Swiggy in 2022: ಭಾರತೀಯ ನೆಚ್ಚಿನ ಖಾದ್ಯ ಬಿರಿಯಾನಿ, ಪ್ರತಿ ಸೆಕೆಂಡಿಗೆ 2ರಂತೆ ಆರ್ಡರ್‌ !

ಬಿರಿಯಾನಿ (Biriyani) ಅಂದ್ರೆ ಸಾಕು ಎಲ್ಲರ ಬಾಯಲ್ಲಿ ನೀರೂರುತ್ತೆ. ಸಸ್ಯಾಹಾರಿಗಳು, ಮಾಂಸಾಹಾರಿಗಳು ಬಿರಿಯಾನಿಯನ್ನು ಇಷ್ಟಪಟ್ಟು ಸವಿಯುತ್ತಾರೆ. ಭಾರತೀಯರ ಅಚ್ಚುಮೆಚ್ಚಿನ ಆಹಾರದ ಲಿಸ್ಟ್‌ನಲ್ಲಿ ಬಿರಿಯಾನಿ ಅಗ್ರಸ್ಥಾನದಲ್ಲಿ ಬರುತ್ತೆ. ಇಂಥಾ ಬಿರಿಯಾನಿ 2022ರಲ್ಲಿ ಜನರ ನೆಚ್ಚಿನ ಆಹಾರವೂ ಹೌದು. ಸ್ವಿಗ್ಗಿಯಲ್ಲಿ ಭಾರತೀಯರು ಪ್ರತಿ ಸೆಕೆಂಡಿಗೆ 2 ಬಿರಿಯಾನಿನಷ್ಟು ಆರ್ಡರ್ ಮಾಡಿದ್ದಾರಂತೆ.

Indians Ordered Over 2 Biryanis Every Second In 2022, Says Swiggy Vin

ನೂರಾರು ವರ್ಷಗಳ ಪಾಕಶಾಲೆಯ ಇತಿಹಾಸವನ್ನು ಹೊಂದಿರುವ ಪಾಕವಿಧಾನವು ಯಾವಾಗಲೂ ಸ್ವಾದಿಷ್ಟಕರವಾಗಿರುತ್ತದೆ. ಅಂಥಾ ಆಹಾರಗಳಲ್ಲೊಂದು ಬಿರಿಯಾನಿ ( Biriyani). ಬಡವರು, ಶ್ರೀಮಂತರು ಎನ್ನದೆ ಎಲ್ಲರೂ ಇದನ್ನು ಇಷ್ಟಪಟ್ಟು ಸವಿಯುತ್ತಾರೆ.  ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳು ಪ್ರತ್ಯೇಕವಾಗಿ ವೆಜ್‌ (Veg) ಮತ್ತು ಮತ್ತು ನಾನ್‌ ವೆಜ್ (Nonveg) ಬಿರಿಯಾನಿಯನ್ನು ಸವಿಯಹುದು. ಬಿರಿಯಾನಿ ಎಂಬುದು ಪರ್ಷಿಯನ್ ಪದವಾದ ಬಿರಿಯನ್ ಕಾರ್ಡನ್‌ನಿಂದ ಬಂದಿದೆ, ಇದರರ್ಥ ಫ್ರೈ ಮಾಡಲು ಎಂಬುದಾಗಿದೆ. 'ಫ್ರೈ' ಎಂದರೆ ಡೀಪ್-ಫ್ರೈಯಿಂಗ್ ಎಂದರ್ಥವಲ್ಲ ಆದರೆ ಮಾಂಸ ಅಥವಾ ತರಕಾರಿ (Vegetables)ಗಳನ್ನು ಬೇಯಿಸುವುದಾಗಿದೆ.ಇಲ್ಲಿ ಲಭ್ಯವಿರುವ ಪರಿಣತಿ ಮತ್ತು ಪದಾರ್ಥಗಳಿಗೆ ಅನುಗುಣವಾಗಿ ಬಿರಿಯಾನಿಯಾಗಿ ರೂಪಾಂತರಗೊಂಡಿತು,

