ಊಟದ ನಂತ್ರ ಮಾಡೋ ಈ ಮೂರು ತಪ್ಪು ದಿಢೀರ್ ತೂಕ ಹೆಚ್ಚಳಕ್ಕೆ ಕಾರಣವಾಗ್ಬೋದು!
ಇತ್ತೀಚಿಗೆ ಬಹುತೇಕರನ್ನು ಕಾಡುವ ಸಮಸ್ಯೆ ತೂಕ ಹೆಚ್ಚಳ. ಆದ್ರೆ ಇದಕ್ಕೆ ದಿನನಿತ್ಯದ ಜೀವನದಲ್ಲಿ ನಾವು ಮಾಡೋ ತಪ್ಪೇ ಕಾರಣವಾಗ್ತಿರೋದು. ಅದರಲ್ಲೂ ಊಟ ಆದ ನಂತರ ನಾವು ಮಾಡೋ ಈ ಮೂರು ತಪ್ಪು ದಿಢೀರ್ ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ. ಅದೇನೂಂತ ತಿಳ್ಕೊಂಡಿರಿ.
ಊಟ ಎಂದರೆ ಏನನ್ನೋ ತಿಂದು ಬಿಡುವುದಲ್ಲ. ಆಹಾರ ದೇಹವನ್ನು ಪೋಷಿಸಲು ಮತ್ತು ದೀರ್ಘ ಕಾಲ ಎನರ್ಜಿಟಿಕ್ ಆಗಿರಲು ಸಹಾಯ ಮಾಡುತ್ತದೆ. ಊಟದಿಂದ ಆರೋಗ್ಯ ಸುಧಾರಿಸುವ ಹಾಗೆ ಆರೋಗ್ಯ ಹದಗೆಡಲೂ ಬಹುದು. ಹಾಗಾಗಬಾರದು ಅಂದ್ರೆ ಊಟದ ನಂತ್ರ ಅಪ್ಪಿತಪ್ಪಿಯೂ ಇಂಥಾ ತಪ್ಪುಗಳನ್ನು ಮಾಡಬಾರದು. ಹೀಗೆ ಮಾಡುವುದು ಮುಖ್ಯವಾಗಿ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಅಂಥಾ ಅಭ್ಯಾಸಗಳು ಯಾವುವು ತಿಳಿಯೋಣ.
ಊಟವಾದ ತಕ್ಷಣ ಮಲಗುವ ಅಭ್ಯಾಸ:
ಊಟದ ನಂತರ ಹೆಚ್ಚಿನ ಜನರು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಇದೂ ಸಹ ಒಂದಾಗಿದೆ. ಊಟವಾದ ತಕ್ಷಣ ನೇರವಾಗಿ ಮಲಗಲು ಹೋಗುತ್ತಾರೆ. ಊಟ ಮಾಡಿದ ತಕ್ಷಣ ಸುಸ್ತಾಗುವ ಕಾರಣ ರೆಸ್ಟ್ ಅಗತ್ಯವಿರುವಂತೆ ಅನಿಸಿದರೂ ಈ ಅಭ್ಯಾಸವು (Habit) ತೂಕದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ತಿಂದ ತಕ್ಷಣ ಮಲಗಿದಾಗ, ದೇಹದ ಜೀರ್ಣಕ್ರಿಯೆ (Digestion) ಪ್ರಕ್ರಿಯೆಯು ನಿಧಾನವಾಗುತ್ತದೆ,. ಇದರಿಂದ ದೇಹವು (Body) ಆಹಾರವನ್ನು ಪರಿಣಾಮಕಾರಿಯಾಗಿ ಚಯಾಪಚಯಗೊಳಿಸಲು ಕಷ್ಟವಾಗುತ್ತದೆ. ಇದು ಹೆಚ್ಚುವರಿ ಕ್ಯಾಲೋರಿ ಶೇಖರಣೆಗೆ ಕಾರಣವಾಗಬಹುದು. ಕೊನೆಯಲ್ಲಿ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.
Health Tips: ಆರೋಗ್ಯಕ್ಕೆ ಬಲು ಉಪಕಾರಿ ರಾಗಿ ಮುದ್ದೆ ರಾತ್ರಿ ಸೇವಿಸ್ಬೋದಾ?
