Asianet Suvarna News Asianet Suvarna News

ಮುಕೇಶ್ ಅಂಬಾನಿ ಹೊಟ್ಟೆಗೇನ್ ತಿಂತಾರೆ? ಪಾಂಕಿ ಎಂಬ ಡಿಶ್ ಹೀಗಿರುತ್ತೆ ನೋಡಿ

ಕೋಟಿ ಕುಬೇರ ಮುಕೇಶ್ ಅಂಬಾನಿ ನಿತ್ಯ ಬೆಳಿಗ್ಗೆ ಸೇವಿಸುವ ಬ್ರೇಕ್‌ಫಾಸ್ಟ್ ಚಿನ್ನದ ತಟ್ಟೆಯಲ್ಲೇ ಮಾಡಬಹುದು. ಆದರೆ ಅವರು ಸೇವಿಸುವುದು ಒಂದು ಸರಳ ಗುಜರಾತಿ ಖಾದ್ಯವನ್ನು ಮಾತ್ರ!

How Mukesh Ambani and his Familys breakfast look like rich family lifetyle bni
Author
First Published Jul 5, 2024, 12:21 PM IST

ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ (Mukesh Ambni and Nita Ambani Lifestyle) ಇದೀಗ ದೇಶದ ಬಹು ಚರ್ಚೆಯಲ್ಲಿರುವ ವ್ಯಕ್ತಿಗಳು. ಇವರ ಮಗ ಅಕಾಶ್ ಮದುವೆಯ ವೈಭವ ಇಂದ್ರಸಭೆಯನ್ನೂ ಮೀರಿಸಿದೆ. ಮದುವೆಯ ನಾನಾ  ಸಂಭ್ರಮಗಳಿಗೆ ಇವರು ಮಾಡಿಸುತ್ತಿರುವ ಆಹಾರವೂ ಕಾಂಟಿನೆಂಟಲ್‌ನಿಂದ ಹಿಡಿದು ರಾಮೇಶ್ವರಂ ಪುಡಿ ಇಡ್ಲಿವರೆಗೆ ಇದೆ. ಆದರೆ ಸ್ವತಃ ಮಲ್ಟಿ ಬಿಲಿಯನೆರ್ ಆಗಿರುವ ಮುಕೇಶ್ ಅಂಬಾನಿ ಯಾವಾಗಲೂ ಹೊಟ್ಟೆಗೇನು ತಿಂತಾರೆ? 

ಕೆಲವು ದಿನಗಳ ಹಿಂದೆ, ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ವಾರಣಾಸಿಯಲ್ಲಿ ಆಕೆಯ ನೆಚ್ಚಿನ ಆಲೂ ಚಾಟ್ ಅನ್ನು ಹೊಂದಿರುವ ತಿಂಡಿ ಅಂಗಡಿಗೆ ಭೇಟಿ ನೀಡಿದ ವಿಡಿಯೋಗಳು ವೈರಲ್ ಆಗಿವೆ. ಅಲ್ಲಿ ಅವರು ಆಹಾರವನ್ನು ಮಾತ್ರ ಆನಂದಿಸಿದ್ದಲ್ಲ, ಸ್ಥಳೀಯರೊಂದಿಗೆ ಸಂವಹನ ನಡೆಸಿದರು. ಆಕೆಯ ಪತಿ ಮತ್ತು ಕುಟುಂಬದ ಆದ್ಯತೆಯ ತಿಂಡಿಗಳ ಬಗ್ಗೆ ಅಲ್ಲಿನ ಜನ ಪ್ರಶ್ನಿಸಿದರು. ಆಗ ನೀತಾ, ಮುಕೇಶ್ ಸೇರಿದಂತೆ ತಮ್ಮ ಕುಟುಂಬವು ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡುತ್ತೇವೆ ಎಂದು ಅವರು ಬಹಿರಂಗಪಡಿಸಿದರು.

