Asianet Suvarna News Asianet Suvarna News

ಅವಲಕ್ಕಿಯನ್ನು ಸಲಾಡ್ ಎಂದು ಪರಿಚಯಿಸಿದ ಇಂಡಿಗೋ ಏರ್‌ಲೈನ್ಸ್‌, ಸಿಟ್ಟಿಗೆದ್ದ ನೆಟ್ಟಿಗರು

ಏರ್‌ಲೈನ್ಸ್‌ಗಳು ಫುಡ್ ವಿಚಾರದಲ್ಲಿ ಎಡವಟ್ಟು ಮಾಡಿಕೊಳ್ಳೋದು ಹೊಸದೇನಲ್ಲ. ಆಹಾರದಲ್ಲಿ ಹಲ್ಲಿ, ಜಿರಳೆ ಮೊದಲಾದವು ಸಿಕ್ಕು ಪ್ರಯಾಣಿಕರು ಕಿರಿಕಿರಿ ಅನುಭವಿಸ್ತಾರೆ. ಆದ್ರೆ ಇಂಡಿಗೋ ಏರ್‌ಲೈನ್ಸ್ ಹೀಗೆಲ್ಲಾ ಏನೂ ಮಾಡ್ಕೊಂಡಿಲ್ಲ. ಬದಲಿಗೆ ಪೋಹಾವನ್ನು ಸಲಾಡ್ ಎಂದು ಪರಿಚಯಿಸಿ ಭಾರತೀಯರನ್ನು ಕೆರಳಿಸಿದೆ. 

IndiGo Airlines trolled on Twitter for referring to Desi Breakfast as a Fresh Salad Vin
Author
First Published Jan 31, 2023, 12:01 PM IST

ಭಾರತೀಯ ತಿನಿಸುಗಳಿಗೆ ಮನಸೋಲದವರಿಲ್ಲ. ವೈವಿಧ್ಯಮಯ ಖಾದ್ಯಗಳ ರುಚಿ ಎಂಥವರನ್ನೂ ಸೆಳೆಯುತ್ತದೆ. ಭಾರತೀಯ ಶೈಲಿಯ ಆಹಾರ ದೇಶ-ವಿದೇಶಗಳಲ್ಲಿಯೂ ಹೆಸರುವಾಸಿಯಾಗಿದೆ. ಇಂಡಿಯನ್ ಫುಡ್ ಅಂದ್ರೆ ವಿದೇಶಿಗರು ಸಹ ಇಷ್ಟಪಟ್ಟು ತಿನ್ತಾರೆ. ಆದ್ರೆ ಭಾರತೀಯ ತಿನಿಸುಗಳನ್ನು ಫಾರಿನ್‌ಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಮಾರಾಟ ಮಾಡಲಾಗ್ತುದೆ. ಬಹುತೇಕರಿಗೆ ಇದು ಇಂಡಿಯನ್ ಫುಡ್ ಎಂಬುದೇ ತಿಳಿಯುವುದಿಲ್ಲ.

ಭಾರತೀಯ ಸಾದಾ ತಿನಿಸನ್ನು ಸಲಾಡ್ ಎನ್ನುತ್ತಿರುವ ಇಂಡಿಗೋ ಏರ್‌ಲೈನ್ಸ್‌
ಈ ಹಿಂದೆ ಯುಎಸ್‌ನ ರೆಸ್ಟೋರೆಂಟ್‌ವೊಂದು ಭಾರತೀಯ ಆಹಾರ (Indian food)ಗಳನ್ನು ಬೇರೆಯದೇ ಹೆಸರಲ್ಲಿ ಮಾರಾಟ ಮಾಡುವುದು ತಿಳಿದುಬಂದಿತ್ತು. ಈ ರೆಸ್ಟೋರೆಂಟ್ ದಕ್ಷಿಣ ಭಾರತೀಯ ಭಕ್ಷ್ಯಗಳಾದ ದೋಸೆ ಮತ್ತು ಸಾಂಬಾರ್ ವಡಾವನ್ನು ‘ಕ್ರೇಪ್ಸ್’ ಮತ್ತು 'ಡೋನಟ್ಸ್'ನ್ನು ಮಾರಾಟ ಮಾಡುತ್ತಿತ್ತು. ಹೀಗೆ ಸದ್ಯ ಇಂಡಿಗೋ ಏರ್‌ಲೈನ್ಸ್‌ ಭಾರತೀಯ ಸಾದಾ ತಿನಿಸನ್ನು ಸಲಾಡ್ ಎಂದು ಮಾರಾಟ (Sale) ಮಾಡ್ತಿರೋದು ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.

ಭಾರತದ ಸಾದಾ ಹಪ್ಪಳ ಮಲೇಷಿಯನ್​ ರೆಸ್ಟೋರೆಂಟ್‌ನಲ್ಲಿ 'ಏಷ್ಯನ್​ ನಾಚೋಸ್​', ಬೆಲೆ ಕೇಳಿದ್ರೆ ದಂಗಾಗ್ತೀರಾ!

