ಸೊಪ್ಪು, ತರಕಾರಿಗಳಲ್ಲಿ ಹುಳು ತೆಗೆಯುವುದು ಕಷ್ಟ. ಹೂಕೋಸು, ಎಲೆಕೋಸುಗಳನ್ನು ಕತ್ತರಿಸಿ ನೀರಿನಲ್ಲಿ ನೆನೆಸಿ. ಉಪ್ಪು ಅಥವಾ ಅರಿಶಿನ ಬೆರೆಸಿದ ನೀರು ಸಹ ಪರಿಣಾಮಕಾರಿ. ಬಿಸಿ ಅಥವಾ ಐಸ್ ನೀರಿನಲ್ಲಿ ನೆನೆಸಿಟ್ಟರೆ ಹುಳುಗಳು ಹೊರಬರುತ್ತವೆ. ಖರೀದಿಸುವಾಗ ಹಳದಿ, ಕಪ್ಪಾದ ಹೂಕೋಸು ಬೇಡ. ಸ್ವಚ್ಛಗೊಳಿಸುವಾಗ ಗಮನವಿರಲಿ. ನೆನೆಸಿದ ನಂತರ ಶುದ್ಧ ನೀರಿನಲ್ಲಿ ತೊಳೆದು, ಟವೆಲ್‌ನಲ್ಲಿ ಒರೆಸಿ ಬಳಸಿ.

ಸೊಪ್ಪು, ತರಕಾರಿಯನ್ನು ಮನೆಗೆ ತರೋದು ದೊಡ್ದಲ್ಲ, ಅದ್ರಲ್ಲಿರುವ ಹುಳು ತೆಗೆಯೋದೇ ದೊಡ್ಡ ತಲೆನೋವು. ಎಷ್ಟೇ ಹುಡುಕಿದ್ರೂ ಸೊಪ್ಪು ಹಾಗೂ ಹೂಕೋಸಿ (Cauliflower)ನಲ್ಲಿರುವ ಹುಳು (insects) ಗಳು ಕಣ್ಣಿಗೆ ಕಾಣೋದೇ ಇಲ್ಲ. ಎಲೆಕೋಸಿನಲ್ಲಿ ಹುಳುಗಳು ಸುಲಭವಾಗಿ ಅಡಗಿರುತ್ವೆ. ಹಸಿರು ಬಣ್ಣದ ಹುಳುವನ್ನು ಹೇಗೋ ಪತ್ತೆ ಮಾಡ್ಬಹುದು ಆದ್ರೆ ಬಿಳಿ ಹುಳು ಬೇಗ ಕಣ್ಣಿಗೆ ಬೀಳೋದಿಲ್ಲ. ಆಹಾರ ತಯಾರಿಸಿದ್ಮೇಲೆ ಊಟದಲ್ಲು ಹುಳು ಸಿಕ್ರೆ ವಾಕರಿಕೆ ಬರುತ್ತೆ. ಅಪ್ಪಿತಪ್ಪಿ ಈ ಹುಳು ಹೊಟ್ಟೆ ಸೇರಿದ್ರೆ ಆರೋಗ್ಯ ಹದಗೆಡುತ್ತೆ. ಎಲೆಕೋಸು ಹಾಗೂ ಹೂಕೋಸನ್ನು ನೀವು ಮನೆಗೆ ತಂದ ನಂತ್ರ ಹುಳು ಹುಡುಕ್ತಾ ಕೂರಬೇಕಾಗಿಲ್ಲ. ಸ್ವಯಂಚಾಲಿತವಾಗಿ ಹುಳು ಹೊರಗೆ ಬರ್ಬೇಕು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡಿ.

