ಮಕ್ಕಳ ಟಿಫಿನ್ ಬಾಕ್ಸ್‌ಗೆ ಏನು ಮಾಡುವುದು ಎಂಬ ಚಿಂತೆಯಲ್ಲಿರುವ ಅಮ್ಮಂದಿರಿಗೆ ಇಲ್ಲಿದೆ ಒಂದು ಸುಲಭ ಪರಿಹಾರ. ಪಾಲಕ್ ಮತ್ತು ಬೀಟ್‌ರೂಟ್ ಬಳಸಿ ಮಾಡುವ ಬಣ್ಣಬಣ್ಣದ ಕಾಮನಬಿಲ್ಲು ಪುರಿಯು ಮಕ್ಕಳನ್ನು ಆಕರ್ಷಿಸುವುದಲ್ಲದೆ, ಆರೋಗ್ಯಕರವೂ ಆಗಿದೆ.
ದಿನಬೆಳಗಾದ್ರೆ ಅಮ್ಮಂದಿರಿಗೆ ಮಕ್ಕಳಿಗೆ ಏನು ತಿಂಡಿ ಮಾಡಿ ಬಾಕ್ಸ್ನಲ್ಲಿ ಹಾಕಿಕೊಡೋದು ಎನ್ನೋ ಚಿಂತೆ. ಕೆಲವು ಮಕ್ಕಳಿಗೆ ಅದು ಆಗಲ್ಲ, ಮತ್ತೆ ಕೆಲವು ಮಕ್ಕಳಿಗೆ ಇದು ಆಗಲ್ಲ. ಎಲ್ಲರನ್ನೂ ಸಮಾಧಾನ ಮಾಡಿ ಬೆಳಿಗ್ಗೆಯ ಗಡಿಬಿಡಿಯಲ್ಲಿ, ಅವರ ಇಷ್ಟದ ತಿಂಡಿ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿಬಿಡುತ್ತದೆ. ಆದ್ದರಿಂದ ಕೆಲವೊಮ್ಮೆ ಡಿಫರೆಂಟ್ ಎನ್ನಿಸುವ ತಿನಿಸು ಮಾಡಿಕೊಡುವುದಕ್ಕಾಗಿ ಅಮ್ಮಂದಿರ ಸೋಷಿಯಲ್ ಮೀಡಿಯಾದ ತಡಕಾಡುವುದು ಸರ್ವೇ ಸಾಮಾನ್ಯ. ಇದೀಗ ಅದೇ ರೀತಿ ಕಾಮನಬಿಲ್ಲು ಪುರಿಯನ್ನು ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ಕೆಲವು ಮಕ್ಕಳಿಗೆ ಪಾಲಕ್ ಆಗಲ್ಲ, ಹಲವು ಮಕ್ಕಳಿಗೆ ಬೀಟ್‌ರೂಟ್ ಆಗಲ್ಲ. ಆದರೆ ಇವೆರಡೇ ಸಾಮಗ್ರಿಯಿಂದ ಮತ್ತೆ ಮತ್ತೆ ತಿನಿಸಬೇಕು ಎನ್ನುವ ರೈನ್ಬೋ ಪುರಿಯನ್ನು ಸಿದ್ಧಮಾಡಿ ತೋರಿಸಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಬೇಕಿರೋದು ಇಷ್ಟೇ
ಇದಕ್ಕೆ ಬೇಕಿರೋದು ಗೋಧಿ ಹಿಟ್ಟು, ಒಂದು ಹಿಡಿ ಪಾಲಕ್ ಸೊಪ್ಪು, ಒಂದು ಚಿಕ್ಕ ಬೀಟ್‌ರೂಟ್, ಸ್ವಲ್ಪ ಉಪ್ಪು, ಸ್ವಲ್ಪ ಅರಿಶಿಣ ಇಷ್ಟೇ.
ಮಾಡುವುದು ಹೇಗೆ?
ಗೋಧಿ ಹಿಟ್ಟನ್ನು ಮೂರು ಪಾಲು ಮಾಡಿಕೊಳ್ಳಬೇಕು. ಮೂರಕ್ಕೂ ಸಪರೇಟ್ ಆಗಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ಒಂದು ಪಾಲಿನ ಮೇಲೆ ಸ್ವಲ್ಪ ಅರಿಶಿಣದ ಪುಡಿ, ಎರಡನೆಯ ಪಾಲಿನ ಮೇಲೆ ಮಿಕ್ಸಿ ಮಾಡಿದ ಪಾಲಕ್ ಸೊಪ್ಪು ಹಾಗೂ ಮೂರನೆಯ ಪಾಲಿನ ಮೇಲೆ ಪೀಸ್ ಮಾಡಿ ಮಿಕ್ಸಿಯಲ್ಲಿ ರುಬ್ಬಿದ ಬೀಟ್‌ರೂಟ್. ಇಷ್ಟೇ.
ಎಲ್ಲವನ್ನೂ ಪ್ರತ್ಯೇಕವಾಗಿ ಕಲಿಸಿ ಸಾಮಾನ್ಯ ಪುರಿಯ ಹದಕ್ಕೆ ತರಬೇಕು.
ಬಳಿಕ ಮೂರೂ ಮುದ್ದೆಗಳನ್ನು ಪ್ರತ್ಯೇಕವಾಗಿ ಲಟ್ಟಿಸಿಕೊಳ್ಳಬೇಕು. ಆ ಬಳಿಕ ಒಂದರ ಮೇಲೆ ಒಂದು ಇಟ್ಟು ಅದನ್ನು ಸುರುಳಿಯಾಕಾರದಲ್ಲಿ ಸುತ್ತಿ, ಚಾಕುವಿನಿಂದ ಕಟ್ ಮಾಡಿಕೊಳ್ಳಬೇಕು (ಕೆಳಗಿರುವ ವಿಡಿಯೋದಲ್ಲಿ ಮಾಹಿತಿ ಇದೆ). ಬಳಿಕ ತುಂಡುಗಳನ್ನು ಪುರಿಯ ಸೈಜ್ನಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಹಾಕಿದ್ರೆ ಕಾಮನಬಿಲ್ಲಿನ ಪುರಿ (Rainbow Puri) ರೆಡಿ.
foodophile_saloni ಇದನ್ನು ಶೇರ್ ಮಾಡಲಾಗಿದೆ ನೋಡಿ:


