Biriyani Recipe: ಬಾಯಲ್ಲಿ ನೀರೂರಿಸೋ ಬಿರಿಯಾನಿ ರೆಸಿಪಿ ಇಲ್ಲಿವೆ!

ವೆಜ್ ಇರಲಿ(Veg) ನಾನ್ ವೆಜ್(Non Veg) ಇರಲಿ ಬಿರಿಯಾನಿ(Biriani) ಪ್ರಿಯರು ನೀವಾಗಿದ್ದರೆ ವಿಶ್ವ ಬಿರಿಯಾನಿ ದಿನವನ್ನು(World Biriani Day) ಆಚರಿಸಲು ಇನ್ಮುಂದೆ ತಯಾರಾಗಿ. ಏಕೆಂದರೆ ಎಲ್ಲೆಡೆ ಜುಲೈ 3 ರಂದು ವಿಶ್ವ ಬಿರಿಯಾನಿ ದಿನವೆಂದು ಆಚರಿಸಲಾಗುತ್ತಿದೆ. ಹಾಗಾಗಿ ಈ ದಿನ ಬಿರಿಯಾನಿ ತಿನ್ನುತ್ತಲೇ ಆಚರಿಸಬೇಕು ಎಂದುಕೊAಡಿದ್ದರೆ ಈ ಬಿರಿಯಾನಿಗಳನ್ನು ಮರೆಯದೆ ಟ್ರೆöÊ ಮಾಡಿ.

World Biriani Day: Here are some Recipes

ಹೋಟೆಲ್‌ಗೆ(Hotel) ಹೋದರೆ ಒಂದಷ್ಟು ಲೀಸ್ಟ್ ಕೊಡ್ತಾರೆ. ಎಲ್ಲವೂ ಬಿರಿಯಾನಿಗಳೇ(Biriani) ಕಾಣಿಸುತ್ತವೆ. ವೆರೈಟಿ ಬಿರಿಯಾನಿಯಲ್ಲಿ ಯಾವುದು ಟೇಸ್ಟ್ ಮಾಡಬೇಕು ಯಾವುದು ಬಿಡಬೇಕು ಎಂಬುದು ಗೋಜಿನ ಸಂಗತಿ. ಮನೆಯಲ್ಲೇ(Home) ಎಲ್ಲರೂ ಸೇರಿ ತಯಾರಿಸಿ ಈಡೀ ದಿನ ತಿನ್ನುತ್ತಲೇ ಬಿರಿಯಾನಿ ಡೇ (Biriani Day) ಆಚರಿಸಿ.
ಬಿಸಿ ಬಿಸಿ ಕಲರ್‌ಫುಲ್(Hot Colorful) ಬಿರಿಯಾನಿ ತಂದು ಎದುರಿಗೆ ಇಟ್ಟರೆ ಅದರ ವಾಸನೆ(Smell) ಮೂಗಿಗೆ ತಾಕುತ್ತ, ಬಾಯಲ್ಲಿ ನೀರು ಸುರಿಸುತ್ತಾ ತಡಿಯಲಾಗದೇ ಕೈ ಮುಂದೆ ಸಾಗುತ್ತದೆ. ಬಾಯಿಗೆ ಬಿದ್ದಮೇಲೆ ಮತ್ತಷ್ಟು ಬೇಕು ಎಂಬ ನಾಲಿಗೆ ಬಯಕೆ. ಇದಕ್ಕೆಲ್ಲಾ ಕಾರಣ ಅದರಲ್ಲಿನ ಮಸಾಲೆಯ(Masala) ರುಚಿ(Taste). ಹಲವು ರೀತಿಯ ಬಿರಿಯಾನಿಗಳಿವೆ, ಎಲ್ಲವೂ ಒಂದು ರೀತಿಯಲ್ಲಿ ರುಚಿ ನೀಡುತ್ತವೆ. 