ಹೂಕೋಸು ಮತ್ತು ಎಲೆಕೋಸಿ (Cabbage)ನ ಹುಳು ತೆಗೆಯೋದು ಹೀಗೆ? : 

ಮೊದಲು ಎಲೆಕೋಸು ಅಥವಾ ಹೂಕೋಸನ್ನು ಸಣ್ಣದಾಗಿ ಕತ್ತರಿಸಿ, ಅದನ್ನು ನೀರಿನಲ್ಲಿ ನೆನೆಹಾಕಿ. ಹತ್ತರಿಂದ ಹದಿನೈದು ನಿಮಿಷ ನೀರಿನಲ್ಲಿ ನೆನೆಸಿಟ್ಟರೆ ಹುಳುಗಳು ತಾವಾಗಿಯೇ ಹೊರಗೆ ಬರುತ್ತವೆ. ನೀರಿನಲ್ಲಿ ನೆನೆಹಾಕಿದಾಗ ಅಲ್ಲಿರೋದು ಹುಳುಗಳಿಕೆ ಕಠಿಣವಾಗುತ್ತವೆ. ತಮ್ಮನ್ನು ರಕ್ಷಿಸಿಕೊಳ್ಳಲು ಅವು ಹೊರಗೆ ಬರುತ್ತವೆ. ನೀರಿನಲ್ಲಿ ನೆನೆ ಹಾಕಿದಾಗ ಸಣ್ಣ ಹಾಗೂ ದೊಡ್ಡ ಹುಳುಗಳು ಹೊರಗೆ ಬರುತ್ತವೆ.

ಮನೆಯಲ್ಲೇ ಮಾಡಿ ಹೊಟೇಲ್‌ ರೀತಿ ಟೇಸ್ಟಿಯಾದ ಪನ್ನೀರ್ ಚಿಲ್ಲಿ: ರೆಸಿಪಿ ಇಲ್ಲಿದೆ

ನೀವು ನೀರಿಗೆ ಸ್ವಲ್ಪ ಉಪ್ಪು ಹಾಕಿ ನೆನೆಸಿಡಬಹುದು. ಕತ್ತರಿಸಿದ ಹೂಕೋಸನ್ನು ಉಪ್ಪು ಬೆರೆಸಿದ ನೀರಿನಲ್ಲಿ ಐದರಿಂದ ಹತ್ತು ನಿಮಿಷ ನೆನೆಸಿಟ್ಟರೆ ಹುಳುಗಳು ತಾನಾಗಿಯೇ ಹೊರಗೆ ಬರುತ್ತವೆ. ಈ ನೀರಿಗೆ ನೀವು ಅರಿಶಿನವನ್ನು ಕೂಡ ಹಾಕ್ಬಹುದು. ಉಪ್ಪು ನೀರಿಗೆ ಚಿಟಕಿ ಉಪ್ಪನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿದ ನಂತ್ರ ಆ ನೀರಿಗೆ ಕತ್ತರಿಸಿದ ಎಲೆಕೋಸು ಅಥವಾ ಹೂಕೋಸನ್ನು ಹಾಕಿ. ನಿಮ್ಮ ಕಣ್ಣಿಗೆ ಕಾಣದ ಚಿಕ್ಕ ಕೀಟಗಳೂ ಹೊರಗೆ ಬರುತ್ತವೆ. ನಂತ್ರ ಶುದ್ಧ ನೀರಿನಿಂದ ಹೋಳುಗಳನ್ನು ಸ್ವಚ್ಛಗೊಳಿಸಬೇಕು.

ನೀವು ಬಿಸಿ ನೀರಿನಲ್ಲಿಯೂ ಎಲೆಕೋಸು ಹಾಗೂ ಹೂಕೋಸನ್ನು ನೆನೆಸಿಡಬಹುದು. ನೀರು ಬಿಸಿಯಿದ್ರೆ ಅಲ್ಲಿಯೇ ಹುಳು ಸಾಯುತ್ತವೆ. ಇದ್ರಿಂದ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಕಾಡುವುದಿಲ್ಲ. ಐಸ್ ನೀರು ಕೂಡ ಈ ಹುಳು ತೆಗೆಯಲು ಸಹಕಾರಿಯಾಗಿದೆ. ಐಸ್ ನೀರಿನಲ್ಲಿ ನೀವು ಎಲೆಕೋಸು ಅಥವಾ ಹೂಕೋಸನ್ನು ಹಾಕಿಟ್ಟರೆ ಹುಳು ಅಲ್ಲಿ ಹೆಪ್ಪುಗಟ್ಟುವ ಬದಲು ಹೊರಗೆ ಬರುವ ಪ್ರಯತ್ನ ಮಾಡುತ್ತದೆ. ಇದ್ರಿಂದ ಹುಳುವನ್ನು ಹೊರಗೆ ಹಾಕುವುದು ಸುಲಭವಾಗುತ್ತದೆ.

