ಎಂದು ಬಿಇಒ ಮಾಲತಿ ತುಡು ಹೇಳಿದ್ದಾರೆ. ಬ್ಲಾಕ್ ಶಿಕ್ಷಣಾಧಿಕಾರಿ, ತನಿಖೆಯ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ವರದಿಗಳ ಪ್ರಕಾರ, ವಿದ್ಯಾರ್ಥಿಗಳಿಗೆ ಶುಕ್ರವಾರ ಮತ್ತು ಶನಿವಾರದಂದು ಪಫ್ಡ್ ರೈಸ್ ನೀಡಲಾಯಿತು. ಆದರೆ ಶನಿವಾರವೇ ಅಕ್ಕಿ ದಾಸ್ತಾನು ಶಾಲೆಗೆ ಬಂದಿದ್ದು, ಶಿಕ್ಷಕರ (Teachers) ಸೂಚನೆ ನೀಡಿದ ಕಾರಣ ಅಡುಗೆಗೆ ಅಕ್ಕಿಯನ್ನು ಬಳಸಿಲ್ಲ ಎಂದು ಅಡುಗೆ ಮಾಡುವವರು ಆರೋಪಿಸಿದ್ದಾರೆ.

ಮಂಡಕ್ಕಿ ಹೇಗ್ ಮಾಡ್ತಾರೆ ನೋಡಿದ್ರೆ ವಾಕರಿಕೆ ಬರೋದು ಖಂಡಿತ
ಮಂಡಕ್ಕಿಗೆ ಸದಾ ಡಿಮ್ಯಾಂಡ್‌. ಸಂಜೆಯ ಸ್ನಾಕ್ಸ್‌, ಬೆಳಗಿನ ಉಪಹಾರ ಎಲ್ಲಕ್ಕೂ ಉಪಯುಕ್ತವಾದ ಮಂಡಕ್ಕಿ ಹಲವರ ಫೇವರಿಟ್‌. ಅದರಿಂದ ತಯಾರಿಸೋ ಭೇಲ್‌ ಪುರಿ, ಚಾಟ್ಸ್ ಸಹ ಎಲ್ಲರಿಗೂ ಇಷ್ಟ. ಆದರೆ ಇದನ್ನು ತಯಾರಿಸೋ ರೀತಿ ಹೇಗಿದೆ ಅನ್ನೋದು ಹಲವರಿಗೆ ತಿಳಿದಿಲ್ಲ. ಸದ್ಯ ಭೇಲ್‌ ಪುರಿ ಚಾಟ್ಸ್ ತಯಾರಿಸಲೋ ಬಳಸೋ ಮಂಡಕ್ಕಿ (Puffed Rice) ಹೇಗೆ ತಯಾರಿಸ್ತಾರೆ ಅನ್ನೋ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. , ಕಾರ್ಖಾನೆಯಲ್ಲಿ ಕೊಳಕು ಬಟ್ಟೆಯನ್ನು ಧರಿಸಿದ ವ್ಯಕ್ತಿ ಕಾಲಲ್ಲಿ ತುಳಿದು ಅಕ್ಕಿಯಿಂದ ಮಂಡಕ್ಕಿಯನ್ನು ತಯಾರಿಸುವುದನ್ನು ನೋಡಬಹುದು. ಆಹಾರ ಬ್ಲಾಗರ್ ಅಮರ್ ಸಿರೋಹಿ ಅವರು ತಮ್ಮ Instagram ಪುಟದ foodie_incarnateನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅಕ್ಕಿ (Rice)ಯಿಂದ ಮಂಡಕ್ಕಿಯನ್ನು ತಯಾರಿಸುವ ಸಂಪೂರ್ಣ ವಿಧಾನವಿದೆ. ಕೆಟ್ಟದಾಗಿ ಮಂಡಕ್ಕಿ ತಯಾರಿಸುವ ರೀತಿ ಚಾಟ್ಸ್‌ ಪ್ರಿಯರು ಬೆಚ್ಚಿಬೀಳುವಂತೆ ಮಾಡಿದೆ.

Follow Us:
Download App:
  • android
  • ios