Health Tips: ಇಮ್ಯುನಿಟಿ ಬೂಸ್ಟರ್ ಆಗಿ ಕೆಲಸ ಮಾಡುತ್ತೆ ಈ ಸೊಪ್ಪು

ಭಾರತದ ಬೇರೆ ಬೇರೆ ಭಾಗದಲ್ಲಿ ಬೇರೆ ಬೇರೆ ಸೊಪ್ಪುಗಳ ಬಳಕೆ ಮಾಡ್ತಾರೆ. ಆದ್ರೆ ನಮಗೆ ಕೆಲ ಸೊಪ್ಪಿನ ಲಾಭ ತಿಳಿದೆ ಇರೋದಿಲ್ಲ. ಸೊಪ್ಪಿನ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರತಿ ನಿತ್ಯ ಸೊಪ್ಪು ಸೇವನೆ ಮಾಡಿದ್ರೆ ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶ ಸಿಗುತ್ತದೆ.
 

health tips in kannada use this herb to boost your immunity at home

ಸೊಪ್ಪಿನಲ್ಲಿ ಆರೋಗ್ಯವಿದೆ. ನಾನಾ ಬಗೆಯ ಸೊಪ್ಪುಗಳನ್ನು ನಾವು ನೋಡ್ಬಹುದು. ಅದನ್ನು ಕ್ಲೀನ್ ಮಾಡೋದು ಕಷ್ಟ ಎನ್ನುವ ಕಾರಣಕ್ಕೆ ಅನೇಕರು ಸೊಪ್ಪಿನಿಂದ ದೂರವಿರ್ತಾರೆ. ಆದ್ರೆ ಸೊಪ್ಪು ಆರೋಗ್ಯ ವೃದ್ಧಿ ಮಾಡುವಲ್ಲಿ ಮೊದಲ ಸ್ಥಾನದಲ್ಲಿದೆ. ಅದ್ರಲ್ಲೂ ಕೆಂಪು ಹರಿವೆ ಸೊಪ್ಪು ಸಾಕಷ್ಟು ಪೌಷ್ಟಿಕಾಂಶಗಳನ್ನು ಒಳಗೊಂಡಿದೆ. ಅನೇಕ ಕಡೆ ಈ ಹರಿವೆ ಸೊಪ್ಪಿಗೆ ದಂಟಿನ ಸೊಪ್ಪು ಎಂದೂ ಕರೆಯುತ್ತಾರೆ. ಈ ಹರಿವೆ ಸೊಪ್ಪು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಕೆಂಪು ಹಾಗೂ ಹಸಿರು ಬಣ್ಣದಲ್ಲಿ ಈ ಸೊಪ್ಪು ಲಭ್ಯವಿದೆ. 

ಕೆಂಪು ಹರಿವೆ (Chaulai) ತಿನ್ನಲು ಹೆಚ್ಚು ರುಚಿಯಾಗಿರುತ್ತದೆ. ಕೆಂಪು ಹರಿವೆಯಲ್ಲಿ ವಿಟಮಿನ್ ಎ (Vitamin A), ವಿಟಮಿನ್ ಬಿ, ವಿಟಮಿನ್ ಸಿ, ಪ್ರೋಟೀನ್, ಕಾರ್ಬೋಹೈಡ್ರೇಟ್, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು  ಹೇರಳವಾಗಿ ಕಂಡುಬರುತ್ತವೆ. ಅನೇಕ ಅನಾರೋಗ್ಯಕ್ಕೆ ಇದು ಮದ್ದಿನ ರೂಪದಲ್ಲಿ ಕೆಲಸ ಮಾಡುತ್ತದೆ. ಕೆಂಪು ಹರಿವೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಎಲುಬು (Bone) ಗಳು ಬಲಗೊಳ್ಳುವ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳನ್ನು ಇದು ಹೊಂದಿದೆ. ಇಂದು ನಾವು ಕೆಂಪು ಹರಿವೆ ಸೊಪ್ಪಿನ ಸೇವನೆಯಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ಹೇಳ್ತೇವೆ.   

ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತೆ ಕೆಂಪು ಹರಿವೆ : ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಎನ್ನುವವರು ಕೆಂಪು ಹರಿವೆ ಸೇವಿಸುವುದು ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ ಮತ್ತು ಪ್ರೋಟೀನ್ ಕೆಂಪು ಹರಿವೆಯಲ್ಲಿ  ಹೇರಳವಾಗಿ ಕಂಡುಬರುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಲ್ಲದೆ, ದೇಹವನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಮೂಳೆಗಳಿಗೆ ಬಲ ನೀಡುತ್ತೆ ಕೆಂಪು ಹರಿವೆ : ಕೆಂಪು ಹರಿವೆ ಸೊಪ್ಪಿನ ಸೇವನೆಯು ಮೂಳೆಗಳನ್ನು ಬಲಗೊಳಿಸಲು ತುಂಬಾ ಪ್ರಯೋಜನಕಾರಿ. ಕೆಂಪು ಹರಿವೆಯಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಕೊರತೆಯಿಂದಾಗಿ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಅಂತಹ ಸಂದರ್ಭದಲ್ಲಿ ಕೆಂಪು ಹರಿವೆ ಸೇವನೆ ಮಾಡುವುದು ಹೆಚ್ಚು ಪ್ರಯೋಜನ ನೀಡುತ್ತದೆ.