ಬಿರಿಯಾನಿ ಎಂದರೆ ಅದು ಕೇವಲ ನಾನ್‌ವೆಜ್(Non Veg) ಅಲ್ಲ. ತರಕಾರಿಯಿಂದ(Vegetable) ಮಾಡಿದ ವೆಜ್ ಬಿರಿಯಾನಿಯೂ(Veg Biriani) ಇದೆ. ಸಿಂಪಲ್ ಆಗಿ ಹೇಳಬೇಕೆಂದ್ರೆ ಪಲಾವ್(Palav) ಅನ್ನು ಇಮಿಟೇಟ್(Imitate) ಮಾಡಿ ಮಾರ್ಕೆಟ್‌ನಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಆಹಾರ ಪದಾರ್ಥವಿದು. ಕೆಲ ಫೇಮಸ್ ಬಿರಿಯಾನಿಗಳ ರೆಸಿಪಿಗಳು ಇಲ್ಲಿವೆ ಒಮ್ಮೆ ಟ್ರೆöÊ ಮಾಡಿ. 

ಇದನ್ನೂ ಓದಿ: World Biryani Day: ಬಾಯಲ್ಲಿ ನೀರೂರಿಸೋ ಬಿರಿಯಾನಿ ಬಗ್ಗೆ ನಿಮ್ಗೆ ಗೊತ್ತಿರದ ವಿಚಾರಗಳಿವು

1. ಕಾಶ್ಮೀರಿ ಬಿರಿಯಾನಿ
ಕೋಮಲವಾದ ಮಟನ್(Meat) ತುಂಡುಗಳು ಮತ್ತು ಅಕ್ಕಿಯನ್ನು(Rice) ಕೇಸರಿ(Kesari) ಮತ್ತು ಕೇವ್ರಾ ನೀರಿನ ಸಾರದಿಂದ ತುಂಬಿಸಲಾಗುತ್ತದೆ.  
ಮಾಡುವ ವಿಧಾನ
ಬಾಸುಮತಿ ಅಕ್ಕಿಯನ್ನು(Basmati Rice) ಚೆನ್ನಾಗಿ ತೊಳೆದು ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿಡಬೇಕು(Soak). ಒಂದು ಬಾಣಲೆಯಲ್ಲಿ ಚಕ್ಕೆ(Cinnamon), ಲವಂಗ(Clove), ಕಾಳುಮೆಣಸು(Black pepper), ಏಲಕ್ಕಿ(Cardamon), ಜಾಯಿಕಾಯಿ, ಸೋಂಪು ಹಾಕಿ ತುಪ್ಪದಲ್ಲಿ(Ghee) ಬಾಡಿಸಿ, ಅದಕ್ಕೆ ನೀರು ಹಾಕಿ ಚೆನ್ನಾಗಿ ಕುದಿಯಬೇಕು. ಕುದಿಯುವ ನೀರಿಗೆ ಬಾಸುಮತಿ ಅಕ್ಕಿ ಹಾಕಿ ಬೇಯಿಸಬೇಕು. ಅರೆ ಬೆಂದ ನಂತರ ಅದನ್ನು ಸೋಸಿ ನೀರು ತೆಗೆಯಬೇಕು. ಮತ್ತೊಂದು ಬಾಣಲೆಗೆ ಎಲ್ಲಾ ಮಸಾಲೆ ಪದಾರ್ಥಗಳನ್ನು(Spicy Items) ಹಾಕಿ ಬಾಡಿಸಿಕೊಳ್ಳಬೇಕು. ನಂತರ ಹೆಚ್ಚಿಕೊಂಡ ಎಲ್ಲಾ ತರಕಾರಿಗಳನ್ನು(Vegetables), ಸ್ವಲ್ಪ ಉಪ್ಪು(Salt) ಹಾಕಿ ಬಾಡಿಸಬೇಕು. ಬೆಂದ ನಂತರ ಮಸಾಲೆ ಪುಡಿಗಳನ್ನು ಹಾಕಿ 2ಸೆಕೆಂಡ್ ಬಾಡಿಸಿಕೊಳ್ಳಬೇಕು, ಇದಕ್ಕೆ ಮೊಸರು(Yogurt), ಒಂದು ಕಪ್ ನೀರು, ಚಿಟಿಕೆ ಉಪ್ಪು ಹಾಕಿ ಕೈಯ್ಯಾಡಿ ಬೇಯಲು ಬಿಡಬೇಕು. ಒಂದು ದಪ್ಪ ತಳವಿರುವ ಪಾತ್ರೆಗೆ(Utensils) ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಮೊದಲು ಬೇಯಿಸಿದ ಬಾಸುಮತಿ ಅನ್ನವನ್ನು ಸ್ವಲ್ಪ ಹರಡಿ, ಅದರ ಮೇಲೆ ಸಣ್ಣಗೆ ಹೆಚ್ಚಿದ ಪುದೀನಾ(Mint), ಕೊತ್ತಂಬರಿ(Coriander Leaves) ಸೊಪ್ಪು ಹರಡಿ ಹಾಲಿನಲ್ಲಿ ನೆನೆಸಿಟ್ಟುಕೊಂಡ ಕೇಸರಿಯನ್ನು ಸುತ್ತಲೂ ಹರಡಿ. ನಂತರ ವೆಜಿಟೇಬಲ್ ಕರ‍್ರಿಯನ್ನು(Curry) ಹಾಕಿ, ಮತ್ತೆ ಅದರ ಮೇಲೆ ಪುದೀನ, ಕೊತ್ತಂಬರಿಸೊಪ್ಪು, ಕೇಸರಿ ಹಾಲನ್ನು ಹಾಕಿ ಹರಡಿ. ಇದೇ ರೀತಿ 3 ಲೇಯರ್(Layer) ಮಾಡಿ. ಮೇಲ್ಭಾಗವನ್ನು ಅಲ್ಯುಮಿನಿಯಂ ಪದರದಿಂದ ಬಿಗಿಯಾಗಿ ಕವರ್ ಮಾಡಿ ಸಣ್ಣ ಉರಿಯಲ್ಲಿ(Sim) ಬೇಯಿಸಿ. 10 ನಿಮಿಷಗಳ ಕಾಲ ಬೆಂದ ನಂತರ ಅದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ(Cashew), ಬಾದಾಮಿ(Badam), ದ್ರಾಕ್ಷಿ ಹಾಕಿ ಪುದೀನ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಕಾಶ್ಮೀರಿ ಬಿರಿಯಾನಿ ಸವಿಯಲು ಸಿದ್ಧ.