ಪರ್ಷಿಯನ್ ಸಂಸ್ಕೃತಿಯ ಪಾಕಶಾಲೆಯ ಪ್ರಭಾವವು ಭಾರತದಲ್ಲಿ ಹೆಚ್ಚಿದೆ. ಅದರಲ್ಲೂ ಮೊಘಲರ ಅತ್ಯಂತ ಪ್ರಸಿದ್ಧ ಆಹಾರ ಬಿರಿಯಾನಿಯನ್ನು ಭಾರತೀಯರು ಹೆಚ್ಚು ಪ್ರೀತಿಸುತ್ತಾರೆ. ಸ್ವಿಗ್ಗಿಯ ವಾರ್ಷಿಕ ಟ್ರೆಂಡ್‌ಗಳ ವರದಿಯ ಏಳನೇ ಆವೃತ್ತಿಯಾದ 'ಹೌ ಇಂಡಿಯಾ ಸ್ವಿಗ್ಗಿ'ಡಿ 2022' ಪ್ರಕಾರ, ಆಹಾರ ಸಂಗ್ರಾಹಕ ಸ್ವಿಗ್ಗಿ ಮತ್ತೊಮ್ಮೆ ಬಿರಿಯಾನಿಯನ್ನು ವರ್ಷದ "ಹೆಚ್ಚು ಆರ್ಡರ್ ಮಾಡಿದ ಖಾದ್ಯ" ಎಂದು ಹೇಳಿಕೊಂಡಿದೆ. 2022ರಲ್ಲಿ ಭಾರತೀಯರು ಪ್ರತಿ ಸೆಕೆಂಡಿಗೆ 2 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಸ್ವಿಗ್ಗಿ ತಿಳಿಸಿದೆ.

ನಾನ್‌ವೆಜ್‌ ಪ್ರಿಯರಾ ? ಬೆಂಗಳೂರಲ್ಲಿ ಬೆಸ್ಟ್ ದೊನ್ನೆ ಬಿರಿಯಾನಿ ಇಲ್ಲೆಲ್ಲಾ ಸಿಗುತ್ತೆ ನೋಡಿ

ಸ್ವಿಗ್ಗಿಯಲ್ಲಿ 40 ಲಕ್ಷಕ್ಕೂ ಹೆಚ್ಚು ಸಮೋಸಾ ಆರ್ಡರ್‌
ಚಿಕನ್ ಬಿರಿಯಾನಿಯ ನಂತರ ಸ್ವಿಗ್ಗಿಯಲ್ಲಿ ಹೆಚ್ಚು ಆರ್ಡರ್ ಮಾಡಿದ ಮೊದಲ ಐದು ಖಾದ್ಯಗಳೆಂದರೆ ಮಸಾಲೆ ದೋಸೆ, ಚಿಕನ್ ಫ್ರೈಡ್ ರೈಸ್, ಪನೀರ್ ಬಟರ್ ಮಸಾಲಾ, ಬಟರ್ ನಾನ್ ಮತ್ತು ವೆಜ್ ಫ್ರೈಡ್ ರೈಸ್. 2022 ರ ಚಾರ್ಟ್‌ಗಳಲ್ಲಿ ಬಿರಿಯಾನಿ ಅಗ್ರಸ್ಥಾನದಲ್ಲಿದ್ದರೆ ಭಾರತೀಯರು ತಮ್ಮ ತಿಂಡಿಗಳ ಕಡುಬಯಕೆಗಳನ್ನು ಪೂರೈಸಲು ಸಮೋಸಾಗಳನ್ನು ಸಹ ಹೆಚ್ಚು ಆರ್ಡರ್ ಮಾಡಿದ್ದರೆ. ಈ ವರ್ಷ ಇಲ್ಲಿಯವರೆಗೆ 40 ಲಕ್ಷಕ್ಕೂ ಹೆಚ್ಚು ಸಮೋಸಾ ಆರ್ಡರ್‌ಗಳನ್ನು ಮಾಡಲಾಗಿದೆ ಎಂದು ಸ್ವಿಗ್ಗಿ ಹೇಳಿದೆ.