ಮಲಬದ್ಧತೆ ಸಮಸ್ಯೆಗೆ ಕೆಂಪು ಹರಿವೆ ಒಳ್ಳೆಯದು : ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವ ಕೆಲಸವನ್ನು ಕೆಂಪು ಹರಿವೆ ಮಾಡುತ್ತದೆ.  ಕೆಂಪು ಹರಿವೆಯಲ್ಲಿರುವ ಅಂಶಗಳು ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. 

ಮಲಬದ್ಧತೆ ನಿವಾರಿಸಲು ಕೆಂಪು ಹರಿವೆ ಬಳಕೆ ಹೀಗಿರಲಿ : ಮೊದಲು ಕೆಂಪು ಹರಿವೆ ಸೊಪ್ಪನ್ನು ನೀರಿನಲ್ಲಿ ಸೇರಿಸಿ ಕುದಿಸಬೇಕು. ನಂತ್ರ  ಹರಿವೆ ಸೊಪ್ಪಿನ ನೀರಿಗೆ ಉಪ್ಪನ್ನು ಬೆರೆಸಿ  ಅದನ್ನು ಕುಡಿಯಬೇಕು. ಹೀಗೆ ಮಾಡುವುದ್ರಿಂದ  ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ಮಲಬದ್ಧತೆಗೆ ಮಾತ್ರವಲ್ಲದೆ ಹೊಟ್ಟೆ ನೋವಿಗೆ ಇದು ಉತ್ತಮ ಎಂದು ತಜ್ಞರು ಹೇಳ್ತಾರೆ. 

ಸಂಧಿವಾತ, ರಕ್ತದೊತ್ತಡ ಮತ್ತು ಹೃದಯ ರೋಗಿಗಳಿಗೆ ಅತ್ಯಂತ ಪ್ರಯೋಜನಕಾರಿ : ರಕ್ತದೊತ್ತಡ, ಸಂಧಿವಾತ ಮತ್ತು ಹೃದಯ ರೋಗಿಗೆ ಒಳ್ಳೆಯದು :  ಕೆಂಪು ಹರಿವೆ ರಕ್ತದೊತ್ತಡ, ಸಂಧಿವಾತ ಮತ್ತು ಹೃದಯ ರೋಗಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.

HEALTHY FOOD: ಈ ರೋಗ ಇರೋರು ಮರೆತೂ ಟೊಮೆಟೊ ತಿನ್ಬೇಡಿ

ಕೂದಲಿನ ಆರೋಗ್ಯಕ್ಕೆ ಕೆಂಪು ಹರಿವೆ : ಕೆಂಪು ಹರಿವೆಯಲ್ಲಿ ಲೈಸಿನ್ ಮತ್ತು ಅಮೈನೋ ಆಮ್ಲವಿದೆ. ಇದು ಕೂದಲಿನ ಆರೋಗ್ಯವನ್ನು ವೃದ್ಧಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕೂದಲು ಬೆಳ್ಳಗಾಗುವುದಿಲ್ಲ. ಹಾಗೆಯೇ ಇದ್ರ ರಸವನ್ನು ಸೇವನೆ ಮಾಡ್ತಾ ಬಂದ್ರೆ  ಕೂದಲು ಉದುರುವುದು ಕಡಿಮೆಯಾಗುತ್ತದೆ. 

ಕೀಲು ನೋವು ನಿವಾರಿಸುತ್ತೆ ಹಸಿ ಪಪ್ಪಾಯಿ, ಈ ರೀತಿ ಸೇವಿಸಿ

ಕಣ್ಣಿಗೆ ಬೆಸ್ಟ್ ಕೆಂಪು ಹರಿವೆ : ಕೆಂಪು ಹರಿವೆಯಲ್ಲಿ ವಿಟಮಿನ್ ಎ ಹೇರಳವಾಗಿದೆ. ಕಣ್ಣಿನ ಆರೋಗ್ಯ ಬಯಸುವವರು ನಿಯಮಿತವಾಗಿ ಕೆಂಪು ಹರಿವೆಯನ್ನು ಸೇವನೆ ಮಾಡ್ಬೇಕು. ಇದರ ಸೇವನೆಯಿಂದ ದೇಹದಲ್ಲಿ ಇನ್ಸುಲಿನ್ ಮಟ್ಟ ಕಡಿಮೆಯಾಗುತ್ತದೆ.   
 

Latest Videos
Follow Us:
Download App:
  • android
  • ios