ಹೂಕೋಸು ಖರೀದಿ ಮಾಡುವ ಮೊದಲು ನೀವು ಎಚ್ಚರಿಕೆ ತೆಗೆದುಕೊಂಡ್ರೆ ಹುಳುಗಳ ಕಾಟದಿಂದ ಬಚಾವ್ ಆಗ್ಬಹುದು. ಹಳದಿಯಾಗಿರುವ ಮತ್ತು ಕಪ್ಪಾಗಿರುವ ಹೂಕೋಸಿನಲ್ಲಿ ಹೆಚ್ಚು ಹುಳುಗಳಿರುತ್ತವೆ. ಹಾಗಾಗಿ ಅವುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆವಹಿಸಿ. ಅನೇಕರು ತರಾತುರಿಯಲ್ಲಿ ಸೊಪ್ಪು ಹಾಗೂ ಹೂಕೋಸನ್ನು ಕ್ಲೀನ್ ಮಾಡ್ತಾರೆ. ಹಾಗೆ ಮಾಡಿದಾಗ ಹುಳು ಅಲ್ಲೇ ಇರುವ ಸಾಧ್ಯತೆ ಇದೆ. ನೀವು ಟಿವಿ ನೋಡ್ತಾ ಇಲ್ಲವೆ ಫೋನ್ ನೋಡ್ತಾ ಹೂಕೋಸನ್ನು ಸ್ವಚ್ಛಗೊಳಿಸಲು ಹೋಗ್ಬೇಡಿ. ಹಿಂದಿನ ದಿನವೇ ಹೂಕೋಸನ್ನು ಕ್ಲೀನ್ ಮಾಡಿಟ್ಟುಕೊಳ್ಳಿ. ಸಮಯವಿದ್ದಾಗ ನಿಮ್ಮ ಸಂಪೂರ್ಣ ಗಮನವನ್ನು ಸ್ವಚ್ಛತೆಗೆ ನೀಡಿ ಹೂಕೋಸ್ ಕ್ಲೀನ್ ಮಾಡಿ. 

ಹಾಲು vs ಮೊಸರು vs ಪನೀರ್: ಯಾವುದು ಆರೋಗ್ಯಕ್ಕೆ ಉತ್ತಮ?

ನೀರಿನಲ್ಲಿ, ಬಿಸಿ ನೀರಿನಲ್ಲಿ ಇಲ್ಲ ಉಪ್ಪು ನೀರಿನಲ್ಲಿ ಹೂಕೋಸನ್ನು ನೆನೆಸಿದ ನಂತ್ರ ಅದನ್ನು ಶುದ್ಧ ನೀರಿನಲ್ಲಿ ಮತ್ತೊಮ್ಮೆ ಸ್ವಚ್ಛಗೊಳಿಸಬೇಕು. ಆ ನಂತ್ರ ಒಂದು ಶುದ್ಧ ಟವೆಲ್ ಮೇಲೆ ಅದನ್ನು ಹರಡಬೇಕು. ನಂತ್ರ ಇನ್ನೊಮ್ಮೆ ಪರಿಶೀಲನೆ ನಡೆಸಿ, ಚೆನ್ನಾಗಿ ಒರೆಸಿ ಅದನ್ನು ಅಡುಗೆಗೆ ಬಳಸಿ.