ಪಾಪ್‌ಕಾರ್ನ್ ಮಾತ್ರ 22 ಲಕ್ಷ ಆರ್ಡರ್‌ಗಳನ್ನು ಹೊಂದಿದೆ - ಹೆಚ್ಚಿನವುಗಳು ರಾತ್ರಿ 10 ಗಂಟೆಯ ನಂತರ ಆರ್ಡರರ್ ಪಡೆದುಕೊಂಡಿವೆ.  ಪಾವ್ ಭಾಜಿ, ಫ್ರೆಂಚ್ ಫ್ರೈಸ್, ಬೆಳ್ಳುಳ್ಳಿ ಬ್ರೆಡ್‌ಸ್ಟಿಕ್‌ಗಳು, ಹಾಟ್ ವಿಂಗ್ಸ್ ಮತ್ತು ಟ್ಯಾಕೋ ಸ್ವಿಗ್ಗಿಯಲ್ಲಿ ಹೆಚ್ಚು ಆರ್ಡರ್ ಮಾಡಿದ ನಂತರದ ಐದು ತಿಂಡಿಗಳಾಗಿವೆ.

Biriyani Recipe: ಬಾಯಲ್ಲಿ ನೀರೂರಿಸೋ ಬಿರಿಯಾನಿ ರೆಸಿಪಿ ಇಲ್ಲಿವೆ!

ಜಾಮೂನು ಭಾರತೀಯರ ನೆಚ್ಚಿನ ಸಿಹಿತಿಂಡಿ
ಗುಲಾಬ್ ಜಾಮೂನ್ ಭಾರತೀಯರ ನೆಚ್ಚಿನ ಸಿಹಿತಿಂಡಿಯಾಗಿ ಉಳಿದಿದೆ. ರಸಮಲೈ ಮತ್ತು ಚೋಕೊ ಲಾವಾ ಕೇಕ್ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದುಕೊಂಡಿದೆ.ಭಾರತೀಯರು ಮಾಂಸದಲ್ಲಿ ಚಿಕನ್ ಅನ್ನು ಹೆಚ್ಚು ಆರ್ಡರ್ ಮಾಡಿದ್ದಾರೆ. ಇದು 2022 ರಲ್ಲಿ ಸ್ವಿಗ್ಗಿಯಲ್ಲಿ ಹೆಚ್ಚು ಆರ್ಡರ್ ಮಾಡಿದ ಮಾಂಸವಾಗಿದೆ ಡಿಸೆಂಬರ್ 15 ರ ಹೊತ್ತಿಗೆ 29.86 ಲಕ್ಷ ಆರ್ಡರ್‌ಗಳನ್ನು ಗಳಿಸಿದೆ. ಕೊಯಮತ್ತೂರು, ದೆಹಲಿ/ಎನ್‌ಸಿಆರ್, ಕೋಲ್ಕತ್ತಾ, ಮುಂಬೈ ಮತ್ತು ಪುಣೆ ಒಟ್ಟು ಮಾಂಸಕ್ಕಿಂತ ಹೆಚ್ಚಿನ ಮಾಂಸವನ್ನು ಬೆಂಗಳೂರಿಗರು ಆರ್ಡರ್ ಮಾಡಿದ್ದಾರೆ ಎಂದು ವರದಿ ತಿಳಿಸಿದೆ. ಸ್ವಿಗ್ಗಿ ಪಟ್ಟಿಯಲ್ಲಿ ಬೆಂಗಳೂರು ಮೇಲುಗೈ ಸಾಧಿಸಿದೆ

Latest Videos
Follow Us:
Download App:
  • android
  • ios