ಅವಲಕ್ಕಿ ಬಾತ್‌ ಫೋಟೋ ಹಾಕಿ ಇಂದೇ ಮಾಡಿದ ತಾಜಾ ಸಲಾಡ್ ತಿನ್ನಿ ಎಂದು ಆನ್​​ಲೈನ್​ನಲ್ಲಿ ಇಂಡಿಗೋ ಏರ್​ಲೈನ್ಸ್​ ಟ್ವೀಟ್ ಮಾಡಿದೆ. ನೆಟ್ಟಿಗರು ಈ ಪೋಸ್ಟ್​ ನೋಡಿ ಕಿಡಿಕಾರಿದ್ದಾರೆ. ಇಂಡಿಗೋ ಏರ್‌ಲೈನ್ಸ್ ಎಂದು ಹೆಸರಿಟ್ಟುಕೊಂಡು ಇಂಡಿಯನ್ ಫುಡ್ ಬಗ್ಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಪೋಹಾ ಭಾರತದಲ್ಲಿ ಜನರು ಹಲವು ವರ್ಷಗಳಿಂದ ಉಪಾಹಾರವಾಗಿ (Breakfast) ಸೇವಿಸುತ್ತಿರುವ ಆಹಾರವಾಗಿದೆ. ಇಂಡಿಗೋ ಏರ್‌ಲೈನ್ಸ್ ಇದನ್ನೇ ಸಲಾಡ್ ಎಂದು ಹೇಳಿ ಜನರಿಗೆ ಪರಿಚಯಿಸುತ್ತಿದೆ. ಇದಕ್ಕೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು 'ಇಂಡಿಗೋ ಏರ್‌ಲೈನ್ಸ್, ನಿಮಗೆ ತಲೆ ಕೆಟ್ಟಿದೆಯೇ. ಯಾಕೆ ಜನರನ್ನು ತಪ್ಪು ದಾರಿಗೆ ಎಳೆಯುತ್ತೀರಾ. ಪ್ರಚಾರದ ಹಪಾಹಪಿಗೆ ಹೀಗೆಲ್ಲಾ ಮಾಡಬೇಡಿ' ಎಂದು ಬಯ್ಯುತ್ತಿದ್ದಾರೆ. 

ವೈರಲ್‌ ಪೋಸ್ಟ್‌ಗೆ ನೆಟ್ಟಿಗರು ಕಿಡಿ, ನಾನಾ ರೀತಿಯ ಕಾಮೆಂಟ್‌
ಅವಲಕ್ಕಿ ತುಂಬಿದ ತಟ್ಟೆಯ ಮೇಲಿನಿಂದ ನಿಂಬೆಹಣ್ಣನ್ನು ಹಿಂಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. 'ಇದು ಅವಲಕ್ಕಿ, ಇದನ್ನು ಸಲಾಡ್​ ಎಂದು ಹೇಳಿ ಭಾರತೀಯರನ್ನು ಮೂರ್ಖರನ್ನಾಗಿಸಲು ಹೊರಟಿದ್ದೀರಾ' ಎಂದು ಕೆಲವರು ಕೇಳುತ್ತಿದ್ದಾರೆ. ;ಇಂದೋರ್​ನಲ್ಲಿರುವ ಎಲ್ಲರೂ ತುಂಬಾ ಆರೋಗ್ಯದಿಂದ ಇದ್ದಾರೆ, ಏಕೆಂದರೆ ಅವರು ಶಾವಿಗೆ, ಅವಲಕ್ಕಿಯ ಸಲಾಡ್ ಅನ್ನು ತಿನ್ನುತ್ತಾರೆ' ಎಂದು ಇನ್ನೊಬ್ಬರು ತಿಳಿಸಿದ್ದಾರೆ.

ಅಮೇರಿಕಾದಲ್ಲಿ ಸಾದಾ ದೋಸೆ ಹೆಸ್ರು ನೇಕೆಡ್ ಕ್ರೇಪ್ಸ್, ಬೆಲೆ ಭರ್ತಿ 1400 ರೂ.!

ಇಂಡಿಗೋ ಏರ್‌ಲೈನ್ಸ್ ಮಾಡಿದ ಪೋಸ್ಟ್ ಕೆಲವೇ ಸಮಯದಲ್ಲಿ ವೈರಲ್ ಆಯಿತು. ನೆಟಿಜನ್‌ಗಳು ಇಂಡಿಗೋವನ್ನು ಸಲಾಡ್‌ನ ವ್ಯಾಖ್ಯಾನಕ್ಕಾಗಿ ಟ್ರೋಲ್ ಮಾಡಲು ಪ್ರಾರಂಭಿಸಿದರು. ವೈರಲ್ ಪೋಸ್ಟ್ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ (Views)ಗಳನ್ನು ಹೊಂದಿದೆ.  200 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಹೊಂದಿದೆ. ಏರ್‌ಲೈನ್ಸ್‌ನ ವೈರಲ್ ಪೋಸ್ಟ್ ಅನ್ನು ಕೆಲವರು ಟೀಕಿಸಿದ್ದಾರೆ ಮತ್ತು ಇತರರು ಅದನ್ನು ತಮಾಷೆಯಾಗಿ ಕಂಡುಕೊಂಡಿದ್ದಾರೆ. ಅದೇನಿದ್ರೂ ಇಂಡಿಯನ್ ಏರ್‌ಲೈನ್ಸ್ ನಡೆ ಭಾರತೀಯ ಪ್ರಯಾಣಿಕರ ಆಕ್ರೋಶ್ಕೆ ಕಾರಣವಾಗಿರೋದಂತೂ ನಿಜ.

Follow Us:
Download App:
  • android
  • ios