Kitchen Hacks: ಸ್ಪೂನ್ ಬಳಸಿ ಶುಂಠಿ ಸಿಪ್ಪೆ ಹೀಗೆ ತೆಗೆಯಿರಿ

ಅಡುಗೆ ಮನೆಯಲ್ಲಿ ಬೇಕಾಗುವ ಮುಖ್ಯ ಪದಾರ್ಥಗಳಲ್ಲಿ ಒಂದು ಶುಂಠಿ(Ginger). ಸಾಂಬಾರು, ಟೀ(Tea), ಸ್ನ್ಯಾಕ್ಸ್(Snacks) ಹೀಗೆ ಹಲವು ಅಡುಗೆಗಳನ್ನು ತಯಾರಿಸುವಾಗಲೂ ಶುಂಠಿ ಮುಖ್ಯವಾಗಿ ಬೇಕಾಗುತ್ತದೆ. ಆದರೆ, ಶುಂಠಿಯ ಸಿಪ್ಪೆ ತೆಗೆಯುವ ಕೆಲಸ ಹಲವರಿಗೆ ತಲೆನೋವು. ಆದರೆ ಸುಲಭವಾಗಿ ಶುಂಠಿಯ ಸಿಪ್ಪೆಯನ್ನು ತೆಗೆಯಬಹುದು. ಅದ್ಹೇಗೆ..?

How to Peel Ginger Quickly and easily

ಅಡುಗೆಯ ರುಚಿ ನಾಲಗೆಗೆ ರುಚಿ, ಮೂಗಿಗೆ ಸುವಾಸನೆ ಆಗಿರಬೇಕು ಎಂದು ಹೇಳುತ್ತಾರೆ. ಹೀಗಾಗಿಯೇ ಹಿರಿಯರು ಅಡುಗೆಮನೆಯಲ್ಲಿ ಎಲ್ಲಾ ರೀತಿಯ ಮಸಾಲೆ ಪದಾರ್ಥ ಲಭ್ಯವಿರುವಂತೆ ನೋಡಿಕೊಳ್ಳುತ್ತಾರೆ. ಭಾರತೀಯ ಅಡುಗೆಯ ಪ್ರತ್ಯೇಕತೆಯೇ ಮಸಾಲೆ ಪದಾರ್ಥಗಳನ್ನು ಒಳಗೊಂಡ ಅಡುಗೆ. ಅದರಲ್ಲೂ ಶುಂಠಿ(Ginger), ಬೆಳ್ಳುಳ್ಳಿ (Garlic), ಕರಿಮೆಣಸು(Black Pepper), ಏಲಕ್ಕಿ(Cardamom) ಮೊದಲಾದವುಗಳಿಲ್ಲದೆ ಘಮಘಮಿಸುವ ಅಡುಗೆ ಸಿದ್ಧವಾಗಲು ಸಾಧ್ಯವೇ ಇಲ್ಲ. ಇಂಡಿಯನ್ ಕಿಚನ್‍ನಲ್ಲಿ ಮಸಾಲೆಗಳಿಗೆ ಪ್ರಥಮ ಸ್ಥಾನವಿದೆ. ಅದರಲ್ಲೂ ಬೆಳಗ್ಗಿನ ತಿಂಡಿ, ಸಾಂಬಾರು, ಸ್ನ್ಯಾಕ್ಸ್(Snacks) ರೆಡಿ ಮಾಡುವಾಗಲಂತೂ ಶುಂಠಿ ಬೇಕೇ ಬೇಕು. 

ವೆಜ್(Veg) ಅಥವಾ ನಾನ್ ವೆಜ್(Non-veg) ಎಲ್ಲಾ ವಿಧದ ಅಡುಗೆ ತಯಾರಿಗೂ ಶುಂಠಿ ಬೇಕು. ಅಡುಗೆಯಲ್ಲಿ ಮಾತ್ರವಲ್ಲ ಶೀತ, ಕೆಮ್ಮಿಗೆ, ಆರ್ಯುವೇದ(Ayurveda) ಕಷಾಯ ತಯಾರಿಗೂ ಶುಂಠಿ ಬಳಕೆಯಾಗುತ್ತದೆ. ತಲೆನೋವು(Headache), ಒತ್ತಡ ಇದ್ದವರು ಜಸ್ಟ್ ರಿಲ್ಯಾಕ್ಸ್ ಆಗೋಕೆ ಅಂತ ಮೊರೆ ಹೋಗೋದು ಜಿಂಜರ್ ಟೀಗೆ. ಆದರೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಶುಂಠಿಯನ್ನು ಎಲ್ಲಾ ಪೋಷಕಾಂಶಗಳು ಹಾಗೇ ಉಳಿಯುವಂತೆ ಬಳಸುವುದು ಹೇಗೆಂದು ಹಲವರಿಗೆ ತಿಳಿದಿಲ್ಲ. ಆ ಬಗ್ಗೆ ತಿಳಿಯೋಣ.