2. ಮಟನ್ ಮಂಡಿ ಬಿರಿಯಾನಿ
ಇದು ಸಾಮಾನ್ಯವಾಗಿ ಭಾರತೀಯ ಹಬ್ಬಗಳಲ್ಲಿ(Indian Festival) ಹೆಚ್ಚಾಗಿ ಮಾಡಲಾಗುತ್ತದೆ. ಇದಕ್ಕೆ ಪ್ರಮುಖ ಸಾಮಗ್ರಿಯೇ ಮಟನ್(Meat). ಬಾಯಲ್ಲಿ ನೀರೂರಿಸುವ ಈ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ:
ಮಟನ್ ಮಂಡಿ ಬಿರಿಯಾನಿ(Mutton Mandi Biriani) ಮಾಡುವುದಕ್ಕೆ ಮೊದಲು ಒಳ್ಳೆಯ ಕ್ವಾಲಿಟಿಯ(Good Quality) ಮಟನ್ ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ. ಈ ಬಿರಿಯಾನಿಯ ಟೇಸ್ಟ್ ಇರುವುದೇ ಉತ್ತಮವಾದ ಮಟನ್ ಮೇಲೆ. ಒಂದು ಕುಕ್ಕರ್‌ನಲ್ಲಿ ಎಣ್ಣೆ, ತುಪ್ಪ, ಮರಿನೇಟೆಡ್ ಮಟನ್, ಶುಂಠಿ ಬೆಳ್ಳುಳ್ಳಿ ಪೇಸ್ಟ್(Ginger Garlic Paste), ಈರುಳ್ಳಿ(Onion), ಟೊಮೆಟೋ(Tomato) ಪೇಸ್ಟ್, ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ನೀರು ಹಾಕಿ ಎರಡು ವಿಶಲ್(Whistle) ಬರುವಂತೆ ಬೇಯಿಸಿ 10 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ನಂತರ ಒಂದು ಪ್ಯಾನ್‌ನಲ್ಲಿ(Pan) ಬೇಯಿಸಿಕೊಂಡ ಮಟನ್ ಸ್ಟಾಕ್ ಹಾಕಿಕೊಂಡು ಅದಕ್ಕೆ ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿಕೊಂಡು 30 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಇದರ ಘಮ ಮತ್ತಷ್ಟು ಹೆಚ್ಚಿಸಿಕೊಳ್ಳಲು ಇದ್ದಲನ್ನು(Coal) ಇಟ್ಟು 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಬೇಕು. ಇದನ್ನು ರಾಯ್ತಾ(Raita) ಅಥವಾ ಹಸಿರು ಚಟ್ನಿ ಜೊತೆ ಸರ್ವ್ ಮಾಡಿದರೆ ಮಟನ್ ಮಂಡಿ ಬಿರಿಯಾನಿ ಸವಿಯಲು ಸಿದ್ಧ.  