ಬದಲಿಗೆ, ಊಟದ ನಂತರ ಮಲಗಿಕೊಳ್ಳುವ ಬದಲು ಲಘುವಾಗಿ ಅಡ್ಡಾಡುವ ಅಭ್ಯಾಸ ರೂಢಿಸಿಕೊಳ್ಳಿ. ಈ ಸರಳ ಚಟುವಟಿಕೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಅನಗತ್ಯವಾಗಿ ತೂಕ ಹೆಚ್ಚಳ (Weight gain)ವಾಗುವುದನ್ನು ತಡೆಯುತ್ತದೆ.
ಕೆಫೀನ್ ಸೇವನೆ:
ಊಟದ ನಂತರ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಹಲವರಿಗೆ ಇರುತ್ತದೆ. ಆದರೆ ಈ ಕೆಫೀನ್‌ಯುಕ್ತ ಪಾನೀಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಾತ್ರವಲ್ಲ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಟೀ ಅಥವಾ ಕಾಫಿ ಕುಡಿಯೋ ಅಭ್ಯಾಸ ದೀರ್ಘಕಾಲ ಎಚ್ಚರವಾಗಿರಲು ನೆರವಾಗುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ಕೆಫೀನ್‌ಯುಕ್ತ ಪಾನೀಯದ ಸೇವನೆ ನಿದ್ರೆಯ (Sleep) ಮಾದರಿಯನ್ನು ಅಡ್ಡಿಪಡಿಸಿ, ನಿದ್ರಾಹೀನತೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ರಾತ್ರಿಯ ಊಟದ ನಂತರ ನಿಮಗೆ ಬೆಚ್ಚಗಿನ ಪಾನೀಯ ಬೇಕಾದರೆ, ಕ್ಯಾಮೊಮೈಲ್ ಅಥವಾ ಪುದೀನಾ ಮುಂತಾದ ಕೆಫೀನ್-ಮುಕ್ತ ಗಿಡಮೂಲಿಕೆ ಚಹಾಗಳನ್ನು ಆರಿಸಿಕೊಳ್ಳಿ. ಇವು ಕೆಫೀನ್‌ನ ಉತ್ತೇಜಕ ಪರಿಣಾಮಗಳಿಲ್ಲದ ಕಾರಣ ಜೀರ್ಣಕ್ರಿಯೆ ಮತ್ತು ವಿಶ್ರಾಂತಿಗೆ ಸಹಾಯ ಮಾಡುತ್ತವೆ.
Health Tips: ರಾತ್ರಿ ಲೇಟ್ ಊಟ, ತಕ್ಕದ ನಿದ್ರೆ, ಖತರ್ನಾಕ್ ಖಾಯಿಲೆಗೆ ಆಹ್ವಾನ!
ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸ
ದೇಹ ಹೈಡ್ರೀಕರಿಸಿದ ಸ್ಥಿತಿಯಲ್ಲಿರುವುದು ಅತ್ಯಗತ್ಯ, ಆದರೆ ಊಟದ ನಂತರ ತಕ್ಷಣವೇ ನೀರು (Water) ಕುಡಿಯುವುದು ಹೊಟ್ಟೆಯ ಆಮ್ಲಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ತಡೆಯುತ್ತದೆ. ಮಾತ್ರವಲ್ಲ ದೇಹ, ಪೋಷಕಾಂಶಗಳನ್ನು ಹೀರುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ನಂತರ ಇದು ಅತಿಯಾಗಿ ತಿನ್ನುವುದಕ್ಕೆ ಕಾರಣವಾಗಬಹುದು.
ಇದಲ್ಲದೆ, ಅತಿಯಾದ ನೀರಿನ ಸೇವನೆಯು ಹೊಟ್ಟೆ ಉಬ್ಬುವಿಕೆಗೂ ಕಾರಣವಾಗುತ್ತದೆ. ಜೀರ್ಣಕ್ರಿಯೆಗೆ ಅಡ್ಡಿಯಾಗದಂತೆ ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಲು, ದಿನವಿಡೀ ಸಣ್ಣ ಸಿಪ್ಸ್ ನೀರನ್ನು ಕುಡಿಯುವುದು ಮತ್ತು ಊಟದ ಮೊದಲು ಅಥವಾ ನಂತರ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದನ್ನು ತಪ್ಪಿಸಿ.