ಕುತೂಹಲಕರ ಸಂಗತಿ ಎಂದರೆ ಕೋಟ್ಯಧೀಶ ಮುಕೇಶ್ ಸಸ್ಯಾಹಾರಿ. ಅವರು ತಮ್ಮ ಆಹಾರಕ್ರಮದಲ್ಲಿ ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ವಾರಕ್ಕೊಮ್ಮೆ ಮಾತ್ರ ಹೊರಗಿನಿಂದ ತರಿಸಿ ತಿನ್ನುತ್ತಾರೆ. ಗುಜರಾತಿ ಊಟ ಅವರಿಗೆ ತುಂಬಾ ಇಷ್ಟ. ಅಕ್ಕಿ ಹಿಟ್ಟಿನಿಂದ ಮಾಡಿದ ತಿಂಡಿ ಪಾಂಕಿ ಅವರ ನೆಚ್ಚಿನ ತಿಂಡಿಯಂತೆ. ಅದಕ್ಕೆ ಸ್ವಲ್ಪ ಚೀಸ್ ಸೇರಿಸಿಕೊಳ್ಳುತ್ತಾರೆ. ಇದೊಂದು ಆರೋಗ್ಯಕರ ಆಯ್ಕೆ ಎನ್ನುತ್ತಾರೆ ಅವರು. ಇದು ಮೆಂತೆ ಸೊಪ್ಪು, ಅರಿಶಿನದಂತಹ ಮಸಾಲೆಗಳನ್ನು ಹೊಂದಿರುವ ಅಪ್ಪಟ ಈ ನೆಲದ ಪದಾರ್ಥ. ಬಾಳೆ ಎಲೆಗಳಲ್ಲಿ ಹಿಟ್ಟು ಇಟ್ಟು ಹಬೆಯಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. ಅದರೆ ಸುಮಾರಾಗಿ ನಮ್ಮ ಹಲಸಿನ ಕಡುಬಿನ ಥರ ಎನ್ನಬಹುದು. ಇದನ್ನ ಚಟ್ನಿ ಮತ್ತು ಉಪ್ಪಿನಕಾಯಿಯೊಂದಿಗೆ ಸೇವಿಸಲಾಗುತ್ತದೆ. 

ಪಾಂಕಿ ನಿಮಗೂ ಕೂಡ ಆರೋಗ್ಯಕರ ಆಯ್ಕೆಯಾಗಬಹುದು. ಯಾಕೆಂದರೆ ಇದರಲ್ಲಿ ಆರೋಗ್ಯಕರ ಅಂಶಗಳು ಹಲವಾರಿವೆ. ಮುಖ್ಯವಾಗಿ ಬಾಳೆ ಎಲೆಯ ಪರಿಮಳ. ಕೇರಳದ ಅನೇಕ ಭಕ್ಷ್ಯಗಳಂತೆ ಪಾಂಕಿಯನ್ನು ಬಾಳೆ ಎಲೆಗಳ ನಡುವೆ ಇಟ್ಟು ಬೇಯಿಸಲಾಗುತ್ತದೆ. ಇದು ರುಚಿಯನ್ನು ಹೆಚ್ಚಿಸುವ ನೈಸರ್ಗಿಕ ಪರಿಮಳವನ್ನು ಸೇರಿಸುತ್ತದೆ. ತಜ್ಞರು ಹೇಳುವಂತೆ ಬಾಳೆ ಎಲೆ ರೋಗನಿರೋಧಕ ಅಂಶಗಳನ್ನು ಹೊಂದಿರುತ್ತವೆ. ಅವು ಬಾಳೆಲೆಯಲ್ಲಿ ಬೇಯಿಸಿದ ಆಹಾರಕ್ಕೆ ವರ್ಗಾಯಿಸಲ್ಪಡುತ್ತದೆ. ಇದು ಅತ್ಯಂತ ಆರೋಗ್ಯಕರ ಅಡುಗೆ ವಿಧಾನವಾಗಿದೆ. 