ಇದನ್ನೂ ಓದಿ: ಮಳೆಗಾಲದಲ್ಲಿ ಬಿಸಿಬಿಸಿ ಬಿರಿಯಾನಿ, ಕಬಾಬ್ ತಿನ್ನೋ ಮುನ್ನ ಈ ವಿಚಾರ ತಿಳ್ಕೊಂಡಿರಿ

3. ಹೈದ್ರಾಬಾದ್ ದಮ್ ಬಿರಿಯಾನಿ
 ಹೈದ್ರಾಬಾದ್ ಬಿರಿಯಾನಿಗೆ ಹೆಸರುವಾಸಿ. ಇದು ಸುಲಭ ಹಾಗೂ ಬೇಗ ಮಾಡಬಹುದಾದ ಬಿರಿಯಾನಿಯಾಗಿದೆ.
ಮಾಡುವ ವಿಧಾನ
ಒಂದು ದೊಡ್ಡ ಪಾತ್ರೆಯಲ್ಲಿ ಹೆಚ್ಚಿಕೊಂಡ ಮಟನ್ ಪೀಸ್, ಉಪ್ಪು, ಅಚ್ಚಖಾರದ ಪುಡಿ(Chilly Powder), ಅರಿಶಿಣ(Turmeric), ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಬೇಕು. ನಂತರ ಇದಕ್ಕೆ ಚಕ್ಕೆ, ಕಪ್ಪು ಜೀರಿಗೆ, ಮೊಗ್ಗು, ಏಲಕ್ಕಿ ಪುಡಿ, ಕಾಳುಮೆಣಸಿನ ಪುಡಿ ಹಾಕಿಕೊಂಡು ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಒಂದು ಜಾರ್‌ನಲ್ಲಿ ಹಸಿಮೆಣಸು(Green Chilly), ಕೊತ್ತಂಬರಿಸೊಪ್ಪು, ಪುದೀನಾ ಸೊಪ್ಪು, ಉಪ್ಪು ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಮಟನ್ ಮಿಶ್ರಣಕ್ಕೆ ಹಾಕಿ ಮತ್ತೆ ಚೆನ್ನಾಗಿ ಕಲಸಿಕೊಳ್ಳಿ,  ಈ ಕಲಸಿಕೊಂಡ ಮಿಶ್ರಣಕ್ಕೆ ಎಣ್ಣೆಯಲ್ಲಿ ಡೀಪ್ ಫ್ರೆöÊ ಮಾಡಿದ ಈರುಳ್ಳಿ(Deep Fried Onion), ಗರಂ ಮಸಾಲಾ ಪುಡಿ(Garam Masal Powder) ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು 4 ಗಂಟೆಗಳ ಕಾಲ ಫ್ರಿಡ್ಜನಲ್ಲಿ(Fridge) ಇಡಬೇಕು. ನಂತರ ಇದಕ್ಕೆ ಚೆನ್ನಾಗಿ ಕಲಸಿದ ಮಟ್ಟೆ(Egg), ನಿಂಬೆ ರಸ(Lemon Juice) ಹಾಕಿ ಕಲಸಿ 30 ನಿಮಿಷ ನೆನೆಯಲು ಬಿಡಬೇಕು. 
ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು 40 ನಿಮಿಷ ನೆನೆಯಲು ಬಿಡಿ. ನಂತರ ದಪ್ಪ ತಳವಿರುವ ಪಾತ್ರೆ ತೆಗೆದುಕೊಂಡು ಅದಕ್ಕೆ ನೀರು, ಉಪ್ಪು, ಚಕ್ಕೆ, ಏಲಕ್ಕಿ, ಲವಂಗ, ಕಾಳುಮೆಣಸು, ಜೀರಿಗೆ ಹಾಕಿ ಕುದಿಸಿಕೊಳ್ಳಿ.  ಕುದಿಯುವ ನೀರಿಗೆ ನೆನೆಸಿಟ್ಟುಕೊಂಡ ಅಕ್ಕಿ ಹಾಕಿ ಮುಕ್ಕಾಲು ಭಾಗ ಬೇಯಿಸಿಕೊಳ್ಳಿ. ನಂತರ ಒಂದು ದಪ್ಪ ತಳವಿರುವ ಉದ್ದನೆಯ ಪಾತ್ರೆಗೆ ಎಣ್ಣೆ ಹಾಕಿ ಮಟನ್ ಮಿಶ್ರಣವನ್ನು ಹಾಕಿಕೊಳ್ಳಬೇಕು. ತಳ ಭಾಗದಲ್ಲಿ ಈ ಮಿಶ್ರಣ ಹಾಕಿಕೊಂಡ ನಂತರ ಮುಕ್ಕಾಲು ಭಾಗ ಬೆಂದ ಅನ್ನವನ್ನು ಹಾಕಿಕೊಳ್ಳಬೇಕು. ಇದಕ್ಕೆ ಸ್ವಲ್ಪ ನೀರು ಅಥವಾ ಹಾಲು ಹಾಕಿಕೊಂಡು, ಕೇಸರಿ ಹಾಲು ಹಾಕಿ ಹರಡಿಕೊಳ್ಳಿ. ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಎಣ್ಣೆಯಲ್ಲಿ ಡೀಪ್ ಫ್ರೆöÊ ಮಾಡಿದ ಈರುಳ್ಳಿ, ತುಪ್ಪ ಹಾಕಿ ಅಲಂಕರಿಸಿ ಒಂದು ಪ್ಲೇಟ್ ಅನ್ನು ಮುಚ್ಚಿ 20 ನಿಮಿಷ ಬೇಯಿಸಿಕೊಂಡು ಮತ್ತೆ 40 ನಿಮಿಷ ಸಣ್ಣ ಉರಿಯಲ್ಲಿ(Sim) ಬೇಯಿಸಿಕೊಳ್ಳಬೇಕು. 

ನಂತರ ಬಿರಿಯಾನಿಯನ್ನು ಒಂದು ಬದಿಯಿಂದ ಮೇಲಿನಿಂದ ಕೇಳಭಾಗದವರೆಗೂ ಒಂದು ಸೌಟ್‌ನಲ್ಲೊ ತೆಗೆದುಕೊಂಡು ಒಂದು ಪ್ಲೇಟ್‌ನಲ್ಲಿ ಸರ್ವ್ ಮಾಡಿದರೆ ಹೈದ್ರಾಬಾದ್ ದಮ್ ಬಿರಿಯಾನಿ ರೆಡಿ. 

Latest Videos
Follow Us:
Download App:
  • android
  • ios