ಹೊಟ್ಟೆ ಕೆಟ್ಟಿದ್ಯಾ? ಸರಿಯಾಗಿರಬೇಕೆಂದರೆ ಈ ಫುಡ್ ಮಿಸ್ ಮಾಡ್ಬೇಡಿ!

ಶುಂಠಿಯನ್ನು ಹಲವು ರೀತಿಯಲ್ಲಿ ಬಳಸುತ್ತಾರೆ. ಹಸಿಯಾಗಿ, ಬೇಯಿಸಿ, ಸಿಪ್ಪೆ ಸುಲಿದು ಅಥವಾ ಸಿಪ್ಪೆ ಸುಲಿಯದೆ, ಹೀಗೆ ಹಲವು ರೀತಿಯಲ್ಲಿ ಶುಂಠಿಯನ್ನು ಬಳಕೆ ಮಾಡಲಾಗುತ್ತದೆ. ಈ ರೀತಿ ಒಂದೊಂದು ರೀತಿಯಲ್ಲಿ ಶುಂಠಿಯನ್ನು ಬಳಸುವಾಗಲೂ ಲಭ್ಯವಾಗುವ ಪೋಷಕಾಂಶ(Protein)ಗಳ ಪ್ರಮಾಣ ವ್ಯತ್ಯಾಸವಾಗುತ್ತದೆ. 

ಆದರೆ ಶುಂಠಿಯನ್ನು ಬಳಸುವ ಹಲವರ ಸಮಸ್ಯೆಯೆಂದರೆ ಶುಂಠಿಯ ಸಿಪ್ಪೆಯನ್ನು ತೆಗೆಯುವುದು ಹೇಗೆ ಎಂಬ ಪ್ರಶ್ನೆ. ಶುಂಠಿಯನ್ನು ಕೈಯಲ್ಲಿ ಹಿಡಿದು ಚಾಕುವಿನಿಂದ ಸಿಪ್ಪೆ ತೆಗೆಯಲು ಹೋಗಿ ಕೈಗೆ ಗಾಯ ಮಾಡಿಕೊಳ್ಳುವವರು ಹಲವರು. ಪೀಲರ್(Peeler)ನಲ್ಲಿ ಸಿಪ್ಪೆ ತೆಗೆಯಲು ಹೋದರೆ ಹಲವು ಬಾರಿ ಶುಂಠಿಯೇ ತುಂಡಾಗಿ ಬರುತ್ತದೆ. ಹೀಗಾಗಿಯೇ ಇದ್ಯಾವ ರಗಳೆ ಬೇಡ ಎಂದು ಈಗೆಲ್ಲಾ ಹೆಚ್ಚಿನವರು ಮಾರುಕಟ್ಟೆಯಿಂದ ಪ್ಯಾಕೆಟ್‍ (Packet)ನಲ್ಲಿ ಸಿದ್ಧವಾಗಿ ಬರುವ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಬಳಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆದರೆ ಈ ರೀತಿ ಯಾವುದೇ ಪದಾರ್ಥವನ್ನು ಬಳಸುವುದು ಆರೋಗ್ಯಕ್ಕೆ ಉತ್ತಮವಲ್ಲದ ಕಾರಣ, ಪರ್ಯಾಯವಾಗಿ ಶುಂಠಿಯ ಸಿಪ್ಪೆಯನ್ನು ಸುಲಭವಾಗಿ ತೆಗೆಯುವ ವಿಧಾನವನ್ನು ತಿಳಿದುಕೊಳ್ಳಬೇಕಿದೆ.

ಶುಂಠಿಯ ಎಲ್ಲಾ ಪೋಷಕಾಂಶಗಳು ಹಾಗೇ ಉಳಿಯುವಂತೆ ಸಿಪ್ಪೆ ತೆಗೆಯಲು ಸರಿಯಾದ ಮಾರ್ಗವಿದೆಯೇ ? ಎಂಬುದರ ಬಗ್ಗೆ ಪ್ರಸಿದ್ಧ ಶೆಫ್ ಕ್ಯಾಥರೀನ್ ಮೆಕ್‌ಬ್ರೈಡ್ ತಮ್ಮ ಟ್ವಿಟರ್‌(Twitter)ನಲ್ಲಿ ವಿವರಿಸಿದ್ದು, ಈ ಬಗ್ಗೆ ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಶುಂಠಿಯ ಸಿಪ್ಪೆಯನ್ನು ತೆಗೆಯಲು ಚಾಕುವನ್ನು ಬಳಸುವ ಬದಲು ಸ್ಪೂನ್‍ನ್ನು ಬಳಸಲು ಸಲಹೆ ನೀಡಿದ್ದಾರೆ. ಚಮಚದಿಂದ ಹೀಗೆ ಸುಲಭವಾಗಿ, ಅಚ್ಚುಕಟ್ಟಾಗಿ ಶುಂಠಿಯ ಸಿಪ್ಪೆ ತೆಗೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಮೆಟ್ಟಿಲೇರುವಾಗ ಉಸಿರುಗಟ್ಟಿದಂತಾಗುತ್ತಿದೆಯೇ? ಈ ಮನೆಮದ್ದು ಬಳಸಿ

ಈ ರೀತಿ ಸುಲಭವಾಗಿ ಶುಂಠಿಯ ಸಿಪ್ಪೆ ತೆಗೆಯಲು ಅನುಸರಿಸಬೇಕಾದ ವಿಧಾನ ಹೀಗಿದೆ. ಮೊದಲಿಗೆ ಅಂಗಡಿಯಿಂದ ತಂದ ಶುಂಠಿಯನ್ನು ಚೆನ್ನಾಗಿ ತೊಳೆದು ನೀರಿನ ಅಂಶ ಹೋಗುವ ವರೆಗೂ ಸ್ಪಲ್ಪ ಒಣಗಿಸಿಕೊಳ್ಳಬೇಕು. ನಂತರ ಉಳಿದಿರುವ ನೀರಿನ ಅಂಶವನ್ನು ಒಂದು ಕಾಟನ್ ಬಟ್ಟೆಯಿಂದ ಒತ್ತಿ ತೆಗೆದು ಶುಂಠಿಗಳನ್ನು ರೆಫ್ರಿಜರೇಟರ್(Refrigerator) ನಲ್ಲಿಡಬೇಕು. ಸುಮಾರು 3-4 ಗಂಟೆಗಳ ನಂತರ ಈ ಶುಂಠಿಯ ಸಿಪ್ಪೆಯನ್ನು ಸ್ಪೂನ್‍ನ ಸಹಾಯದಿಂದ ಯಾವುದೇ ಕಷ್ಟವಿಲ್ಲದೆ ಸುಲಭವಾಗಿ ತೆಗೆಯಲು ಸಾಧ್ಯವಾಗುತ್ತದೆ. ಈ ರೀತಿ ಫ್ರಿಜ್‍ನಲ್ಲಿಟ್ಟ ಶುಂಠಿ ಅಂಕುಡೊಂಕಾಗಿದ್ದರೂ ಸಹ ಸಿಪ್ಪೆ ತೆಗೆಯಲು ಕಷ್ಟವಾಗುವುದಿಲ್ಲ. ಶುಂಠಿ ಒಣಗಿದ್ದಾಗ ಮಾತ್ರ ಸಿಪ್ಪೆ ತೆಗೆಯಲು ಕಷ್ಟವಾಗುತ್ತದೆ.

ಶುಂಠಿ ಸಿಪ್ಪೆಯನ್ನು ವೇಸ್ಟ್ ಎಂದು ಎಸೆಯುವ ಮುನ್ನ ಹೀಗೂ ಮಾಡ್ಬಹುದು ನೋಡಿ

ಶೆಫ್ ಶೇರ್ ಮಾಡಿರುವ ವೀಡಿಯೋಗೆ ಕೆಲವರು ಶುಂಠಿಯನ್ನು ಸಿಪ್ಪೆ ತೆಗೆದು ಬಳಸಬೇಡಿ ಎಂದು ಸಲಹೆ ನೀಡಿದರೆ, ಇನ್ನು ಕೆಲವರು ಸ್ಪೂನ್‍ನಿಂದ ಶುಂಠಿಯ ಸಿಪ್ಪೆ ತೆಗೆಯುವುದು ತುಂಬಾ ಸುಲಭವಾದ ಉಪಾಯ ಎಂದು ಕಮೆಂಟ್(Comment) ಮಾಡಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ವಾಂಸರೊಬ್ಬರು ಶುಂಠಿಯನ್ನು ಅದರ ಸಿಪ್ಪೆಯೊಂದಿಗೆ ಬಳಸಬೇಕು. ಶುಂಠಿಯ ಸಿಪ್ಪೆ ತಿನ್ನಲು ಯೋಗ್ಯವಾಗಿದೆ. ಇದರಿಂದ ಹಲವಾರು ಪ್ರಯೋಜನಗಳಿವೆ ಎಂದಿದ್ದಾರೆ.

Latest Videos
Follow Us:
Download App:
  • android
  • ios