ಶಿಲ್ಪಾ ಶೆಟ್ಟಿ ದಿನಾಲು ಕುಡಿತಾರೆ, ಎಂದೂ ಈ ಡ್ರಿಂಕ್ ಮಿಸ್‌ ಮಾಡೇ ಇಲ್ಲ! ಇದೇ ಬ್ಯೂಟಿ ಸೀಕ್ರೆಟ್

ಪಾಂಕಿ ಅಕ್ಕಿ ಹಿಟ್ಟಿನಿಂದ ಕಾರ್ಬೋಹೈಡ್ರೇಟ್‌ಗಳು, ಮೆಂತ್ಯ, ಮಸಾಲೆಗಳು ಮತ್ತು ಅದರಲ್ಲಿ ಬಳಸುವ ಗಿಡಮೂಲಿಕೆಗಳಿಂದಾಗಿ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದನ್ನು ಸೀಮಿತವಾಗಿ ಬೇಯಿಸುವುದರಿಂದ ತುಪ್ಪ ಅಥವಾ ಬೆಣ್ಣೆಯ ಪ್ರಮಾಣ, ಕೊಬ್ಬಿನಂಶ ಕಡಿಮೆ. ನೈಸರ್ಗಿಕವಾಗಿ ಗ್ಲುಟನ್ ಮುಕ್ತ. ಗ್ಲುಟನ್ ಸೆನ್ಸಿಟಿವಿಟಿ ಇರುವವರು ಪಾಂಕಿಯನ್ನು ಆನಂದಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಮುಖ್ಯ ಘಟಕಾಂಶವೆಂದರೆ ಅಕ್ಕಿ ಹಿಟ್ಟು. ಇದರಲ್ಲಿರುವ ಮೆಂತ್ಯವು ಜೀರ್ಣಕ್ರಿಯೆಗೆ ಸಹಾಯ ಮಾಡುವ ಸಾಕಷ್ಟು ಫೈಬರ್ ಅನ್ನು ಖಾತ್ರಿಗೊಳಿಸುತ್ತದೆ.

ವೇಟ್ ಲಾಸ್ (Weight Loss) ಮಾಡಬಯಸುವವರಿಗೂ ಇದು ಇಷ್ಟ. ಯಾಕೆಂದರೆ ಅದರ ಕಡಿಮೆ ಕ್ಯಾಲೋರಿಗಳು, ಕಡಿಮೆ ಕೊಬ್ಬು (Less Cholesterol), ಗ್ಲುಟನ್-ಮುಕ್ತ ಪ್ರೊಫೈಲ್. ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಸಹ ಹೊಂದಿದೆ. ಇದನ್ನು ಕೆಲವೊಮ್ಮೆ ಮೊಸರಿನೊಂದಿಗೆ ತಯಾರಿಸಲಾಗುತ್ತದೆ. ಅದರಲ್ಲಿ ಪ್ರೋಟೀನ್, ಪ್ರೊಬಯಾಟಿಕ್ ಸಿಗುತ್ತದೆ. ಈ ಭಕ್ಷ್ಯವು ಹೆಚ್ಚು ಕಾಲ ನಿಮಗೆ ಹಸಿವೆಯಾಗದಂತೆ ನೋಡಿಕೊಳ್ಳುತ್ತದೆ.

ಭಾರತದ ಕೆಟ್ಟ ಆಹಾರ ಪದಾರ್ಥ ಪಟ್ಟಿಯಲ್ಲಿ ಉಪ್ಪಿಟ್ಟು; ಇದೊಂದೇ ಕರೆಕ್ಟಾಗಿರೋದು ಅಂತಿದಾರೆ ನೆಟಿಜನ್ಸ್

 

Latest Videos
Follow Us:
Download App:
  • android
  • ios